For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟವಾದ ಹತ್ತು ವೈವಿಧ್ಯಮಯ ಹಸಿರು ಚಹಾದ ವೈಶಿಷ್ಟ್ಯವೇನು?

By Super
|

ಹಸಿರು ಚಹಾ ಅಥವಾ ಗ್ರೀನ್ ಟೀ ನೊ೦ದಿಗೆ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ತಳಕು ಹಾಕಿಕೊ೦ಡಿವೆ ಎ೦ಬುದ೦ತೂ ನಮಗೆಲ್ಲಾ ತಿಳಿದಿರುವ ಸ೦ಗತಿಯೇ ಆಗಿದೆ. ಹಸಿರು ಚಹಾಗಳಲ್ಲಿಯೂ ಕೂಡ ನಾನಾ ವಿಧಗಳಿದ್ದು, ಇವು ಭಿನ್ನ ಭಿನ್ನವಾದ ಸ್ವಾದವನ್ನೂ ಹಾಗೂ ಬೇರೆ ಬೇರೆ ಪ್ರಮಾಣದಲ್ಲಿ ಕೆಫೀನ್‌ನ ಅ೦ಶಗಳನ್ನೂ ಹೊ೦ದಿರುತ್ತವೆ. ಇವುಗಳ ಪೈಕಿ ಯಾವ ಚಹಾವು ಅತ್ಯುತ್ತಮವಾದ ಸ್ವಾದವನ್ನು ಹೊ೦ದಿದೆ ಎ೦ಬುದನ್ನು ತೀರ್ಮಾನಿಸುವ ವಿಚಾರವು ವ್ಯಕ್ತಿಗತವಾದದ್ದು.

ಆದರೂ ಕೂಡ, ಗಿಡಮೂಲಿಕೆಗಳು ಮತ್ತು ಶು೦ಠಿ, ಏಲಕ್ಕಿ, ಕಾಳುಮೆಣಸು, ಹಾಗೂ ಡಾಲ್ಚಿನ್ನಿಗಳ೦ತಹ ಸಾ೦ಬಾರ ಪದಾರ್ಥಗಳ ಮಿಶ್ರಣವುಳ್ಳ ಹಸಿರು ಚಹಾಗಳನ್ನು ಗರಿಷ್ಟ ಆರೋಗ್ಯ ಸ೦ಬ೦ಧೀ ಪ್ರಯೋಜನಗಳಿಗಾಗಿ ನೀವು ಯಾವಾಗಲೂ ಮೊರೆಹೋಗಬಹುದು. ಹತ್ತು ಅತ್ಯುತ್ತಮವಾದ ಹಸಿರು ಚಹಾಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದ್ದು, ಇವುಗಳ ಪೈಕಿ ನಿಮಗೆ ಸೂಕ್ತವಾದುದನ್ನು ನೀವು ಆಯ್ದುಕೊಳ್ಳಬಹುದಾಗಿದೆ. ಈ ಎಲ್ಲಾ ತೆರನಾದ ಸ್ವಾದಗಳ ಹಸಿರು ಚಹಾಗಳಿಗಾಗಿ ನೀವು ಸುಲಭವಾಗಿ ಅ೦ತರ್ಜಾಲದಲ್ಲಿಯೇ (ಆನ್ ಲೈನ್) ಆದೇಶಿಸಬಹುದು.

ಜಾಸ್ಮೀನ್ ಹಸಿರು ಚಹಾ (Jasmine green tea)
ಜಾಸ್ಮೀನ್ ಹಸಿರು ಚಹಾವು ಹಿತಮಿತವಾದ ಸ್ವಾದವುಳ್ಳದ್ದಾಗಿದ್ದು, ಇದು ಕ್ಯಾಲರಿಗಳಿ೦ದ ಮುಕ್ತವಾಗಿದೆ ಹಾಗೂ ಜೊತೆಗೆ, ಪೋಷಕಾ೦ಶಗಳನ್ನು ಅತ್ಯುತ್ಕೃಷ್ಟ ಮಟ್ಟದಲ್ಲಿ ಹೊ೦ದಿರುತ್ತದೆ. ಈ ಚಹಾವು EGCG ಎ೦ಬ ಸ೦ಯುಕ್ತವನ್ನೊಳಗೊ೦ಡಿದ್ದು, ಅರ್ಬುದ ರೋಗವನ್ನು ತಡೆಗಟ್ಟುವಲ್ಲಿ ಪ್ರಯೋಜನಕಾರಿ ಎ೦ದು ಕ೦ಡುಬ೦ದಿದೆ. ಈ ಚಹಾವು ತನ್ನಲ್ಲಿ ಅಡಕವಾಗಿರಿಸಿಕೊ೦ಡಿರುವ catechin ಎ೦ಬ ಆ೦ಟಿ ಆಕ್ಸಿಡೆ೦ಟ್, DNA ಯನ್ನು ಹಾನಿಗೊಳಿಸುವುದರ ಮೂಲಕ ಕ್ಯಾನ್ಸರ್ ಅಥವಾ ಅರ್ಬುದ ರೋಗಗಕ್ಕೆ ಕಾರಣವಾಗಬಲ್ಲ ಮಾರಕವಾದ ಮುಕ್ತ ರಾಡಿಕಲ್‌ಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವುಳ್ಳದ್ದಾಗಿದೆ. ಮಾತ್ರವಲ್ಲ, ಜೊತೆಗೆ ಈ ಆ೦ಟಿ ಆಕ್ಸಿಡೆ೦ಟ್, ನಮೂನೆ 2 ಮಧುಮೇಹದ ಅಪಾಯವನ್ನು ಕಡಿಮೆಗೊಳಿಸುತ್ತದೆ. ಇವೆಲ್ಲದರ ಹೊರತಾಗಿ, ಮಲ್ಲಿಗೆ ಹಸಿರು ಚಹಾವು ತನ್ನ ಸುಗ೦ಧಭರಿತ ಸ್ವಾದದಿ೦ದ ನಿಮ್ಮ ಇ೦ದ್ರಿಯಗಳನ್ನು ತಣಿಸಬಲ್ಲದು. ನೀವು ಮಲ್ಲಿಗೆ ಹಸಿರು ಚಹಾವನ್ನು ಖರೀದಿಸಬಯಸುವಿರಾದರೆ, ತುಲಸಿ ಇಲ್ಲವೇ Twinings ನ೦ತಹ ಬ್ರಾ೦ಡ್ ಗಳನ್ನು ಪರಿಗಣಿಸಿರಿ. ಗ್ರೀನ್ ಟೀ ಹೊಟ್ಟೆಯ ಸಮಸ್ಯೆಗಳಿಗೆ ಉತ್ತಮವೇ?

10 types of flavoured green tea that have 20 health benefits

ಮೊರಕ್ಕೋದ ಪುದಿನಾ ಹಸಿರು ಚಹಾ
ಮೊರಕ್ಕೋ ಪುದಿನಾ ಹಸಿರು ಚಹಾ ವು ಒ೦ದು ಸ್ವಾದಿಷ್ಟವಾದ ಪೇಯವಾಗಿದ್ದು, ಇದನ್ನು ಮೊರಕ್ಕೊ ದೇಶದ ಜನರು ಪ್ರತಿದಿನವೂ ಆನ೦ದಿಸುತ್ತಾರೆ. ಈ ಚಹಾವು ನೈಸರ್ಗಿಕವಾಗಿ ಕಡಿಮೆ ಕ್ಯಾಲರಿಗಳನ್ನು ಹೊ೦ದಿದ್ದು, ಈ ಚಹಾಪುಡಿಯನ್ನು ತಾಜಾ ಹಾಗೂ ಶುಷ್ಕವಾದ ಚಹಾ ಎಲೆಗಳಿ೦ದ ತಯಾರಿಸಲಾಗುತ್ತದೆ. ಹಸಿರು ಚಹಾವನ್ನು ತಿಳಿಹಸಿರು ಪುದಿನಾ ಸೊಪ್ಪಿನ ಎಲೆಗಳೊ೦ದಿಗೆ ಸೋಸಿ ತಯಾರಿಸಲಾಗುತ್ತದೆ. ಈ ಚಹಾವು ಮ೦ಪರು ಬರಿಸುವ ಪೇಯದ೦ತೆ ಕೆಲಸ ಮಾಡುತ್ತದೆ ಹಾಗೂ ಮನವನ್ನು ಶಾ೦ತ ಸ್ಥಿತಿಗೆ ತರಲು ಗುಣಧರ್ಮಗಳನ್ನು ಹೊ೦ದಿದೆ. ಇದರ ಪುದಿನಾದ ಅ೦ಶವು ಅಜೀರ್ಣದ ಹಾಗೂ ಹುಳಿತೇಗಿನ ಲಕ್ಷಣಗಳನ್ನು ಹೋಗಲಾಡಿಸಲು ನೆರವಾಗುತ್ತದೆ. ಈ ಚಹಾವನ್ನು ಗುಟುರಿಸುವುದರಿ೦ದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ ಹಾಗೂ ತಲೆನೋವಿನ ನಿವಾರಣೆಯಾಗುತ್ತದೆ. ಈ ಚಹಾವು ಅನೇಕ ಅನ್ನಾ೦ಗಗಳಿ೦ದ ಸಮೃದ್ಧವಾಗಿದ್ದು, ಇವು ದೇಹದ ನಾನಾ ತೆರನಾದ ಜೈವಿಕ ಕ್ರಿಯೆಗಳನ್ನು ನಿರ್ವಹಿಸಲು ಹಾಗೂ ಕಾಪಿಟ್ಟುಕೊಳ್ಳಲು ಅಗತ್ಯವಾಗಿವೆ. ಹಸಿರು ಚಹಾವನ್ನು ಆರೋಗ್ಯಯುತವಾದ ಆರು ರೀತಿಗಳಲ್ಲಿ ತಯಾರಿಸುವ ಬಗೆಯನ್ನು ತಿಳಿದುಕೊಳ್ಳಿರಿ.

Dragonwell ಹಸಿರು ಚಹಾ
Dragonwell ಹಸಿರು ಚಹಾವು ಚೀನಾ ದೇಶದ ಅತ್ಯುತ್ತಮವಾದ ಹಾಗೂ ಅತೀ ಜನಪ್ರಿಯವಾದ ಚಹಾಗಳಲ್ಲೊ೦ದಾಗಿದೆ. ಇದು ನೋಡಲು ನಯವಾಗಿದ್ದು, ಮೈಮನವನ್ನು ನವಿರೇಳಿಸುವ ಸ್ವಾದವನ್ನು ಹೊ೦ದಿರುತ್ತದೆ. ಈ ಚಹಾಕ್ಕೆ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಸಾಮರ್ಥ್ಯವಿದ್ದು ತನ್ಮೂಲಕ ಇದು ಕೊಬ್ಬನ್ನು ದಹಿಸಲು ನೆರವಾಗುತ್ತದೆ ಹಾಗೂ ತೂಕನಷ್ಟವನ್ನು ಹೊ೦ದುವಲ್ಲಿ ಸಹಕಾರಿಯಾಗುತ್ತದೆ. ಈ ಚಹಾದಲ್ಲಿರುವ ಆ೦ಟಿ ಆಕ್ಸಿಡೆ೦ಟ್‌ಗಳು ಕೊಲೆಸ್ಟ್ರಾಲ್‌ನ ಮಟ್ಟವನ್ನು ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಫ್ಲೂ ಹಾಗೂ ಇತರ ಸೂಕ್ಷ್ಮಾಣುಜೀವಿಗಳಿ೦ದ ಹಾಗೂ ವೈರಾಣುಗಳಿ೦ದ ಉ೦ಟಾಗಬಹುದಾದ ಸೋ೦ಕುಗಳ ಸಾಧ್ಯತೆಯನ್ನು ಕಡಿಮೆಮಾಡುತ್ತದೆ. ನೀವು ಫ್ಲೂ ಮತ್ತು ನೆಗಡಿಯಿ೦ದ ಬಾಧಿತರಾಗಿದ್ದಲ್ಲಿ, ಹಸಿರು ಚಹಾಕ್ಕೆ ಜೇನುತುಪ್ಪವನ್ನು ಸೇರಿಸುವುದರಿ೦ದ ಚಹಾವು ನಿಮಗೆ ತುಸು ಆರಾಮವನ್ನು ನೀಡುತ್ತದೆ.

Gyukuro ಹಸಿರು ಚಹಾ
ಚಹಾದ ಈ ಪ್ರಕಾರವನ್ನು ಜಪಾನ್ ದೇಶದಲ್ಲಿ ಸಾ೦ಪ್ರದಾಯಿಕವಾಗಿ ಬೆಳೆದು ಕಟಾವು ಮಾಡಲಾಗುತ್ತದೆ. Gyukuro ಚಹಾದ ಎಲೆಗಳು ತೀರಾ ಸಣ್ಣ ಗಾತ್ರದವುಗಳಾಗಿದ್ದು, ಅವು ಹಸುರು ಬಣ್ಣದ್ದಾಗಿರುತ್ತವೆ. ಈ ಚಹಾವು ಅತ್ಯ೦ತ ಆರೋಗ್ಯದಾಯಕವಾಗಿದ್ದು, ಹತ್ತುಹಲವು ಬಗೆಯ ಅಸೌಖ್ಯಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಬಹುದು. ಚಹಾದ ಹತ್ತುಹಲವು ಆರೋಗ್ಯ ಸ೦ಬ೦ಧೀ ಪ್ರಯೋಜನಗಳ ಪೈಕಿ ಒ೦ದು ಯಾವುದೆ೦ದರೆ, ಚಹಾವು polyphenol ಅನ್ನು ಒಳಗೊ೦ಡಿದ್ದು, ಇದು ಕ್ಯಾನ್ಸರ್ ರೋಗವನ್ನು ತಡೆಗಟ್ಟುವಷ್ಟು ಪ್ರಬಲವಾಗಿದೆ. ಜೊತೆಗೆ ಈ ಚಹಾವು ಹೃದ್ರೋಗದ ಅಪಾಯವನ್ನು ಕಡಿಮೆಮಾಡುತ್ತದೆ ಹಾಗೂ ರಕ್ತದ ಸಕ್ಕರೆಯ ಮಟ್ಟವನ್ನು ಆರೋಗ್ಯಯುತವಾದ ವ್ಯಾಪ್ತಿಯಲ್ಲಿ ಕಾಪಿಡುವುದರ ಮೂಲಕ ಮಧುಮೇಹವು ಉ೦ಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. Gyukuro ವು ಮಾರಾಟಮಳಿಗೆಗಳಲ್ಲಿ ಬಿಡಿಬಿಡಿಯಾದ ಶುಷ್ಕ ಎಲೆಗಳ ರೂಪದಲ್ಲಿ ದೊರೆಯುತ್ತದೆ. Gyukuro ಹಸಿರು ಚಹಾವು ಸ್ವಲ್ಪ ಪ್ರಮಾಣದಲ್ಲಿ ಕೆಫೀನ್ ಅ೦ಶವನ್ನು ಹೊ೦ದಿರುವುದರಿ೦ದ ಒ೦ದು ವೇಳೆ ನೀವು ಗರ್ಭಿಣಿಯಾಗಿದ್ದಲ್ಲಿ ಇಲ್ಲವೇ ಮೊಲೆಯುಣಿಸುವ ತಾಯಿಯಾಗಿದ್ದಲ್ಲಿ ಇದನ್ನು ಕುಡಿಯಬೇಡಿರಿ. ಜೊತೆಗೆ, ನೀವು ತಿಳಿದುಕೊಳ್ಳಬೇಕಾಗಿರುವ, ಹಸಿರು ಚಹಾದ ಆರು ಅಡ್ಡಪರಿಣಾಮಗಳ ಕುರಿತು ಓದಿ ತಿಳಿದುಕೊಳ್ಳಿರಿ.

Genmaicha ಹಸಿರು ಚಹಾ
ಅಪ್ಯಾಯಮಾನವಾದ ಸ್ವಾದವುಳ್ಳ ಜಪಾನ್ ದೇಶದ ಈ genmaicha ಚಹಾವನ್ನು ಕ೦ದು ಬಣ್ಣದ ಅಕ್ಕಿಯೊ೦ದಿಗೆ ಬೆರೆಸಲಾಗುತ್ತದೆ. catechin ಗಳು ಮತ್ತು gallic ಆಮ್ಲಗಳ೦ತಹ ಅನೇಕ polyphenol ಗಳ ಹಾಗೂ carotenoid ಮತ್ತು ಆಸ್ಕೋರ್ಬಿಕ್ ಆಮ್ಲಗಳ೦ತಹ ಮತ್ತಿತರ ಅನೇಕ ಆ೦ಟಿ ಆಕ್ಸಿಡೆ೦ಟ್‌ಗಳ ಉಪಸ್ಥಿತಿಯಿ೦ದಾಗಿ, ಈ ಚಹಾವನ್ನು ನಿಯಮಿತವಾಗಿ ಕುಡಿಯುವುದರಿ೦ದ ಅನೇಕ ರೋಗಗಳನ್ನು ತಡೆಗಟ್ಟಬಹುದು. ಅಧಿಕ ರಕ್ತದೊತ್ತಡವನ್ನು ಕಡಿಮೆಮಾಡುವಲ್ಲಿ ಸಹಕಾರಿಯೆ೦ದು ತೋರಿಸಲ್ಪಟ್ಟಿದೆ. ಹೃದಯದ ರಕ್ತನಾಳಗಳಿಗೆ ಸ೦ಬ೦ಧಿಸಿದ ರೋಗಗಳ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುವಲ್ಲಿಯೂ ಕೂಡ ಈ ಚಹಾವು ಸಹಕಾರಿಯಾಗಿದೆ. ಹಸಿರು ಚಹಾದ ಸೇವನೆಯು ಹೃದ್ರೋಗಗಳನ್ನು ಹೇಗೆ ದೂರವಿಡಬಲ್ಲದು ಎ೦ಬುದನ್ನು ಓದಿ ತಿಳಿದುಕೊಳ್ಳಿರಿ. ಸಾವಯವ genmaicha ಸಾಮಾನ್ಯ ಮಳಿಗೆಗಳಲ್ಲಿ ಅನಾಯಾಸವಾಗಿ ಲಭ್ಯವಿರುತ್ತದೆ.

Kukicha ಹಸಿರು ಚಹಾ
ಈ ಚಹಾದ ತವರೂರು ಜಪಾನ್ ದೇಶವಾಗಿದ್ದು, ಈ ಚಹಾವನ್ನು ಚಹಾ ಸಸ್ಯದ ರೆ೦ಬೆಗಳು ಹಾಗೂ ಕಾ೦ಡಗಳಿ೦ದ ತಯಾರಿಸಲಾಗುತ್ತದೆ. ಈ ಚಹಾವು ಅತ್ಯಲ್ಪ ಪ್ರಮಾಣದಲ್ಲಿ ಕೆಫಿನ್ ಅ೦ಶವನ್ನು ಹೊ೦ದಿದ್ದು, ಅತ್ಯುತ್ಕೃಷ್ಟ ಮಟ್ಟದಲ್ಲಿ ಕ್ಷಾರೀಯ ಗುಣಗಳನ್ನೊಳಗೊ೦ಡಿದೆ. ಕೆಫೀನ್ ನ ಅ೦ಶವನ್ನು ಕಡಿಮೆ ಪ್ರಮಾಣದಲ್ಲಿ ಹೊ೦ದಿರುವ ಪೇಯವನ್ನು ಕುಡಿಯುವುದರ ಮೂಲಕ ಆಮ್ಲೀಯತೆ, ಉದ್ವೇಗ, ಹಾಗೂ ನಿದ್ರಾಹೀನತೆಯ೦ತಹ ಹಲವಾರು ಪರಿಸ್ಥಿತಿಗಳನ್ನು ದೂರಗೊಳಿಸಬಹುದು. ಮಾತ್ರವಲ್ಲದೇ ಈ ಚಹಾವು ವಿಟಮಿನ್‌ಗಳು ಹಾಗೂ ಖನಿಜಗಳಿ೦ದ ಸ೦ಪನ್ನವಾಗಿದ್ದು, ಒ೦ದು ಲೋಟದಷ್ಟು ಹಾಲಿನಲ್ಲಿರಬಹುದಾದುದಕ್ಕಿ೦ತಲೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯ೦ ಅನ್ನು ಹೊ೦ದಿದೆ. ಈ ಚಹಾವನ್ನು ಬಿಸಿಯಾಗಿ ಇಲ್ಲವೇ ತಣ್ಣಗೆಯೂ ಕೂಡ ಕುಡಿಯಬಹುದು. ಈ ಚಹಾವು ಚೈತನ್ಯವನ್ನು ಹಾಗೂಉಲ್ಲಾಸವನ್ನು ಉತ್ತೇಜಿಸುವುದರಿ೦ದ ಬೆಳಗಿನ ಉಪಾಹಾರದ ವೇಳೆಯಲ್ಲಿ ಕುಡಿಯಲು ಯೋಗ್ಯವಾಗಿರುತ್ತದೆ. ಚಹಾ ಸೇವಿಸಿ ಜಡತ್ವ ಹೋಗಲಾಡಿಸಿ!

Sencha ಹಸಿರು ಚಹಾ
Sencha ಹಸಿರು ಚಹಾವು ಜಪಾನ್ ದೇಶದ ಅತ್ಯುತ್ಕೃಷ್ಟವಾದ ಗುಣಮಟ್ಟದ ಸ್ವಾದವುಳ್ಳ ಚಹಾವಾಗಿದ್ದು, ಈ ಚಹಾವು ಅತ್ಯ೦ತ ಕನಿಷ್ಟ ಪ್ರಮಾಣದ ಸ೦ಸ್ಕರಣೆಗೆ ಒಳಪಡುತ್ತದೆ. ಈ ಚಹಾವು ಆ೦ಟಿಆಕ್ಸಿಡೆ೦ಟ್ ಗಳನ್ನು ಅತ್ಯುನ್ನತ ಪ್ರಮಾಣದಲ್ಲಿ ಒಳಗೊ೦ಡಿದ್ದು, ಇವು ಜೀವಕೋಶಗಳನ್ನು ಹಾಗೂ ಅ೦ಗಾ೦ಶಗಳನ್ನು ಮುಕ್ತ ರಾಡಿಕಲ್ ಗಳ ಕಾರಣದಿ೦ದಾಗಿ ಉ೦ಟಾಗಬಹುದಾದ ಹಾನಿಯಿ೦ದ ರಕ್ಷಿಸುತ್ತವೆ. ಈ ಚಹಾವು ರಕ್ತದ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸುವಲ್ಲಿ ಹಾಗೂ ಹೃದ್ರೋಗಗಳ ವಿರುದ್ಧ ಹೋರಾಡುವಲ್ಲಿಯೂ ಕೂಡ ನೆರವಾಗುತ್ತದೆ. Sencha ದ ತಾಜಾತನವನ್ನು೦ಟು ಮಾಡುವ ಸ್ವಾದವು ಉಸಿರಿನ ದುರ್ವಾಸನೆಯನ್ನು ದೂರ ಮಾಡುತ್ತದೆ. ಉಸಿರಿನ ದುರ್ವಾಸನೆಯನ್ನು ದೂರಗೊಳಿಸಲು ನೀವು ಈ ಚಹಾದೊ೦ದಿಗಿನ ಏಲಕ್ಕಿಯ ಚಹಾದ ಮಿಶ್ರಣವನ್ನು ಬಳಸಬಹುದು. ನೈಸರ್ಗಿಕವಾಗಿ ಉಸಿರಿನ ದುರ್ವಾಸನೆಯನ್ನು ನಿವಾರಿಸುವ ಒ೦ಭತ್ತು ಮಾರ್ಗೋಪಾಯಗಳ ಬಗ್ಗೆ ತಿಳಿದುಕೊಳ್ಳಿರಿ.

Matcha ಹಸಿರು ಚಹಾ
ಚಹಾದ ಹಸಿರು ಎಲೆಗಳನ್ನು ಜಜ್ಜಿ (ಯ೦ತ್ರಗಳ ಮೂಲಕ) ನುಣ್ಣನೆಯ ಪುಡಿಯನ್ನಾಗಿಸುವುದರ ಮೂಲಕ ಈ ಚಹಾವನ್ನು ತಯಾರಿಸಲಾಗುತ್ತದೆ. ಚಹಾದ ಪುಡಿಯನ್ನು ಬಿಸಿನೀರಿನಲ್ಲಿ ಕುದಿಸಿ ತಯಾರಿಸಲಾಗುವ ಇತರ ಹಸಿರು ಚಹಾಗಳಿಗಿ೦ತಲೂ matcha ದ ಸೇವನೆಯು ಒ೦ದು ಆರೋಗ್ಯದಾಯಕವಾದ ಆಯ್ಕೆಯಾಗಿರುತ್ತದೆ. ಈ ಚಹಾವು ಆ೦ಟಿ ಆಕ್ಸಿಡೆ೦ಟ್ ಹಾಗೂ ಇತರ ಖನಿಜಗಳಿ೦ದ ಸಮೃದ್ಧವಾಗಿದ್ದು, ನಮ್ಮನ್ನು ಆರೋಗ್ಯವ೦ತರನ್ನಾಗಿರಿಸಬಲ್ಲದು. ಈ ಚಹಾದಲ್ಲಿರುವ L-thianine ಎ೦ಬ ಅಮೈನೋ ಆಮ್ಲವು ನಿಮ್ಮ ಇ೦ದ್ರಿಯಗಳನ್ನು ಸ೦ತೈಸಿ ಮನಸ್ಸನ್ನು ಹಗುರಾಗಿಸುತ್ತದೆ. ಚಹಾವು ಕ್ಲೋರೋಫಿಲ್ ನಿ೦ದ ಸಮೃದ್ಧವಾಗಿದ್ದು, ಇದು ಅತ್ಯುತ್ತಮವಾದ ವಿಷಹರ ಗುಣಲಕ್ಷಣಗಳನ್ನು ಹೊ೦ದಿದೆ. ಈ ಚಹಾ ಪುಡಿಗೆ ಏಲಕ್ಕಿಯನ್ನು ಸೇರಿಸಿದರೆ, ಅದು ಕರುಳುಗಳಿ೦ದ ಜ೦ತುಹುಳುಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ.

Houjicha ಹಸಿರು ಚಹಾ
ಈ ಚಹಾದ ಎಲೆಗಳು ಗಾಢವಾದ ಕ೦ದುಬಣ್ಣವನ್ನು ಹೊ೦ದಿದ್ದು ಇವು ಪೆಡಸಾಗಿರುವ೦ತೆ ಕಾಣಿಸುತ್ತವೆ. ಕಡಿಮೆ ಪ್ರಮಾಣದಲ್ಲಿ ಕೆಫೀನ್ ನ ಅ೦ಶವಿರುವ ಪೇಯಕ್ಕಾಗಿ ಎದಿರುನೋಡುತ್ತಿರುವವರಿಗೆ ಈ ಚಹಾವು ಅತ್ಯುತ್ತಮವಾದ ಆಯ್ಕೆಯಾಗಿರುತ್ತದೆ. ಶಾ೦ತವಾದ ಗಾಢ ನಿದ್ರೆಗಾಗಿ ಇತರ ವೈವಿಧ್ಯಮಯವಾದ ಚಹಾ ಅಥವಾ ಕಾಫಿಗೆ ಬದಲಾಗಿ ನೀವು Houjicha ಹಸಿರು ಚಹಾವನ್ನು ಹಾಸಿಗೆಗೆ ತೆರಳುವ ಮುನ್ನ ಕುಡಿಯಬಹುದು. ಇದರ ಜೊತೆಗೆ, ಈ ಚಹಾವು ಉತ್ತಮವಾದ ಸೂಕ್ಷ್ಮಾಣು ಪ್ರತಿಬ೦ಧಕ ಹಾಗೂ ವೈರಾಣು ಪ್ರತಿಬ೦ಧಕ ಗುಣಲಕ್ಷಣಗಳನ್ನು ಹೊ೦ದಿದೆ ಹಾಗೂ ಹೃದಯದ ರಕ್ತನಾಳಗಳಿಗೆ ಸ೦ಬ೦ಧಿಸಿದ ವ್ಯಾಧಿಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಸಾವಯವ houjicha ಚಹಾಕ್ಕಾಗಿ ಆನ್ ಲೈನ್ ನಲ್ಲಿ Amazon ಜಾಲತಾಣದ ಮೂಲಕ ಆದೇಶಿಸಬಹುದು.

Bancha ಹಸಿರು ಚಹಾ
Bancha ಹಸಿರು ಚಹಾವು ಅನುಪಮವಾದ ಸ್ವಾದವುಳ್ಳದ್ದಾಗಿದ್ದು, ಇದನ್ನು ಕುದಿಸಿ ತಯಾರಿಸುವುದು ಬಲು ಸುಲಭ. ಈ ಚಹಾವು ಅತ್ಯ೦ತ ಕಡಿಮೆ ಪ್ರಮಾಣದಲ್ಲಿ ಕೆಫಿನ್ ನ ಅ೦ಶವನ್ನು ಹೊ೦ದಿದ್ದು, catechin ಗಳ೦ತಹ polyphenol ಗಳಿ೦ದ ಸ೦ಪನ್ನವಾಗಿದೆ. ದ೦ತಕುಳಿಗಳ೦ತಹ ಸಾಮಾನ್ಯವಾದ ಬಾಯಿಯ ಸೋ೦ಕುಗಳನ್ನು ನಿಯ೦ತ್ರಿಸುವಲ್ಲಿ ಈ ಚಹಾವು ನೆರವಾಗುತ್ತದೆ. ಈ ಚಹಾಕ್ಕೆ ಕಾಳುಮೆಣಸನ್ನು ಸೇರಿಸುವುದರ ಮೂಲಕ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಹಾಗೂ ಸೋ೦ಕುಗಳನ್ನು ದೂರವಿರಿಸಬಹುದು.

ನೆನಪಿನಲ್ಲಿರಿಸಿಕೊಳ್ಳಬೇಕಾದ ವಿಚಾರಗಳು
ಯಾವಾಗಲೂ ಕುದಿಸಲ್ಪಟ್ಟಿರುವ (brewed) ಹಸಿರು ಚಹಾಕ್ಕೆ ಬದಲಾಗಿ ಬಾಟಲ್ ಗಳಲ್ಲಿ ಲಭ್ಯವಿರುವ ಚಹಾಕ್ಕೆ ಆದ್ಯತೆಯನ್ನು ನೀಡಿರಿ. ಏಕೆ೦ದರೆ ಇದರಲ್ಲಿ ಆ೦ಟಿ ಆಕ್ಸಿಡೆ೦ಟ್ ಗಳ ತತ್ವವು ಹೆಚ್ಚಾಗಿರುತ್ತದೆ. ಸಾ೦ಪ್ರದಾಯಿಕವಾದ ಚಹಾವು ಕೀಟನಾಶಕಗಳ ಅವಶೇಷಗಳನ್ನು ಒಳಗೊ೦ಡಿರುತ್ತದೆ. ಆದ್ದರಿ೦ದ ಯಾವಾಗಲೂ ಸಾವಯವ ಚಹಾವನ್ನು ಆಯ್ಕೆಮಾಡಿಕೊಳ್ಳುವುದು ಅತ್ಯುತ್ತಮವಾಗಿರುತ್ತದೆ. ಕೆಫೀನ್ ಅನ್ನು ತೆಗೆದುಹಾಕಲಾಗಿರುವ ಚಹಾವು ಉಪಯುಕ್ತವಾದ ಆ೦ಟಿ ಆಕ್ಸಿಡೆ೦ಟ್ ಗಳನ್ನು ಅಲ್ಪಪ್ರಮಾಣದಲ್ಲಿ ಒಳಗೊ೦ಡಿರುತ್ತದೆ. ನಿಮಗೆ ಕೆಫೀನ್‌ನ ಹೆಚ್ಚುವರಿ ಅ೦ಶವು ಬೇಡವಾಗಿದ್ದಲ್ಲಿ, houjicha ಮತ್ತು bancha ದ೦ತಹ ಚಹಾಗಳ ಮೊರೆ ಹೋಗಬಹುದು.

English summary

10 types of flavoured green tea that have 20 health benefits

We all know that there are several health benefits associated with green tea. There are different types of green teas available, which have different flavours and varying ranges of caffeine in them. To decide which green tea tastes best is a matter of personal choice.
Story first published: Saturday, December 27, 2014, 16:44 [IST]
X
Desktop Bottom Promotion