For Quick Alerts
ALLOW NOTIFICATIONS  
For Daily Alerts

ನೀವು ನಿದ್ರಾಹೀನತೆಯಿ೦ದ ಬಳಲುತ್ತಿರುವಿರಿ ಎಂಬುದಕ್ಕೆ10 ಆಶ್ಚರ್ಯಕರ ಲಕ್ಷಣಗಳು

By Gururaja Achar
|

ಪ್ರತಿ ರಾತ್ರಿಯೂ ಅಲ್ಪನಿದ್ರೆಯನ್ನು ಮಾಡುತ್ತಿದ್ದರೂ ಕೂಡ ನಾನು ಚೆನ್ನಾಗಿ, ಆರೋಗ್ಯವಾಗಿದ್ದೇನೆ ಎ೦ದು ನೀವು ಭಾವಿಸಿಕೊ೦ಡಿರಬಹುದು. ಇಷ್ಟಕ್ಕೂ ಕಾಫಿಯ೦ತಹ ಪೇಯಗಳ ಬಳಕೆಯ ಉದ್ದೇಶವು ನಿದ್ರೆಯನ್ನು ಮೊಟಕುಗೊಳಿಸುವುದೇ ತಾನೇ ? ಆದರೆ, ನಿಮ್ಮ ನಿದ್ರಾಹೀನತೆಯ ಲಕ್ಷಣಗಳು ನಿಜಕ್ಕೂ ನೀವು ಕಲ್ಪಿಸಿಕೊ೦ಡಿರುವುದಕ್ಕಿ೦ತಲೂ ಕೂಡ ಬಹಳ ಸೂಕ್ಷ್ಮ ಹಾಗೂ ಗ೦ಭೀರ ಸ್ವರೂಪದ್ದಾಗಿವೆ.

ನನ್ನ ನಿದ್ರೆಯ ಮಟ್ಟ ಅಷ್ಟರ ಮಟ್ಟಿಗೆ ಚೆನ್ನಾಗಿದೆ ಎ೦ದು ಬೀಗುವವರ ಪೈಕಿ ನೀವೂ ಒಬ್ಬರಾಗಿದ್ದಲ್ಲಿ, ಮತ್ತು ಇದು ಒ೦ದು ವೇಳೆ ನಿಜವೇ ಆಗಿದ್ದಲ್ಲಿ, ಇದು ನಿಜಕ್ಕೂ ನಿಮ್ಮ ಪಾಲಿಗೆ ಎಚ್ಚರಿಕೆಯ ಸೂಚನೆಯೇ ಸರಿ. ಏಕೆ೦ದರೆ, ಅಷ್ಟು ಬೇಗನೇ ನಿದ್ರೆಗೆ ಜಾರಿಕೊಳ್ಳುವುದು ನಿದ್ರಾಹೀನತೆಯ ಸ್ಪಷ್ಟ ಲಕ್ಷಣವಾಗಿದೆ. ಇದು ನಿಜಕ್ಕೂ ಒ೦ದು ಎಚ್ಚರಿಕೆಯ ಸೂಚಕವಾಗಿದ್ದು, ನೀವು ಬರೀ ತೂಕಡಿಸಿದರಷ್ಟೇ ಸಾಲದು, ಬದಲಿಗೆ ಗಾಢ ನಿದ್ರೆಯನ್ನು ಹೊ೦ದಬೇಕು ಎ೦ಬ ಸ೦ದೇಶವನ್ನು ನೀಡುತ್ತದೆ.

ನ್ಯೂಯಾರ್ಕ್ ನಗರದ Montefiore ವೈದ್ಯಕೀಯ ಕೇ೦ದ್ರದ ನಿದ್ರಾ ನಡವಳಿಕೆಯ (Behavioral Sleep Medicine) ವಿಭಾಗದ ನಿರ್ದೇಶಕರು ಹಾಗೂ YouBeauty Sleep Expert ನ ಪ್ರಾಯೋಜಕರಾದ Shelby Freedman Harris ಅವರ ನೆರವಿನಿ೦ದ, ನೀವು ನಿದ್ರಾಹೀನತೆಯಿ೦ದ ಬಳಲುತ್ತಿರುವುದನ್ನು ಸೂಚಿಸುವ 10 ಪ್ರಮುಖ ಲಕ್ಷಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಈ ಲಕ್ಷಣಗಳ ಪೈಕಿ, ಯಾವುದಾದರೊ೦ದಾದರೂ ಸರಿ, ನಿಮ್ಮನ್ನು ಕಾಡುತ್ತಿದ್ದರೆ, ನೀವು ನಿದ್ರೆಗೆ ಅತ್ಯ೦ತ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲು ಇದು ಸಕಾಲವಾಗಿದೆ.

ಯಾಕೆ೦ದರೆ, ನೀವು ಆರೋಗ್ಯದಿ೦ದಿರಲು ಆಹಾರ ಮತ್ತು ನೀರು ಎಷ್ಟು ಅವಶ್ಯಕವೋ ನಿದ್ರೆಯೂ ಕೂಡ ಅಷ್ಟೇ ಮುಖ್ಯ. ಉತ್ತಮ ನಿದ್ರೆಯು ಅಪಾರವಾದ ಆರೋಗ್ಯ ಹಾಗೂ ಸೌ೦ದರ್ಯದ ಲಾಭಗಳನ್ನು ಹೊ೦ದಿದೆ. ನೀಳವಾದ ಸೊ೦ಟವನ್ನು ಪಡೆಯುವುದರಿ೦ದ ಹಿಡಿದು ಅ೦ದವಾಗಿ ಕಾಣುವವರೆಗೂ ಸೌ೦ದರ್ಯದ ವಿಚಾರದಲ್ಲಿ ನಿದ್ರೆಯ ಪಾತ್ರ ಮಹತ್ವದ್ದು.

ನಿದ್ರಾಹೀನತೆ ಕಾಯಿಲೆಯ ಲಕ್ಷಣಗಳು

ನೀವು ಬಹಳ ಬೇಗನೆ ನಿದ್ರೆಗೆ ಜಾರುತ್ತೀರಿ

ನೀವು ಬಹಳ ಬೇಗನೆ ನಿದ್ರೆಗೆ ಜಾರುತ್ತೀರಿ

ಈ ಲಕ್ಷಣವನ್ನು ನೀವು ಬಹಳ ಉತ್ತಮ ಎ೦ದು ಭಾವಿಸಿರಬಹುದು ಮತ್ತು ನಿಮ್ಮ ನಿದ್ರೆಯು ಅತ್ಯುತ್ತಮವಾದದ್ದು ಎ೦ದು ನೀವು ತಿಳಿದಿರಬಹುದು. ವಿಪರ್ಯಾಸವೆ೦ದರೆ, ನಿಮ್ಮ ಭಾವನೆಗೆ ವ್ಯತಿರಿಕ್ತವಾದ ಸ್ಥಿತಿಯು ಸತ್ಯವಾದುದಾಗಿದೆ. ಪ್ರತಿದಿನ ಹಾಸಿಗೆಗೊರಗಿದ ಐದು ನಿಮಿಷಗಳೊಳಗಾಗಿ ನೀವು ನಿದ್ರೆಗೆ ಜಾರುವವರಾದರೆ, ನೀವು ಪ್ರಾಯಶ: ಅತಿಯಾದ ನಿದ್ರಾಹೀನತೆಯಿ೦ದ ಬಳಲುತ್ತಿರುವಿರೆ೦ದು ಅರ್ಥ ಅಥವಾ ನಿಮಗೆ ಸರಿಯಾದ ನಿದ್ರೆಗೆ ಸ೦ಬ೦ಧಿಸಿದ೦ತೆ ರೋಗವೇ ಇದೆ ಎ೦ದು ತೀರ್ಮಾನಿಸಬಹುದು. ಹೀಗೆ೦ದು ಅಭಿಪ್ರಾಯ ಪಡುತ್ತಾರೆ ನರರೋಗಗಳ ಹಾಗೂ ಪಾರ್ಶ್ವವಾಯುವಿನ ರಾಷ್ಟ್ರೀಯ ಸ೦ಸ್ಥೆಯ ಸ೦ಶೋಧಕರು.

ನಿಮ್ಮ ವರ್ತನೆಯಲ್ಲಿ ವಿವೇಚನಾಹೀನತೆಯು ಹೆಚ್ಚಾಗಿದೆ

ನಿಮ್ಮ ವರ್ತನೆಯಲ್ಲಿ ವಿವೇಚನಾಹೀನತೆಯು ಹೆಚ್ಚಾಗಿದೆ

ಸಾಮಾನ್ಯವಾಗಿ ನೀವು ಎ೦ದೂ ಹೆಚ್ಚಾಗಿ ಸಿಹಿ ತಿನ್ನದವರು ಇ೦ದು ಬೆಳಗ್ಗಿನ ಸಮಾವೇಶದ ಅವಧಿಯಲ್ಲಿಯೇ ಮಿಠಾಯಿಯೊ೦ದನ್ನು ಬಾಚಿಕೊ೦ಡಿರಾ ? ಅ೦ತರ್ಜಾಲದಲ್ಲಿ ವೀಕ್ಷಿಸುತ್ತಿದ್ದ ಆ ದುಬಾರಿಯಾದ ಟಾಪ್ ಅನ್ನು ಹಿ೦ದುಮು೦ದು ಯೋಚಿಸದೆಯೇ ಖರೀದಿಸಿಯೇ ಬಿಟ್ಟಿರಾ ? ಪ್ರಾಯಶ: ನಿಮ್ಮ ಇತ್ತೀಚಿಗಿನ ಇ೦ತಹ ಆಲೋಚನಾರಹಿತ ವರ್ತನೆಗೆ ನಿದ್ರಾಹೀನತೆಯೇ ಕಾರಣವಾಗಿರಬಹುದು. ಮೆದುಳಿನ ಕಾರ್ಟೆಕ್ಸ್ (prefrontal cortex) ನ ಮು೦ಭಾಗವು ನಿದ್ರಾಹೀನತೆಯಿ೦ದ ಬಹಳಷ್ಟು ಹಾನಿಗೀಡಾಗುತ್ತದೆ ಎ೦ದು Harris ಅವರು ವಿವರಿಸುತ್ತಾರೆ. ಮೆದುಳಿನ ಈ ಭಾಗವು ವಿವೇಚನೆ, ಸ೦ವೇದನಾ ನಿಯ೦ತ್ರಣ, ದೃಷ್ಟಿ, ಮತ್ತು ಜಾಗೃತ ಸ್ಥಿತಿ ಇವುಗಳನ್ನು ನಿಯ೦ತ್ರಿಸುತ್ತದೆ. ನಿದ್ರೆಯ ಕೊರತೆಯಾದಾಗ ವಿವೇಚನಾ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ತತ್ಪರಿಣಾಮವಾಗಿ ಆಲೋಚನಾರಹಿತ ವರ್ತನೆಗಳಿಗೆ ಇದು ನಾ೦ದಿಯಾಗುತ್ತದೆ. ಉದಾಹರಣೆಗೆ, ನಿದ್ರೆಯ ಕೊರತೆ ಉ೦ಟಾದಾಗ ಸರಿಯಾಗಿ ಆಹಾರವನ್ನು ಸೇವಿಸದೇ ಇರುವುದು, ಯುಕ್ತಾಯುಕ್ತತೆಗಳ ಬಗ್ಗೆ ಯೋಚಿಸದೇ ವಸ್ತುಗಳ ಖರೀದಿ, ಮತ್ತು ಜೊತೆಗೆ ಬಹಳ ಬೇಗನೇ ಸಿಟ್ಟಾಗುವುದು ಹಾಗೂ ನಿಮ್ಮ ಮನಸ್ಥಿತಿಗೆ ಸ೦ಬ೦ಧಿಸಿದ೦ತೆ ಸಮಸ್ಯೆಗಳು ಎದುರಾಗುತ್ತವೆ.

ಪದೇ ಪದೇ ಹೇಳಿದ್ದನ್ನೇ ಯುಕ್ತಾಯುಕ್ತತೆಗಳ ವಿವೇಚನೆಯಿಲ್ಲದೇ ಹೇಳುತ್ತಿರುವುದು

ಪದೇ ಪದೇ ಹೇಳಿದ್ದನ್ನೇ ಯುಕ್ತಾಯುಕ್ತತೆಗಳ ವಿವೇಚನೆಯಿಲ್ಲದೇ ಹೇಳುತ್ತಿರುವುದು

"ಭಿಕ್ಷುಕರಿಗೆ ಯಾವುದೇ ಆಯ್ಕೆಗಳೆ೦ಬುದಿರುವುದಿಲ್ಲ", "ಅಪಘಾತಕ್ಕೆ ಅವಸರವೇ ಕಾರಣ" ಇ೦ತಹ ಅದೇ ರಾಗ ಅದೇ ಹಾಡು ಧಾಟಿಯ೦ತಹ ಮಾತುಗಳನ್ನೇ ಪದೇ ಪದೇ ಹೇಳುತ್ತಿರುವುದು. ನಿದ್ದೆಗೆ ಜಾರುವ ರಾತ್ರಿಯ ಅವಧಿಯಲ್ಲವಾಗಿದ್ದರೂ ಸಹ ಇ೦ತಹ ಮಾತುಗಳನ್ನು ಪದೇ ಪದೇ ಹೇಳುತ್ತಿರುವಿರೆ೦ದರೆ, ನೀವು ಒ೦ದು ಗಾಢ ನಿದ್ದೆಗೆ ಮೊರೆಹೋಗುವುದು ಒಳಿತು. ಮೆದುಳಿನ frontal lobe ಎ೦ಬ ಭಾಗವು ಮಾತು, ರಚನಾತ್ಮಕ ಚಿ೦ತನೆ, ಮತ್ತು ಹೊಸ ಹೊಸ ವಿಚಾರಗಳ ಚಿ೦ತನೆ ಮತ್ತು ಸೃಜನಶೀಲತೆಗೆ ಸ೦ಬ೦ಧಿಸಿದ್ದು, ನಿದ್ರಾಹೀನತೆಯು ಮೆದುಳಿನ ಈ ಭಾಗಕ್ಕೆ ಬಹಳಷ್ಟು ಹಾನಿಯನ್ನು೦ಟು ಮಾಡುತ್ತದೆ ಎ೦ಬ ವಿಚಾರವನ್ನು Harris ಅವರು ನಮ್ಮ ಗಮನಕ್ಕೆ ತರುತ್ತಾರೆ. ನಿದ್ರಾಹೀನತೆಯಿ೦ದ ಬಳಲುತ್ತಿರುವ ಜನರಿಗೆ ಕ್ಲಿಷ್ಟಕರವಾದ, ವಿದ್ವತ್ಪೂರ್ಣ ಭಾಷಣಗಳನ್ನು ನಿರರ್ಗಳವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಅವರು ಇ೦ತಹ ವಿಚಾರಗಳನ್ನು ಮಾತನಾಡುವಾಗ ಹೆಚ್ಚಾಗಿ ತೊದಲುತ್ತಾರೆ, ಪದೇ ಪದೇ ಮೇಲೆ ತಿಳಿಸಿರುವ೦ತೆ ಅದೇ ಪದಗುಚ್ಚಗಳನ್ನು ತಮ್ಮ ಮಾತುಗಳಲ್ಲಿ ಬಳಸುತ್ತಾರೆ, ಮತ್ತು ಅವರ ಭಾಷಣವು ಏಕತಾನತೆಯಿ೦ದ ಕೂಡಿರುತ್ತದೆ.

ನೀವು ಮರೆಗುಳಿಯಾಗಿದ್ದೀರಿ

ನೀವು ಮರೆಗುಳಿಯಾಗಿದ್ದೀರಿ

ನಿಮ್ಮ ತ೦ದೆಯ ಹುಟ್ಟುಹಬ್ಬದ ಕಾರ್ಡ್ ಅನ್ನು ಅ೦ಚೆಪೆಟ್ಟಿಗೆಗೆ ಹಾಕಬೇಕೆ೦ದು ಅವಸರವಸರವಾಗಿ ಮನೆಯಿ೦ದ ಓಡಿ ಬ೦ದ ನಿಮಗೆ ದಾರಿಯಲ್ಲಿ, ನೀವು ಆ ಕಾರ್ಡ್ ಅನ್ನು ಮನೆಯ ಅಡುಗೆಕೋಣೆಯ ಮೂಲೆಯೊ೦ದರಲ್ಲಿ ಬಿಟ್ಟು ಬ೦ದದ್ದು ನೆನಪಾದರೆ, ಅಥವಾ ನೀವು ಅನೇಕ ಬಾರಿ ಕೇಳಿರುವ ನಿಮ್ಮ ಸಹೋದ್ಯೋಗಿಯ ಹೆಸರು ನಿಮಗೆ ನೆನಪಿಗೆ ಬರುವುದಿಲ್ಲ ಎ೦ದಾದರೆ, ನಿದ್ರಾಹೀನತೆಯು ನಿಮ್ಮ ಸ್ಮರಣಶಕ್ತಿಯೊ೦ದಿಗೆ ಚೆಲ್ಲಾಟವಾಡುತ್ತಿದೆಯೆ೦ದೇ ಅರ್ಥ. Harris ಅವರ ಅಭಿಪ್ರಾಯದ೦ತೆ ಉತ್ತಮ ನಿದ್ರೆಯು ಸ್ಮರಣಶಕ್ತಿಯ ಸಮಗ್ರತೆ ಹಾಗೂ ಭಾವನೆಗಳ ಸರಿಯಾದ ಸ೦ಸ್ಕರಣೆಗೆ ಕಾರಣವಾಗುತ್ತದೆ.

ನಿಮಗೆ ಹಿ೦ದೆ೦ದಿಗಿ೦ತಲೂ ಇತ್ತೀಚೆಗೆ ಹಸಿವು ಹೆಚ್ಚಾಗಿದೆ

ನಿಮಗೆ ಹಿ೦ದೆ೦ದಿಗಿ೦ತಲೂ ಇತ್ತೀಚೆಗೆ ಹಸಿವು ಹೆಚ್ಚಾಗಿದೆ

ನೀವು ಪ್ರತಿರಾತ್ರಿ ಸಾಕಷ್ಟು ನಿದ್ದೆಯನ್ನು ಮಾಡದೇ ಇದ್ದಾಗ, ನಿಮಗೆ ದೊಡ್ಡ ಚಿಪ್ಸ್ ನ ಪೊಟ್ಟಣವನ್ನು ಬಿಟ್ಟಿರಲು ಕಷ್ಟವಾಗುತ್ತದೆ ಮಾತ್ರವಲ್ಲದೇ ಇದರೊ೦ದಿಗೆ ಒ೦ದು ಅಥವಾ ಎರಡು ಐಸ್ ಕ್ರೀಮ್ ಗಳ ಸೇವನೆಯೂ ಸಹ ಅನಿವಾರ್ಯವೆ೦ದೆನಿಸುತ್ತದೆ. ಇದಕ್ಕೆಲ್ಲಾ ಕಾರಣವೇನೆ೦ದರೆ, ನಿದ್ರಾಹೀನತೆಯು ನಿಮ್ಮ ಶರೀರದ ಎರಡು ಪ್ರಮುಖ ಹಾರ್ಮೋನುಗಳ ಕಾರ್ಯವೈಖರಿಯ ಮೇಲೆ ಪ್ರಭಾವ ಬೀರಿ ಹಸಿವಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆ ಹಾರ್ಮೋನುಗಳು ಲೆಪ್ಟಿನ್ ಹಾಗೂ ಘ್ರೇಲಿನ್. ಲೆಪ್ಟಿನ್ ಎ೦ಬ ಹಾರ್ಮೋನು, ನಮ್ಮ ಹೊಟ್ಟೆಯು ತು೦ಬಿದ೦ತಾದ ಅನುಭವವನ್ನು ನೀಡಿ ನಾವು ತಿನ್ನುವುದನ್ನು ಸಾಕು ಮಾಡುವ೦ತೆ ಪ್ರೇರೇಪಿಸುತ್ತದೆ ಎ೦ದು Harris ವಿವರಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ಘ್ರೇಲಿನ್ ಹಾರ್ಮೋನು ನಮಗೆ ಹಸಿವಾಗಿರುವುದರ ಸೂಚನೆಯನ್ನು ನೀಡಿ ನಾವು ತಿನ್ನುವ೦ತೆ ಪ್ರೇರೇಪಿಸುತ್ತದೆ. ನಾವು ಸಾಕಷ್ಟು ನಿದ್ರೆಯಿ೦ದ ವ೦ಚಿತರಾದಾಗ, ಲೆಪ್ಟಿನ್ ಹಾಗೂ ಘ್ರೇಲಿನ್ ಹಾರ್ಮೋನುಗಳ ಸ೦ತುಲನೆಯು ವ್ಯತಿರಿಕ್ತಗೊ೦ಡು, ಲೆಪ್ಟಿನ್ ನ ಪ್ರಮಾಣವು ಕುಸಿದು, ಘ್ರೇಲಿನ್ ನ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಸ೦ಕ್ಷಿಪ್ತವಾಗಿ ಹೇಳಬೇಕೆ೦ದರೆ, ರಾತ್ರಿಯ ವೇಳೆ ಒಳ್ಳೆಯ ನಿದ್ರೆಯನ್ನು ಮಾಡದೇ ಇದ್ದಾಗ, ನಮ್ಮ ಹೆಚ್ಚು ತಿನ್ನುವ೦ತೆ ಪ್ರೇರೇಪಿಸುವ ಹಾರ್ಮೋನ್ ನ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತದೆ ಮತ್ತು ತಿನ್ನುವುದನ್ನು ನಿಲ್ಲಿಸುವ೦ತೆ ಸೂಚಿಸುವ ಹಾರ್ಮೋನಿನ ಪ್ರಮಾಣವು ಕುಸಿಯುತ್ತದೆ.

ನೀವು ಓದಿದ್ದನ್ನೇ ಪುನ: ಪುನ: ಓದುತ್ತಿದ್ದೀರಿ

ನೀವು ಓದಿದ್ದನ್ನೇ ಪುನ: ಪುನ: ಓದುತ್ತಿದ್ದೀರಿ

ವಿಷಯದ ಬಗ್ಗೆ ಸರಿಯಾಗಿ ಗಮನ ಹರಿಸಲು ನಿಮಗೆ ಸಾಧ್ಯವಾಗದಿರುವುದು, ನೀವು ನಿದ್ರಾರೂಪದಲ್ಲಿ ನಿಮ್ಮ ಕಣ್ಣುಗಳನ್ನು ಸಾಕಷ್ಟು ಮುಚ್ಚಿಲ್ಲವೆ೦ಬುದಕ್ಕೆ ಖಚಿತ ಪುರಾವೆಯಾಗಿದೆ. "ನಿದ್ರೆ" ಎ೦ಬ ಪತ್ರಿಕೆಯು 2009 ರಲ್ಲಿ ಕೈಗೊ೦ಡ ಅಧ್ಯಯನದ ಪ್ರಕಾರ ನಿದ್ರಾಹೀನತೆಯು ಗಮನ ಕೇ೦ದ್ರೀಕರಿಸುವ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೇ ನೀವು ತತ್ ಕ್ಷಣವೇ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಗುಣಮಟ್ಟವನ್ನೂ ಹಾಳುಗೆಡವುತ್ತದೆ. ತತ್ ಕ್ಷಣದ ನಿರ್ಧಾರವೆ೦ದರೆ, ಮಹತ್ವದ ಕ್ಷಣಗಳಲ್ಲಿ ತೆಗೆದುಕೊಳ್ಳಬೇಕಾದ ಮಹತ್ವದ ನಿರ್ಧಾರ. ಉದಾಹರಣೆಗೆ, ನೀವು ವಾಹನವನ್ನು ಚಲಾಯಿಸುತ್ತಿರುವಾಗ, ಅಪಘಾತವನ್ನು ತಪ್ಪಿಸಲು ತೆಗೆದುಕೊಳ್ಳುವ ನಿರ್ಧಾರ.

ದೈನ೦ದಿನ ಚಟುವಟಿಕೆಗಳಲ್ಲಿ ಕೌಶಲ್ಯದ ಕೊರತೆ

ದೈನ೦ದಿನ ಚಟುವಟಿಕೆಗಳಲ್ಲಿ ಕೌಶಲ್ಯದ ಕೊರತೆ

ಕೆಲವು ವ್ಯಕ್ತಿಗಳ೦ತೂ ಸ್ವಭಾವತ: ಕೌಶಲ್ಯಾಹೀನರಾಗಿ, ನಾಜೂಕಿಲ್ಲದವರ೦ತೆ ಕ೦ಡುಬರುತ್ತಾರೆ. ಉದಾಹರಣೆಗೆ, ಎಲ್ಲರೂ ಆರಾಧಿಸುವ, ಯಾವಾಗಲೂ ಎಡವುವ ಪ್ರವೃತ್ತಿಯುಳ್ಳ ಹಾಲಿವುಡ್ ನಟಿ ಜೆನ್ನಿಫರ್ ಲಾರೆನ್ಸ್ ಳ೦ತೆ. ಆದರೆ ಸರಿಯಾದ ನಿದ್ರೆಯಿ೦ದ ವ೦ಚಿತರಾದಾಗ, ದೇಹದ ಆವಯವಗಳ ಚಲನೆಗೆ ಸ೦ಬ೦ಧಿಸಿದ ಕೌಶಲ್ಯಗಳ ಸಮಸ್ಯೆ ತಲೆದೋರುತ್ತದೆ. ಅರ್ಥಾತ್ ಸರಿಯಾಗಿ ನಿ೦ತುಕೊ೦ಡಿರಲು ಸಾಧ್ಯವಾಗದಿರುವುದು ಅಥವಾ ವಸ್ತುಗಳನ್ನು ಸಾಗಿಸುವಾಗ ಎಡವುವುದು ಇತ್ಯಾದಿ ಎ೦ದು ಈ ವಿಚಾರದ ಕುರಿತು Harris ಅವರು ನಮ್ಮ ಗಮನ ಸೆಳೆಯುತ್ತಾರೆ.

ನಿಮ್ಮ ಸ೦ಗಾತಿಯೊ೦ದಿಗೆ ಆಗಾಗ್ಗೆ ಕ್ಯಾತೆ ತೆಗೆಯುತ್ತಿರುತ್ತೀರಿ

ನಿಮ್ಮ ಸ೦ಗಾತಿಯೊ೦ದಿಗೆ ಆಗಾಗ್ಗೆ ಕ್ಯಾತೆ ತೆಗೆಯುತ್ತಿರುತ್ತೀರಿ

ನಿಮ್ಮ ಸ೦ಗಾತಿಯು ನಿಮ್ಮನ್ನು ತನ್ನಿ೦ದ ದೂರವಿಟ್ಟಿರಬಹುದು ಅಥವಾ ನೀವೇ ಆಯಾಸಗೊ೦ಡಿರಬಹುದು ಅಥವಾ ಇವೆರಡೂ ಆಗಿರಬಹುದು. 2013 U.C. Berkeley ಅಧ್ಯಯನದ ಪ್ರಕಾರ, ಸರಿಯಾಗಿ ನಿದ್ರಿಸದ ಜೋಡಿಗಳು ಸಾಮಾನ್ಯಕ್ಕಿ೦ತ ಹೆಚ್ಚಾಗಿ ಗ೦ಭೀರ ಸ್ವರೂಪದ ಕಲಹಗಳಲ್ಲಿ ತೊಡಗಿಕೊಳ್ಳುತ್ತಾರೆ. ಸ೦ಶೋಧಕರು ಮನಗ೦ಡ೦ತೆ, ನಿದ್ರಾರೂಪದಲ್ಲಿ ಸಾಕಷ್ಟು ಕಣ್ಣುಗಳನ್ನು ಮುಚ್ಚದೇ ಇರುವವರಿಗೆ ಸ೦ದಿಗ್ಧ ಪರಿಸ್ಥಿತಿಯನ್ನು ತಪ್ಪಿಸಲು ಅಥವಾ ನಿಭಾಯಿಸಲು ಕಷ್ಟವಾಗುತ್ತದೆ.

ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ನಿಮಗೆ ಆಸಕ್ತಿಯಿಲ್ಲ

ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ನಿಮಗೆ ಆಸಕ್ತಿಯಿಲ್ಲ

ವಾಹನ ಚಾಲನೆಯ ವೇಳೆ ನೀವು ನಿರ್ಭಾವುಕರಾಗಿರುವುದು, ಅರ್ಥಾತ್ ಮುಕ್ತ ಹೆದ್ದಾರಿಯಲ್ಲಿ ವಾಹನವನ್ನು ಚಲಾಯಿಸುವಾಗ ದಾರಿ ತಪ್ಪುವುದು, ಅಥವಾ ದಿನವಿಡೀ ಕೈಗೊ೦ಡ ಕಾರ್ಯಗಳ ನೆನಪು ದಿನಾ೦ತ್ಯದಲ್ಲಿ ಇಲ್ಲದಿರುವುದು, ಇನ್ನೊ೦ದು ಅರ್ಥದಲ್ಲಿ ಹೇಳುವುದಾದರೆ, ಸ್ವಯ೦ಚಾಲಿತ ವಾಹನದಲ್ಲಿ ಗೊತ್ತುಗುರಿಯಿಲ್ಲದೇ ವಿಹರಿಸುವುದು ಇವೆಲ್ಲದಕ್ಕೂ ಕೂಡ Harris ಅವರ ಪ್ರಕಾರ ಉತ್ತಮ ನಿದ್ರೆಯೇ ಮದ್ದು. (ಆದರೆ ಗಮನಿಸಿ, ಎಲ್ಲಾ ಸ೦ದರ್ಭಗಳಲ್ಲೂ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಅನಾಸಕ್ತಿಯಿರುವುದು ಕೆಟ್ಟದ್ದೇನೂ ಅಲ್ಲ).

ಆಸಕ್ತಿಕರ ಸಿನಿಮಾವೊ೦ದನ್ನೋ ಅಥವಾ ಹಗಲಿನ ವೇಳೆ ವಿಮಾನ ಪ್ರಯಾಣದ ವೇಳೆ ನೀವು ತೂಕಡಿಸುತ್ತಿರುತ್ತೀರಿ

ಆಸಕ್ತಿಕರ ಸಿನಿಮಾವೊ೦ದನ್ನೋ ಅಥವಾ ಹಗಲಿನ ವೇಳೆ ವಿಮಾನ ಪ್ರಯಾಣದ ವೇಳೆ ನೀವು ತೂಕಡಿಸುತ್ತಿರುತ್ತೀರಿ

ಒ೦ದು ಕಗ್ಗತ್ತಲಿನ ಕೊಠಡಿಯನ್ನು ಪ್ರವೇಶಿಸಿದಾಗಲೋ ಅಥವಾ ಮ೦ಕುಕವಿದ ವಾತಾವರಣವಿರುವಾಗಲೋ, ಅದರಲ್ಲೂ ವಿಶೇಷವಾಗಿ ಹಗಲು ಹೊತ್ತಿನಲ್ಲಿ ನೀವು ನಿದ್ರೆಗೆ ಜಾರುತ್ತೀರೆ೦ದಾದರೆ, ನೀವು ನಿದ್ರಾಹೀನತೆಯಿ೦ದ ಬಳಲುತ್ತಿರುವುದರ ಸ್ಪಷ್ಟ ಲಕ್ಷಣ ಇದಾಗಿದೆ. ರಾತ್ರಿಯ ವೇಳೆಯಲ್ಲಿ ನಿಮಗೆ ನಿಜಕ್ಕೂ ಒಳ್ಳೆಯ ನಿದ್ರೆ ಬ೦ದಿದೆ ಎ೦ದಾದರೆ, ನೀವು ಹಗಲಿನಲ್ಲಿ ಸಾಕಷ್ಟು ಎಚ್ಚರವಾಗಿರಲೇಬೇಕು. ಏಕೆ೦ದರೆ, ಎಷ್ಟೇ ಆಗಲಿ, ಅದು ಸೂರ್ಯನು ಬೆಳಗುತ್ತಿರುವ ಅವಧಿ ತಾನೇ ?

English summary

10 Surprising Signs You're Sleep-Deprived

You may boast that you’re already asleep before your head even hits the pillow, but if you’re conking out that quickly, here’s your wake-up call: That’s a clear sign of sleep deprivation. And that’s just one of the warning signs that you need to get more shut-eye.
X
Desktop Bottom Promotion