For Quick Alerts
ALLOW NOTIFICATIONS  
For Daily Alerts

ಬಾಳೆಹಣ್ಣನ್ನು ತಿನ್ನಲು ಹತ್ತು ಕಾರಣಗಳು

By Arpitha Rao
|

ಆರೋಗ್ಯದ ವಿಷಯದಲ್ಲಿ ಬಾಳೆಹಣ್ಣನ್ನು ಸೋಲಿಸಲು ಯಾವುದರಿಂದಲೂ ಸಾಧ್ಯವಿಲ್ಲ.ಬಾಳೆಹಣ್ಣು ತುಂಬಾ ರುಚಿಕರ, ಕಡಿಮೆ ಬೆಳಯಲ್ಲಿ ವರ್ಷಪೂರ್ತಿ ದೊರೆಯುವ ಹಣ್ಣು ಇದು. ಕೇವಲ ಬಾಳೆಹಣ್ಣು ಮಾತ್ರವಲ್ಲ, ಬಾಳೆಹೂವು, ಬಾಳೆದಿಂಡು, ಬಾಳೆಎಲೆ ಹೀಗೆ ಎಲ್ಲವೂ ಉಪಯೋಗಕರ.

ಬಾಳೆಹಣ್ಣಿನ ಹತ್ತು ಹಲವು ಉಪಯೋಗಗಳು

ಬಾಳೆಎಲೆ ತಟ್ಟೆಯ ಬದಲಾಗಿ ಅಥವಾ ಖಾದ್ಯ ಬೇಯಿಸಲು ಬಳಸಿದರೂ ಕೂಡ ಇದರ ಹಣ್ಣು ಎಲ್ಲರಿಗೂ ಪ್ರಿಯ,ಬಾಳೆಹಣ್ಣು ಸಲಾಡ್,ರಸಾಯನ ಹೀಗೆ ವಿವಿಧ ರೀತಿಯಲ್ಲಿ ಅಡುಗೆಗೆ ಬಳಸಬಹುದು. ಬಾಳೆ ಹೂವು ಮತ್ತು ಬಾಳೆದಿಂಡು ದಕ್ಷಿಣ ಭಾರತದಲ್ಲಿ ವಿವಿಧ ಅಡುಗೆ ತಯಾರಿಸಲು ಬಳಸಲಾಗುತ್ತದೆ. ಅದರಲ್ಲೂ ಬಾಳೆಹಣ್ಣಿನ ಹಲ್ವಾ ಎಲ್ಲೆಡೆ ಜನಪ್ರಿಯ.ಬಾಳೆಹಣ್ಣು ಕಾರ್ಬೋಹೈಡ್ರೇಟ್,ನಾರಿನಂಶ,ವಿಟಮಿನ್ ಬಿ6,ಖನಿಜಾಂಶಗಳಾದ ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್ ಗಳನ್ನು ಹೇರಳವಾಗಿ ಒಳಗೊಂಡಿದೆ.

ಈ ಕೆಳಗೆ ನಾವು ಬಾಳೆಹಣ್ಣಿನಿಂದಾಗುವ ಹತ್ತು ಆರೋಗ್ಯಕರ ಉಪಯೋಗಗಳನ್ನು ನೀಡಿದ್ದೇವೆ.

ಶಕ್ತಿ ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ತಿನ್ನಿ

ಶಕ್ತಿ ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ತಿನ್ನಿ

ಸರಾಸರಿ ೧೦೫ ರಷ್ಟು ಕ್ಯಾಲೋರಿ ಹೊಂದಿರುವ ಬಾಳೆಹಣ್ಣು ಶಕ್ತಿ ಒದಗಿಸಲು ಅತಿ ಹೆಚ್ಚು ಸಹಾಯಕ.ವರ್ಕ್ ಔಟ್ ಮಾಡಿದ ನಂತರ ಬಾಳೆಹಣ್ಣು ತಿನ್ನುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.ವರ್ಕ್ ಔಟ್ ನಂತರ ಬಲವನ್ನು ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ಸಹಕರಿಸುತ್ತದೆ.

ಆರೋಗ್ಯ ಉತ್ತಮಪಡಿಸುವಲ್ಲಿ ನುಗ್ಗೆ ಸೊಪ್ಪಿನ ಮಹತ್ವ

ಸ್ನಾಯುಸೆಳೆತದ ವಿರುದ್ಧ ಹೋರಾಡುತ್ತದೆ :-

ಸ್ನಾಯುಸೆಳೆತದ ವಿರುದ್ಧ ಹೋರಾಡುತ್ತದೆ :-

ರಾತ್ರಿ ಮಲಗಿದಾಗ ಇದ್ದಕ್ಕಿದ್ದಂತೆ ಕಾಲುನೋವು,ಸೆಳೆತ ಎಚ್ಚರಿಸುತ್ತಿದೆಯೇ? ಅಥವಾ ಅಧಿಕ ಕೆಲಸದಿಂದ ಸ್ನಾಯು ಸೆಳೆತ ಅನುಭವಿಸುತ್ತಿದ್ದೀರಾ? ಬಾಳೆಹಣ್ಣು ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಹುದು.ಇದು ಸ್ನಾಯು ಸೆಳೆತವನ್ನು ತಡೆಯುತ್ತದೆ.ಬಾಳೆಹಣ್ಣಿನಲ್ಲಿರುವ ಮ್ಯಾಗ್ನಿಶಿಯಂ ಮತ್ತು ಪೊಟ್ಯಾಷಿಯಂ ಅಂಶ ದೇಹಕ್ಕೆ ಅಗತ್ಯ ಖನಿಜಾಂಶಗಳನ್ನು ಒದಗಿಸುತ್ತದೆ.ಇದು ಸ್ನಾಯುಗಳಿಗೆ ವಿರಾಮ ಒದಗಿಸಿ ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ.

ರಕ್ತದೊತ್ತಡ ಸಮತೋಲನದಲ್ಲಿಡುತ್ತದೆ:-

ರಕ್ತದೊತ್ತಡ ಸಮತೋಲನದಲ್ಲಿಡುತ್ತದೆ:-

ಬಾಳೆಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆ ಇದ್ದು ಪೊಟ್ಯಾಷಿಯಂ ಅಂಶ ಅಧಿಕವಾಗಿದೆ,ಇದು ರಕ್ತದೊತ್ತಡ ಸಮತೋಲನದಲ್ಲಿ ಇಡಲು ಸಹಕಾರಿ.ಇದು ದೇಹಕ್ಕೆ ಬೇಕಾದ ನೀರಿನಂಶ ಒದಗಿಸಿ ಹೃದಯಾಘಾತ,ಮೂರ್ಚೆ ಹೊಂದುವುದನ್ನು ತಪ್ಪಿಸುತ್ತದೆ.

ಅಸಿಡಿಟಿ ಕಡಿಮೆ ಮಾಡುತ್ತದೆ :-

ಅಸಿಡಿಟಿ ಕಡಿಮೆ ಮಾಡುತ್ತದೆ :-

ಬಾಳೆಹಣ್ಣು ಅಸಿಡಿಟಿಗೆ ಪರಿಣಾಮಕಾರಿ ಮದ್ದು.ಇದು ಹೊಟ್ಟೆಯ ಒಳಪದರವನ್ನು ಹತೋಟಿಯಲ್ಲಿಟ್ಟು ಅಸಿಡಿಟಿ ಮತ್ತು ಅಲ್ಸರ್ ಆಗದಿರುವಂತೆ ತಡೆಯುತ್ತದೆ.

ಮಲಬದ್ದತೆ ತಡೆಯುತ್ತದೆ :-

ಮಲಬದ್ದತೆ ತಡೆಯುತ್ತದೆ :-

ಬಾಳೆಹಣ್ಣು ಮತ್ತು ಬಾಳೆದಿಂಡು ಎರಡರಲ್ಲೂ ನಾರಿನಂಶವಿದ್ದು ಇದು ಚಯಾಪಚಯ ಕ್ರಿಯೆ ಹೆಚ್ಚಿಸಿ ಮಲಬದ್ದತೆಯನ್ನು ಹೋಗಲಾಡಿಸುತ್ತದೆ. ಬಾಳೆದಿಂಡಿನಿಂದ ಮಾಡಿದ ಜ್ಯೂಸ್ ಅನ್ನು ಕೂಡ ನೀವು ಆಗಾಗ ಕುಡಿಯಬಹುದು.

ಬೇಧಿ ನಂತರ ಬೇಗ ಮೊದಲಿನಂತಾಗಲು ಸಹಕರಿಸುತ್ತದೆ:-

ಬೇಧಿ ನಂತರ ಬೇಗ ಮೊದಲಿನಂತಾಗಲು ಸಹಕರಿಸುತ್ತದೆ:-

ಡಯೇರಿಯ ಅನುಭವಿಸಿದ್ದೀರ ? ಡಯೇರಿಯ ನಿಮ್ಮ ದೇಹದ ನೀರಿನಂಶವನ್ನು ಕಡಿಮೆ ಮಾಡಿಬಿಟ್ಟಿರುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಪೊಟ್ಯಾಷಿಯಂ ಅಂಶ ದೇಹಕ್ಕೆ ಒದಗಿ ಪುನಃ ಚೇತರಿಸಿಕೊಳ್ಳಲು ಸಹಕರಿಸುತ್ತದೆ.

ನೈಸರ್ಗಿಕವಾಗಿ ಪ್ರೋಬಯಾಟಿಕ್ ಪರಿಣಾಮ ಪಡೆಯಿರಿ :-

ನೈಸರ್ಗಿಕವಾಗಿ ಪ್ರೋಬಯಾಟಿಕ್ ಪರಿಣಾಮ ಪಡೆಯಿರಿ :-

probiotic effect of fructooligosaccharides (FOS)ಬಾಳೆಹಣ್ಣಿನಿಂದ ದೊರೆಯುತ್ತದೆ.ದೇಹದಲ್ಲಿ ಬ್ಯಾಕ್ಟೀರಿಯ ಕಡಿಮೆ ಮಾಡಿ ಗ್ಯಾಸ್ಟ್ರಿಕ್ ತೊಂದರೆಯನ್ನು ತಪ್ಪಿಸುತ್ತದೆ.ಇದು ನಿಮ್ಮ ಮೂಳೆಗಳ ಆರೋಗ್ಯಕ್ಕೂ ಕೂಡ ಸಹಾಯಕ.ಇದರಲ್ಲಿರುವ FOS ಅಂಶ PH ಮಟ್ಟವನ್ನು ಕಡಿಮೆ ಮಾಡಿ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಒದಗಿಸಿ ಮೂಳೆಗಳನ್ನು ಬಲಯುತವಾಗಿ ಮಾಡುತ್ತದೆ.ದೇಹದಿಂದ ದ್ರವಗಳನ್ನು ತೆಗೆದುಹಾಕಲು ಬಾಳೆದಿಂಡು ಸಹಾಯಕ.ಜೊತೆಗೆ ದೇಹದ ಕಲ್ಮಶವನ್ನು ಹೋಗಲಾಡಿಸಿ,ಕಿಡ್ನಿ ಕಲ್ಲನ್ನು ಹೋಗಲಾಡಿಸಲು ಕೂಡ ಇದು ಸಹಕರಿಸುತ್ತದೆ.ಬಾಳೆದಿಂಡು ಕಲ್ಲನ್ನು ಕರಗಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ.

ಸರಿಯಾದ ನಿದ್ದೆ ಪಡೆಯಿರಿ:-

ಸರಿಯಾದ ನಿದ್ದೆ ಪಡೆಯಿರಿ:-

ಮಲಗುವ ಮೊದಲು ಬಾಳೆಹಣ್ಣು ತಿಂದರೆ ಸರಿಯಾದ ನಿದ್ದೆ ಪಡೆಯಲು ಸಹಾಯಕ.ಟ್ರಿಪ್ಟೊಫಾನ್ ಅಂಶ ಸೆರೋಟೋನಿನ್ ಆಗಿ ಪರಿವರ್ತಿತಗೊಂಡು ನಿದ್ರೆ ಬರಲು ಸಹಕರಿಸುತ್ತದೆ.ಇದು ನಿಮ್ಮ ಮೂಡ್ ಬದಲಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕ ಎನ್ನಲಾಗುತ್ತದೆ.

ಹೊಳೆಯುವ ಚರ್ಮ ಪಡೆಯಿರಿ :-

ಹೊಳೆಯುವ ಚರ್ಮ ಪಡೆಯಿರಿ :-

ಸರಿಯಾದ ನಿದ್ದೆ ಒದಗಿಸುವುದರ ಜೊತೆಗೆ ಬಾಳೆಹಣ್ಣು ಸೌಂದರ್ಯವರ್ಧಕವಾಗಿ ಕೂಡ ಸಹಕರಿಸುತ್ತದೆ. ಬಾಳೆಹಣ್ಣಿನ ಮಾಸ್ಕ್ ಬಳಸುವುದರಿಂದ ತ್ವಚೆ ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ.ಒಣಗಿದ ಚರ್ಮ ಹೊಂದಿದವರಿಗೆ ಮೋಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

ಲೈಂಗಿಕತೆ ಹೆಚ್ಚಿಸುತ್ತದೆ :-

ಲೈಂಗಿಕತೆ ಹೆಚ್ಚಿಸುತ್ತದೆ :-

ಶಿಶ್ನದ ಆಕಾರ ಹೊಂದಿರುವ ಬಾಳೆಹಣ್ಣು ಲೈಂಗಿಕ ಆಸಕ್ತಿ ಹೆಚ್ಚಲು ಸಹಕಾರಿ ಎನ್ನಲಾಗುತ್ತದೆ. ಇದು ಕೇವಲ ಆಕಾರದಿಂದ ಮಾತ್ರವಲ್ಲ.ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶ ಲೈಂಗಿಕ ಹಾರ್ಮೋನನ್ನು ಎಚ್ಚರಿಸುತ್ತದೆ.ಇದು ಸೆರೋಟೋನಿನ್ ಅನ್ನು ಬಿಡುಗಡೆ ಮಾಡಿ ಸಂಭೋಗದ ನಂತರ ಭ್ರಮಾದೀನ ಭಾವನೆ ನೀಡುತ್ತದೆ.

English summary

10 healthy reasons to go bananas!

When it comes to health benefits, bananas are difficult to beat. They are delicious, cheap, available throughout the year and almost every part of a banana tree is useful – be it the leaves, flowers , fruit or the stem.
Story first published: Tuesday, May 6, 2014, 11:56 [IST]
X
Desktop Bottom Promotion