For Quick Alerts
ALLOW NOTIFICATIONS  
For Daily Alerts

ನಾಲಿಗೆ ಸ್ವಚ್ಛತೆಗೆ ಇಲ್ಲಿದೆ ಸೂಪರ್ ಸಲಹೆಗಳು!

|

ಬಾಯಿ ಮುಕ್ಕಳಿಸಿ, ಹಲ್ಲುಜ್ಜಿ, ನಾಲಿಗೆ ಸ್ವಚ್ಛಗೊಳಿಸಿ ಇಂತಹ ಸಲಹೆಗಳು ಎಲ್ಲರಿಗೂ ಸಾಮಾನ್ಯ ಎನಿಸಬಹುದು. ದಿನವೂ ಮಾಡುತ್ತೇವೆ ಅದರಲ್ಲೇನಿದೆ ವಿಶೇಷ ಎನ್ನುವುದು ನಿಮ್ಮ ಪ್ರಶ್ನೆಗಳಾಗಿರಬಹುದು. ಇಂತಹ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲೆಂದೇ ಈ ಲೇಖನ!

ಮೌಖಿಕ ನೈರ್ಮಲ್ಯ, ಆರೋಗ್ಯಕರ ಬಾಯಿಗೆ ಮಾತ್ರವಲ್ಲ, ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಅತ್ಯಗತ್ಯ. ನಿಮ್ಮ ನಾಲಿಗೆಯ ಸಮಸ್ಯೆಗಳನ್ನು ಗುರುತಿಸಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡಬೇಕು. ನಿಮ್ಮ ನಾಲಿಗೆಯ ಆರೋಗ್ಯ ನಿಮ್ಮ ದೇಹದ ಆರೋಗ್ಯದ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ. ನಿಮ್ಮ ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಸ್ಥಿತಿಯನ್ನು ಬಹಿರಂಗಪಡಿಸುವ ನಾಲಿಗೆ,

ನಿಮ್ಮ ಹೃದಯ ಮತ್ತು ಶ್ವಾಸಕೋಶಗಳ ಪರಿಸ್ಥಿತಿಯನ್ನೂ ತೋರಿಸುತ್ತದೆ. ಹೊಟ್ಟೆ ಪರಿಸ್ಥಿತಿಗಳನ್ನು ನಾಲಿಗೆ ಮಧ್ಯದಲ್ಲಿ ಪರಿಶೀಲಿಸುವ ಮೂಲಕ ಕಾಣಬಹುದಾಗಿದೆ. ಕರುಳಿನ ಕೆಳಭಾಗದವರೆಗೆ ನಾಲಿಗೆಯಲ್ಲಿ ಅತ್ಯಂತ ಆಳವಾಗಿ ನೋಡುವ ಮೂಲಕ ತಿಳಿಯಬಹುದು. ನಾವು ಮೌಖಿಕ ನೈರ್ಮಲ್ಯ ಚರ್ಚಿಸಲು ಜನರು ಸಾಮಾನ್ಯವಾಗಿ ಉತ್ತಮವಾಗಿ ಹಲ್ಲುಜ್ಜುವ ಪದ್ಧತಿ ಮತ್ತು ಫ್ಲೋಶಿಂಗ್ ಬಗ್ಗೆ ಮಾತನಾಡಲು ಬಯಸುತ್ತೇವೆ.

ನಾವು ವಸಡು ಸ್ವಚ್ಛಗೊಳಿಸುವ ಪರಿಯನ್ನೂ ಪರಿಗಣಿಸುತ್ತೇವೆ, ಆದರೆ ನಾವು ಸಾಮಾನ್ಯವಾಗಿ ನಾಲಿಗೆ ನೈರ್ಮಲ್ಯವನ್ನು ಹೆಚ್ಚು ಗಮನಿಸುತ್ತೇವೆ. ಅನೇಕ ಬ್ಯಾಕ್ಟೀರಿಯಾ ಬೆಳೆಯುವ ಸ್ಥಳವಾಗಿರುವ ನಾಲಿಗೆಯನ್ನು ಹೇಗೆ ಶುದ್ಧ ಗೊಳಿಸಬೇಕು ಎಂದು ತಿಳಿಯಬೇಕಾಗಿರುವುದು ಅತ್ಯವಶ್ಯ. ಅನಾರೋಗ್ಯಕರವಾದ ನಾಲಿಗೆ, ಹಲ್ಲಿನ ಸಮಸ್ಯೆ ಮತ್ತು ಕೆಟ್ಟ ಉಸಿರಾಟದ ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದು ಮಾತ್ರವಲ್ಲದೆ, ಇದು ನಿಮ್ಮ ದೇಹದ ಸಾಮಾನ್ಯ ಯೋಗಕ್ಷೇಮದ ಮೇಲೂ ಪರಿಣಾಮ ಬೀರುತ್ತದೆ. ಇಲ್ಲಿ ನೀವು ಆರೋಗ್ಯಕರ ಮತ್ತು ಸ್ವಚ್ಛ ನಾಲಿಗೆಯನ್ನು ಇಟ್ಟುಕೊಳ್ಳಲು ಸಹಾಯ ಮಾಡುವಂತಹ ಕೆಲವು ನಾಲಿಗೆ ನೈರ್ಮಲ್ಯ ಸಲಹೆಗಳನ್ನು ನೀಡುತ್ತೇವೆ. ನೀವು ಕನಿಷ್ಠ ಎರಡು ದಿನ, ನಿಯಮಿತವಾಗಿ ಈ ಮಾರ್ಗದರ್ಶನಗಳು ಅನುಸರಿಸಿ ಪರಿಣಾಮಗಳನ್ನು ಗಮನಿಸಿ.

1. ನಾಲಿಗೆ ಉಜ್ಜುವುದು

1. ನಾಲಿಗೆ ಉಜ್ಜುವುದು

ಸಾಮಾನ್ಯವಾಗಿ ನಾಲಿಗೆಯನ್ನು ಉಜ್ಜುವುದು ನಾಲಿಗೆ ಶುದ್ಧ ಮಾಡುವುದು ಹೇಗೆ ಎನ್ನುವ ತಂತ್ರಗಳಲ್ಲಿ ಮೊದಲನೆಯದು. ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಲು ಪ್ಲಾಸ್ಟಿಕ್ ಅಥವಾ ಲೋಹದ ಟಂಗ್ ಸ್ಕಾರ್ಪರ್ ನ್ನು ಬಳಸಬಹುದು. ಆದರೆ ನೀವು ತುಂಬಾ ಗಟ್ಟಿಯಾಗಿ ಉಜ್ಜಿದರೆ ರಕ್ತಸ್ರಾವ ಸಂಭವಿಸಬಹುದು ಆದ್ದರಿಂದ ಎಚ್ಚರಿಕೆವಹಿಸಿ.

2. ಮೌತ್ ವಾಶ್

2. ಮೌತ್ ವಾಶ್

ಊಟದ ನಡುವೆ, ಮೌತ್ ವಾಶ್ ಬಳಸಿದರೆ ಇದು ಕೆಟ್ಟ ಉಸಿರಾಟಕ್ಕೆ ಕಾರಣವಾದ ನಿಮ್ಮ ನಾಲಿಗೆ ಮೇಲೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ನಾಲಿಗೆಯ ಸ್ವಚ್ಛತೆ ಮತ್ತು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ .

3. ಲವಣಯುಕ್ತ ನೀರು

3. ಲವಣಯುಕ್ತ ನೀರು

ಲವಣಯುಕ್ತ ನೀರು ನಿಯಮಿತವಾಗಿ ನಿಮ್ಮ ಬಾಯಿ ತೊಳೆಯುವುದು ಕೂಡ ಮೌತ್ ವಾಶ್ ರೀತಿಯಲ್ಲಿ ವರ್ತಿಸುತ್ತದೆ. ಇದು ನಿಮ್ಮ ನಾಲಿಗೆ ಮೇಲೆ ನಿರ್ಮಾಣವಾಗುವ ಸೂಕ್ಷ್ಮಾಣು ಜೀವಿಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾ ಮತ್ತು ಆಹಾರ ಅವಶೇಷಗಳಿಂದ ಬಾಯಲ್ಲಿ ಉಂಟಾಗುವ ಕೆಟ್ಟ ಉಸಿರಾಟವನ್ನು ನಿವಾರಿಸುತ್ತದೆ.

4. ಮುಲಾಮುಗಳು

4. ಮುಲಾಮುಗಳು

ನಿಮಗೆ ಜ್ವರ ಬಂದಿದ್ದರೆ ನೀವು ನಿಮ್ಮ ನಾಲಿಗೆ ಮೇಲೆ ಬಿಳಿ ಲೇಪನವನ್ನು ಕಾಣಬಹುದು. ಕೆಲವು ಸಂದರ್ಭಗಳಲ್ಲಿ ದು ಶಿಲೀಂಧ್ರ ಸೋಂಕುಗಳನ್ನು ಉಂಟುಮಾಡಬಹುದು. ಹಾಗಿದ್ದಲ್ಲಿ, ನೀವು ನಿಮ್ಮ ನಾಲಿಗೆಯ ಆರೋಗ್ಯವನ್ನು ಕಾಯ್ದುಕೊಳ್ಳಲು ನಿಮ್ಮ ವೈದ್ಯರು ಸಲಹೆ ಮೇರೆಗೆ ಕೆಲವು ಮುಲಾಮುಗಳನ್ನು ಬಳಸಬೇಕಾಗುತ್ತದೆ.

5. ಬ್ರಷ್‌ನ ಹಿಂಭಾಗವನ್ನು ಬಳಸಿ

5. ಬ್ರಷ್‌ನ ಹಿಂಭಾಗವನ್ನು ಬಳಸಿ

ಹಲವು ಸಂಸ್ಥೆಗಳು ಬ್ರಷ್ ನ ಇನ್ನೊಂದು ಬದಿ ಒರಟಾಗಿರುವ ಹಲವು ಮಾದರಿಗಳ ಬ್ರಷ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಇದು ನಾಲಿಗೆ ಸ್ವಚ್ಛಗೊಳಿಸಲು ಮತ್ತು ನಿರ್ವಹಿಸಲು, ಕೆಲವೊಮ್ಮೆ ಟೂತ್ಪೇಸ್ಟ್ ನೊಂದಿಗೆ ಬಳಸಬಹುದು.

6. ಗ್ರೀನ್ ಟೀ

6. ಗ್ರೀನ್ ಟೀ

ಗ್ರೀನ್ ಟೀ (ಹಸಿರು ಚಹಾ) ಇದು ಬಾಯಿಯ ಬ್ಯಾಕ್ಟೀರಿಯಾ ತೆಗೆದುಹಾಕುವ ಪೈಕಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಗ್ರೀನ್ ಟೀ ಕುಡಿಯುವುದರಿಂದ ನಾಲಿಗೆ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಾಲಿಗೆ ಶುದ್ಧ ಮಾಡುತ್ತದೆ.ನೀರು: ಡೀ ಹೈಡ್ರೇಶನ್ (ನಿರ್ಜಲೀಕರಣ) ಸಹ ನಾಲಿಗೆಯ ಬಣ್ಣಗೆಡಿಸುವಿಕೆ ಮತ್ತು ನಾಲಿಗೆಯ ಒಣಗಿಸಲು ಕಾರಣವಾಗಬಹುದು. ನಾಲಿಗೆ ಶುಷ್ಕವಾಗುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ಮತ್ತು ನಿಮ್ಮಲ್ಲಿ ಡಿ-ಹೈಡ್ರೇಶನ್ ತಡೆಯಲು ದಿನವೂ ಸಾಕಷ್ಟು ನೀರನ್ನು ಕುಡಿಯಬೇಕು. ಇದು ಕರುಳಿನ ಚಲನೆಗಳಿಗೂ ಸಹಾಯಕ.

7. ಹಾನಿಕಾರಕ ಆಹಾರಗಳು

7. ಹಾನಿಕಾರಕ ಆಹಾರಗಳು

ನಿಮ್ಮ ನಾಲಿಗೆಯ ಮೇಲೆ ಅಲರ್ಜಿ ಉಂಟು ಮಾಡಬಹುದಾದ ಅನೇಕ ಆಹಾರಗಳು ಇವೆ. ಇವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಇಂತಹ ಆಹಾರ ತಪ್ಪಿಸುವುದರಿಂದ ನಾಲಿಗೆ ಸ್ವಚ್ಛತೆಯನ್ನು ಉತ್ತೇಜಿಸಬಹುದು. ಒಂದು ವೇಳೆ ಇಂತಹ ಆಹಾರವನ್ನು ಸೇವಿಸಿದರೂ ನೀವು ಸಂಪೂರ್ಣವಾಗಿ ನಿಮ್ಮ ಬಾಯಿ ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸಿದ್ದಿರೇ ಎಂದು ಖಚಿತಪಡಿಸಿಕೊಳ್ಳಿ. ಊಟದ ಮೊದಲು ಮತ್ತು ನಂತರ : ಊಟದ ನಂತರ ನಿಮ್ಮ ಬಾಯಿ ಸ್ವಚ್ಛಗೊಳಿಸಬೇಕು ಎನ್ನುವುದು ಅನೇಕ ಜನರು ಸಲಹೆ. ಆದರೆ ಸಂಶೋಧನೆ ಪ್ರಕಾರ, ಊಟದ ಮೊದಲು ಬಾಯಿಯನ್ನು ಸ್ವಚ್ಛಗೊಳಿಸುವುದರಿಂದ ಹೊಟ್ಟೆಗೆ ಸಾಗುವುದನ್ನು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ತಡೆಯಬಹುದು.

English summary

Hygiene Cleaning Tips for Tongue

Oral hygiene is essential not only for a healthy mouth, but also for your overall health. Your tongue can present many early warning signs that should be identified and treated at the right time.
X
Desktop Bottom Promotion