For Quick Alerts
ALLOW NOTIFICATIONS  
For Daily Alerts

ತಿಂಗಳಿಗೊಮ್ಮೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

By Poornima heggade
|

ನೀವು ಎಲ್ಲರ ಅಗತ್ಯಗಳನ್ನು, ಆರೈಕೆಯನ್ನು ಮಾಡುವುದರಲ್ಲಿಯೇ ಕಾಲ ಕಳೆಯುತ್ತೀರಿ ಆದರೆ ನಿಮ್ಮ ಬಗ್ಗೆ ನೀವು ಯಾವತ್ತಾದರೂ ಯೋಚಿಸಿದ್ದೀರಾ? ನಿಮ್ಮ ನಿಸ್ವಾರ್ಥತೆ, ಪ್ರಶಂಸನೀಯವೇ ಹೊರತು ಬುದ್ಧಿವಂತಿಕೆಯಲ್ಲ! ವಾಸ್ತವವಾಗಿ, ನೀವು ನಿಮ್ಮನ್ನು ತೃಪ್ತಿಗೊಳಿಸಲು ಸಾಧ್ಯವಿಲ್ಲದಿದ್ದರೆ, ಅಥವಾ ನಿಮ್ಮ ಬಗ್ಗೆ ನೀವು ಪ್ರೀತಿಯನ್ನು ಬೆಳೆಸಿಕೊಳ್ಳದಿದ್ದರೆ ನಿಮ್ಮ ಸುತ್ತಲಿನ ಜನರು ನಿಮಗೆ ಆ ಪ್ರೀತಿಯನ್ನು ನೀಡಲು ಮುಂದಾಗುತ್ತಾರೆ.

ನೀವು ಬೇರೆ ವಿಚಾರಗಳನ್ನು ಮಾಡುವ ಮೊದಲು ನಿಮ್ಮನ್ನು ನೀವು ಕಾಳಜಿ ಮಾಡಿಕೊಳ್ಳುವುದು ಅತ್ಯಗತ್ಯ. ಸ್ವಯಂ-ತೃಪ್ತಿ ಅಥವಾ ಇಚ್ಛಾಶಕ್ತಿ ನೀವು ಮಾಡುವ ಕೆಲಸದ ಪಟ್ಟಿಯ ಮೊದಲಿನ ಸ್ತಾನದಲ್ಲಿರಬೇಕು. ಆಗ ಮಾತ್ರ ನೀವು ಎಲ್ಲಾ ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಲು ಸಾಧ್ಯ! ನೀವು ತಿಂಗಳಿನಲ್ಲಿ ಒಮ್ಮೆಯಾದರೂ ಪ್ರೀತಿಸಲು ಅಥವಾ ನಿಮ್ಮ ಬಗ್ಗೆ ನೀವು ಅವಲೋಕನ ಮಾಡಿಕೊಳ್ಳಲು ಪ್ರಮುಖ ಕಾರಣಗಳನ್ನು ಕೊಡಲಾಗಿದೆ.

ಮಳೆಗಾಲದಲ್ಲಿ ಶೀತ-ನೆಗಡಿಯಿಂದ ರಕ್ಷಿಸಿಕೊಳ್ಳುವುದು ಹೇಗೆ?

ಪ್ರತಿರೋಧಕ ಶಕ್ತಿ ಹೆಚ್ಚಿಸಲು

ಪ್ರತಿರೋಧಕ ಶಕ್ತಿ ಹೆಚ್ಚಿಸಲು

ಮಸಾಜ್ ಮಾಡಿಕೊಳ್ಳುವುದು ಅದ್ಭುತ ಭಾವನೆಯನ್ನು ನೀಡುತ್ತದೆ. ಮತ್ತು ಸ್ವಯಂ ಪಾಲನೆ ಅತ್ಯಂತ ಅಗತ್ಯವಾದದ್ದು. ಆದರೆ ತಮ್ಮ ಇಂದ್ರಿಯ ಸುಖಗಳನ್ನೂ ಮೀರಿ, ಮಸಾಜ್ ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ವರ್ಧಿಸುವಂತಹ ಹಲವು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಮಸಾಜ್ ನ ಮೃದುವಾದ ಒತ್ತಡವು ದೇಹದ ತ್ಯಾಜ್ಯಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಸಹಾಯಕವಾಗುತ್ತದೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಶೀತ, ಜ್ಚರವನ್ನು ಹರಡುವ ವೈರಸ್ ಗಳು ನಿಮ್ಮ ಹತ್ತಿರ ಸುಳಿಯಲೂ ಸಾಧ್ಯವಿಲ್ಲ.

ನಿದ್ರಾ ಶಕ್ತಿ ಹೆಚ್ಚುತ್ತದೆ

ನಿದ್ರಾ ಶಕ್ತಿ ಹೆಚ್ಚುತ್ತದೆ

ನೀವು ಬೇಗ ಮಲಗಿದರೂ ಕೂಡ ನಿಮಗೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲವೇ? ನೀವು ಮಸಾಜ್ ಮಾಡಿಕೊಳ್ಳುವುದರ ಮೂಲಕ ಕಾಳಜಿ ತೆಗೆದುಕೊಂದರೆ ಈ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಬಹುದು. ನಿಮ್ಮ ಸ್ನಾಯು ಒತ್ತಡವನ್ನು ಕಡಿಮೆಮಾಡುವುದರ ಮೂಲಕ ಮಸಾಜ್ ಹಾರ್ಮೋನ್ ಮಟ್ಟವನ್ನು ಸುಸ್ಥಿತಿಯಲ್ಲಿರಿಸಿ, ಆಳವಾದ ವಿಶ್ರಾಂತಿಯನ್ನು ಒದಗಿಸುತ್ತದೆ. ಮಸಾಜ್ ಚಿಕಿತ್ಸೆ ಮೆದುಳಿನ ತರಂಗಗಳ ಚಟುವಟಿಕೆಯನ್ನು ಹೆಚ್ಚಿಸಬಹುದು. ಮೆದುಳಿನ ಡೆಲ್ಟಾ ತರಂಗಗಳು ಆಳವಾದ ವಿಶ್ರಾಂತಿಪೂರಿತ ನಿದ್ರೆಯೊಂದಿಗೆ ಸಂಬಂಧಹೊಂದಿದ್ದು, ಜೊತೆಗೆ ಇದರಿಂದ ನೀವು ಉಲ್ಲಾಸದ, ವಿಶ್ರಾಂತಿ ಮನಸ್ಸಿನಿಂದ ಏಳಬಹುದು.

ಕ್ಲೀಯರ್ ಸ್ಕಿನ್ (ಸ್ವಚ್ಛವಾದ ಚರ್ಮ)

ಕ್ಲೀಯರ್ ಸ್ಕಿನ್ (ಸ್ವಚ್ಛವಾದ ಚರ್ಮ)

ನೀವು ಮುಖದ ಮೇಲಿನ ಮೊಡವೆಗಳಿಂದ ಬಳಲುತ್ತಿದ್ದೀರೇ? ಪರಿಣಿತ ಸೌಂದರ್ಯ ತಜ್ಞರಿಂದ ಚಿಕಿತ್ಸೆಯನ್ನು ಪಡೆದು ಮುಖದಲ್ಲಿನ ಮೊಡವೆಯನ್ನು ಹೋಗಲಾಡಿಸಬಹುದು. ಫೇಶಿಯಲ್ ಮಾಡುವುದರಿಂದ ಮುಖದಲ್ಲಿನ ಡೆಡ್ ಸ್ಕಿನ್ ತೆಗೆಯಬಹುದು ಮತ್ತು ಮುಖದಲ್ಲಿ ಮೊಡವೆಯಿಂದ ಉಂಟಾದ ರಂಧ್ರವನ್ನೂ ತೆಗೆಯಬಹುದು. ಫೇಶಿಯಲ್ ಚಿಕಿತ್ಸೆಯ ಜೊತೆಗೆ ಡೆರ್ಮಾಬ್ರೇಶನ್ (dermabrasion), ರಾಸಾಯನಿಕ ಪೀಲ್ ಅಥವಾ ಲೇಸರ್ ಚಿಕಿತ್ಸೆಗಳು ನಿಮ್ಮ ಮುಖವನ್ನು ಮುಡವೆ ಮುಕ್ತ ಮಾಡುವುದರಲ್ಲಿ ಸಂಶಯವಿಲ್ಲ. ಫೇಶಿಯಲ್ ಮತ್ತು ಡೆರ್ಮಾಬ್ರೇಶನ್ ಚಿಕಿತ್ಸೆಯಷ್ಟು, ಪರಿಣಿತರ ಬಳಿ ಇರುವ ಬೇರೆ ಯಾವುದೇ ಸಾಮಾಗ್ರಿಗಳು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ.

ಕಠಿಣ ಕೆಲಸದಿಂದ ವಿಶ್ರಾಂತಿ

ಕಠಿಣ ಕೆಲಸದಿಂದ ವಿಶ್ರಾಂತಿ

ನಿಮಗೆ ಅನಾರೋಗ್ಯದ, ಅಸ್ವಸ್ಥವಾದ ಅಥವಾ ನೋವಿನ ಅನುಭವವಾಗದೇ ಇರಬಹುದು. ಆದರೆ ನಿಮಗೆ ಸುಸ್ತಾದ ಭಾವನೆ ಉಂಟಾಗಬಹುದು. ಮನುಷ್ಯರು ಕೇವಲ ತಿನ್ನುವುದು ಹಾಗೂ ಮಲಗುವುದಕ್ಕಾಗಿಯೇ ಕಷ್ಟಪಟ್ಟು ದುಡಿಯುವುದು ಸರಿಯಲ್ಲ. ನೀವು ನಿಮ್ಮನ್ನು ನೀವು ಕಾಳಜಿ ಮಾಡುವುದರಲ್ಲಿ ವಿಫಲವಾದರೆ, ನಿಮ್ಮ ಈ ತಪ್ಪಿನಿಂದ ನಿಮ್ಮ ಮೆದುಳಿನ ಸಾಮರ್ಥ್ಯ ಖಂಡಿತವಾಗಿಯೂ ಕಡಿಮೆಯಾಗುತ್ತದೆ! ನಿಮ್ಮ ಕೆಲಸದಲ್ಲಿ ಬಿಡುವನ್ನು ನೀಡುತ್ತ ನಿಮ್ಮ ಬಗ್ಗೆ ಕಾಳಜಿಯನ್ನು ತೆಗೆದುಕೊಂಡು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ, ನೀವು ಮಾಡುವ ಕೆಲಸಗಳಲ್ಲಿ ಇನ್ನಷ್ಟು ಸುಧಾರಣೆಯನ್ನು ಕಾಣಬಹುದು.

ಸವಾಲುಗಳನ್ನು ಎದುರಿಸುವ ಮೂಲಕ ಗುರುತಿಸಿಕೊಳ್ಳುವಿಕೆ

ಸವಾಲುಗಳನ್ನು ಎದುರಿಸುವ ಮೂಲಕ ಗುರುತಿಸಿಕೊಳ್ಳುವಿಕೆ

ನಿಮ್ಮ ಆರಾಮದಾಯಕ ಸ್ಥಳದಿಂದ/ಪರಿಸರದಿಂದ ಹೊರಬರುವುದಕ್ಕೆ ನಿಮಗೆ ಭಯವಾಗಬಹುದು. ನೀವು ನಿಮಗೆ ಅಗತ್ಯವಿಲ್ಲದ ಅಥವಾ ಅಪಾಯಕಾರಿ ಸಂಬಂಧದಿಂದ ದೂರಬರುವಾಗ (ಮೋಸ ಮಾಡುತ್ತಿದ್ದಾರೆ ಎಂದು ತಿಳಿದ ಮೇಲೆ), ಅಥವಾ ನಿಮ್ಮ ಪ್ರೀತಿಪಾತ್ರರ ನಿಧನವಾದಾಗ ನೀವು ಅದರಿಂದ ಹೊರಬರಲು ಆತಂಕ ಅಥವಾ ಭಯಪಟ್ಟುಕೊಳ್ಳಬಹುದು. ಆದರೆ ನಿಮಗೆ ನೀವು ದೈರ್ಯ ತಂದುಕೊಳ್ಳುವುದರ ಮೂಲಕ ಈ ಆತಂಕಗಳಿಂದ ಹೊರಬರಬಹುದು ಹಾಗೂ ಮುಂದಿನ ಅಪಾಯಕಾರಿ/ ಆತಂಕಕಾರಿ ಘಟನೆಗಳಿಗೆ ಸಿದ್ಧರಾಗಬಹುದು!

ಆತ್ಮವಿಶ್ವಾಸ ಹೆಚ್ಚಿಸುವುದು

ಆತ್ಮವಿಶ್ವಾಸ ಹೆಚ್ಚಿಸುವುದು

"ನೀವು ಉತ್ತಮವಾಗಿ ಕಂಡರೆ ಉತ್ತಮ ಭಾವನೆಯನ್ನು ಹೊಂದುತ್ತೀರಿ" ಎನ್ನುವ ಮಾತಿನಲ್ಲಿ ಎಷ್ಟು ಸತ್ಯ ಅಡಗಿದೆ ನೋಡಿ! ವೃತ್ತಿಪರ ಹಸ್ತಾಲಂಕಾರ, ಉತ್ತಮವಾದ ಕೂದಲಿನ ಶೃಂಗಾರ, ಅಥವಾ ನಿಮ್ಮ ನೆಚ್ಚಿನ ರೆಸ್ಟೋರೆಂಟ್ ನಲ್ಲಿ ಊಟ ಮಾಡುವುದು ನಿಮ್ಮಲ್ಲಿ ಸಾಕಷ್ಟು ಉತ್ತಮ ಭಾವನೆಯನ್ನು ಮೂಡಿಸಿ, ಜೊತೆಗೆ ಮುಂದಿನ ಕಾರ್ಯವನ್ನು ಲವಲವಿಕೆಯಿಂದ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುವುದು. ಇದರಿಂದ ನೀವು ನಿಮ್ಮ ಸಂಗಾತಿಯೊಂದಿಗೆ ಇನ್ನಷ್ಟು ಕಾರ್ಯದಲ್ಲಿ ಸಹ ಪಾಲ್ಗೊಳ್ಳಲು ಅವರಿಂದ ಪ್ರಶಂಸೆಯನ್ನೂ ಗಳಿಸಲು ಅರ್ಹರಾಗುತ್ತೀರಿ!

ಖಿನ್ನತೆಯ ನಿವಾರಣೆ

ಖಿನ್ನತೆಯ ನಿವಾರಣೆ

ನೀವು ಗಂಭೀರ ಖಿನ್ನತೆಯಿಂದ ಬಳಲುತ್ತಿದ್ದಾರೆ ಅಥವಾ ಆತ್ಮ ಹಾನಿಯಾಗುವಂತಹ ಆಲೋಚನೆಗಳನ್ನು ಹೊಂದಿದ್ದರೆ, ನೀವು ಚಿಕಿತ್ಸಕರ ಅಥವಾ ಮನೋವೈದ್ಯರ ಸಹಾಯವನ್ನು ಪಡೆಯಬೇಕು. ಆದರೆ ನೀವು ಸೌಮ್ಯವಾದ "ಬ್ಲೂಸ್" (ಬೇಜಾರು.ನಿರುತ್ಸಾಹ) ಮನೋಭಾವವನ್ನು ಹೊಂದಿದ್ದರೆ ಮಸಾಜ್ ಚಿಕಿತ್ಸೆ ಇದರಿಂದ ಹೊರಬರಲು ಸಹಾಯ ಮಾಡಬಹುದು. ಅತಿಯಾದ ಕೊಬ್ಬು ಜೊತೆಗೆ ಕಾರ್ಟಿಸೋಲ್, ಖಿನ್ನತೆಯ ಭಾವನೆಗೆ ಕಾರಣವಾಗಬಹುದು. ಆಗಾಗ ದೇಹದ ಬಗ್ಗೆ ಕಾಳಜಿ ಮಾಡುವುದರಿಂದ ಮಸಾಜ್ ನಂತಹ ಚಿಕಿತ್ಸೆಗೆ ಒಳಗಾಗುವುದರಿಂದ ನಿಮ್ಮ ಒತ್ತಡದ ಮಟ್ಟ ಕಡಿಮೆಯಾಗಿ ಜೊತೆಗೆ ಖಿನ್ನತೆಯ ಭಾವ ಸಂಪೂರ್ಣ ದೂರವಾಗುತ್ತದೆ.

ತೀವ್ರವಾದ ನೋವು ನಿವಾರಣೆ

ತೀವ್ರವಾದ ನೋವು ನಿವಾರಣೆ

ನೀವು ಅತಿಯಾದ ಬೆನ್ನು ನೋವು ಅಥವಾ ಭುಜದ ನೋವಿನಿಂದ ಪ್ರತಿದಿನವೂ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಇದರಿಂದ ನೋವು ಅಧಿಕವಾಗುತ್ತ ಹೋಗುತ್ತದೆ. ಕೇವಲ ಕ್ಷಣಿಕ ಶಮನವಷ್ಟೇ ಸಿಗಬಹುದು. ಆದರೆ ಮಾತ್ರೆಗಳ ಸೇವನೆಯ ಬದಲು ಮಸಾಜ್ ಚಿಕಿತ್ಸೆಯನ್ನು ಮಾಡಿದರೆ ಮಾತ್ರೆಗಳನ್ನು ಸೇವಿಸದೇ ನೋವಿನಿಂದ ನಿವಾರಣೆ ಹೊಂದಬಹುದು. ಸ್ವೀಡಿಷ್ ಮಸಾಜ್ ಮತ್ತು ಕ್ರೀಡಾ ಮಸಾಜ್ ಎಂದು ಕರೆಯಲ್ಪಡುವ ಮಸಾಜ್‌ಗಳು ನೋಯುತ್ತಿರುವ ಸ್ನಾಯುಗಳನ್ನು ನೋವಿನಿಂದ ಮುಕ್ತಗೊಳಿಸಲು ಅತ್ಯುತ್ತಮ ಸಾಧನಗಳಾಗಿವೆ. ಸ್ವೀಡಿಷ್ ಮಸಾಜ್ ನಿಮ್ಮ ದೇಹದ ನೋವನ್ನು ನಿಧಾನವಾಗಿ ನಿವಾರಿಸಿದರೆ, ಕ್ರೀಡಾ ಮಸಾಜ್ ದೇಹದಲ್ಲಿ ತೊಂದರೆ ನೀಡುತ್ತಿರುವ ಸ್ನಾಯು ಭಾಗವನ್ನು ಗುರುತಿಸಿ, ನೋವು ನಿವಾರಿಸಲು ಸಹಾಯಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ಮಸಾಜ್, ಮಾತ್ರೆಗಳಿಗಿಂತಲೂ ಪರಿಣಾಮಕಾರಿಯಾಗಿ ನೋವು ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

English summary

10 Reasons to Pamper Yourself Monthly

You take care of everyone’s needs but hardly give a thought to yourself. While your unselfishness is admirable it is not necessarily wise. You don’t have to become a narcissist, but pampering yourself should be more than an afterthought – self-indulgences should be high on your “must do” list. Here are a few reasons to pamper yourself monthly.
X
Desktop Bottom Promotion