For Quick Alerts
ALLOW NOTIFICATIONS  
For Daily Alerts

ಧ್ಯಾನದಲ್ಲಿ ಅಡಗಿದೆ 10 ಪವಾಡ ಪ್ರಯೋಜನಗಳು!

|

ಧ್ಯಾನವು ಒ೦ದು ಪುರಾತನವಾದ ಆಧ್ಯಾತ್ಮಿಕ ಆಚರಣೆಯಾಗಿದ್ದು, ಈ ಆಚರಣೆಯು ವರ್ಷಾನುವರ್ಷಗಳಿ೦ದ ವಿಕಸನಗೊಳ್ಳುತ್ತಾ ಬ೦ದಿದೆ ಹಾಗೂ ಒತ್ತಡ, ಖಿನ್ನತೆ, ಮತ್ತು ಉದ್ವೇಗಗಳ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುತ್ತಾ ಬ೦ದಿದೆ. ಇಷ್ಟು ಮಾತ್ರವೇ ಅಲ್ಲ, ಧ್ಯಾನವು ನಿಮ್ಮ ಗ್ರಹಿಕೆಯ ಸಾಮರ್ಥ್ಯದ ಕುರಿತೂ ಕಾಳಜಿವಹಿಸುತ್ತದೆ ಹಾಗೂ ತನ್ಮೂಲಕ ಕಾರ್ಯಕ್ಷೇತ್ರದಲ್ಲಿ ನಿಮ್ಮ ನಿರ್ವಹಣೆಯನ್ನು ಸುಧಾರಿಸುತ್ತದೆ. ಒ೦ದು ವೇಳೆ ನೀವೇನಾದರೂ ಅತಿಯಾದ ಉದಾಸೀನ, ಅಥವಾ ತತ್ಸಮಾನವಾದ ಗ೦ಭೀರವಾದ ಸ್ಥಿತಿಯಿ೦ದ ಬಳಲುತ್ತಿದ್ದಲ್ಲಿ, ಬಹುಶ: ನಿಮ್ಮಲ್ಲಿ ಧ್ಯಾನದ ಕೊರತೆಯಿದೆ ಎ೦ದು ಪರಿಗ್ರಹಿಸಬಹುದು.

ಆದಾಗಿಯೂ, ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಯನ್ನು೦ಟು ಮಾಡಲು ಈಗಲೂ ಕಾಲ ಮಿ೦ಚಿಲ್ಲ. ಇ೦ದಿನಿ೦ದಲೇ ನೀವು ಧ್ಯಾನದ ಆಚರಣೆಯಲ್ಲಿ ತೊಡಗಿಸಿಕೊ೦ಡಲ್ಲಿ, ನಿಮ್ಮೆಲ್ಲಾ ದು:ಖ ದುಮ್ಮಾನಗಳು ಹಾಗೂ ಅಡ್ಡಿ ಆತ೦ಕಗಳು ಕ್ರಮೇಣವಾಗಿ ಕಣ್ಮರೆಯಾಗುತ್ತಾ ಸಾಗುವ ಅ೦ಶವು ಸ್ವತ: ನಿಮ್ಮ ಅನುಭವಕ್ಕೇ ಬರುತ್ತದೆ. ಬನ್ನಿ ಹಾಗಿದ್ದರೆ ಇಂದಿನ ಲೇಖನದಲ್ಲಿ ಧ್ಯಾನದ ಕೆಲವೊಂದು ಪ್ರಯೋಜನಗಳನ್ನು ಅರಿತುಕೊಳ್ಳೋಣ.

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ಧ್ಯಾನದಿಂದ ಒತ್ತಡ ನಿವಾರಣೆಯಾಗುತ್ತದೆ. ನೀವು ಧ್ಯಾನ ಮಾಡಿದಾಗ ಮನದಲ್ಲಿರುವ ಒತ್ತಡ ನಿವಾರಣೆಯಾಗಿ ದೇಹ ಹಗುರವಾಗುತ್ತದೆ. ನಿಮ್ಮ ದೇಹದಲ್ಲಿರುವ ಒತ್ತಡವನ್ನುಂಟುಮಾಡುವ ಹಾರ್ಮೋನುಗಳು ಹೊರಹೋಗುತ್ತವೆ. ಧ್ಯಾನವನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರವೇ ಈ ಅನುಭವ ನಿಮಗುಂಟಾಗುತ್ತದೆ.

ನಿದ್ರೆ ಮಾಡಲು ಸಹಾಯಕ

ನಿದ್ರೆ ಮಾಡಲು ಸಹಾಯಕ

ಒತ್ತಡದಿಂದ ನಿದ್ರೆ ನಿಮ್ಮ ಬಳಿ ಸುಳಿಯುವುದಿಲ್ಲ. ರಾತ್ರಿ ಆಗಾಗ್ಗೆ ನಾವು ಎಚ್ಚರಗೊಳ್ಳುವುದರಿಂದ ನಮಗೆ ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ಧ್ಯಾನವು ಈ ನಿದ್ರೆಯನ್ನು ಬರಿಸಲು ಒಂದು ನೈಸರ್ಗಿಕ ಪರಿಹಾರವಾಗಿದೆ.

ಸಿಟ್ಟನ್ನು ನಿಯಂತ್ರಿಸುತ್ತದೆ

ಸಿಟ್ಟನ್ನು ನಿಯಂತ್ರಿಸುತ್ತದೆ

ಕೋಪ, ಸಿಟ್ಟು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ನೀವು ಕೋಪಗೊಂಡಾಗ ನಿಮ್ಮ ನ್ಯೂರೋನ್‌ಗಳು ಹಾನಿಯಾಗುತ್ತವೆ ಮತ್ತು ನಿಮ್ಮ ರಕ್ತದೊತ್ತಡ ಅಧಿಕವಾಗುತ್ತದೆ. ನೀವು ನಿಯಮಿತವಾಗಿ ಯೋಗವನ್ನು ಮಾಡಿದಾಗ ಈ ಕೋಪ ನಿಯಂತ್ರಣಕ್ಕೆ ಬರುತ್ತದೆ.

ನಿಮ್ಮನ್ನು ಫಲವಂತನ್ನಾಗಿಸುತ್ತದೆ

ನಿಮ್ಮನ್ನು ಫಲವಂತನ್ನಾಗಿಸುತ್ತದೆ

ನೀವು ವಿರಾಮ ಹೊಂದಿದಾಗ ನೀವು ಫಲವತ್ತಾಗಿರುವ ಸಾಧ್ಯತೆ ಹೆಚ್ಚು ಇದೆ. ಹೆಚ್ಚಾಗಿ ಮಹಿಳೆಯರಲ್ಲಿ, ನೀವು ಧ್ಯಾನ ಮತ್ತು ಒತ್ತಡರಹಿತರಾಗಿ ಇದ್ದಾಗ ಗರ್ಭಧಾರಣೆ ಹೆಚ್ಚಾಗುತ್ತದೆ.

ರಕ್ತದೊತ್ತಡ ಕಡಿಮೆ

ರಕ್ತದೊತ್ತಡ ಕಡಿಮೆ

ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆ ಮಾಡುವ ಚಿಕಿತ್ಸೆ ಎಂದರೆ ಯೋಗವಾಗಿದೆ. ಇದು ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡಿ ನಿಮ್ಮ ಮನಸ್ಸನ್ನು ನಿರಾಳವಾಗಿಸುತ್ತದೆ.

ಭಾವನಾತ್ಮಕ ಸುದೃಢತೆ

ಭಾವನಾತ್ಮಕ ಸುದೃಢತೆ

ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ಖಿನ್ನತೆಗೆ ಧ್ಯಾನವು ಒಂದು ಉತ್ತಮ ಪರಿಹಾರವಾಗಿದೆ.

ಉಸಿರಾಟ ತೊಂದರೆಗಳ ನಿವಾರಣೆ

ಉಸಿರಾಟ ತೊಂದರೆಗಳ ನಿವಾರಣೆ

ನೀವು ಧ್ಯಾನ ಮಾಡಿದಾಗ, ನೀವು ನಿಧಾನವಾಗಿ ಏಕಪ್ರಕಾರವಾಗಿ ಉಸಿರಾಡುತ್ತೀರಿ. ಉಸಿರಾಟ ಸಮಸ್ಯೆಗಳನ್ನು ಹೊಂದಿರುವವರಿ ಧ್ಯಾನ ಮಾಡುವಿಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಹೆಚ್ಚುವರಿ ಆಮ್ಲಜನಕವನ್ನು ಈ ಸಮಯದಲ್ಲಿ ಸೇವಿಸುವುದರಿಂದ ಇದು ಪ್ರಯೋಜನಕಾರಿಯಾಗಿದೆ.

ರೋಗನಿರೋಧಕ ಶಕ್ತಿ

ರೋಗನಿರೋಧಕ ಶಕ್ತಿ

ನೀವು ನಿಮಯಮಿತವಾಗಿ ಯೋಗ ಮಾಡುವುದು, ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ನೀವು ಧ್ಯಾನಸ್ಥಿತಿಯಲ್ಲಿದ್ದಾಗ ಹೆಚ್ಚು ಆಳವಾಗಿ ಉಸಿರಾಡುತ್ತೀರಿ ಮತ್ತು ಹೆಚ್ಚು ಆಮ್ಲಜನಕವನ್ನು ಪಡೆದುಕೊಳ್ಳುತ್ತೀರಿ.

ಸ್ನಾಯು ಸೆಳೆತವನ್ನು ನಿವಾರಿಸುತ್ತದೆ

ಸ್ನಾಯು ಸೆಳೆತವನ್ನು ನಿವಾರಿಸುತ್ತದೆ

ಒತ್ತಡವು ನಿಮ್ಮ ಸ್ನಾಯುಗಳನ್ನು ತೀವ್ರ ನೋವುಂಟು ಮಾಡುತ್ತದೆ. ಧ್ಯಾನವು ನಿಮ್ಮ ಒತ್ತಡವನ್ನು ನಿವಾರಿಸಿ ಸ್ನಾಯು ಸೆಳೆತವನ್ನು ದೂರಮಾಡುತ್ತದೆ.

ಸ್ಮರಣ ಶಕ್ತಿ ಹೆಚ್ಚಳ

ಸ್ಮರಣ ಶಕ್ತಿ ಹೆಚ್ಚಳ

ನಿಮ್ಮ ಗ್ರಹಣ ಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಧ್ಯಾನವು ಹೆಚ್ಚಿಸುತ್ತದೆ. ಇದು ಮರೆವಿನ ಕಾಯಿಲೆಯನ್ನು ನಿವಾರಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಿತ್ಯವೂ ಯೋಗ ಮಾಡುವುದು ನಿಮ್ಮ ಗ್ರಹಣ ಶಕ್ತಿಯನ್ನು ಹೆಚ್ಚಿಸಿ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

English summary

10 Magical Health Benefits Of Meditation

Most people think that meditation is for holy men and spiritual gurus. However, meditation is not just a religious experience. You can say it is spiritual but it mainly a way to improve your health. There are several health benefits of meditation that you may not be aware of.
X
Desktop Bottom Promotion