For Quick Alerts
ALLOW NOTIFICATIONS  
For Daily Alerts

ಭಾರತೀಯ ಹಸಿಮೆಣಸಿನ 10 ಪ್ರಯೋಜನಗಳು ನಿಮಗೆ ಗೊತ್ತೇ?

|

ಹೆಚ್ಚಾಗಿ ಹಸಿಮೆಣಸಿನ ಬಗೆಗೆ ನಾವು ಮಾತನಾಡುವಾಗ ಬೇರೆ ಪ್ರಕಾರದ ಹಸಿಮೆಣಸುಗಳು ನಮ್ಮ ಮನದಲ್ಲಿ ಬಂದು ಹೋಗುತ್ತವೆ. ಮತ್ತು ಅದರ ಖಾರ ಕೂಡ ನಾಲಗೆಯಲ್ಲಿ ಅದರ ನೆನಪನ್ನು ಉಳಿಸುವಂತಹ ಘಟನೆ ಮನದಲ್ಲಿ ಹಾದುಹೋಗುತ್ತದೆ.

ಬೆಲ್ ಪೆಪ್ಪರ್ಸ್ ಅಥವಾ ಕ್ಯಾಪ್ಸಿಕಂ ಸೂಪರ್ ಫುಡ್‌ಗಳಾಗಿದ್ದು ಉತ್ಕರ್ಷಣ ನಿರೋಧಿ ಅಂಶಗಳಿಂದ ಕೂಡಿವೆ. ಆದರೆ ನಮ್ಮ ಅಡುಗೆಯಲ್ಲಿ ಬಳಸಲಾಗುವ ಸಾಮಾನ್ಯ ಹಸಿಮೆಣಸಿನ ಬಗೆಗೂ ನೀವು ತಿಳಿಯದ ಕೆಲವೊಂದು ಆರೋಗ್ಯ ಪ್ರಯೋಜನಗಳಿದ್ದು ಅದನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಉದ್ದಿನ ಬೇಳೆಯಲ್ಲಿರುವ ಅದ್ಭುತ ಗುಣಗಳು!

ನೀವು ಸೇವಿಸುವ ಸಾಮಾನ್ಯ ಹಸಿಮೆಣಸುಗಳು ಕೂಡ ಕೆಲವೊಂದು ಅತ್ಯಾಕರ್ಷಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಅವುಗಳಿಂದ ನಮಗುಂಟಾಗುವ ಪ್ರಯೋಜನಗಳು ಹಲವಾರು. ಇದನ್ನು ಸೇವಿಸುವುದರಿಂದ ಬೇರೆ ಮೆಣಸಿನ ಹುಡಿಗಳನ್ನು ಅಡುಗೆಗೆ ಬಳಸಬೇಕಾದ ಅಗತ್ಯವನ್ನು ಉಂಟು ಮಾಡುವುದಿಲ್ಲ.

ಹಸಿಮೆಣಸುಗಳು ಖಾರ ಗುಣವನ್ನು ಹೊಂದಿದ್ದು ಖಾದ್ಯವನ್ನು ಸೇವಿಸುವಾಗ ಹಸಿಯಾಗಿ ಅದನ್ನು ಸೇವಿಸಬೇಕು. ಊಟಕ್ಕೆ ರುಚಿಯನ್ನು ಹೆಚ್ಚಿಸುವ ಈ ಹಸಿಮೆಣಸು ಕಾಲಕಳೆದಂತೆ ಕ್ರಮೇಣ ಕೆಂಪನೆ ಬಣ್ಣಕ್ಕೆ ತಿರುಗುತ್ತವೆ ಮತ್ತು ಅದರ ಸತ್ವ ನಾಶವಾಗುತ್ತದೆ.

ಇಲ್ಲಿ ನೀಡಿರುವ ಹಸಿಮೆಣಸಿನ ಕೆಲವೊಂದು ಅಭೂತಪೂರ್ವ ಪ್ರಯೋಜನಗಳು ನಿಮ್ಮಲ್ಲಿ ಆಶ್ಚರ್ಯವನ್ನುಂಟು ಮಾಡುವುದು ಖಂಡಿತ. ಮುಂದೆ ಓದಿ ಅವುಗಳು ಏನು ಎಂಬುದನ್ನು ತಿಳಿದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತೂಕ ಇಳಿಸಲು 7 ದಿನದ ಕ್ರ್ಯಾಶ್ ಡಯೆಟ್ ಯೋಜನೆ

ಕ್ಯಾನ್ಸರ್ ವಿರುದ್ಧ ಸುರಕ್ಷೆ

ಕ್ಯಾನ್ಸರ್ ವಿರುದ್ಧ ಸುರಕ್ಷೆ

ಹಸಿಮೆಣಸಿನಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು ಹೇರಳವಾಗಿದ್ದು ದೇಹದ ದ್ವಾರಪಾಲಕರಂತೆ ಅವು ಕಾರ್ಯನಿರ್ವಹಿಸುತ್ತವೆ. ಕ್ಯಾನ್ಸರ್ ಅನ್ನು ಉಂಟು ಮಾಡುವ ಮುಕ್ತ ರಾಡಿಕಲ್ ಹಾನಿಯನ್ನು ನಿಮ್ಮ ದೇಹದ ವಿರುದ್ಧ ಅವುಗಳು ತಡೆಯುತ್ತವೆ. ಮತ್ತು ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನವಾಗಿಸುವ ಗುಣ ಕೂಡ ಹಸಿಮೆಣಸಿಗಿದೆ.

ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ:

ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ:

ವಿಟಮಿನ್ ಸಿ ಹೇರಳವಾಗಿರುವುದು ಹಸಿಮೆಣಸುಗಳಲ್ಲಿ ಕಂಡುಬರುವ ಇನ್ನೊಂದು ಅಂಶವಾಗಿದೆ. ನಿಮ್ಮ ಕಟ್ಟಿದ ಮೂಗಿನ ಹೊಳ್ಳೆಗಳನ್ನು ತೆರವುಗೊಳಿಸವಲ್ಲಿ ಹಸಿಮೆಣಸು ಸಹಾಯಕ. ಮತ್ತು ದೇಹಕ್ಕೆ ಹಾನಿ ಉಂಟುಮಾಡುವ ರೋಗಗಳನ್ನು ಬಗ್ಗುಬಡಿಯುವ ರೋಗನಿರೋಧಕ ಸಾಮರ್ಥ್ಯ ಕೂಡ ಹಸಿಮೆಣಸಿನಲ್ಲಿದೆ.

ನಿಮ್ಮ ತ್ವಚೆಗೆ ಪರಿಣಾಮಕಾರಿ:

ನಿಮ್ಮ ತ್ವಚೆಗೆ ಪರಿಣಾಮಕಾರಿ:

ಹಸಿಮೆಣಸು ನಿಮ್ಮ ತ್ವಚೆಗೆ ಕೆಲವೊಂದು ನೈಸರ್ಗಿಕ ತ್ವಚೆ ಆಯಿಲ್ ಅನ್ನು ಒದಗಿಸುತ್ತದೆ. ಆದ್ದರಿಂದ ಖಾರ ಪದಾರ್ಥಗಳನ್ನು ಸೇವಿಸುವುದು ನಿಮ್ಮ ತ್ವಚೆಗೂ ಉತ್ತಮವಾಗಿದೆ.

ಕ್ಯಾಲೋರಿಯಿಂದ ಮುಕ್ತ:

ಕ್ಯಾಲೋರಿಯಿಂದ ಮುಕ್ತ:

ಕ್ಯಾಲೋರಿಗಳಿಲ್ಲದೆ ಹಸಿಮೆಣಸನ್ನು ನಿಮಗೆ ಸೇವಿಸಬಹುದು. ನಿಮ್ಮ ತೂಕ ಇಳಿಸುವ ಪ್ರಕ್ರಿಯೆಗೆ ಸಹಕಾರಿಯಾಗಿರುವ ಹಸಿಮೆಣಸು ಶೂನ್ಯ ಕ್ಯಾಲೋರಿಯನ್ನು ಹೊಂದಿವೆ.

ಪುರುಷರು ಹಸಿಮೆಣಸನ್ನು ಸೇವಿಸಬೇಕು:

ಪುರುಷರು ಹಸಿಮೆಣಸನ್ನು ಸೇವಿಸಬೇಕು:

ಪುರುಷರು ಜನನಾಂಗ ಕ್ಯಾನ್ಸರ್‌ನಿಂದ ಹೆಚ್ಚಾಗಿ ಬಳಲುತ್ತಾರೆ. ವಿಜ್ಞಾನದ ಪ್ರಕಾರ ಹಸಿಮೆಣಸನ್ನು ಸೇವಿಸುವುದು ಜನನಾಂಗ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ಜತನದಲ್ಲಿಯೇ ನಿವಾರಿಸುತ್ತದೆ ಎಂದಾಗಿದೆ.

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕ:

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕ:

ಈ ಭಾರತೀಯ ಹಸಿಮೆಣಸನ್ನು ಸೇವಿಸುವುದು ಮಧುಮೇಹಿಗಳಿಗೆ ವರದಾನವಾಗಿದೆ. ಹಸಿಮೆಣಸು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಗೊಳಿಸಬಹುದು ಇದರಿಂದ ಸಿಹಿ ತಿನ್ನಲು ಬಯಸುವ ಮಧುಮೇಹಿಗಳು ಖಾರವನ್ನು ಹೆಚ್ಚು ಸೇವಿಸಿ.

ಆಹಾರವನ್ನು ಜೀರ್ಣಿಸಲು ಸಹಕಾರಿ:

ಆಹಾರವನ್ನು ಜೀರ್ಣಿಸಲು ಸಹಕಾರಿ:

ಜೀರ್ಣಕ್ರಿಯೆ ಅಂಶಗಳನ್ನು ಹೊಂದಿರುವ ಹಸಿಮೆಣಸು ನಿಮ್ಮ ಆಹಾರವನ್ನು ಜೀರ್ಣವಾಗಿಸಲು ಹೆಚ್ಚು ಸಹಕಾರಿಯಾಗಿದೆ.

ಖಾರದ ಆಹಾರಗಳು ಮೂಡನ್ನು ಸರಿಪಡಿಸುತ್ತದೆ:

ಖಾರದ ಆಹಾರಗಳು ಮೂಡನ್ನು ಸರಿಪಡಿಸುತ್ತದೆ:

ನಿಮ್ಮ ಮೂಡನ್ನು ಉತ್ತಮಗೊಳಿಸುವ ಸಿದ್ಧಿ ಹಸಿಮೆಣಸಿಗಿದೆ. ಖಾರ ಆಹಾರವನ್ನು ಸೇವಿಸಿದ ನಂತರ ನೀವು ಖುಷಿಯಿಂದ ಇದ್ದರೆ ಇದಕ್ಕೆ ಕಾರಣ ಹಸಿಮೆಣಸಿನಲ್ಲಿರುವ ಮೆದುಳನ್ನು ಚುರುಕಾಗಿಸುವ ಎಂಡೋರ್‌ಫಿನ್ಸ್ ಆಗಿದೆ.

ಶ್ವಾಸಕೋಶದ ಕ್ಯಾನ್ಸರ್ ಅನ್ನು ನಿಯಂತ್ರಿಸುತ್ತದೆ:

ಶ್ವಾಸಕೋಶದ ಕ್ಯಾನ್ಸರ್ ಅನ್ನು ನಿಯಂತ್ರಿಸುತ್ತದೆ:

ಹಸಿಮೆಣಸು ಶ್ವಾಸಕೋಶದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಬ್ಯಾಕ್ಟೀರಿಯಾ ಸೋಂಕನ್ನು ತಡೆಗಟ್ಟುತ್ತದೆ:

ಬ್ಯಾಕ್ಟೀರಿಯಾ ಸೋಂಕನ್ನು ತಡೆಗಟ್ಟುತ್ತದೆ:

ಹಸಿಮೆಣಸು ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ಹೊಂದಿದೆ. ಇದು ಬ್ಯಾಕ್ಟೀರಿಯಾದಿಂದ ಉಂಟಾಗುತ್ತಿರುವ ಸೋಂಕನ್ನು ಜತನದಲ್ಲಿ ನಿವಾರಿಸುತ್ತದೆ.

English summary

10 Health Benefits Of Indian Green Chillies

When we talk about the health benefits of chilli peppers, we usually imagine all kinds of exotic chillies. It is an established fact that bell peppers or capsicum are rich in antioxidants and thus superfoods.
X
Desktop Bottom Promotion