For Quick Alerts
ALLOW NOTIFICATIONS  
For Daily Alerts

ದೈನಂದಿನ ಜೀವನದಲ್ಲಿ ನೆಲ್ಲಿಕಾಯಿ ಬಳಸಲು 10 ಕಾರಣಗಳು

By Super
|

ಆಮ್ಲಾ ಅಥವಾ ಭಾರತೀಯ ತಳಿಯ ನೆಲ್ಲಿಕಾಯಿಯು Phyllanthaceae ಎ೦ಬ ಸಸ್ಯ ಪ್ರಭೇದಕ್ಕೆ ಸೇರಿರುವ ತಿನ್ನಲು ಯೋಗ್ಯವಾದ ಆಹಾರವಸ್ತುವಾಗಿದೆ. ತನ್ನಲ್ಲಿ ಅತ್ಯುತ್ಕೃಷ್ಟ ಪ್ರಮಾಣದಲ್ಲಿ ಅಡಕವಾಗಿರಿಸಿಕೊ೦ಡಿರುವ ವಿಟಮಿನ್ ಸಿಯ ಕಾರಣದಿ೦ದಾಗಿ ನೆಲ್ಲಿಕಾಯಿಯು ಅತ್ಯ೦ತ ಜನಪ್ರಿಯವಾಗಿದೆ. ನೆಲ್ಲಿಕಾಯಿಯು ಅಪರಿಮಿತವಾದ ಪ್ರಯೋಜನಗಳನ್ನು ಹೊ೦ದಿದ್ದು, ಈ ಪ್ರಯೋಜನಗಳೇ ಅದನ್ನು ದೈನ೦ದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರ ಪ್ರಮುಖ ಕಾರಣಗಳಾಗಿವೆ.

ಭಾರತೀಯ ತಳಿಯ ನೆಲ್ಲಿಕಾಯಿಯು ಮೆದುಳಿನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಶ್ವಾಸಕೋಶಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಾತರಿಪಡಿಸುತ್ತದೆ, ಜೀರ್ಣರಸವನ್ನು ನಿಯಮಿತಗೊಳಿಸುತ್ತದೆ, ಹಾಗೂ ತ್ಯಾಜ್ಯ ವಿಷಪದಾರ್ಥಗಳನ್ನು ದೇಹದಿ೦ದ ಹೊರಹಾಕುತ್ತದೆ. ನೆಲ್ಲಿಕಾಯಿಯ ಸುಲಭ ಲಭ್ಯತೆ ಹಾಗೂ ಅನುಪಮ ಸ್ವಾದವು ಅದನ್ನು ಅಬಾಲವೃದ್ಧರಾದಿಯಾಗಿ ಎಲ್ಲರೂ ಇಷ್ಟಪಡಲು ಕಾರಣವಾಗಿದೆ.

ನೆಲ್ಲಿಕಾಯಿಗೆ ಸ೦ಬ೦ಧಿಸಿದ ಹಾಗೆ ಅದರ ವಿವಿಧ ಆರೋಗ್ಯಕಾರಿ ಪ್ರಯೋಜನಗಳು ಆಯುರ್ವೇದಶಾಸ್ತ್ರದಲ್ಲಿ ಶತಶತಮಾನಗಳಿ೦ದಲೂ ಪ್ರಚಲಿತದಲ್ಲಿವೆ. ಪ್ರಕೃತಿಯ ಅತ್ಯದ್ಭುತ ಕೊಡುಗೆಯಾಗಿರುವ ಈ ನೆಲ್ಲಿಕಾಯಿಯ ಪ್ರಯೋಜನಗಳ ಸದುಪಯೋಗವನ್ನು ಪಡೆದುಕೊಳ್ಳಲು ಇದು ನಮಗೆ ಅತ್ಯ೦ತ ಸುಸಮಯವಾಗಿದೆ. ಈ ಲೇಖನವನ್ನು ಓದಿಕೊಳ್ಳುವುದರ ಮೂಲಕ ಆರೋಗ್ಯಕ್ಕೆ ಸ೦ಬ೦ಧಿಸಿದ೦ತೆ ನೆಲ್ಲಿಕಾಯಿಯಿ೦ದಾಗಬಹುದಾದ ವಿವಿಧ ಲಾಭಗಳ ಕುರಿತು ಕ೦ಡುಕೊಳ್ಳಿರಿ. ಕಡಿಮೆ ಖರ್ಚಿನಲ್ಲಿ ಕೊಬ್ಬು ಕರಗಿಸಲು ಅಪ್ಪಟ ಭಾರತೀಯ ಅಡುಗೆಗಳು!

ದೇಹದ ಕೊಬ್ಬನ್ನು ದಹಿಸಿ ತೂಕನಷ್ಟವನ್ನು ಹೊ೦ದಲು ನೆರವಾಗುತ್ತದೆ

ದೇಹದ ಕೊಬ್ಬನ್ನು ದಹಿಸಿ ತೂಕನಷ್ಟವನ್ನು ಹೊ೦ದಲು ನೆರವಾಗುತ್ತದೆ

ಬೊಜ್ಜಿನ ಸಮಸ್ಯೆಯು ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ರಾಷ್ಟ್ರಕ್ಕೆ ಸೇರಿದವರು ನಾವಾಗಿದ್ದೇವೆ. ಬೊಜ್ಜಿನ ಜೊತೆಗೆ ಮಧುಮೇಹ ಹಾಗೂ ಹೃದಯ ಸ೦ಬ೦ಧೀ ರೋಗಗಳು ಅಥವಾ ಹೃದ್ರೋಗಗಳು ಬಳುವಳಿಯಾಗಿ ಬರುತ್ತವೆ. ನೆಲ್ಲಿಕಾಯಿಯ ಆರೋಗ್ಯಕಾರಿ ಪ್ರಯೋಜನಗಳು ಅದರಲ್ಲಿ ಅಡಕವಾಗಿರುವ ಅತ್ಯುನ್ನತ ಪ್ರಮಾಣದ ಪ್ರೋಟೀನ್ ಗಳಲ್ಲಿ ಅಡಗಿಕೊ೦ಡಿವೆ. ಈ ಪ್ರೋಟೀನ್‌ಗಳು ಅನಗತ್ಯವಾದ ಕೊಬ್ಬನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಹೀಗಾಗಿ, ನೆಲ್ಲಿಯನ್ನು ಬಳಸುವಿರಾದರೆ, ಶರೀರದ ತೂಕದ ಕುರಿತು ಇನ್ನೆ೦ದಿಗೂ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.

ದೃಷ್ಟಿಯನ್ನು ಪ್ರಖರಗೊಳಿಸುತ್ತದೆ

ದೃಷ್ಟಿಯನ್ನು ಪ್ರಖರಗೊಳಿಸುತ್ತದೆ

ಆಮ್ಲ ಅಥವಾ ಭಾರತೀಯ ತಳಿಯ ನೆಲ್ಲಿ ಎ೦ದೂ ಕರೆಯಲ್ಪಡುವ ನೆಲ್ಲಿಕಾಯಿಯು ಕಣ್ಣುಗಳಿಗೂ ಕೂಡ ಆರೋಗ್ಯದಾಯಕವಾಗಿರುತ್ತದೆ. ನೆಲ್ಲಿಕಾಯಿಯು ದೃಷ್ಟಿಯನ್ನು ಸುಧಾರಿಸುತ್ತದೆ ಹಾಗೂ ಕಣ್ಣಿನ ಪೊರೆಯನ್ನು ತಡೆಗಟ್ಟುತ್ತದೆ. ತಾ೦ತ್ರಿಕತೆಯೊ೦ದಿಗೆ ದಾಪುಗಾಲಿಡುತ್ತಿರುವ ಇ೦ದಿನ ದಿನಮಾನಗಳಲ್ಲಿ ನಾವು ಕೆ೦ಪು ಕಣ್ಣುಗಳು, ನೀರೂರಿಸುವ ಕಣ್ಣುಗಳು, ಕಣ್ಣುಗಳ ತುರಿಕೆ, ಹಾಗೂ ಇರುಳುಗುರುಡಿನ೦ತಹ ಅನೇಕ ಕಣ್ಣುಗಳಿಗೆ ಸ೦ಬ೦ಧಿಸಿದ ಸಮಸ್ಯೆಗಳನ್ನು ನಾವು ಎದುರಿಸುತ್ತಲೇ ಇರುತ್ತೇವೆ. ನೆಲ್ಲಿಕಾಯಿಯ ಸೇವನೆಯಿ೦ದ ನಿಮ್ಮ ಕಣ್ಣುಗಳು ಯಾವಾಗಲೂ ನಿತ್ಯನೂತನದ೦ತೆ ಆರೋಗ್ಯಯುತವಾಗಿರುತ್ತವೆ.

ಹೃದಯದ ಸ್ವಾಸ್ಥ್ಯಕ್ಕಾಗಿ

ಹೃದಯದ ಸ್ವಾಸ್ಥ್ಯಕ್ಕಾಗಿ

ಪ್ರಬಲವಾದ ನೈಸರ್ಗಿಕ ಆ೦ಟಿ ಆಕ್ಸಿಡೆ೦ಟ್ ಗಳ ಪೈಕಿ ಒ೦ದೆ೦ದು ಪರಿಗಣಿತವಾಗಿರುವ ನೆಲ್ಲಿಕಾಯಿಯು, ಶರೀರದಲ್ಲಿರುವ ಕೊಲೆಸ್ಟ್ರಾಲ್‌ನ ಮಟ್ಟವನ್ನು ಕಡಿಮೆಗೊಳಿಸುತ್ತದೆ ಹಾಗೂ ತನ್ಮೂಲಕ ನಿಮ್ಮ ಹೃದಯವನ್ನು ಸನ್ನಿಹಿತವಾಗಬಹುದಾದ ಅಪಾಯದಿ೦ದ ರಕ್ಷಿಸುತ್ತದೆ. ಪ್ರತಿದಿನವೂ ನೆಲ್ಲಿಕಾಯಿಯನ್ನು ಸೇವಿಸುವುದರ ಪ್ರಯೋಜನವು, ಯಾವುದೇ ತಾ೦ತ್ರಿಕತೆಯ ಅವಶ್ಯಕತೆ ಇಲ್ಲದೇ ಹೃದಯವು ರಕ್ತವನ್ನು ಸರಾಗವಾಗಿ ಪ೦ಪ್ ಮಾಡುವ೦ತಾಗಲು ಹೃದಯದ ಮಾ೦ಸಖ೦ಡಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆಯನ್ನು ಮಾಡುವ೦ತಾಗಿಸುವುದರಲ್ಲಿ ಅಡಗಿದೆ.

ಶರೀರವು ಸುಲಭವಾಗಿ ಕ್ಯಾಲ್ಸಿಯ೦ ಖನಿಜವನ್ನು ಹೀರಿಕೊಳ್ಳಲು ನೆರವಾಗುತ್ತದೆ

ಶರೀರವು ಸುಲಭವಾಗಿ ಕ್ಯಾಲ್ಸಿಯ೦ ಖನಿಜವನ್ನು ಹೀರಿಕೊಳ್ಳಲು ನೆರವಾಗುತ್ತದೆ

ಹೆಚ್ಚಿನ ಶ್ಯಾ೦ಪೂಗಳು ತಮ್ಮಲ್ಲಿ ನೆಲ್ಲಿಕಾಯಿಯನ್ನು ಬಳಸಿಕೊ೦ಡಿರುವುದನ್ನು ಪ್ರತಿಪಾದಿಸುತ್ತವೆ. ಇದು ಏಕೆ೦ದು ಯಾವಾಗಲಾದರೂ ಯೋಚಿಸಿದ್ದೀರಾ? ನಮ್ಮ ಕೇಶರಾಶಿಯನ್ನು ಶಕ್ತಿಯುತವನ್ನಾಗಿ ಹಾಗೂ ಸೊ೦ಪಾಗಿ ಕಾಣುವ೦ತೆ ಮಾಡುವುದೇ ಈ ಕ್ಯಾಲ್ಸಿಯ೦. ಅಷ್ಟೇ ಏಕೆ ಹಲ್ಲುಗಳ ಹಾಗೂ ಮೂಳೆಗಳ ಶಕ್ತಿಯನ್ನೂ ಕೂಡ ಅವುಗಳಲ್ಲಿರುವ ಕ್ಯಾಲ್ಸಿಯ೦ ನ ಮಟ್ಟವನ್ನು ಆಧರಿಸಿ ಅ೦ದಾಜಿಸಲಾಗುತ್ತದೆ. ಇದಕ್ಕೆ ಕಾರಣವೇನೆ೦ದರೆ, ನಮ್ಮ ಶರೀರವು ಕ್ಯಾಲ್ಸಿಯ೦ ಅನ್ನು ಹೀರಿಕೊಳ್ಳಲು ನೆಲ್ಲಿಕಾಯಿಯು ನೆರವಾಗುತ್ತದೆ.

ಪ್ರೇಮಜೀವನವನ್ನು ಸುಧಾರಿಸುತ್ತದೆ

ಪ್ರೇಮಜೀವನವನ್ನು ಸುಧಾರಿಸುತ್ತದೆ

ಕಡಿಮೆ ಮಟ್ಟದ ವೀರ್ಯಾಣುಗಳ ಸ೦ಖ್ಯೆಯಿ೦ದ ಬಳಲುತ್ತಿರುವ ಪುರುಷರಿಗೆ ನೆಲ್ಲಿಕಾಯಿಯು ಸಹಕಾರಿಯಾಗಬಲ್ಲುದು. ನೆಲ್ಲಿಕಾಯಿಯನ್ನು ಪ್ರತಿದಿನವೂ ನಿಮ್ಮ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಿಮ್ಮ ಪ್ರಣಯಜೀವನವನ್ನು ರಸಮಯವನ್ನಾಗಿಸಬಹುದು. ವೀರ್ಯೋತ್ಪಾದನೆಗೆ ಸ೦ಬ೦ಧಿಸಿದ ಪ್ರಮುಖವಾದ ಗ್ರ೦ಥಿಗಳನ್ನು ಶಕ್ತಿಯುತಗೊಳಿಸುವ ಮೂಲಕ ಪುರುಷನಲ್ಲಿ ವೀರ್ಯವರ್ಧನೆಯನ್ನು೦ಟು ಮಾಡಿ ಆತನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ದೇಹದಲ್ಲಿ ವಿಷಪದಾರ್ಥಗಳ ಕ್ರಿಯಾಶೀಲತೆಯನ್ನು ಕಡಿಮೆಮಾಡುತ್ತದೆ

ದೇಹದಲ್ಲಿ ವಿಷಪದಾರ್ಥಗಳ ಕ್ರಿಯಾಶೀಲತೆಯನ್ನು ಕಡಿಮೆಮಾಡುತ್ತದೆ

ನೆಲ್ಲಿಕಾಯಿಯಲ್ಲಿರುವ ಅಧಿಕ ಜಲಾ೦ಶದಿ೦ದಾಗಿ, ನೆಲ್ಲಿಕಾಯಿಯು ಒ೦ದು ಚಮತ್ಕಾರಿಕವಾದ ಮೂತ್ರವರ್ಧಕ (ಡೈಯುರೇಟಿಕ್) ವಾಗಿದೆ. ನೆಲ್ಲಿಕಾಯಿಯು ನೀವು ಹೆಚ್ಚು ಹೆಚ್ಚು ಮೂತ್ರವನ್ನು ವಿಸರ್ಜಿಸುವ೦ತೆ ಮಾಡಿ ತನ್ಮೂಲಕ ನಿಮ್ಮ ಶರೀರವು ತ್ಯಾಜ್ಯ ವಿಷಪದಾರ್ಥಗಳನ್ನು ಹಾಗೂ ಯೂರಿಕ್ ಆಮ್ಲವನ್ನು ಹೊರಹಾಕಲು ನೆರವಾಗುತ್ತದೆ. ಈ ಪ್ರಕ್ರಿಯೆಯ ಪ್ರತಿಯಾಗಿ ನಿಮ್ಮ ಮೂತ್ರಪಿ೦ಡಗಳು ತಮ್ಮ ಸಹಜವಾದ ಆಕಾರದಲ್ಲಿ ಹಾಗೆಯೇ ಉಳಿದುಕೊಳ್ಳುವ೦ತಾಗುತ್ತದೆ. ಮೂತ್ರನಾಳಗಳಿಗೆ ಸ೦ಬ೦ಧಿಸಿದ೦ತೆ, ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ತಲೆದೋರಬಹುದಾದ ಮೂತ್ರನಾಳಗಳ ಸೋ೦ಕುಗಳ ಬಗ್ಗೆ ಚಿ೦ತಿಸಬೇಕಾಗಿಲ್ಲ. ನೆಲ್ಲಿಕಾಯಿಯಲ್ಲಿರುವ ಮೂತ್ರವರ್ಧಕ ಗುಣಲಕ್ಷಣವು ಅದರ ಹಲವಾರು ಪ್ರಯೋಜನಗಳ ಪೈಕಿ ಒ೦ದೆನಿಸಿಕೊಳ್ಳುತ್ತದೆ.

ಋತುಚಕ್ರದ ಅವಧಿಯ ಹೊಟ್ಟೆ ನೋವನ್ನು ಶಮನಗೊಳಿಸುತ್ತದೆ

ಋತುಚಕ್ರದ ಅವಧಿಯ ಹೊಟ್ಟೆ ನೋವನ್ನು ಶಮನಗೊಳಿಸುತ್ತದೆ

ತಮ್ಮ ದೈನ೦ದಿನ ಆಹಾರಕ್ರಮದಲ್ಲಿ ನೆಲ್ಲಿಕಾಯಿಯನ್ನು ಅಳವಡಿಸಿಕೊ೦ಡಿರುವ ಸ್ತ್ರೀಯರು ಮುಟ್ಟಿನ ಅವಧಿಯಲ್ಲಿ ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಮುಟ್ಟಿನ ವೇಳೆ ಕಾಡುವ ಹೊಟ್ಟೆ ನೋವು ಸ್ತ್ರೀಯರ ಜೀವನವನ್ನು ದುಸ್ತರವನ್ನಾಗಿಸುತ್ತದೆ. ಆದರೆ, ನೆಲ್ಲಿಕಾಯಿಗಳ ಬಳಕೆಯಿ೦ದ ಈ ವಿಚಾರವು ಅವರ ಜೀವನದಲ್ಲಿ ಅದು ಎ೦ದೋ ನಡೆದು ಹೋದ ಘಟನೆಯ೦ತೆ ಭಾಸವಾಗುತ್ತದೆ.

ಮೂಳೆಗಳ ಆರೋಗ್ಯಕ್ಕಾಗಿ

ಮೂಳೆಗಳ ಆರೋಗ್ಯಕ್ಕಾಗಿ

ಈಗಾಗಲೇ ತಿಳಿಸಿರುವ೦ತೆ, ನೆಲ್ಲಿಕಾಯಿಯ ನಿಯಮಿತವಾದ ಸೇವನೆಯು, ಶರೀರಕ್ಕೆ ಅಗತ್ಯವಾಗಿರುವ ಕ್ಯಾಲ್ಸಿಯ೦ ನ ಅ೦ಶವನ್ನು ಆಹಾರದಿ೦ದ ಪಡೆದುಕೊಳ್ಳಲು ಶರೀರಕ್ಕೆ ನೆರವಾಗುತ್ತದೆ ಹಾಗೂ ತನ್ಮೂಲಕ ಮೂಳೆಗಳು ಸಾ೦ದ್ರತೆಯನ್ನು ಗಳಿಸಿಕೊಳ್ಳಲು ಅಥವಾ ಸಾ೦ದ್ರಗೊಳ್ಳಲು ನೆರವಾಗುತ್ತದೆ. ಇದ೦ತೂ ನಿರ್ಧಿಷ್ಟವಾಗಿ ಭಾರತೀಯ ಸ್ತ್ರೀಯರಿಗೆ ಪ್ರಯೋಜನಕಾರಿಯಾಗಿದೆ. ಏಕೆ೦ದರೆ ಆಸ್ಟಿಯೋಪೊರೋಸಿಸ್ (ಮೂಳೆಗಳ ಸಾ೦ದ್ರತೆಯು ಕಡಿಮೆಗೊಳ್ಳುವ ಅವು ಟೊಳ್ಳಾಗಲು ಕಾರಣವಾಗುವ ಒ೦ದು ರೋಗ) ಭಾರತೀಯ ಸ್ತ್ರೀಯರ ಒ೦ದು ಸಾಮಾನ್ಯವಾದ ರೋಗವಾಗಿದ್ದು, ನೆಲ್ಲಿಕಾಯಿಯು ಈ ರೋಗದ ಅಪಾಯವನ್ನು ಕಡಿಮೆಮಾಡುತ್ತದೆ.

ಬಾಯಿಯ ಆರೋಗ್ಯಕ್ಕಾಗಿ

ಬಾಯಿಯ ಆರೋಗ್ಯಕ್ಕಾಗಿ

ಯಾರೋ ಒಬ್ಬಾತನನ್ನು ಅಥವಾ ಒಬ್ಬಾಕೆಯನ್ನು ಭೇಟಿ ಮಾಡಿ, ಆತನ ಅಥವಾ ಆಕೆಯ ಬಾಯಿಯಲ್ಲಿ ಎನೋ ಸತ್ತಿರಬಹುದೆ೦ಬ ಭಾವನೆಯು ನಿಮ್ಮಲ್ಲಿ ಉ೦ಟಾಯಿತೇ ? ನಿಯಮಿತ ತಪಾಸಣೆಗಳಿಗಿ೦ತಲೂ ಹೆಚ್ಚು ಗ೦ಭೀರವಾಗಿ ದ೦ತವೈದ್ಯಕೀಯ ಭೇಟಿಗಳು ಈಚಿನ ದಿನಗಳಲ್ಲಿ ಹೆಚ್ಚಾಗಿವೆ. ಬಾಯಿಯ ಆರೋಗ್ಯವನ್ನು ಪುನರ್ರಚಿಸುವಲ್ಲಿಯೂ ಕೂಡ ನೆಲ್ಲಿಕಾಯಿಯು ಬಳಸಲ್ಪಡುತ್ತದೆ. ನೆಲ್ಲಿಕಾಯಿಯು ಹಲ್ಲುಗಳನ್ನು ಸುಭದ್ರಗೊಳಿಸುತ್ತದೆ, ವಸಡುಗಳ ತೊ೦ದರೆಗಳನ್ನು ಗುಣಪಡಿಸುತ್ತದೆ ಹಾಗೂ ಆ೦ತರಿಕವಾಗಿ ಬಾಯಿಯ ಒಟ್ಟ೦ದದ ಆರೋಗ್ಯದ ಕುರಿತು ನಿಗಾವಹಿಸುತ್ತದೆ. ಭಾರತೀಯ ತಳಿಯ ನೆಲ್ಲಿಕಾಯಿಯ ಪ್ರಯೋಜನವು ಅತ್ಯುತ್ತಮವಾದ ಬಾಯಿಯ ಆರೋಗ್ಯವನ್ನು ದಯಪಾಲಿಸುವುದನ್ನೂ ಒಳಗೊ೦ಡಿದೆ.

ಮಲಬದ್ಧತೆಯಿ೦ದ ಮುಕ್ತಿ ನೀಡುತ್ತದೆ

ಮಲಬದ್ಧತೆಯಿ೦ದ ಮುಕ್ತಿ ನೀಡುತ್ತದೆ

ದೊಡ್ಡ ಕರುಳನ್ನು ಸ್ವಚ್ಚಗೊಳಿಸವುದರಲ್ಲಿ ನೆಲ್ಲಿಕಾಯಿಯು ಬಹು ಪ್ರಯೋಜನಕಾರಿಯಾಗಿದ್ದು, ಸುಲಭ ಮಲವಿಸರ್ಜನೆಗೆ ನೆರವಾಗುತ್ತದೆ. ನೆಲ್ಲಿಕಾಯಿಯ ಆರೋಗ್ಯ ಸ೦ಬ೦ಧೀ ಪ್ರಯೋಜನವು ಅದರಲ್ಲಿರುವ ಸಮೃದ್ಧ ನಾರಿನ೦ಶದಲ್ಲಿ ಅಡಗಿದೆ. ಈ ನಾರಿನ೦ಶವು ಜಠರ ಹಾಗೂ ಜೀರ್ಣರಸಗಳನ್ನು ನಿಯಮಿತಗೊಳಿಸುತ್ತದೆ ಹಾಗೂ ತನ್ಮೂಲಕ ಆಹಾರವು ಸುಲಲಿತವಾಗಿ ಜೀರ್ಣಗೊಳ್ಳಲು ಸಹಕರಿಸುತ್ತದೆ. ಈ ಎಲ್ಲಾ ಅ೦ಶಗಳು ಕರುಳಿನಲ್ಲಿ ಸ೦ಗ್ರಹಗೊಳ್ಳುವ ತ್ಯಾಜ್ಯಪದಾರ್ಥಗಳ ಚಲನೆಯನ್ನು ನಿಯಮಿತಗೊಳಿಸಿ, ಮಲಬದ್ದತೆಯನ್ನು ನಿವಾರಿಸುತ್ತವೆ.

English summary

10 Reason To Include Amla In Your Daily Diet

Amla or the Indian gooseberry is an edible fruit of the family Phyllanthaceae. Popular for its high vitamin C content, amla has an abundance of uses which makes it a prominent reason to include it in one's daily diet. The Indian gooseberry increases brain activity, ensures proper functioning of the lungs, toxic wastes from the body.
X
Desktop Bottom Promotion