For Quick Alerts
ALLOW NOTIFICATIONS  
For Daily Alerts

ಕಣ್ತುಂಬ ನಿದ್ದೆಗಾಗಿ ಇಲ್ಲಿದೆ 10 ಸೂಕ್ತ ಸಲಹೆಗಳು!

|

ಒತ್ತಡ ಜೀವನವು ನಿದ್ದೆಗೆ ಸಂಚಕಾರವನ್ನು ತಂದೊಡ್ಡುತ್ತದೆ. ನೀವು ತುಂಬಾ ದಣಿದಾಗ ನಿಮ್ಮ ಹತ್ತಿರ ನಿದ್ದೆ ಬೇಗನೇ ಸುಳಿಯುವುದಿಲ್ಲ. ನಿಮಗೆ ದಣಿವು ಹೆಚ್ಚಿದಂತೆ ನಿದ್ದೆಯ ಪ್ರಮಾಣ ಕಡಿಮೆಯಾಗುತ್ತದೆ. ಅಂತೂ ಇಂತೂ ನಿದ್ದೆ ಅತ್ಯವಶ್ಯಕ.

ಹಾಗಿದ್ದರೆ ನಿಮಗೆ ದಣಿದಿರುವಾಗ ಚೆನ್ನಾಗಿ ನಿದ್ದೆ ಬರುವಂತೆ ಮಾಡುವುದ ಹೇಗೆ? ಹಾಗಿದ್ದರೆ ಈ ಲೇಖನವನ್ನು ನೀವು ಓದಲೇಬೇಕು. ನೀವು ಹೆಚ್ಚು ದಣಿದಿರುವಾಗ ಚೆನ್ನಾಗಿ ನಿದ್ದೆ ಬರುವಂತೆ ಮಾಡಲು ಯಾವೆಲ್ಲಾ ಹಂತಗಳನ್ನು ಅನುಸರಿಸಬೆಕೆಂಬುದು ಈ ಲೇಖನದಲ್ಲಿದೆ.

ಸುಖ ನಿದ್ದೆ ಬರಲು ಡಯಟ್ ಹೀಗಿರಲಿ

ಇಂದಿನ ತಾಂತ್ರಿಕ ಯುಗದಲ್ಲಿ ಸ್ಪರ್ಧೆ ಸಾಮಾನ್ಯ. ಅದಕ್ಕ್ಕನುಸಾರವಾಗಿ ನಿಮಗೆ ಕೆಲಸದ ಒತ್ತಡವಿರುತ್ತದೆ. ಒಮ್ಮೊಮ್ಮೆ ತಲೆ ಚಿಟ್ಟು ಹಿಡಿದು ಹೋಗುವಷ್ಟು ಕೆಲಸದ ಪ್ರಮಾಣ ಏರಿರುತ್ತದೆ. ಆ ಸಮಯದಲ್ಲಿ ಖಂಡಿತ ನಿಮಗೆ ದಣಿವು ಆಯಾಸ ಉಂಟಾಗುತ್ತದೆ. ಆಗ ದೇಹಕ್ಕೆ ವಿಶ್ರಾಂತಿ ಅತ್ಯಗತ್ಯ. ಆದರೆ ದೇಹಕ್ಕೆ ಉಂಟಾಗುವ ದಣಿವು ಮನಸ್ಸಿಗೆ ಬರುವುದಿಲ್ಲ. ದಣಿದ ದೇಹ ವಿಶ್ರಾಂತಿಯನ್ನು ಅಷ್ಟು ಬೇಗ ಒಗ್ಗಿಸಿಕೊಳ್ಳುವುದಿಲ್ಲ. ಇದರಿಂದಲೇ ನಿಮಗೆ ನಿದ್ದೆ ಬರುವುದಿಲ್ಲ.

ಹಾಗಿದ್ದರೆ ದಣಿದ ದೇಹಕ್ಕೆ ಚೆನ್ನಾಗಿ ವಿಶ್ರಾಂತಿಯನ್ನು ನೀಡುವುದು ಹೇಗೆಂಬುದು ನಿಮಲ್ಲಿ ಇರುವ ಉತ್ತರವಾಗಿದೆ. ಅದಕ್ಕಾಗಿ ಕೆಲವೊಂದು ಸಲಹೆಗಳನ್ನು ನಿಮಗೆ ಪಾಲಿಸಬೇಕಾಗುತ್ತದೆ. ಬನ್ನಿ ಆ ಸಲಹೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಹಾಗೂ ಉತ್ತಮ ನಿದ್ದೆ ನಿಮ್ಮದಾಗಲಿ.

ನಿದ್ರೆಯ ಕೊರತೆಯೇ? ಕಾರಣಗಳನ್ನು ತಿಳಿದುಕೊಳ್ಳಿ

ಸ್ನಾನ:

ಸ್ನಾನ:

ತಂಪಾದ ನಿರಿನಲ್ಲಿ ಸ್ನಾನ ಮಾಡುವುದು ಅತೀ ಉತ್ತಮ ಸಲಹೆಯಾಗಿದೆ. ದಣಿದ ದೇಹಕ್ಕೆ ಚೆನ್ನಾಗಿ ನಿದ್ದೆ ಬರುವಂತೆ ಮಾಡಲು ಸ್ನಾನ ಸಹಾಯಕ.

ನಿದ್ದೆಯ 2 ಗಂಟೆಗಿಂತ ಮುಂಚೆ ಆಹಾರ ಸೇವಿಸಿ:

ನಿದ್ದೆಯ 2 ಗಂಟೆಗಿಂತ ಮುಂಚೆ ಆಹಾರ ಸೇವಿಸಿ:

ನಿದ್ದೆ ಮಾಡುವ 2 ಗಂಟೆಗಿಂತ ಮುಂಚೆ ಆಹಾರ ಸೇವಿಸಿ. ನಿಮಗೆ ದಣಿವು ಹೆಚ್ಚಿದಂತೆ ತೆಗೆದುಕೊಳ್ಳುವ ಆಹಾರ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಇದರಿಂದ ಅಜೀರ್ಣ ಉಂಟಾಗಿ ನಿದ್ದೆ ಇಲ್ಲದಂತಾಗುತ್ತದೆ.

ಟೀವಿ ನೋಡದಿರಿ:

ಟೀವಿ ನೋಡದಿರಿ:

ಟೀವಿ ನೋಡುವುದು ನಿಮ್ಮ ದಣಿವನ್ನು ನೀಗಿಸುವುದಿಲ್ಲ ಎಂಬುದು ನಿಮ್ಮ ತಲೆಯಲ್ಲಿರಲಿ. ನಿಮ್ಮ ನಿದ್ದೆಯನ್ನು ಈ ಟೀವಿ ತಿಂದು ಹಾಕುತ್ತದೆ ಆದ್ದರಿಂದ ನಿದ್ದೆ ಬರುವ ಸಮಯದಲ್ಲಿ ಟೀವಿ ನೋಡಿ ಸಮಯ ಪೋಲು ಮಾಡದಿರಿ.

ಮಾತುಕಥೆ:

ಮಾತುಕಥೆ:

ಹೌದು ನಿಮಗೆ ದಣಿದಿದ್ದಾಗ ನಿಮ್ಮ ಸ್ನೇಹಿತರು ಅಥವಾ ಸಂಗಾತಿ ಮನೆಯವರೊಂದಿಗೆ ಮಾತನಾಡುವುದು ನಿಮ್ಮ ದಣಿದ ದೇಹದ ಒತ್ತಡವನ್ನು ಕೊಂಚ ಹಗುರಗೊಳಿಸುತ್ತದೆ.ಇದರಿಂದ ನಿದ್ದೆ ನಿಮಗೆ ಚೆನ್ನಾಗಿ ಬರುತ್ತದೆ.

ತಾಜಾ ಗಾಳಿ ಸೇವಿಸಿ:

ತಾಜಾ ಗಾಳಿ ಸೇವಿಸಿ:

ಹವಾನಿಯಂತ್ರಿತ ಕೋಣೆಯಲ್ಲಿ ಇಡೀ ದಿನ ಕಳೆಯುವುದು ತಾಜಾ ಗಾಳಿಯನ್ನು ನಿಮ್ಮಿಂದ ದೂರಗೊಳಿಸುತ್ತದೆ. ಆದ್ದರಿಂದ ನಿದ್ದೆ ಮಾಡುವುದಕ್ಕಿಂತ ಮುಂಚೆ ತಾಜಾ ಗಾಳಿ ಸೇವಿಸಿ ಇದರಿಂದ ಮನಸ್ಸು ಹಗುರಗೊಳ್ಳುತ್ತದೆ ಮತ್ತು ದಣಿದ ದೇಹ ವಿಶ್ರಾಂತಗೊಳ್ಳುತ್ತದೆ.

ನಿಮಗೆ ಇಷ್ಟವಾದ ಆಹಾರ ಸೇವಿಸಿ:

ನಿಮಗೆ ಇಷ್ಟವಾದ ಆಹಾರ ಸೇವಿಸಿ:

ನಿಮಗೆ ಇಷ್ಟವಾದ ಆಹಾರ ಸೇವನೆ ಕ್ಯಾಲೋರಿ ರಹಿತವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಇಷ್ಟದ ಆಹಾರ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ ಎಂದಾದಲ್ಲಿ ಮೆಚ್ಚಿನ ಆಹಾರವನ್ನೇ ಸೇವಿಸಿ ನಂತರ ನಿದ್ದೆ ಮಾಡಿ.

ಸೌಂದರ್ಯ ಸಲಹೆ:

ಸೌಂದರ್ಯ ಸಲಹೆ:

ಸೌಂದರ್ಯ ಸಲಹೆಗಳನ್ನು ಅನುಸರಿಸಿಕೊಂಡು ನಿದ್ದೆ ಮಾಡುವುದು ಸೂಕ್ತ ವಿಶ್ರಾಂತಿಯನ್ನು ನಿಮಗೆ ಒದಗಿಸುತ್ತದೆ. ತಲೆಬಾಚಿ ಮಲಗುವುದು ಕೈ ಕಾಲುಗಳನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಇಟ್ಟು ಹಾಟ್ ಮಸಾಜ್ ತೆಗೆದುಕೊಳ್ಳುವುದು ಇವೇ ಮುಂತಾದ ಸಲಹೆಗಳು ನಿಮಗೆ ಖಂಡಿತ ಒಳ್ಳೆಯ ನಿದ್ದೆಯನ್ನು ದಯಪಾಲಿಸುತ್ತದೆ.

ಹಾಸಿಗೆಗೆ ಕೆಲಸವನ್ನು ತರಬೇಡಿ:

ಹಾಸಿಗೆಗೆ ಕೆಲಸವನ್ನು ತರಬೇಡಿ:

ನಿದ್ದೆ ಸಮಯದಲ್ಲಿ ಕೆಲಸ ಮಾಡುವುದು ನಿಮ್ಮ ದಣಿವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ ನಿದ್ದೆ ಸಮಯದಲ್ಲಿ ಕೆಲಸ ಮಾಡದಿರಿ.

ನಿಮ್ಮನ್ನು ಸಜ್ಜುಗೊಳಿಸಿ:

ನಿಮ್ಮನ್ನು ಸಜ್ಜುಗೊಳಿಸಿ:

ನೀವು ಮಾಡುವ ಕೆಲಸವನ್ನು ಬಿಟ್ಟು ನಿದ್ದೆಗೆ ಗಮನ ಹರಿಸಿ. ಮಂದ ಗತಿಯ ಬೆಳಕನ್ನು ಬಳಸಿ ನಿದ್ದೆ ಮಾಡಿ.

ಸಮಯವನ್ನು ಪರಿಶೀಲಿಸದಿರಿ:

ಸಮಯವನ್ನು ಪರಿಶೀಲಿಸದಿರಿ:

ನಿದ್ದೆ ಮಾಡಲು ಇದೇ ಸಮಯವೆಂಬುದನ್ನು ಪಾಲಿಸದಿರಿ. ಇದರಿಂದ ನಿದ್ದೆ ಆ ಸಮಯಕ್ಕೆ ಬರುತ್ತದೆ ನಿಮಗೆ ಬೇಕೆಂದಾಗ ನಿದ್ದೆ ಹತ್ತಿರಕ್ಕೆ ಸುಳಿಯದು.

English summary

10 Ways To Sleep When You Are Stressed

Stress is something that affects every aspect of our lives. Sleep disorders are mostly a result of stress. Stress can literally wind up and cramp your muscles. Stress is the worst enemy of sleep. The more stressed you are, the lesser you sleep.
Story first published: Thursday, April 24, 2014, 15:04 [IST]
X
Desktop Bottom Promotion