For Quick Alerts
ALLOW NOTIFICATIONS  
For Daily Alerts

ಹಸಿವನ್ನು ನಿಯಂತ್ರಿಸುವ 10 ಆರೋಗ್ಯಕಾರಿ ವಿಧಾನಗಳು

|

ಸ್ಥೂಲಕಾಯವನ್ನು ಹೊಂದಿರುವ ಜನರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ನಾನಾ ಪಡಿಪಾಟಲುಗಳನ್ನು ಪಡುತ್ತಾರೆ ಕಾರಣ ಅವರು ತಮ್ಮ ತಿನ್ನುವ ಚಪಲವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಯಾವಾಗ ಒಬ್ಬ ವ್ಯಕ್ತಿಯು ಹೊಟ್ಟೆ ಹಸಿವಿನ ಅನುಭವವನ್ನು ಪಡೆಯುತ್ತಾನೋ, ಆಗ ಅವನು ತನ್ನ ಸುತ್ತ-ಮುತ್ತ ಸಿಗುವ ಅನಾರೋಗ್ಯಕರವಾದ ತಿಂಡಿಗಳನ್ನು ತಿನ್ನಲು ಶುರು ಮಾಡುತ್ತಾನೆ.

ಆದರೆ ತೂಕ ಇಳಿಸಿಕೊಳ್ಳುವ ನೀತಿ ಏನನ್ನು ಹೇಳುತ್ತದೆ. ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಬಯಸಿದಲ್ಲಿ, ನಿಮ್ಮ ಅವಶ್ಯಕತೆಗಿಂತ ಕಡಿಮೆ ತಿನ್ನಿ ಎಂದು ಹೇಳುತ್ತದೆ. ಅದನ್ನು ಬಿಟ್ಟು ನಿಮ್ಮ ಪಾಡಿಗೆ ನೀವು ಉಪವಾಸ ಕುಳಿತುಕೊಳ್ಳುವ ಕೆಟ್ಟ ಆಲೋಚನೆಯನ್ನು ಕೈಗೆತ್ತಿಕೊಳ್ಳಬೇಡಿ.

ಒಂದು ವೇಳೆ ನೀವು ಆರೋಗ್ಯಕಾರಿ ಮಾರ್ಗದಲ್ಲಿ ಕಡಿಮೆ ಆಹಾರವನ್ನು ಸೇವಿಸಲು ಆರಂಭಿಸಿದರೆ, ನಿಮಗೆ ಎಂದಿಗು ಹೊಟ್ಟೆಯು ತುಂಬಾ ಹಸಿಯುವುದಿಲ್ಲ. ಏಕೆಂದರೆ ನೀವು ಪ್ರಜ್ಞಾಪೂರ್ವಕವಾಗಿ ಕಡಿಮೆ ಆಹಾರವನ್ನು ಸೇವಿಸುತ್ತಿಲ್ಲ, ಬದಲಿಗೆ ನೀವು ಹೊಟ್ಟೆ ಹಸಿವನ್ನು ಸ್ವಾಭಾವಿಕವಾಗಿ ಕಡಿಮೆ ಮಾಡಲು ಬೇಕಾದ ಮಾರ್ಗಗಳನ್ನು ಅನುಸರಿಸುತ್ತಿದ್ದೀರಿ.

ಒಮ್ಮೆ ನೀವು ಈ ಮಾರ್ಗಗಳನ್ನು ಅನುಸರಿಸಲು ಆರಂಭಿಸಿದ ಮೇಲೆ ಗಮನಿಸಿ, ನೀವು ಸಹಜವಾಗಿ ಸೇವಿಸುವುದಕ್ಕಿಂತ ಕಡಿಮೆ ಆಹಾರವನ್ನು ಸೇವಿಸುವಿರಿ, ಅದೂ ನಿಮ್ಮ ಆರೋಗ್ಯದಲ್ಲಿ ಏರು ಪೇರಾಗದಂತೆ ಜಾಗರೂಕತೆಯನ್ನು ಸಹ ನೀವು ಇದರಲ್ಲಿ ಹೊಂದಿರುವಿರಿ. ಕಡಿಮೆ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಕಡಿಮೆ ಕ್ಯಾಲೋರಿಗಳು ದೊರೆಯುತ್ತವೆ. ಇದರಿಂದ ಆರೋಗ್ಯದಲ್ಲಿ ಏರು ಪೇರು ಆಗದಿರಲು ಕೆಲವೊಂದು ತಂತ್ರಗಳು ಅತ್ಯಾವಶ್ಯಕ, ಅದನ್ನೇ ನಾವು ಇಲ್ಲಿ ನಿಮಗೆ ನೀಡುತ್ತಿದ್ದೇವೆ, ಓದಿಕೊಳ್ಳಿ.....

ಚೆನ್ನಾಗಿ ನೀರು ಕುಡಿಯಿರಿ

ಚೆನ್ನಾಗಿ ನೀರು ಕುಡಿಯಿರಿ

ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಹೀಗೆ ಸದಾ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಹೊಟ್ಟೆ ಹಸಿಯುವುದಿಲ್ಲ.

ಪ್ರತಿಯೊಂದಕ್ಕು ಚಕ್ಕೆಯನ್ನು ಹಾಕಿ

ಪ್ರತಿಯೊಂದಕ್ಕು ಚಕ್ಕೆಯನ್ನು ಹಾಕಿ

ಚಕ್ಕೆಯು ಒಂದು ಆರೋಗ್ಯಕರವಾದ ಮಸಾಲೆ ಪದಾರ್ಥವಾಗಿದೆ. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ನಿಯಂತ್ರಣದಲ್ಲಿಡುತ್ತದೆ. ಇದರರ್ಥ ನಿಮ್ಮ ಜೀರ್ಣಕ್ರಿಯೆಯು ನಿಧಾನಗೊಳ್ಳುತ್ತದೆ ಮತ್ತು ನೀವು ತುಂಬಾ ಹೊತ್ತಿನವರೆಗೆ ಹೊಟ್ಟೆ ಹಸಿಯದಂತೆ ಕಾಲ ಕಳೆಯಬಹುದು.

ನಿಧಾನವಾಗಿ ತಿನ್ನಿ

ನಿಧಾನವಾಗಿ ತಿನ್ನಿ

ನೀವು ಬೇಗ ತಿನ್ನಲು ತೊಡಗಿದರೆ ಬಹು ಬೇಗ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗು ಅಷ್ಟೇ ಬೇಗ ನಿಮ್ಮ ಹೊಟ್ಟೆಯು ಹಸಿಯಲು ಆರಂಭಿಸುತ್ತದೆ. ಆದ್ದರಿಂದ ಆಹಾರ ಸೇವಿಸುವಾಗ ನಿಧಾನವಾಗಿ ಸೇವಿಸಿ. ಇದರಿಂದ ಆಹಾರದ ರುಚಿ ಇನ್ನಷ್ಟು ಸೊಗಸಾಗಿರುತ್ತದೆ ಮತ್ತು ಹೊಟ್ಟೆಯು ನಿಧಾನವಾಗಿ ಹಸಿಯುತ್ತದೆ.

ಜ್ಯೂಸ್‍ಗಳ ಬದಲಿಗೆ ಹಣ್ಣು ಸೇವಿಸಿ

ಜ್ಯೂಸ್‍ಗಳ ಬದಲಿಗೆ ಹಣ್ಣು ಸೇವಿಸಿ

ಒಂದು ವೇಳೆ ನಿಮಗೆ ಹಸಿವಾದಾಗ ಹಣ್ಣುಗಳನ್ನು ಸೇವಿಸುವ ಅಭ್ಯಾಸವಿದ್ದಲ್ಲಿ, ಜ್ಯೂಸ್ ಸೇವಿಸುವ ಬದಲು ಹಣ್ಣುಗಳನ್ನೆ ಸೇವಿಸಿ. ಹಣ್ಣಿನ ರಸಗಳು ದ್ರಾವಣವಾಗಿದ್ದು, ಅವುಗಳಲ್ಲಿ ನಾರಿನಂಶವಿರುವುದಿಲ್ಲ. ಇವು ಬೇಗ ಜೀರ್ಣವಾಗುತ್ತವೆ. ಆದರೆ ಅದೇ ಹಣ್ಣನ್ನು ನೀವು ನೇರವಾಗಿ ಸೇವಿಸುವುದರಿಂದ, ಅದೇ ಪ್ರಮಾಣದ ಕ್ಯಾಲೋರಿಗಳು ನಿಮಗೆ ದೊರೆಯುವುದರ ಜೊತೆಗೆ, ತುಂಬಾ ಹೊತ್ತು ಹೊಟ್ಟೆ ಹಸಿಯುವುದಿಲ್ಲ.

ಸಕ್ಕರೆ ಬೇಡ ಎನ್ನಿ

ಸಕ್ಕರೆ ಬೇಡ ಎನ್ನಿ

ಸಕ್ಕರೆಯು ನಿಮಗೆ ತಕ್ಷಣಕ್ಕೆ ಅಧಿಕ ಮತ್ತು ಕಡಿಮೆ ಪ್ರಮಾಣದ ಅಂಕಗಳನ್ನು ನೀಡುತ್ತದೆ, ರಕ್ತದಲ್ಲಿ!!!. ಯಾವಾಗ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವು ಕಡಿಮೆಯಾಗುತ್ತದೆಯೋ, ಆಗ ನಿಮಗೆ ಹಸಿವೆ ಆಗುತ್ತದೆ. ಆದ್ದರಿಂದಲೇ ಹೇಳುವುದು

ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಎಲ್ಲಕ್ಕೂ ನಾರಿನಂಶ

ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಎಲ್ಲಕ್ಕೂ ನಾರಿನಂಶ

ಹೌದು ಇದೀಗ ಸಮಯ ಬಂದಿದೆ ಊಟ ಕಡಿಮೆ ಮಾಡಲು ಮತ್ತು ನಾರಿನಂಶವನ್ನು ಜೀರ್ಣ ಮಾಡಿಕೊಳ್ಳಲು. ಏಕೆಂದರೆ, ಯಾವಾಗ ನೀವು ಡಯಟೆರಿ ಫೈಬರ್ ಅಂದರೆ ನಾರಿನಂಶವನ್ನು ಹೊಂದಿರುವ ಆಹಾರವನ್ನು ಸೇವಿಸುತ್ತೀರೋ, ಆಗ ನಿಮ್ಮ ಹೊಟ್ಟೆ ತುಂಬಾ ಹೊತ್ತು ಹಸಿಯುವುದಿಲ್ಲ.

ಕಾಫಿ ಮತ್ತು ಟೀಗಳನ್ನು ಸೇವಿಸುವುದು

ಕಾಫಿ ಮತ್ತು ಟೀಗಳನ್ನು ಸೇವಿಸುವುದು

ಕಾಫಿ ಮತ್ತು ಟೀಗಳು ನಿಮ್ಮ ಹಸಿವನ್ನು ಹತ್ತಿಕ್ಕುತ್ತವೆ. ನೀವು ಆಗಾಗ ಕಾಫಿ ಮತ್ತು ಟೀಗಳನ್ನು ಸೇವಿಸುತ್ತಿದ್ದರೆ, ನಿಮಗೆ ಹಸಿವೆ ಆಗುವುದಿಲ್ಲ. ನಿಮಗೆ ಕಾಫಿ ಅಥವಾ ಟೀ ಇಷ್ಟವಾಗದಿದ್ದಲ್ಲಿ, ಸ್ವಲ್ಪ ಸಕ್ಕರೆಯಂಶವಿರುವ ಯಾವುದಾದರು ಪಾನೀಯಗಳನ್ನು ಸೇವಿಸುತ್ತ ಇರಿ, ಆಗ ಹಸಿವೆಯು ನಿಮ್ಮನ್ನು ಕಾಡುವುದಿಲ್ಲ.

ಪ್ರೋಟೀನ್ ಡಯಟ್

ಪ್ರೋಟೀನ್ ಡಯಟ್

ಕೋಳಿ ಮಾಂಸ ಅಥವಾ ಕುರಿ ಮಾಂಸದಂತಹ ನೇರ ಪ್ರೋಟಿನ್ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸಿ. ಇವುಗಳನ್ನು ಗ್ರಿಲ್ ಅಥವಾ ಬೇಯಿಸಿದ ರೂಪದಲ್ಲಿ ಸೇವಿಸಿ. ನಾವು ಮನುಷ್ಯರು ನಮಗೆ ಇತರೆ ಪ್ರಾಣಿಗಳಿಗಿಂತ ಹೆಚ್ಚಿನ ಪ್ರೋಟೀನ್ ಸೇವಿಸುವ ಸಾಮರ್ಥ್ಯವಿರುತ್ತದೆ. ಕೋಳಿ ಸಾರಿನ ಜೊತೆಗೆ ಎರಡು ಬಟ್ಟಲು ಅನ್ನ ತಿಂದ ಮೇಲೆಯೂ ಮತ್ತೂ ಸ್ವಲ್ಪ ಬೇಕು ಎಂಬ ಆಸೆ ಪಡುವಷ್ಟರ ಮಟ್ಟಿಗೆ ನಿಮ್ಮ ಸಾಮರ್ಥ್ಯ ಇರುತ್ತದೆ. ಆದರೆ ಗ್ರಿಲ್ ಮಾಡಲಾದ ಕೋಳಿ ಮಾಂಸದ ಎದೆ ಭಾಗ ಮತ್ತು ತರಕಾರಿಗಳು ನಿಮ್ಮ ಹೊಟ್ಟೆಯನ್ನು ತುಂಬಿಸಬಲ್ಲವು.

ಸಣ್ಣ ಪ್ರಮಾಣದ ಊಟಗಳನ್ನು ಮಾಡಿ

ಸಣ್ಣ ಪ್ರಮಾಣದ ಊಟಗಳನ್ನು ಮಾಡಿ

ದಿನಕ್ಕೆ ಮೂರು ಬಾರಿ ದೊಡ್ಡ ಪ್ರಮಾಣದ ಊಟ ಮಾಡುವುದರ ಬದಲಿಗೆ, 6-8 ಸಣ್ಣ ಪ್ರಮಾಣದ ಊಟ ಮಾಡಿ. ಹೀಗೆ ಸಣ್ಣ ಪ್ರಮಾಣದ ಊಟವನ್ನು ಮಾಡುವುದರಿಂದ ನಿಮ್ಮ ಹೊಟ್ಟೆಯು ಹಸಿಯುವುದಿಲ್ಲ.

ಉಪಾಹಾರ ಸೇವಿಸುವುದನ್ನು ಮರೆಯಬೇಡಿ

ಉಪಾಹಾರ ಸೇವಿಸುವುದನ್ನು ಮರೆಯಬೇಡಿ

ವೈಜ್ಞಾನಿಕವಾಗಿ ಸಾಭೀತಾದ ವಿಚಾರವೇನೆಂದರೆ, ನಾವು ಯಾವುದೇ ಕಾರಣಕ್ಕು ಉಪಾಹಾರವನ್ನು ಸೇವಿಸುವುದನ್ನು ಮರೆಯಬಾರದು. ಏಕೆಂದರೆ ಉಪಾಹಾರವು ನಿಮ್ಮ ಹೊಟ್ಟೆಯನ್ನು ದಿನವಿಡೀ ತುಂಬಿರುವಂತೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಒಂದು ವೇಳೆ ನೀವು ಉಪಾಹಾರ ಸೇವಿಸದೆ ಇದ್ದಲ್ಲಿ, ಮಧ್ಯಾಹ್ನ ಊಟವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತೀರಿ.

English summary

10 Healthy Ways To Reduce Hunger

People have a big problem with losing weight because they cannot reduce their hunger. When a person is hungry, he or she tends to munch on the unhealthiest of things. If you can get to reduce your hunger naturally, then you will end up eating less naturally.
Story first published: Friday, October 24, 2014, 9:27 [IST]
X
Desktop Bottom Promotion