For Quick Alerts
ALLOW NOTIFICATIONS  
For Daily Alerts

ಈ 12 ಸಲಹೆಗಳು ಆರೋಗ್ಯ ಭಾಗ್ಯದ ಅದ್ಭುತ ಕೀಲಿ ಕೈ

|

ಆರೋಗ್ಯವೇ ಭಾಗ್ಯ ಎಂದು ಗಾದೆಯೇ ಇದೆ. ಎಷ್ಟೇ ಹೆಚ್ಚಿನ ಐಶ್ವರ್ಯವಿದ್ದರೂ ಆರೋಗ್ಯವಿಲ್ಲದ ಜೀವನದಲ್ಲಿ ನೆಮ್ಮದಿಯಿಲ್ಲ. ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಬಹಳ ಹಿಂದಿನಿಂದಲೂ ವ್ಯಾಯಾಮ, ಉತ್ತಮ ಆಹಾರ, ಉದ್ವೇಗವಿಲ್ಲದ ಜೀವನ, ಸಾಕಷ್ಟು ನಿದ್ದೆಗಳ ಅವಶ್ಯಕತೆಯನ್ನು ತಿಳಿಸುತ್ತಾ ಬಂದಿದ್ದರೂ ಆಧುನಿಕ ಜೀವನ ನಮ್ಮನ್ನು ಉತ್ತಮ ಆರೋಗ್ಯದಿಂದ ಕೊಂಚ ವಿಮುಖವಾಗಿಸಿದೆ. ಇಂದು ಎಲ್ಲರ ಎಟುಕಿನಲ್ಲಿರುವ ಸೌಲಭ್ಯಗಳು ವ್ಯಾಯಾಮದಿಂದ ದೂರವಾಗಿಸಿವೆ. ಸಿದ್ಧ ಆಹಾರಗಳು ನೈಸರ್ಗಿಕ ಆಹಾರಗಳಿಂದ ಉತ್ತಮ ಆರೋಗ್ಯ ಮರೀಚಿಕೆಯಾಗುತ್ತಿದೆ.

ದಿನಗಳೆದಂತೆ ಆಧುನಿಕ ವಿಜ್ಞಾನ ಬುದ್ಧಿಯಾಧಾರಿತ ಚಟುವಟಿಕೆಗಳನ್ನು ಹೆಚ್ಚಿಸುತ್ತಾ ದೈಹಿಕ ಚಟುವಟಿಕೆಗಳನ್ನು ಕಡಿಮೆಗೊಳಿಸುತ್ತಿದೆ. ಪರಿಣಾಮವಾಗಿ ನಮ್ಮ ದೇಹದಲ್ಲಿಯೂ ಹಲವು ಬದಲಾವಣೆಗಳಾಗುತ್ತಿವೆ. ನಾವು ಹೆಚ್ಚು ಹೆಚ್ಚು ಸ್ಥೂಲಕಾಯರಾಗುತ್ತಿದ್ದೇವೆ. ತನ್ಮೂಲಕ ಹಲವು ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಹೆಚ್ಚುತ್ತಿರುವ ಪ್ರದೂಷಣೆಯೂ ಉಸಿರಿನ ಮೂಲಕ ಹಲವು ರೋಗಗಳಿಗೆ ಕಾರಣವಾಗಿದೆ.

ಈಗಿಂದೀಗಲೇ ಈ ಸಮಸ್ಯೆಗಳಿಗೆ ಪರಿಹಾರ ಸದ್ಯಕ್ಕೆ ಲಭ್ಯವಿಲ್ಲ. ಮುಂದೆಂದೋ ಉರಿಸುವ ಇಂಧನದ ಬದಲಿಯಾಗಿ ಬೇರೆ ಶಕ್ತಿಮೂಲ ಬಂದರೂ ಬರಬಹುದು. ಆದರೆ ಆ ಕಾಲವನ್ನೇ ಕಾಯುತ್ತಾ ನಮ್ಮ ದೇಹವನ್ನು ಇನ್ನಷ್ಟು ಶಿಥಿಲಗೊಳಿಸುವ ಬದಲು ಇಂದೇ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ಉಳಿಸಿಕೊಳ್ಳಲು ಸುಲಭವಾದ ಹನ್ನೆರಡು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.

ಬದನೆಕಾಯಿಯಿಂದ ನಮಗೆ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳು

ಅಗತ್ಯಕ್ಕಿಂತ ಹೆಚ್ಚಿನ ನಿದ್ರೆ ಬೇಡ

ಅಗತ್ಯಕ್ಕಿಂತ ಹೆಚ್ಚಿನ ನಿದ್ರೆ ಬೇಡ

ವಯಸ್ಸಿಗೆ ಹಾಗೂ ಶಾರೀರಿಕ ಮತ್ತು ಮಾನಸಿಕ ಚಟುವಟಿಕೆ ಅನುಸರಿಸಿ ಸುಮಾರು ಆರರಿಂದ ಎಂಟು ಘಂಟೆಗಳ ಕಾಲದ ನಿದ್ರೆ ನಮಗೆ ಅಗತ್ಯ. ಸುಮಾರಾಗಿ ಗಾಢ ನಿದ್ದೆ ಆವರಿಸಿದ ಬಳಿಕ ಎಚ್ಚರಾಗುವವರೆಗಿನ ಅವಧಿ ಎಂದು ಅರ್ಥ. ಸಾಧಾರಣವಾಗಿ ಹೆಚ್ಚಿನವರಿಗೆ ತಡೆಯಿಲ್ಲದ ಆರು ಘಂಟೆ ಸಾಕು. ಆದರೆ ಹೆಚ್ಚಿನ ಶ್ರಮದಾಯಕ ಹಾಗೂ ಮಾನಸಿಕವಾಗಿ ಒತ್ತಡವಿರುವ ಸಂದರ್ಭಗಳಲ್ಲಿ ಎಂಟು ಘಂಟೆಗಳ ನಿದ್ದೆ ಬೇಕು. ಆದರೆ ಇದಕ್ಕೂ ಹೆಚ್ಚಿನ ನಿದ್ರೆಯಿಂದ ದೇಹಕ್ಕೆ ಆಲಸಿತನ ಹೆಚ್ಚಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಎಚ್ಚರಾಗಿರುವಷ್ಟೂ ಹೊತ್ತು ದೇಹದ ಕೊಬ್ಬು ಕರಗುತ್ತಾ ಇರುವುದರಿಂದ ಹೆಚ್ಚುವರಿ ಅವಧಿ ನಿದ್ದೆಯ ಸಮಯದಷ್ಟು ಕೊಬ್ಬು ಕರಗದೇ ಹಾಗೇ ಉಳಿದು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.

ಬೆಳಗಿನ ಉಪಾಹಾರವನ್ನು ಎಂದಿಗೂ ತ್ಯಜಿಸಬೇಡಿ

ಬೆಳಗಿನ ಉಪಾಹಾರವನ್ನು ಎಂದಿಗೂ ತ್ಯಜಿಸಬೇಡಿ

ರಾತ್ರಿಯ ನಿದ್ದೆಯ ಅಷ್ಟೂ ಅವಧಿಯಲ್ಲಿ ದೇಹ ಏನನ್ನೂ ಸೇವಿಸದಿರುವ ಕಾರಣ ಹೊಟ್ಟೆ ಖಾಲಿಯಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ತಣ್ಣನೆಯ ನೀರು ಕುಡಿದು ಪ್ರಾತಃವಿಧಿಯ ಬಳಿಕ ಅಲ್ಪ ಉಪಾಹಾರ ತೆಗೆದುಕೊಳ್ಳುವ ಮೂಲಕ ಮೆದುಳಿಗೆ ಅಗತ್ಯವಾದ ರಕ್ತ ಸರಬರಾಜು ಪೂರೈಕೆಯಾಗಿ ದಿನವಿಡೀ ಉಲ್ಲಾಸದಿಂದ ಕಳೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ಉಪೇಕ್ಷೆಯಿಂದ ಉಪಾಹಾರ ತೆಗೆದುಕೊಳ್ಳದೇ ಇದ್ದರೆ ದೇಹಕ್ಕೆ, ಅದರಲ್ಲೂ ಮುಖ್ಯವಾಗಿ ಮೆದುಳಿಗೆ ಲಭ್ಯವಾಗುವ ರಕ್ತಪರಿಚಲನೆ ಮತ್ತು ಸಕ್ಕರೆ ಇಲ್ಲವಾಗಿ ಹಲವು ವಿಧದ ತೊಂದರೆಗಳು ಎದುರಾಗುತ್ತವೆ. ಜಠರದಲ್ಲಿರುವ ಆಮ್ಲ ಕರಗಲು ಆಹಾರವಿಲ್ಲದೇ ಹೊಟ್ಟೆಯ ಒಳಭಾಗವನ್ನೇ ದಹಿಸಲು ಪ್ರಾರಂಭಿಸುತ್ತದೆ. ಪರಿಣಾಮವಾಗಿ ಗ್ಯಾಸ್ ತೊಂದರೆ, ಜಠರದ ಸೋಂಕು ಮೊದಲಾದವು ಎದುರಾಗುತ್ತದೆ. ದೇಹದ ಕೊಬ್ಬು ಕರಗಲೂ ರಕ್ತಸಂಚಾರ ಉತ್ತಮಗೊಳ್ಳುವುದು ಅಗತ್ಯ. ಉಪಾಹಾರವಿಲ್ಲದೇ ಕುಂಠಿತವಾಗುವ ರಕ್ತಪರಿಚಲನೆಯಿಂದ ಕೊಬ್ಬು ಕರಗದೇ ಸ್ಥೂಲಕಾಯ ಆವರಿಸಿಕೊಳ್ಳುತ್ತದೆ.

ದೇಹದ ನೈರ್ಮಲ್ಯ ಕಾಪಾಡಿರಿ

ದೇಹದ ನೈರ್ಮಲ್ಯ ಕಾಪಾಡಿರಿ

ಸ್ವಚ್ಛವಿಲ್ಲದ ದೇಹ ಹಲವು ರೋಗಗಳ ಗೂಡಾಗಿದೆ. ಅದರಲ್ಲಿಯೂ ಊಟದ ಮುನ್ನ ಮತ್ತು ನಂತರ ಕೈಗಳನ್ನು ಸೋಪು ಉಪಯೋಗಿಸಿ ತೊಳೆದುಕೊಳ್ಳುವುದು ಉತ್ತಮ. ಹೆಚ್ಚಿನವರು ಕೈ ತೊಳೆಯುವಾಗ ಹೆಬ್ಬೆರಳಿನ ಹಿಂಭಾಗ (ಅಂದರೆ ಉಗುರಿನ ಕೆಳಗಿನ ಭಾಗ) ವನ್ನು ತೊಳೆಯುವುದರಲ್ಲಿ ಸೋಮಾರಿತನ ತೋರುತ್ತಾರೆ. ಆದರೆ ಬಲ ಹೆಬ್ಬೆರಳನ್ನು ಎಡಗೈಯ ನಾಲ್ಕು ಬೆರಳುಗಳ ನಡುವೆ (ಅದೇ ರೀತಿ ಎಡಗೈಗೂ) ತಿರುವಿ ತೊಳೆದುಕೊಳ್ಳುವ ಮೂಲಕ ಹಸ್ತ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ದಿನಕ್ಕೊಮ್ಮೆ ಸ್ನಾನ, ಶೌಚದ ಬಳಿಕ ಸೋಪು ಉಪಯೋಗಿಸಿ ಪರಿಶುದ್ಧರಾಗುವುದರ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿದಿನ ಶುಚಿಯಾದ ಒಗೆದ ಬಟ್ಟೆಗಳು, ಒಳ ಉಡುಪುಗಳು, ಕಾಲುಚೀಲಗಳನ್ನೇ ಉಪಯೋಗಿಸಬೇಕು, ಎರಡನೇ ದಿನ ಅವನ್ನೇ ಉಪಯೋಗಿಸಬಾರದು. ಮನೆ, ಆಫೀಸ್‌ನಲ್ಲಿಯೂ ಪರಿಸರ ಶುಚಿಯಾಗಿಟ್ಟುಕೊಂಡು ಕ್ರಿಮಿ ಕೀಟಗಳು ಬಾಧಿಸದಂತೆ ಎಚ್ಚರಿಕೆ ವಹಿಸಬೇಕು.

ಸೂರ್ಯೋದಯಕ್ಕೆ ಮುನ್ನ ನಿದ್ದೆಯಿಂದ ಎಚ್ಚರಾಗಿ

ಸೂರ್ಯೋದಯಕ್ಕೆ ಮುನ್ನ ನಿದ್ದೆಯಿಂದ ಎಚ್ಚರಾಗಿ

ರಾತ್ರಿ ಸುಮಾರು ಹನ್ನೊಂದು ಘಂಟೆಗೆ ಪವಡಿಸಿ ಬೆಳಿಗ್ಗೆ ಸುಮಾರು ಐದುರಿಂದ ಆರು ಘಂಟೆಯ ಒಳಗೇ ಎಚ್ಚರಾಗಿ ತಣ್ಣಗಿನ ಹಾಗೂ ತಾಜಾ ಹವೆಯನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು. ಎಳೆಯ ಸೂರ್ಯನ ಕಿರಣಗಳು ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ನೀಡುತ್ತವೆ. ಬೆಳಗ್ಗಿನ ವಾಯು ವಿಹಾರದಿಂದ ದೇಹದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ, ರಕ್ತಪರಿಚಲನೆ ಹೆಚ್ಚಿ ಆರೋಗ್ಯ ವೃದ್ಧಿಸುತ್ತದೆ.

ಪ್ರತಿ ದಿನ ಟೊಮೇಟೊ ಹಣ್ಣನ್ನು ತಿನ್ನಿ

ಪ್ರತಿ ದಿನ ಟೊಮೇಟೊ ಹಣ್ಣನ್ನು ತಿನ್ನಿ

ಟೊಮೇಟೊ ಹಣ್ಣಿಗೆ ಕೆಂಪುಬಣ್ಣ ಬರಲು ಲೈಕೋಪಿನ್ ಎಂಬ ಕಿಣ್ವ ಕಾರಣವಾಗಿದೆ. ಕ್ಯಾನ್ಸರ್ ರೋಗದಿಂದ ಈ ಲೈಕೋಪಿನ್ ರಕ್ಷಣೆ ಒದಗಿಸುತ್ತದೆ. ಪ್ರತಿದಿನ ಒಂದು ಟೊಮೇಟೊ ಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್, ಹಲವು ಜಠರ ಸಂಬಂಧಿ ರೋಗಗಳು, ಪಿತ್ತಜನಕಾಂಗ ಮತ್ತು ಕರುಳುಗಳಿಗೆ ಸಂಬಂಧಿಸಿದ ರೋಗಗಳಿಂದ ರಕ್ಷಣೆ ಪಡೆಯಬಹುದು.

ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ

ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ

ಭಾರತೀಯರಲ್ಲಿ ಹೆಚ್ಚಿನವರು ಆಸ್ತಿಕರು. ನಿಮ್ಮ ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮನಸ್ಸು ಹಗುರಾಗುತ್ತದೆ. ನಮಗೊಬ್ಬ ರಕ್ಷಕನಿದ್ದಾನೆ ಎಂಬ ಭಾವನೆ ಜೀವನವನ್ನು ಸಮರ್ಥವಾಗಿ ಎದುರಿಸಲು ಶಕ್ತಿ ನೀಡುತ್ತದೆ. ಕೆಟ್ಟ ಕಾರ್ಯಗಳಿಂದ, ಕೆಟ್ಟ ಆಲೋಚನೆಗಳಿಂದ ತಡೆಯುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಆರೋಗ್ಯವೂ ವೃದ್ಧಿಸುತ್ತದೆ.

ಪ್ರತಿದಿನ ಕನಿಷ್ಟ ಇಪ್ಪತ್ತು ನಿಮಿಷ ನಿಧಾನಗತಿಯಲ್ಲಿ ಓಡಿ

ಪ್ರತಿದಿನ ಕನಿಷ್ಟ ಇಪ್ಪತ್ತು ನಿಮಿಷ ನಿಧಾನಗತಿಯಲ್ಲಿ ಓಡಿ

ವ್ಯಾಯಾಮಗಳಲ್ಲಿ ಸುಲಭವಾದುದೆಂದರೆ ನಡಿಗೆ. ಆದರೆ ನಡೆಗೆಯಲ್ಲಿ ಕೊಬ್ಬು ಅಷ್ಟು ಸುಲಭವಾಗಿ ಕರಗದಿರುವುದರಿಂದ ನಡಿಗೆಯ ವೇಗವನ್ನು ಕೊಂಚ ಹೆಚ್ಚಿಸಿ ನಿಧಾನಗತಿಯಲ್ಲಿ ಓಡುವ ಮೂಲಕ ಕೊಬ್ಬು ಕರಗುವ ವೇಗವೂ ಹೆಚ್ಚುತ್ತದೆ. ನಿಮ್ಮ ಆರೋಗ್ಯದ ಸ್ಥಿತಿಯನ್ನನುಸರಿಸಿ ಈ ವೇಗವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಸುಮಾರು ಇಪ್ಪತ್ತು ನಿಮಿಷಗಳ ಓಟ ಉತ್ತಮ ಆರೋಗ್ಯಕ್ಕೆ ಬುನಾದಿಯಾಗಿದೆ.

ದಿನದಲ್ಲಿ ನಿಯಮಿತವಾಗಿ ತಣ್ಣೀರು ಕುಡಿಯಿರಿ

ದಿನದಲ್ಲಿ ನಿಯಮಿತವಾಗಿ ತಣ್ಣೀರು ಕುಡಿಯಿರಿ

ನಮ್ಮ ದೇಹಕ್ಕೆ ನೀರು ಅತಿ ಅಗತ್ಯ. ನಮ್ಮ ದೇಹ ವಿವಿಧ ರೂಪದಲ್ಲಿ ನೀರನ್ನು ಕಳೆದುಕೊಳ್ಳುತ್ತದೆ. ಬೆವರು, ಮೂತ್ರ, ಶೌಚಗಳಲ್ಲಿ ದೇಹದಿಂದ ಹೊರಹೋಗುವ ನೀರನ್ನು ಸರಿದೂಗಿಸಲು ಆಗಾಗ ನೀರು ಕುಡಿಯುತ್ತಲೇ ಇರಬೇಕು. ಒಂದು ದಿನಕ್ಕೆಮೂರು ಲೀಟರ್ ಎಂದರೆ ಸುಮಾರು ಎಂಟು ದೊಡ್ಡ ಲೋಟಗಳಷ್ಟು ನೀರನ್ನು ಕುಡಿಯಬೇಕು. ಪ್ರತಿ ಘಂಟೆಗೆ ಅಥವಾ ಎರಡು ಘಂಟೆಗಳಿಗೆ ಒಂದು ಲೋಟದಂತೆ ಬೆಳಗ್ಗಿನಿಂದ ರಾತ್ರಿಯವರೆಗೆ ಎಂಟು ಲೋಟ ನೀರು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ನೀರು ಎಂದು ಐಸ್ ನಷ್ಟು ತಣ್ಣಗಿರುವ ನೀರಲ್ಲ, ಸಾಧಾರಣ ತಣ್ಣಗಿನ ಅಥವಾ ಉಗುರು ಬೆಚ್ಚನೆಯ ನೀರು ಒಳ್ಳೆಯದು. ಜೊತೆಗೆ ಹಣ್ಣಿನ ರಸಗಳು, ಹಾಲು, ಚಹಾ, ತಂಪು ಪಾನೀಯಗಳ ಮೂಲಕವೂ ನೀರು ದೇಹವನ್ನು ಸೇರುತ್ತದೆ. ಆದರೆ ನೊರೆಬರುವ ಕೋಲಾ ಮೊದಲಾದ ಪೇಯಗಳಲ್ಲಿ ಅಗತ್ಯಕ್ಕಿಂತಲೂ ಏಳೆಂಟು ಪಟ್ಟು ಹೆಚ್ಚು ಸಕ್ಕರೆ ಇರುವ ಕಾರಣ ದೇಹಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಸಕ್ಕರೆ ಸರಬರಾಜಾಗಿ ನೀರು ಕುಡಿಯುವ ಉದ್ದೇಶವನ್ನೇ ತಲೆ ಕೆಳಗು ಮಾಡಿಬಿಡುತ್ತದೆ. ಆದ್ದರಿಂದ ಸ್ವಚ್ಛ ನೀರು ಎಲ್ಲಕ್ಕಿಂತ ಉತ್ತಮ.

ಈಜಿ, ಈಜಿ ಆರೋಗ್ಯವಂತರಾಗಿ

ಈಜಿ, ಈಜಿ ಆರೋಗ್ಯವಂತರಾಗಿ

ವ್ಯಾಯಾಮಗಳಲ್ಲಿ ಈಜು ಪರಿಪೂರ್ಣ ವ್ಯಾಯಾಮ ಎಂದು ಪರಿಗಣಿಸಲ್ಪಟ್ಟಿದೆ. ಈಜುವುದರಿಂದ ದೇಹದ ಎಲ್ಲಾ ಸ್ನಾಯುಗಳಿಗೆ ಏಕರೂಪದಲ್ಲಿ ಒಟ್ಟಿಗೇ ಕೆಲಸ ಬೀಳುವುದರಿಂದ ದೇಹ ಹೆಚ್ಚು ಸದೃಢವಾಗುತ್ತದೆ. ಮೂಳೆಗಳು ಬಲಿಷ್ಟಗೊಳ್ಳುತ್ತವೆ. ಸಂಧಿವಾತ ರೋಗಿಗಳಿಗೆ ನೀರಿನಲ್ಲಿ ಕೆಲವು ಸರಳ ವ್ಯಾಯಾಮಗಳನ್ನು ವೈದ್ಯರು ಸೂಚಿಸುತ್ತಾರೆ. ಈಜು ಬರುವುದಿಲ್ಲ ಎಂಬ ಸಬೂಬು ನೀಡಿ ನೀರಿನಿಂದ ದೂರವಿರಬೇಡಿ. ಮೊದಲು ಈಜಲು ಕಲಿಯಿರಿ. ಒಮ್ಮೆ ನೀರಿಗಿಳಿದ ಬಳಿಕ ಮುಂದಿನ ದಿನಗಳಲ್ಲಿ ನೀರಿನಿಂದ ದೂರವಿರಲು ಮನಸ್ಸಾಗುವುದಿಲ್ಲ. ಆದರೆ ನಿಪುಣದ ನೆರವಿನೊಂದಿಗೇ ನೀರಿನಲ್ಲಿಳಿಯಿರಿ. ಈಜು ಪ್ರವೀಣರಾಗುವ ಮೊದಲು ಎದೆಮಟ್ಟಕ್ಕಿಂತ ಹೆಚ್ಚಿನ ಆಳಕ್ಕೆ ಹೋಗದೇ ಇರುವುದು ಒಳ್ಳೆಯದು.

ಧ್ಯಾನದಲ್ಲಿ ಮನ ತೊಡಗಿಸಿಕೊಳ್ಳಿ

ಧ್ಯಾನದಲ್ಲಿ ಮನ ತೊಡಗಿಸಿಕೊಳ್ಳಿ

ನಮ್ಮ ಮನಸ್ಸು ಪ್ರತಿಕ್ಷಣ ಏನನ್ನಾದರೂ ಯೋಚಿಸುತ್ತಲೇ ಇರುತ್ತದೆ. ಹೆಚ್ಚಿನ ವೇಳೆಯಲ್ಲಿ ಒಂದೇ ಹೊತ್ತಿನಲ್ಲಿ ಎರಡಕ್ಕೂ ಹೆಚ್ಚು ವಿಷಯಗಳ ಬಗ್ಗೆ ಯೋಚಿಸುತ್ತಾ ಕಲಸು ಮೇಲೋಗರವಾಗುತ್ತಲೇ ಇರುತ್ತದೆ. ದಿನದ ಕೆಲವು ಕ್ಷಣಗಳನ್ನು ಮನಸ್ಸನ್ನು ಒಂದೇ ವಿಷಯದ ಮೇಲೆ ಕೇಂದ್ರೀಕೃತಗೊಳಿಸುವ ನಿಟ್ಟಿನಲ್ಲಿ ಧ್ಯಾನ ಮಾಡುವ ಮೂಲಕ ಲಭ್ಯವಾಗುವ ಮಾನಸಿಕ ನೆಮ್ಮದಿಗೆ ಬೆಲೆ ಕಟ್ಟಲಾಗದು.

ಪ್ರತಿದಿನ ಅಗತ್ಯ ವಿಟಮಿನ್‌ಗಳನ್ನು ಸೇವಿಸಿ

ಪ್ರತಿದಿನ ಅಗತ್ಯ ವಿಟಮಿನ್‌ಗಳನ್ನು ಸೇವಿಸಿ

ದೇಹಕ್ಕೆ ಪ್ರತಿದಿನ ಹಲವು ವಿಟಮಿನ್ ಗಳು ಲಭ್ಯವಿವೆ. ಈ ವಿಟಮಿನ್‌ಗಳು ಹಣ್ಣು ಮತ್ತು ತರಕಾರಿಗಳಲ್ಲಿ ಲಭ್ಯವಿವೆ. ತಾಜಾ ಹಣ್ಣುಗಳನ್ನು ಹಾಗೂ ಹಸಿಯಾಗಿ ತಿನ್ನಬಹುದಾದ ತರಕಾರಿಗಳನ್ನು (ಸೌತೆ, ಗಜ್ಜರಿ ಮೊದಲಾದವು) ಊಟದ ಬಳಿಕ ತಿನ್ನುವ ಮೂಲಕ ವಿವಿಧ ವಿಟಮಿನ್‌ಗಳನ್ನು ಪಡೆದು ದೇಹದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು.

ದಾಂಪತ್ಯ ಸಂಗದಿಂದ ದೂರವಿರದಿರಿ

ದಾಂಪತ್ಯ ಸಂಗದಿಂದ ದೂರವಿರದಿರಿ

ಉತ್ತಮ ಆರೋಗ್ಯಕ್ಕೆ ದಾಂಪತ್ಯಸಂಗವೂ ಅಗತ್ಯ. ನಿಯಮಿತ ಸಾಂಗತ್ಯದಿಂದ ದೇಹದಲ್ಲಿ ಅಗತ್ಯವಿರುವ ಹಾರ್ಮೋನುಗಳ ಸ್ರವಿಕೆಯಾಗಿ ದೇಹದ ಎಲ್ಲಾ ಚಟುವಟಿಕೆಗಳು ಸಾಂಗವಾಗಿ ನೆರವೇರುತ್ತವೆ. ಮನಸ್ಸು ಉಲ್ಲಸಿತವಾಗಿರುತ್ತದೆ. ದೈನಂದಿನ ಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಪಾಲ್ಗೊಳ್ಳಲು ಕಾರಣವಾಗುತ್ತದೆ.

English summary

12 Best Health Tips Of All Time

What good is living if you cannot enjoy good health? Health and fitness have become the most discussed topics in today's world. Let us now look at the best tips for good health. Here are the 12 best health tips of all time. Read on...
X
Desktop Bottom Promotion