For Quick Alerts
ALLOW NOTIFICATIONS  
For Daily Alerts

ಎತ್ತರವನ್ನು ಹೆಚ್ಚಿಸುವ 12 ಅದ್ಭುತ ಆಹಾರಗಳು

|

ನೀವು ಕುಳ್ಳಗಿದ್ದು ಹೆಚ್ಚಿನ ಎತ್ತರವನ್ನು ಪಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿ ದಣಿದಿರುವಿರಾ? ಹಾಗಿದ್ದರೆ ಎತ್ತರವನ್ನು ಹೆಚ್ಚಿಸುವ ಆಹಾರಗಳನ್ನು ನೀವು ತೆಗೆದುಕೊಂಡು ನೈಸರ್ಗಿಕವಾಗಿ ನಿಮ್ಮ ಎತ್ತರ ಹೆಚ್ಚಿಸಿಕೊಳ್ಳಿ. ಈ ಲೇಖನವನ್ನು ಓದಿದ ನಂತರ ನಿಮ್ಮ ಗೊಂದಲದ ಗೂಡಾಗಿರುವ ಮನಸ್ಸಿಗೆ ಸರಿಯಾದ ಉತ್ತರ ದೊರೆಯುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎತ್ತರ ಹೆಚ್ಚಿಸಿಕೊಳ್ಳಲು ಈ ಆಹಾರ ತಿನ್ನಿ

ನಿಮ್ಮ ಆಹಾರ ಮತ್ತು ವ್ಯಾಯಾಮದ ಕಡೆಗೆ ಗಮನ ನೀಡಿದಾಗ ಈ ಸಮಸ್ಯೆಯನ್ನು ದೂರಾಗಿಸಬಹುದು. ನಮ್ಮ ಜೆನೆಟಿಕ್ ಅಂಶಗಳಿಂದ ಎತ್ತರದ ಬೆಳವಣಿಗೆ ನಮಲ್ಲಿ ಉಂಟಾಗುತ್ತದೆ. ಈ ಅಂಶಗಳನ್ನು ಇನ್ನಷ್ಟು ಶಕ್ತಿಯುತವಾಗಿ ಮಾಡಲು ಸರಿಯಾದ ಸಮಯದಲ್ಲಿ ಆಹಾರ ವ್ಯಾಯಾಮ ಅತ್ಯಗತ್ಯ.

ಹೆಚ್ಚಿನ ಜನರು ಸ್ಕಿಪ್ಪಿಂಗ್ ಮತ್ತು ಸ್ಟ್ರೆಚ್ಚಿಂಗ್‌ನಂತಹ ವ್ಯಾಯಾಮದ ಕಡೆಗೆ ಹೆಚ್ಚು ಗಮನ ನೀಡಿ ತಮ್ಮ ಎತ್ತರವನ್ನು ಏರಿಸಲು ಬಯಸುತ್ತಾರೆ. ಆದರೆ ನಿಮ್ಮ ಎತ್ತರ ಹೆಚ್ಚಲು ಪ್ರೋಟೀನ್ ನ್ಯೂಟ್ರಿನ್‌ಗಳು ಅತ್ಯವಶ್ಯಕ.

ಅವುಗಳ ಪೂರೈಕೆ ಸರಿಯಾದ ಕ್ರಮದಲ್ಲಿ ಸಮಪ್ರಮಾಣದಲ್ಲಿ ದೊರೆತಾಗ ಮಾತ್ರವೇ ಎತ್ತರ ಹೆಚ್ಚಾಗುತ್ತದೆ. ಪ್ರೋಟೀನ್ ವಿಟಮಿನ್‌ಗಳ ಕೊರತೆಯೇ ಕುಳ್ಳಗಿನ ಬೆಳವಣಿಗೆಯನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಆಹಾರ ಕ್ರಮದಲ್ಲಿ ಪ್ರೊಟೀನ್ ನ್ಯೂಟ್ರಿನ್‌ಗಳು ಸರಿಯಾದ ಕ್ರಮದಲ್ಲಿರುವಂತೆ ನೋಡಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಹಣ್ಣನ್ನು ತಿನ್ನಲು ಮಿಸ್ ಮಾಡದಿರಿ

ಉದಾಹರಣೆಗೆ, ಕ್ಯಾಲ್ಶಿಯಂ ಮತ್ತು ಮೂಳೆ ಅಭಿವೃದ್ಧಿ ಮಾಡುವ ಮತ್ತು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ವರ್ಧಿಸುವಲ್ಲಿ ವಿಟಮಿನ್ ಡಿ ಪಾತ್ರ ಅತ್ಯಂತ ಹಿರಿದು. ಹಳೆ ಅಂಗಾಂಶಗಳನ್ನು ಸರಿಪಡಿಸಿ ಹೊಸ ಅಂಗಾಂಶಗಳ ಬೆಳವಣಿಗೆಗೆ ಪ್ರೋಟೀನ್ ಸೇರಿಕೊಂಡಿರುವ ಆಹಾರಗಳು ಕಾರಣವಾಗಿವೆ.

ಡಿ ವಿಟಮಿನ್ ಮತ್ತು ಪ್ರೋಟೀನ್‌ಗಳನ್ನು ಹೊರತುಪಡಿಸಿ, ಎತ್ತರ ಹೆಚ್ಚಾಗಲು ಅಗತ್ಯವಾಗಿರುವ ಮಿನರಲ್ಸ್ ಯಾವುದೆಂದರೆ ಅದುವೇ ಕ್ಯಾಲ್ಶಿಯಂ. ಕ್ಯಾಲ್ಶಿಯಂ ಅಂಶ ಹೆಚ್ಚಿರುವ ಆಹಾರಗಳು ಮೂಳೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸುಧಾರಿಸುತ್ತವೆ. ಆದ್ದರಿಂದ ಬಲವಾದ ಮತ್ತು ಆರೋಗ್ಯಯುತ ಮೂಳೆಗಳಿಗೆ ಕ್ಯಾಲ್ಶಿಯಂ ಶ್ರೀಮಂತವಾಗಿರುವ ಆಹಾರಗಳಾದ ಡೈರಿ ಉತ್ಪನ್ನಗಳನ್ನು ಒಳಗೊಂಡಿರುವ ಮೊಸರು, ಚೀಸ್, ಹಾಲನ್ನು ಸೇವಿಸುವುದು ಅತ್ಯಗತ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗ್ಯಾಸ್ ಉಂಟುಮಾಡುವಂತಹ ತರಕಾರಿಗಳು

ಮೀನು:

ಮೀನು:

ಸಮುದ್ರ ಆಹಾರವು ಪ್ರೋಟೀನ್ ಮತ್ತು ವಿಟಮಿನ್ ಭರಿತವಾಗಿರುತ್ತವೆ. ಮೀನಿನಲ್ಲಿ ವಿಟಮಿನ್ ಡಿ ಹೇರಳವಾಗಿದ್ದು ಎತ್ತರವನ್ನು ಏರಿಸುವಲ್ಲಿ ಸಹಕಾರಿ.

ಮೊಟ್ಟೆ:

ಮೊಟ್ಟೆ:

ಮೊಟ್ಟೆಯಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಶಿಯಂ ಹೇರಳವಾಗಿದೆ. ಬಲವಾದ ಮೂಳೆಗಳಿಗೆ ಮತ್ತು ಆರೋಗ್ಯಯುತ ದೇಹಕ್ಕಾಗಿ ಬೇಯಿಸಿದ ಮೊಟ್ಟೆಗಳನ್ನು ಸೇವಿಸುವುದು ಒಳ್ಳೆಯದು ಇವುಗಳು ನ್ಯೂಟ್ರಿನ್ ಮತ್ತು ಪ್ರೋಟೀನ್‌ಗಳನ್ನು ಯಥೇಚ್ಛವಾಗಿ ನೀಡುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಸೋಯಾ:

ಸೋಯಾ:

ಮೂಳೆಗಳಲ್ಲಿ ಸೂಕ್ತವಾದ ವಿಟಮಿನ್‌ಗಳು ಮತ್ತು ಕ್ಯಾಲ್ಶಿಯಂಗಳ ಪೂರೈಕೆಗೆ ಸೋಯಾ ಉತ್ಪನ್ನಗಳಾದ ಸೋಯಾ ಬೀನ್ಸ್ ಮತ್ತು ಸೋಯಾ ಹಾಲು ಉತ್ತಮವಾಗಿರುತ್ತದೆ.

ಟೋಫು:

ಟೋಫು:

ಕ್ಯಾಲ್ಶಿಯಂ ಹೇರಳವಾಗಿದ್ದು, ಕ್ಯಾಲೊರಿ ಕಡಿಮೆ ಇರುವ ಆಹಾರವಾಗಿದೆ. ಎತ್ತರವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿರುವ ಟೋಫುವನ್ನು ನಿಮ್ಮ ನಿತ್ಯದ ಆಹಾರದಲ್ಲಿ ನೀವು ತೆಗೆದುಕೊಳ್ಳಲೇಬೇಕು.

ಕುಂಬಳಕಾಯಿ ಬೀಜಗಳು:

ಕುಂಬಳಕಾಯಿ ಬೀಜಗಳು:

ಕುಂಬಳಕಾಯಿ ಬೀಜಗಳು ಹಳೆಯ ಅಂಗಾಂಶಗಳನ್ನು ಹೊರಹಾಕಿ ಹೊಸ ಅಂಗಾಂಶಗಳನ್ನು ಉತ್ತೇಜಿಸುವಲ್ಲಿ ಸಹಕಾರಿ. ಬೀಜಗಳಲ್ಲಿರುವ ಅಮೀನೊ ಏಸಿಡ್ ದೇಹದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕ್ಯಾರೇಟ್:

ಕ್ಯಾರೇಟ್:

ಕ್ಯಾರೇಟ್‌ನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದೆ. ವಿಟಮಿನ್ ಎ ಮೂಳೆಗಳಲ್ಲಿ ಕ್ಯಾಲ್ಶಿಯಂನ್ನು ಪೂರೈಸಿ ಅವನ್ನು ಆರೋಗ್ಯಯುತ ಮತ್ತು ಬಲಯುತವಾಗಿಸುತ್ತವೆ. ವಿಟಮಿನ್ ಎ ಭರಿತ ಆಹಾರಗಳು ಕಣ್ಣಿನ ದೃಷ್ಟಿ ದೋಷವನ್ನು ನಿವಾರಿಸುತ್ತವೆ ಮತ್ತು ತ್ವಚೆಯ ಹೊಳಪಿಗೂ ಸಹಕಾರಿ.

ಪಾಲಾಕ್:

ಪಾಲಾಕ್:

ಇದು ಎತ್ತರವನ್ನು ಸ್ವಾಭಾವಿಕವಾಗಿ ಏರಿಸುವಲ್ಲಿ ಸಹಕಾರಿಯಾಗಿರುವ ಸೂಪರ್ ಫುಡ್ ಆಗಿದೆ. ಹಸಿರು ಎಲೆಗಳುಳ್ಳ ಪಾಲಾಕ್ ವಿಟಮಿನ್ ಮತ್ತು ನ್ಯೂಟ್ರಿಯಂಟ್ಸ್‌ಗಳ ನಿಜವಾದ ಪೂರೈಕೆದಾರ.

ಹಾಲು:

ಹಾಲು:

ಮೂಳೆಗಳನ್ನು ಬಲಪಡಿಸುವಲ್ಲಿ ಮತ್ತು ಬೆಳವಣಿಗೆಗೆ ಕ್ಯಾಲ್ಶಿಯಂ ಅತ್ಯಗತ್ಯ. ಹಾಲಿನಲ್ಲಿರುವ ವಿಟಮಿನ್ ಎ ಅಂಶ ಎತ್ತರವನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತದೆ ಮತ್ತು ಕ್ಯಾಲ್ಶಿಯಂ ಅನ್ನು ಮೂಳೆಗಳಲ್ಲಿ ಉಳಿಸುತ್ತದೆ. ಪ್ರತೀ ದಿನ 2-3 ಲೋಟಗಳಷ್ಟು ಹಾಲನ್ನು ಸೇವಿಸುವುದು ಆರೋಗ್ಯಕ್ಕೆ ಅತೀ ಉತ್ತಮ.

ಬಾಳೆಹಣ್ಣು:

ಬಾಳೆಹಣ್ಣು:

ಬಲಯುತವಾದ ಮೂಳೆಗಳು ಮತ್ತು ಆರೋಗ್ಯಯುತ ಶರೀರಕ್ಕಾಗಿ ದಿನನಿತ್ಯ ಬಾಳೆಹಣ್ಣನ್ನು ಸೇವಿಸಬೇಕು. ಈ ಹಣ್ಣು ಎತ್ತರವನ್ನು ಏರಿಸುವುದು ಮಾತ್ರವಲ್ಲ ಕರುಳಿನ ಚಲನೆಗೆ ಹಾಗೂ ಜೀರ್ಣಕ್ರಿಯೆಗೆ ಅತ್ಯವಶ್ಯಕ.

ಚಿಕನ್:

ಚಿಕನ್:

ಇತರ ಪ್ರಾಣಿ ಆಹಾರಗಳಿಗೆ ಹೋಲಿಸಿದಾಗ, ಚಿಕನ್‌ನಲ್ಲಿ ಅತ್ಯಧಿಕ ಪ್ರೋಟೀನ್ ಅಂಶಗಳಿವೆ. ಅಂಗಾಂಶಗಳ ಮತ್ತು ಸ್ನಾಯುಗಳ ರಚನೆಗೆ ಚಿಕನ್ ತಿನ್ನುವುದು ಪ್ರಯೋಜನಕಾರಿ.

ಹಸಿರು ಬೀನ್ಸ್:

ಹಸಿರು ಬೀನ್ಸ್:

ಮಿನರಲ್ಸ್‌ಗಳು ಅಂಗಾಂಶಗಳನ್ನು ರಚಿಸಿ, ಮೂಳೆಗಳ ಬೆಳವಣಿಗೆಯನ್ನು ಏರಿಸುತ್ತವೆ ಮತ್ತು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಎತ್ತರವನ್ನು ಸ್ವಾಭಾವಿಕವಾಗಿ ಏರಿಸಲು, ಪ್ರೊಟೀನ್ ಮತ್ತು ಮಿನರಲ್ ಹೆಚ್ಚಿರುವ ಬೀನ್ಸ್ ಸೇವಿಸುವುದು ಅತ್ಯಗತ್ಯ.

ಮೊಸರು:

ಮೊಸರು:

ಡೈರಿ ಉತ್ಪನ್ನವು ಪ್ರೋಟೀನ್‌ಗಳು ಮತ್ತು ಕ್ಯಾಲ್ಶಿಯಂ ಭರಿತವಾಗಿದೆ. ಇದನ್ನು ಹೊರತುಪಡಿಸಿ, ಮೊಸರು ವಿಟಮಿನ್ ಎ, ಬಿ, ಡಿ ಮತ್ತು ಇಯನ್ನು ಒಳಗೊಂಡಿದೆ. ಇವುಗಳು ಎತ್ತರವನ್ನು ಏರಿಸುವಲ್ಲಿ ಸಹಕಾರಿಯಾಗಿದೆ. ಮೊಸರು ಜೀರ್ಣಕ್ರಿಯೆಗೆ ಕೂಡ ಸಹಕಾರಿಯಾಗಿದೆ.

English summary

12 Amazing Foods To Increase Height

If you don't like your short height and several attempts have failed you in increasing a foot, then why not try foods which can help in height gain! Yes, you read it right! You can work on your height and increase it by focusing on your diet and exercise.
X
Desktop Bottom Promotion