For Quick Alerts
ALLOW NOTIFICATIONS  
For Daily Alerts

ನೀವು ತಿಳಿದಿರಬೇಕಾದ ಕಿಡ್ನಿ ರೋಗಗಳ 12 ಲಕ್ಷಣಗಳು

By Arpitha Rao
|

ಸಾಕಷ್ಟು ಜನರಿಗೆ ಕಿಡ್ನಿ ತೊಂದರೆ ನಿಧಾನವಾಗಿ ಹಾನಿ ಮಾಡುತ್ತದೆ ಎಂಬುದು ತಿಳಿದಿಲ್ಲ.ಕಿಡ್ನಿ ತೊಂದರೆ ಉಲ್ಬಣಗೊಳ್ಳುವವರೆಗೆ ಯಾವುದೇ ಲಕ್ಷಣಗಳನ್ನು ನೀಡುವುದಿಲ್ಲ. ಕಿಡ್ನಿ ತೊಂದರೆ ಕಂಡು ಬಂದರೆ ಆದಷ್ಟು ಬೇಗ ಗುರುತಿಸುವುದು ಸೂಕ್ತ. ಏಕೆಂದರೆ ಅತಿಯಾಗಿ ಉಲ್ಬಣವಾದರೆ ಕಿಡ್ನಿ ಹಾನಿಗೊಳಗಾಗುವುದನ್ನು ತಡೆಯಲು ಕಷ್ಟವಾಗುತ್ತದೆ.

ಕಿಡ್ನಿ ಹಾನಿಗೆ ಒಳಗಾಗುವುದನ್ನು ತಡೆಯಲು ಈ ಕೆಳಗೆ ನೀಡಿರುವ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ. ಕಿಡ್ನಿ ಸಮಸ್ಯೆಯನ್ನು ಬೇಗ ಕಂಡುಕೊಂಡಲ್ಲಿ ಪರಿಣಾಮಕಾರಿಯಾಗಿ ಸಮಸ್ಯೆ ಪರಿಹರಿಸಬಹುದು.

ಈ ಕೆಳಗೆ ಹನ್ನೆರಡು ಲಕ್ಷಣಗಳನ್ನು ನೀಡಲಾಗಿದೆ.

ಮೂತ್ರದಲ್ಲಿ ಬದಲಾವಣೆ

ಮೂತ್ರದಲ್ಲಿ ಬದಲಾವಣೆ

ಕಿಡ್ನಿ ತೊಂದರೆಯ ಮೊದಲ ಲಕ್ಷಣ ಮೂತ್ರದ ಪ್ರಮಾಣ ಮತ್ತು ಆವರ್ತನದಲ್ಲಿ ಬದಲಾವಣೆ ಕಂಡು ಬರುವುದು.ಮೂತ್ರದ ಪ್ರಮಾಣ ಕಡಿಮೆ ಅಥವಾ ಜಾಸ್ತಿ ಆಗಬಹುದು ಅದರಲ್ಲೂ ರಾತ್ರಿ ಸಮಯದಲ್ಲಿ ಇದು ಅಧಿಕವಾಗಿ ಕಂಡು ಬರುತ್ತದೆ. ಬಣ್ಣದಲ್ಲಿ ಕೂಡ ಬದಲಾವಣೆ ಕಂಡು ಬರಬಹುದು. ಕೆಲವೊಮ್ಮೆ ಮೂತ್ರವನ್ನು ತಡೆಯಲಾಗದಷ್ಟು ಬೇಗ ಅಥವಾ ರೆಸ್ಟ್ ರೂಂ ನಲ್ಲಿ ಕುಳಿತರೂ ಬರದೇ ಹೋಗುವುದು ಇಂತಹ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.

ನೋವು ಕಾಣಿಸಿಕೊಳ್ಳುವುದು

ನೋವು ಕಾಣಿಸಿಕೊಳ್ಳುವುದು

ಕೆಲವೊಮ್ಮೆ ನೀವು ಮೂತ್ರ ಮಾಡುವಾಗ ನೋವು ಅಥವಾ ಒತ್ತಡ ಕಂಡು ಬರಬಹುದು. ಮೂತ್ರಕೊಶದ ಸೋಂಕಿನಿಂದಾಗಿ ಮೂತ್ರದಲ್ಲಿ ನೋವು ಮತ್ತು ಕಿರಿಕಿರಿ ಕಾಣಿಸಿಕೊಳ್ಳಬಹುದು.ಈ ಸೋಂಕು ಕಿಡ್ನಿಯನ್ನು ತಲುಪಿದರೆ ಜ್ವರ, ನೋವು ಕೂಡ ಕಾಣಿಸಿಕೊಳ್ಳಬಹುದು.

ಮೂತ್ರದಲ್ಲಿ ರಕ್ತ ಹೋಗುವಿಕೆ

ಮೂತ್ರದಲ್ಲಿ ರಕ್ತ ಹೋಗುವಿಕೆ

ಮೂತ್ರದಲ್ಲಿ ರಕ್ತ ಹೋಗುವಿಕೆ ಕಿಡ್ನಿ ರೋಗದ ನಿರ್ಲಕ್ಷ ಮಾಡಬಾರದ ಲಕ್ಷಣ.ಬೇರೆ ಕಾರಣಗಳು ಕೂಡ ಇರಬಹುದು ಆದರೆ ವೈದ್ಯರನ್ನು ಕಂಡು ಸಮಸ್ಯೆ ಪರಿಹರಿಸಿಕೊಳ್ಳುವುದು ಸೂಕ್ತ.

ಬಾವು ಕಾಣಿಸಿಕೊಳ್ಳುವುದು

ಬಾವು ಕಾಣಿಸಿಕೊಳ್ಳುವುದು

ಕಿಡ್ನಿ ದೇಹದ ಹೆಚ್ಚಿನ ತ್ಯಾಜ್ಯ ಮತ್ತು ದ್ರವವನ್ನು ಹೊರಹಾಕುವ ಕೆಲಸ ಮಾಡುತ್ತದೆ.ಕಿಡ್ನಿ ಸಮಸ್ಯೆಯಿಂದ ಕೆಲಸ ಮಾಡುವುದು ನಿಲ್ಲಿಸಿದರೆ ಮುಖ, ಕೈ ಕಾಲುಗಳು ಬಾವು ಕಾಣಿಸಿಕೊಳ್ಳುತ್ತದೆ.

ವಿಪರೀತ ಆಯಾಸ ಮತ್ತು ದುರ್ಬಲತೆ

ವಿಪರೀತ ಆಯಾಸ ಮತ್ತು ದುರ್ಬಲತೆ

ಕಿಡ್ನಿಯು ಉತ್ಪತ್ತಿ ಮಾಡುವ ಎರಿತ್ರೊಪೊಯಿಟಿನ್ ಎಂಬ ಹಾರ್ಮೊನು ಆಮ್ಲಜನಕ ಬಿಡುಗಡೆ ಮಾಡುವ ಕೆಂಪು ರಕ್ತ ಕಣಗಳನ್ನು ಹುಟ್ಟು ಹಾಕುತ್ತದೆ. ಕಿಡ್ನಿ ರೋಗಗಳು ಕಾಣಿಸಿಕೊಂಡಾಗ ಎರಿತ್ರೊಪೊಯಿಟಿನ್ ಪ್ರಮಾಣ ಕಡಿಮೆಯಾಗಿ ಕೆಂಪು ರಕ್ತಕಣಗಳ ಉತ್ಪತ್ತಿ ಕೂಡ ಕಡಿಮೆಯಾಗುತ್ತದೆ, ಇದರಿಂದಾಗಿ ಅನೀಮಿಯ ಉಂಟಾಗುತ್ತದೆ. ಆಮ್ಲಜನಕದ ಪೂರೈಕೆ ಕೂಡ ಕಡಿಮೆ ಆಗುವುದರಿಂದಾಗಿ ವಿಪರೀತ ಆಯಾಸ ಮತ್ತು ದುರ್ಬಲತೆ ಕಾಣಿಸಿಕೊಳ್ಳುತ್ತದೆ.

ತಲೆತಿರುಗುವಿಕೆ ಮತ್ತು ಏಕಾಗ್ರತೆ ಸಮಸ್ಯೆ

ತಲೆತಿರುಗುವಿಕೆ ಮತ್ತು ಏಕಾಗ್ರತೆ ಸಮಸ್ಯೆ

ಕಿಡ್ನಿ ಸಮಸ್ಯೆಗೆ ಸಂಬಂಧಿಸಿದ ಅನೀಮಿಯಾದಿಂದಾಗಿ ಮೆದುಳಿಗೆ ಆಮ್ಲಜನಕದ ಕೊರತೆ ಉಂಟಾಗಿ ತಲೆತಿರುಗುವಿಕೆ ಮತ್ತು ಏಕಾಗ್ರತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಯಾವಾಗಲೂ ಚಳಿ ಆಗುವುದು

ಯಾವಾಗಲೂ ಚಳಿ ಆಗುವುದು

ಕಿಡ್ನಿ ಸಮಸ್ಯೆಯಿದ್ದರೆ ಹೊರಗೆ ವಾತಾವರಣ ಬಿಸಿಯಾಗಿದ್ದಾಗಲೂ ಕೂಡ ಚಳಿಯಾಗಬಹುದು. ಕಿಡ್ನಿ ಬ್ಯಾಕ್ಟೀರಿಯದ ಸೋಂಕಿನಿಂದಾಗಿ ಚಳಿ ಜ್ವರ ಕೂಡ ಕಾಣಿಸಿಕೊಳ್ಳಬಹುದು.

ಚರ್ಮದ ತೊಂದರೆ ಮತ್ತು ತುರಿಕೆ

ಚರ್ಮದ ತೊಂದರೆ ಮತ್ತು ತುರಿಕೆ

ಕಿಡ್ನಿ ಹಾನಿಗೊಳಗಾದರೆ ಇದು ರಕ್ತದಲ್ಲಿ ತ್ಯಾಜ್ಯವನ್ನು ಶೇಖರಿಸಿಬಿಡುತ್ತದೆ. ಇದರಿಂದಾಗಿ ಚರ್ಮದ ತೊಂದರೆ ಮತ್ತು ತುರಿಕೆಗಳು ಕಾಣಿಸಿಕೊಳ್ಳಬಹುದು.

ಅಮ್ಮೋನಿಯ ಉಸಿರಾಟ ಮತ್ತು ರುಚಿ ಹದಗೆಡುವುದು

ಅಮ್ಮೋನಿಯ ಉಸಿರಾಟ ಮತ್ತು ರುಚಿ ಹದಗೆಡುವುದು

ಕಿಡ್ನಿ ವೈಫ಼ಲ್ಯ ರಕ್ತದಲ್ಲಿ ಯುರಿಯ ಪ್ರಮಾಣವನ್ನು ಅಧಿಕಗೊಳಿಸುತ್ತದೆ.ಈ ಯೂರಿಯಾ ಲಾಲಾರಸದಲ್ಲಿ ಅಮೋನಿಯವಾಗಿ ಪರಿವರ್ತನೆಗೊಂಡು ಕೆಟ್ಟ ಉಸಿರಾಟ ಪ್ರಾರಂಭವಾಗುತ್ತದೆ.ಹಾಗೆಯೇ ಬಾಯಿ ರುಚಿ ಕೂಡ ಕಳೆದುಕೊಳ್ಳುತ್ತದೆ.

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ

ಕಿಡ್ನಿ ತೊಂದರೆಯಿಂದಾಗಿ ರಕ್ತದಲ್ಲಿ ಸೇರಿಕೊಳ್ಳುವ ತ್ಯಾಜ್ಯದಿಂದಾಗಿ ವಾಕರಿಕೆ ಮತ್ತು ವಾಂತಿ ಸಂಭವಿಸುತ್ತದೆ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಕಿಡ್ನಿ ತೊಂದರೆ ಇದ್ದರೆ ಶ್ವಾಸಕೋಶದಲ್ಲಿ ದ್ರವ ಸೇರಿಕೊಳ್ಳುತ್ತದೆ. ಜೊತೆಗೆ ಅನೇಮಿಯ ಕೂಡ ಕಾಣಿಸಿಕೊಳ್ಳುತ್ತದೆ ಇದರಿಂದ ದೇಹಕ್ಕೆ ಆಮ್ಲಜನಕದ ತೊಂದರೆ ಕಾಣಿಸಿಕೊಳ್ಳುತ್ತದೆ.ಇದರಿಂದಾಗಿ ನಿಮಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

ಬೆನ್ನು ಅಥವಾ ಪಕ್ಕೆಲುಬುಗಳಲ್ಲಿ ನೋವು

ಬೆನ್ನು ಅಥವಾ ಪಕ್ಕೆಲುಬುಗಳಲ್ಲಿ ನೋವು

ಕಿಡ್ನಿ ಸಮಸ್ಯೆಗಳು ಕಾಣಿಸಿಕೊಂಡಾಗ ನೋವುಗಳು ಸಂಭವಿಸಬಹುದು.ಮೂತ್ರಕೋಶದಲ್ಲಿ ಕಲ್ಲು ಕಾಣಿಸಿಕೊಂಡಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಕಿಡ್ನಿ ಕಲ್ಲಿನಿಂದಾಗಿರಬಹುದು ಅಥವಾ ಕಿಡ್ನಿಯಲ್ಲಿ ದ್ರವವನ್ನು ತುಂಬುವ ಇತರ ರೋಗಗಳಾಗಬಹುದು.ಒಳಭಾಗದಲ್ಲಿ ಆಗುವ ಈ ಕಿಡ್ನಿ ತೊಂದರೆಯಿಂದಾಗಿ ಉರಿಯೂತ, ದೀರ್ಘಕಾಲದ ನೋವು, ಕಿರಿಕಿರಿಗಳು ಕಾಣಿಸಿಕೊಳ್ಳಬಹುದು.

English summary

12 Symptoms of Kidney Disease That You Must Know

Most people are not aware of the fact that kidney diseases can be silent killers. If caught early, kidney disease can be treated very effectively. Here is a list of 12 such symptoms you should look out for:
X
Desktop Bottom Promotion