For Quick Alerts
ALLOW NOTIFICATIONS  
For Daily Alerts

ಅನಿಯಮಿತವಾದ ಯೋನಿ ಸ್ರವಿಸುವಿಕೆಗೆ ಕಾರಣವಾಗುವ 10 ಬಗೆಯ ಜೀವನ ಶೈಲಿಗಳು

By deepak M
|

ಯೋನಿ ಸ್ರವಿಸುವಿಕೆಯು ಋತುಮತಿಯಾದ ನಂತರ ಪ್ರತಿಯೊಬ್ಬ ಹೆಂಗಸರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಸಾಮಾನ್ಯವಾಗಿ ಬಿಳಿಯ ಅಥವಾ ಮೋಡದಂತಹ ಬಿಳಿಯ, ಒಮ್ಮೊಮ್ಮೆ ಒಣಗಿದಾಗ ಹಳದಿ ಬಣ್ಣಕ್ಕೆ ತಿರುಗುವ ದ್ರವದ ರೂಪದಲ್ಲಿ ಕಂಡು ಬರುತ್ತದೆ. ಯೋನಿಯು ಸ್ರವಿಸುವಿಕೆಯು ದೇಹವನ್ನು ಶುದ್ಧವಾಗಿಡುವ ಸಲುವಾಗಿ ದೇಹವೇ ನಿರ್ವಹಿಸುವಂತಹ ಒಂದು ಕಾರ್ಯವಾಗಿದೆ. ಹಾಗಾಗಿ ಎಲ್ಲಾ ಹೆಂಗಸರಲ್ಲಿ ಇದು ಕಂಡು ಬರುತ್ತದೆ.

ಯೋನಿ ಸ್ರವಿಸುವಿಕೆಗೆ ಹಲವಾರು ಕಾರಣಗಳು ಇವೆ. ಆದರೆ ಅಧಿಕ ಸ್ರವಿಸುವಿಕೆಯ ಸಮಸ್ಯೆಗೆ ನಮ್ಮ ಜೀವನ ಶೈಲಿಯು ಪ್ರಮುಖ ಪಾತ್ರವನ್ನು ಬೀರುತ್ತದೆ. ಪ್ರತಿ ಹೆಂಗಸರಲ್ಲಿ ಈ ಸ್ರವಿಸುವಿಕೆಯ ಬಣ್ಣದಲ್ಲಿ, ಸ್ಥಿರತೆಯಲ್ಲಿ ಮತ್ತು ವಾಸನೆಯಲ್ಲಿ ಭಿನ್ನತೆ ಕಂಡು ಬರುತ್ತದೆ.

ವಯಸ್ಸಾದ ಹೆಂಗಸರಲ್ಲಿ ಯೋನಿಯ ಇನ್‍ಫೆಕ್ಷನ್ ಸಾಮಾನ್ಯ. ಯೋನಿಯ ಇನ್‍ಫೆಕ್ಷನ್ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಗಟ್ಟಿಯಾದ ಮತ್ತು ದುರ್ಗಂಧದಿಂದ ಕೂಡಿದ ದ್ರವ ಬಿಡುಗಡೆಯಾಗುವ ಮೂಲಕ ತಿಳಿಯುತ್ತದೆ. ಈ ಯೋನಿಯ ಸ್ರವಿಸುವಿಕೆಯ ಮೇಲೆ ಜೀವನ ಶೈಲಿಯು ಸಹ ಪ್ರಭಾವ ಬೀರುತ್ತದೆ. ಸ್ಥೂಲ ಕಾಯ , ಹವಾಮಾನ, ಆಲ್ಕೋಹಾಲ್ ಸೇವನೆ ಮತ್ತು ಆಂಟಿ ಬಯೋಟಿಕ್‍ಗಳ ಸೇವನೆಯು ಸಹ ಯೋನಿ ಸ್ರವಿಸುವಿಕೆಯ ಮೇಲೆ ಪ್ರಭಾವವನ್ನು ಬೀರುತ್ತವೆ. ಹಾಗಾದರೆ ಬನ್ನಿ ಯೋನಿಯ ಸ್ರವಿಸುವಿಕೆಗೆ ಕಾರಣವಾಗುವ ಜೀವನ ಶೈಲಿಗಳು ಯಾವುವು? ಎಂಬುದರ ಕುರಿತು ಒಮ್ಮೆ ಕಣ್ಣಾಯಿಸೋಣ:

ಗರ್ಭಾವಸ್ಥೆಯ ಸಂದರ್ಭದಲ್ಲಿ ಯೋನಿ ವಿಸರ್ಜನೆ ಬಗ್ಗೆ ಕೇಳಿದಿರಾ?

ಸಾಮಾನ್ಯ ಆರೋಗ್ಯ

ಸಾಮಾನ್ಯ ಆರೋಗ್ಯ

ಸಾಮಾನ್ಯ ಆರೋಗ್ಯವನ್ನು ಹೊಂದಿರುವ ಜೀವನ ಶೈಲಿಯು ತಾನೇ ತಾನಾಗಿ ಯೋನಿಯ ಸ್ರವಿಸುವಿಕೆಗೆ ಕಾರಣವಾಗುತ್ತದೆ. ಅದಕ್ಕಾಗಿ ನಿತ್ಯವೂ ಸರಿಯಾದ ಆಹಾರವನ್ನು ಸೇವಿಸುವುದು ಒಳ್ಳೆಯದು. ಇದರ ಜೊತೆಗೆ ಅಗತ್ಯವಾದ ನಿದ್ದೆಯನ್ನು ಸಹ ಮಾಡಬೇಕಾಗುತ್ತದೆ. ಇದರಿಂದ ಈ ಸಮಸ್ಯೆಯಿಂದ ದೂರವಿರಬಹುದು ಮತ್ತು ಮುಕ್ತಿಯನ್ನು ಹೊಂದಬಹುದು.

ಸ್ಥೂಲಕಾಯ

ಸ್ಥೂಲಕಾಯ

ಸ್ಥೂಲಕಾಯವು ಅನಿಯಮಿತವಾದ ಯೋನಿ ಸ್ರವಿಸುವಿಕೆಗೆ ಕಾರಣವಾಗುತ್ತದೆ. ತಙ್ಞರ ಪ್ರಕಾರ ನೀವು ಸ್ಥೂಲ ಕಾಯವನ್ನು ಹೊಂದಿದ್ದರೆ, ಸಹಜವಾಗಿ ಕಡಿಮೆ ಆಹಾರವನ್ನು ಸೇವಿಸುತ್ತೀರಿ. ಆಗ ನೀವು ಸೇವಿಸುವ ಆಹಾರ ಪದಾರ್ಥಗಳು ಕೆಟ್ಟ ವಾಸನೆಯನ್ನು ಹೊರ ಸೂಸುತ್ತವೆ.

ಗರ್ಭಿಣಿಯಾದಾಗ

ಗರ್ಭಿಣಿಯಾದಾಗ

ಗರ್ಭಿಣಿಯಾದಾಗ ದೇಹದಲ್ಲಿ ಕಂಡು ಬರುವ ಹಾರ್ಮೋನುಗಳ ಬದಲವಾಣೆಯಿಂದ ಅನಿಯಮಿತವಾದ ಯೋನಿ ಸ್ರವಿಸುವಿಕೆ ಕಂಡು ಬರುತ್ತದೆ. ಇದರ ಜೊತೆಗೆ ನೀವು ಸೇವಿಸುವ ಗರ್ಭ ನಿರೋಧಕಗಳು ಮತ್ತು ತೆಗೆದುಕೊಳ್ಳುವ ಸ್ಟಿರಾಯ್ಡ್‌ಗಳು ಸಹ ಯೋನಿಯ ಸ್ರವಿಸುವಿಕೆಗೆ ಕಾರಣವಾಗುತ್ತವೆ.

ಋತು ಚಕ್ರ

ಋತು ಚಕ್ರ

ಋತು ಚಕ್ರವು ಸಹ ಮಹಿಳೆಯರಲ್ಲಿ ಯೋನಿ ಸ್ರವಿಕೆಯಾಗುವ ಸಮಸ್ಯೆಯಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ.

ಹವಾಮಾನ

ಹವಾಮಾನ

ಅಧಿಕ ಉಷ್ಣಾಂಶವಿರುವ ಹವಾಮಾನ ಅಥವಾ ಗಾಳಿಯಾಡದ ಬಟ್ಟೆಗಳು, ವಿಶೇಷವಾಗಿ ಒಳ ಉಡುಪುಗಳು ಅಥವಾ ಜನನಾಂಗಗಳಲ್ಲಿ ಮೊಯಿಶ್ಚರ್ ಹೆಚ್ಚಿಸುವ, ಬೆಚ್ಚನೆಯ ಮತ್ತು ಬೆಳಕು ಸಹ ಆಡದಂತಹ ಬಟ್ಟೆಗಳು ಇಂತಹ ಪರಿಸ್ಥಿತಿಯಲ್ಲಿ ಯೋನಿಯಲ್ಲಿ ಅನಿಯಮಿತವಾಗಿ ಸ್ರವಿಸುವಿಕೆ ಕಂಡು ಬರುತ್ತದೆ.

ನಿರ್ದಿಷ್ಟ ಔಷಧಗಳು

ನಿರ್ದಿಷ್ಟ ಔಷಧಗಳು

ಮಹಿಳೆಯರಲ್ಲಿ ಅನಿಯಮಿತವಾದ ಯೋನಿ ಸ್ರವಿಸುವಿಕೆಗೆ ಕೆಲವೊಂದು ಔಷಧಿಗಳು ಸಹ ಕಾರಣವಾಗುತ್ತವೆ. ಕೆಲವೊಂದು ಔಷಧಿಗಳನ್ನು ಸೇವಿಸಿದಾಗ ದೇಹದಿಂದ ದುರ್ವಾಸನೆ ಹೊರ ಹೊಮ್ಮುವುದು ಸಹಜ. ಅಧಿಕ ಪ್ರಮಾಣದ ಕಾಯಿಲೆಗಳಿಗೆ ನೀಡುವ ಔಷಧಿಗಳು ಈ ವಿಭಾಗದಲ್ಲಿ ಬರುತ್ತವೆ. ಈ ಔಷಧಿಗಳನ್ನು ಸೇವಿಸಿದಾಗ ಅಧಿಕ ಪ್ರಮಾಣದಲ್ಲಿ ನೀರನ್ನು ಸೇವಿಸಿ, ಈ ಸಮಸ್ಯೆಯಿಂದ ಮುಕ್ತರಾಗಿ.

ಲೈಂಗಿಕ ಸಂಬಂಧಗಳು

ಲೈಂಗಿಕ ಸಂಬಂಧಗಳು

ಅನಿಯಮಿತವಾದ ಯೋನಿ ಸ್ರವಿಸುವಿಕೆಗೆ ಕಾರಣವಾಗುವ ಮತ್ತೊಂದು ಜೀವನ ಶೈಲಿಯೆಂದರೆ, ಸ್ವೇಚ್ಛೆಯಿಂದ ಕೂಡಿದ ಲೈಂಗಿಕ ಚಟುವಟಿಕೆಗಳು ಮತ್ತು ಸಂಬಂಧಗಳು. ಅಧಿಕ ಸಂಗಾತಿಗಳ ಜೊತೆಗೆ ಲೈಂಗಿಕ ಸಂಬಂಧವನ್ನು ಇರಿಸಿಕೊಳ್ಳುವುದರಿಂದ ಸ್ತ್ರೀ ಯೋನಿಯ ಇನ್‍ಫೆಕ್ಷನ್‍ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದು ಮುಂದೆ ಅನಿಯಮಿತವಾದ ಯೋನಿಯ ಸ್ರವಿಸುವಿಕೆಗೆ ಕಾರಣವಾಗುತ್ತದೆ.

ದೇಹದ ಇನ್‍ಫೆಕ್ಷನ್‍ಗಳು

ದೇಹದ ಇನ್‍ಫೆಕ್ಷನ್‍ಗಳು

ಒಂದು ವೇಳೆ ನಿಮಗೆ ವೈರಸ್ ಸೊಂಕು ಇದ್ದಲ್ಲಿ ಅಥವಾ ಜ್ವರವಿದ್ದಲ್ಲಿ, ಇದು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಇದು ಕೊನೆಗೆ ಯೋನಿಯಲ್ಲಿ ಅನಿಯಮಿತವಾದ ಸ್ರವಿಸುವಿಕೆಯನ್ನುಂಟು ಮಾಡುತ್ತದೆ. ಇದು ಈ ಸಮಸ್ಯೆಗೆ ಕಾರಣವಾಗುವ ಅತ್ಯಂತ ಪ್ರಧಾನ ಅಂಶವಾಗಿದೆ.

ಆಲ್ಕೋಹಾಲ್ ಸೇವನೆ

ಆಲ್ಕೋಹಾಲ್ ಸೇವನೆ

ಆಲ್ಕೋಹಾಲ್ ಸೇವನೆಯಿಂದ ಮಾರನೆ ದಿನ ದುರ್ವಾಸನೆಯು ನಿಮಗೆ ಉಡುಗೊರೆಯಾಗಿ ದೊರೆಯುತ್ತದೆ. ಸ್ವಲ್ಪ ಮುತುವರ್ಜಿಯಿಂದ ಗಮನಿಸಿದರೆ, ನಿಮ್ಮ ಮೂತ್ರವು ಸಹ ದುರ್ಗಂಧ ಬೀರುತ್ತಿರುವುದನ್ನು ನೀವು ಗಮನಿಸಬಹುದು. ಆದ್ದರಿಂದ ಇದು ಸಹ ನಿಮ್ಮ ಯೋನಿಯಲ್ಲಿ ಸ್ರವಿಸುವಿಕೆಗೆ ಕಾರಣವಾಗುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಮಧುಮೇಹ ರೋಗ

ಮಧುಮೇಹ ರೋಗ

ಮಧುಮೇಹ ರೋಗವನ್ನು ಹೊಂದಿರುವವರಲ್ಲಿ ನಸುಬಣ್ಣದಿಂದ ಕೂಡಿದ ಅಥವಾ ಬೆಳ್ಳುಳ್ಳಿಯ ವಾಸನೆಯಿಂದ ಕೂಡಿದ ಯೋನಿ ಸ್ರವಿಸುವಿಕೆಯನ್ನು ಕಾಣಬಹುದು. ಇದು ರೋಗಿಯು ಸೇವಿಸುವ ಔಷಧಿಗಳ ಸಲುವಾಗಿ ಕಂಡು ಬರುವ ಸಮಸ್ಯೆಯಾಗಿರುತ್ತದೆ.

English summary

10 Lifestyle Causes Of Abnormal Vaginal Discharge

Vaginal discharge is the secretion from the vagina which is common among all women after they reach puberty. All women have vaginal discharge which is the body's way of keeping the vagina healthy and clean. This discharge may differ in consistency, colour and smell in every woman.
X
Desktop Bottom Promotion