For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಯನ್ನು ಹೆಚ್ಚಿಸುವ ಸೂಪರ್ ತರಕಾರಿಗಳು

By Super
|

ಇಂದು ಗೌರವರ್ಣವನ್ನು ಪಡೆಯಲು ಜನಸಾಮಾನ್ಯರೂ ಎಷ್ಟೇ ದುಡ್ಡು ರೆಡಿ ಮಾಡಲು ಕೂಡ ರೆಡಿಯಾಗಿರುತ್ತಾರೆ. ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಪ್ರಯತ್ನಗಳನ್ನು ನಡೆಸುತ್ತಲೇ ಬರುತ್ತಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿ ಈ ಪ್ರಯತ್ನಗಳು ಅತಿ ಹೆಚ್ಚು. ಹಾಗಾಗಿ ಮಾರುಕಟ್ಟೆಯಲ್ಲಿ ದೊರಕುವ ಗೌರವರ್ಣದ ಕ್ರೀಮು ಮತ್ತು ಇತರ ಪ್ರಸಾಧನಗಳಲ್ಲಿ ಮಹಿಳೆಯರಿಗಾಗಿ ಇರುವ ವಸ್ತುಗಳ ಪಟ್ಟಿಯೇ ದೊಡ್ಡದು.

ಮಾರುಕಟ್ಟೆಯಲ್ಲಿ ದೊರೆಯುವ ವಿಧದ ಸೌಂದರ್ಯವರ್ಧಕಗಳು ರಾಸಾಯನಿಕಗಳಿಂದ ಕೂಡಿರುವ ಕಾರಣ ಎಲ್ಲರಿಗೂ ಇದು ಏಕಸಮಾನವಾಗಿ ಸುರಕ್ಷಿತ ಎಂದು ಹೇಳಲಾಗುವುದಿಲ್ಲ. ಬನ್ನಿ ಇಂತಹ ಸಮಸ್ಯೆಯನ್ನು ದೂರಮಾಡುವ ಹಲವಾರು ನೈಸರ್ಗಿಕ ತರಕಾರಿಗಳಿದ್ದು ಅವು ಯಾವುದು ಎಂಬುದನ್ನು ನೋಡೋಣ ವೇಗವಾಗಿ ತೂಕ ಇಳಿಸುವುದರಿಂದ ಎದುರಾಗುವ 12 ಅಪಾಯಗಳು!

ಲಿಂಬೆಹಣ್ಣು

ಲಿಂಬೆಹಣ್ಣು

ಲಿಂಬೆ ಒಂದು ನೈಸರ್ಗಿಕ ಬಿಳಿಚಿಸುವ ವಸ್ತುವಾಗಿದೆ. ಒಂದು ವೇಳೆ ಲಿಂಬೆಯಲ್ಲಿ ಬೀಜವಿಲ್ಲದೇ ಇರುತ್ತಿದ್ದರೆ ಸಂಜೀವಿನಿಯಾಗುತ್ತಿತ್ತೆಂಬುದು ಒಂದು ಹಳೆಯ ಗಾದೆ. ಲಿಂಬೆಯಲ್ಲಿ ಹೇರಳವಾಗಿ ವಿಟಮಿನ್ ಸಿ. ಹಾಗೂ ಸಿಟ್ರಿಕ್ ಆಮ್ಲವಿದೆ. ಚರ್ಮದ ಕಲೆಗಳನ್ನು ಹೋಗಲಾಡಿಸಿ ನೈಸರ್ಗಿಕ ಹೊಳಪನ್ನು ನೀಡುವಲ್ಲಿ ಸಿಟ್ರಿಕ್ ಆಮ್ಲದ ಕಾರ್ಯ ಮಹತ್ವದ್ದಾಗಿದೆ.

ಬೀಟ್‌ರೂಟ್

ಬೀಟ್‌ರೂಟ್

ತ್ವಚೆಗೆ ಗೌರವರ್ಣ ತರುವಲ್ಲಿ ಬೀಟ್‌ರೂಟ್ ಅತ್ಯಂತ ಪರಿಣಾಮಕಾರಿಯಾಗಿದೆ. ಬೀಟ್‌ರೂಟ್‌ನ ಕೆಂಪು ಬಣ್ಣಕ್ಕೆ betanin ಮತ್ತು vulgaxantin ಎಂಬ ಆಂಟಿ ಆಕ್ಸಿಡೆಂಟುಗಳು ಕಾರಣವಾಗಿವೆ. ಅದರಲ್ಲೂ ಬಿಟಾನಿನ್ ರಕ್ತ ಮತ್ತು ಪಿತ್ತಜನಕಾಂಗಗಳನ್ನು ಶುದ್ಧಗೊಳಿಸುವುದು ಮಾತ್ರವಲ್ಲದೇ ರಕ್ತದಲ್ಲಿರುವ ವಿಷಕಾರಿ ವಸ್ತುಗಗಳನ್ನು ಕೊಲ್ಲುತ್ತವೆ. ಇದರಲ್ಲಿ ಹೇರಳವಾಗಿರುವ ಪೊಟ್ಯಾಸಿಯಂ, ಕಬ್ಬಿಣ, ಮೆಗ್ನೇಶಿಯಂ, ಗಂಧಕ, ವಿವಿಧ ವಿಟಮಿನ್ ಗಳು ಹಾಗೂ ಕರಗುವ ನಾರು ಪಚನಕ್ರಿಯೆಯನ್ನು ಸುಲಭಗೊಳಿಸುತ್ತದೆ. ಶುದ್ಧಗೊಂಡ ರಕ್ತದ ಮೂಲಕ ಚರ್ಮ ನೈಸರ್ಗಿಕ ಕಾಂತಿಯನ್ನು ಪಡೆಯುತ್ತದೆ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ಅಥವಾ ಗಜ್ಜರಿಯಲ್ಲಿ ವಿಟಮಿನ್ ಸಿ. ಉತ್ತಮ ಪ್ರಮಾಣದಲ್ಲಿದೆ. ಹಸಿಯಾಗಿ ಅಥವಾ ಬೇಯಿಸಿ ವ್ಯಂಜನಗಳೊಂದಿಗೆ ಸೇವಿಸಬಹುದಾದ ಕ್ಯಾರಟ್ ಚರ್ಮದ ನೈಸರ್ಗಿಕ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಮತ್ತು ಬಸಲೆ ಸೊಪ್ಪುಗಳಲ್ಲಿ ಹೇರಳವಾಗಿ ಆಂಟಿ ಆಕ್ಸೆಡೆಂಟುಗಳಿವೆ. ಇವು ಚರ್ಮ ಸುಕ್ಕುಗೊಳಿಸುವುದನ್ನು ತಡೆದು ಯೌವನವನ್ನು ಕಾಪಾಡುತ್ತವೆ. ಸಡಿಲವಾಗಿರುವ ಚರ್ಮವನ್ನು ಬಿಗಿಯಾಗಿಸಿ, ಚರ್ಮದಲ್ಲಿ ರಕ್ತಸಂಚಾರ ಹೆಚ್ಚಿಸಿ ಕಲೆಗಳನ್ನು ತೊಲಗಿಸುತ್ತದೆ. ಪರಿಣಾಮವಾಗಿ ಚರ್ಮ ಹೆಚ್ಚಿನ ಕಾಂತಿಯನ್ನು ಪಡೆಯುತ್ತದೆ.

ಗೆಣಸು

ಗೆಣಸು

ಬಿಳಿ ಅಥವಾ ಕೆಂಪು ಗೆಣಸುಗಳಲ್ಲಿ ವಿಟಮಿನ್ ಎ ಹೇರಳವಾಗಿದ್ದು ಒಂದು ನೈಸರ್ಗಿಕ ಉರಿಯೂತ ನಿವಾರಕವಾಗಿದೆ. (anti-inflammatory). ಗೆಣಸನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸುವ ಮೂಲಕ ಮುಖದಲ್ಲಿ ಮೊಡವೆಗಳಾಗುವುದನ್ನು ತಪ್ಪಿಸಬಹುದು.

English summary

Vegetables To Get Fair Skin

Fair skin has become such an important thing in our society. In every Indian daily, matrimonial advertisements are overflowing with parents wanting a fair bride or groom for their children. Consuming these veggies on a regular basis has the potential to give you fair skin.
X
Desktop Bottom Promotion