For Quick Alerts
ALLOW NOTIFICATIONS  
For Daily Alerts

ಕಣ್ಣಿನ ರಕ್ಷಣೆಗಾಗಿ 10 ಆರೋಗ್ಯಕಾರಿ ಆಹಾರಗಳು

By Viswanath S
|

ಒಬ್ಬ ವ್ಯಕ್ತಿಯ ಕಣ್ಣುಗಳು ಆತನ ಆಲೋಚನೆಗಳನ್ನು ಸೂಚಿಸುತ್ತವೆ. ಆದರೆ ಆ ಸೂಚನೆಗಿಂತಾ ಇನ್ನೂ ಹೆಚ್ಚು ಇತರ ಮಾಹಿತಿ ಸೂಚಿಸುವುದೆಂದು ನಿಮಗೆ ಗೊತ್ತೇ? ಹೌದು, ಅದು ನಿಮ್ಮ ಒಟ್ಟಾರೆ ಆರೋಗ್ಯದ ಪರಿಸ್ಥಿತಿಯನ್ನು ಸೂಚಿಸುತ್ತವೆ. ದೇಹವು ಆರೋಗ್ಯಕರವಾಗಿದ್ದಲ್ಲಿ ಹೊಳೆಯುವ ಕಣ್ಣುಗಳು ಹೊಂದಿರುತ್ತವೆ. ಇಲ್ಲವಾದಲ್ಲಿ ದಣಿದ ಮತ್ತು ಅನಾರೋಗ್ಯಕರ ದೇಹವಿದ್ದಲ್ಲಿ ಅದನ್ನು ಕಣ್ಣುಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿಯ ಕಣ್ಣುಗಳು ಆತನ ಆರೋಗ್ಯಸ್ಥಿತಿಯನ್ನು ಬಿಂಬಿಸುವ ಕನ್ನಡಿ ಎಂದು ಹೇಳುವುದರಲ್ಲಿ ಆಶ್ಚರ್ಯವೇನಿಲ್ಲ.

ಆದರೆ ದೇಹದ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಗಳಿಲ್ಲದಿದ್ದರೂ ಕಣ್ಣುಗಳಿಗೆ ಸಂಬಂಧವಿರುವ ಸಮಸ್ಯೆಗಳು ತಾವಾಗಿಯೇ ಉದ್ಭವಿಸುವುದನ್ನು ವಾಸ್ತವವಾಗಿ ನಿರಾಕರಿಸುವ ಆಗಿಲ್ಲ. ಎಷ್ಟೇ ಆದರೂ ಕಣ್ಣುಗಳು ದೇಹದ ಒಂದು ಭಾಗವಾಗಿದ್ದು ಅವುಗಳ ಕಾರ್ಯಗಳನ್ನು ಅದಕ್ಕೆ ಸಂಬಂಧವಿರುವ ನರಗಳು, ರಕ್ತನಾಳಗಳು ಮತ್ತು ಸ್ನಾಯುಗಳು ಕೆಲಸಮಾಡುತ್ತವೆ.

ಕಣ್ಣಿನ ಆರೋಗ್ಯಕ್ಕೆ ಸ್ಪೆಷಲ್ ಆರೈಕೆ ಹೀಗಿರಲಿ

ನಾವು ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕಾದರೆ ನಾವು ಒಂದೆರಡು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ದಿಸೆಯಲ್ಲಿ ನಾವು ಮೊದಲು ನಮ್ಮ ಕಣ್ಣುಗಳು ಅಗತ್ಯವಾಗಿ ಆರೋಗ್ಯಕರ ಸ್ಥಿತಿಯಲ್ಲಿ ಇರಬೇಕೆಂದರೆ ನಮ್ಮ ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳನ್ನು ಸೇವಿಸಿದರೆ ಮಾತ್ರ ಸಾಧ್ಯ.

ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಆಹಾರ ಒಂದು ಪ್ರಮುಖ ಅಂಶ. ಆರೋಗ್ಯಕರವಾಗಿರಲು ಆರೋಗ್ಯಕರ ಆಹಾರವನ್ನೇ ಸೇವಿಸಿ. ವಿಧವಿಧವಾದ ಪ್ರತಿಯೊಂದು ಆಹಾರವೂ ತನ್ನದೇ ಆದ ಪ್ರಯೋಜನಗಳನ್ನು ಹೊಂದಿರುತ್ತವೆ. ಆಹಾರಗಳಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ನಮ್ಮ ದೇಹದಲ್ಲಿ ಸೇರಿ ಪ್ರತಿಯೊಂದು ಅಂಗವೂ ಸರಿಯಾಗಿ ಕಾರ್ಯನಿರ್ವಹಿಸಲು ಸಕ್ರಿಯಗೊಳಿಸುತ್ತವೆ. ಕಣ್ಣುಗಳ ವಿಷಯಕ್ಕೆ ಬಂದಾಗ, ಯಾವ ರೀತಿಗಳ ವಿಟಮಿನ್ ಮತ್ತು ಖನಿಜಾಂಶಗಳ ಸಹಾಯದಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ತಿಳಿಯುವ ಅಗತ್ಯವಿದೆ.

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು 7 ಉಪಯುಕ್ತ ಸಲಹೆಗಳು

ಅತ್ಯಂತ ಪ್ರಮುಖವಾದ ಪೌಷ್ಟಿಕಾಂಶಗಳೆಂದರೆ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಸಿ, ಸತು (Zinc), ಲ್ಯೂಟೈನ್ (Lutein - ಕೆಲವು ಹಸಿರು ಸೊಪ್ಪಿನಲ್ಲಿ ದೊರಕುವ ಅಂಶ), ಜಿಯಾಕ್ಸಂತಿನ್ (Zeaxanthin - ಒಂದು ರೀತಿಯ ಕ್ಯಾರಾಟೇನ್ ಆಲ್ಕೋಹಾಲು ಮತ್ತು ಕೆಲವು ಸಸ್ಯಗಲ್ಲಿ ದೊರಕುವ ಪೌಷ್ಟಿಕಾಂಶ) ಅಂತೆಯೇ ಕಣ್ಣುಗಳಿಗೆ ಅಗತ್ಯವಾದ ಕೆಲವು ಉತ್ತಮ ಆಹಾರಗಳ ಒಂದು ಸಣ್ಣ ಪಟ್ಟಿಯನ್ನು ಹೀಗೆ ಮಾಡಬಹುದು:

ಕಣ್ಣಿನ ರಕ್ಷಣೆಗಾಗಿ ಆರೋಗ್ಯಕಾರಿ ಆಹಾರಗಳ ಸಣ್ಣ ಪಟ್ಟಿ

1. ಮೊಟ್ಟೆಗಳು

1. ಮೊಟ್ಟೆಗಳು

ಮೊಟ್ಟೆಯನ್ನು ಒಂದು ಸಂಪೂರ್ಣ ಆಹಾರವೆಂದು ಪರಿಗಣಿಸಬಹುದು. ನಿಮ್ಮ ಉಪಹಾರಕ್ಕೆ ಒಂದು ಮೊಟ್ಟೆಯನ್ನು ಸೇರಿಸಿದರೆ ನಿಮ್ಮ ದಿನಪೂರ್ತಿ ಅಗತ್ಯವಿರುವ ವಿಟಮಿನ್‌ಗಳ ಮತ್ತು ಜೀವಸತ್ವಗಳ ಪೂರೈಕೆಯಾಗುತ್ತದೆ. ಮೊಟ್ಟೆಯು ಲ್ಯೂಟೈನ್ ಮತ್ತು ಜಿಯಾಕ್ಸಂತಿನ್‌ಗಳ ಉತ್ತಮ ಮೂಲವಾಗಿದ್ದು ನಿಮ್ಮ ಕಣ್ಣುಗಳಿಗೆ ಅಗತ್ಯವಿರುವ ರಕ್ಷಣೆ ಕೊಡುತ್ತದೆ.

2. ಪಾಲಕ್ ಸೊಪ್ಪು

2. ಪಾಲಕ್ ಸೊಪ್ಪು

ಮೊಟ್ಟೆಯಂತೆಯೇ, ಪಾಲಕ್ ಮತ್ತು ಇತರ ಹಸಿರು ಸೊಪ್ಪುಗಳು ಸಹ ಲ್ಯೂಟೈನ್ ಮತ್ತು ಜಿಯಾಕ್ಸಂತಿನ್‌ಗಳ ಉತ್ತಮ ಮೂಲವಾಗಿದೆ. ಇವೆರಡು ಪೌಷ್ಟಿಕಾಂಶಗಳು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಅವನತಿ ಸಮಸ್ಯೆಗಳಿಗೆ ಉತ್ತಮ ರಕ್ಷಣೆ ಕೊಡುತ್ತವೆ.

3. ಕ್ಯಾರೆಟ್

3. ಕ್ಯಾರೆಟ್

ನೀವು ಎಂದಾದರೂ ಮೊಲಗಳು ಕನ್ನಡಕ ಹಾಕಿರುವುದನ್ನು ಕಂಡಿದ್ದೀರಾ? ಖಂಡಿತ ಇಲ್ಲ ಅಲ್ಲವೆ? ಮೊಲಗಳಿಗೆ ಇರುವ ಗಾಢವಾದ ಮತ್ತು ತೀಕ್ಷ್ಣವಾದ ಕಣ್ಣುಗಳನ್ನು ಪಡೆಯಬೇಕಾದರೆ ನಿಮ್ಮ ಕ್ಯಾರೆಟ್ ಸೇವನೆಯನ್ನು ಹೆಚ್ಚಿಸಿ. ಈ ಕಿತ್ತಲೆ ಬಣ್ಣದ ಕ್ಯಾರೆಟ್ಟಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳ ಗುಂಪಿಗೆ ಸೇರಿದೆ.

4. ಬೀಟ್‌ರೂಟ್

4. ಬೀಟ್‌ರೂಟ್

ಇದು ಮತ್ತೋಂದು ವಿಟಮಿನ್ ಎ ಸಮೃದ್ಧವಾಗಿ ಇರುವ ಬೇರಿನ ಜಾತಿಯ ಆಹಾರ. ನಿಮ್ಮ ಕಣ್ಣುಗಳು ಉತ್ಸಾಹಭರಿತ ಮತ್ತು ಸಂತೋಷದಿಂದ ಕೂಡಿರಬೇಕಾದಲ್ಲಿ ಈ ಬೀಟ್‌ರೂಟ್ ತರಕಾರಿಯನ್ನು ಸಾಕಷ್ಟು ಸೇವಿಸಬೇಕು.

5. ಬಾದಾಮಿ

5. ಬಾದಾಮಿ

ಇದು ಕಣ್ಣುಗಳಿಗೆ ಉತ್ತಮ ಆಹಾರ. ವಿಟಮಿನ್ ಇ ಮತ್ತು ಏಕಾಪರ್ಯಾಪ್ತ ಕೊಬ್ಬಿನಾಮ್ಲಗಳ (Monounsaturated fatty acids) ಬಾದಾಮಿಯಲ್ಲಿ ಸಮೃದ್ಧವಾಗಿದ್ದು ಕಣ್ಣುಗಳನ್ನು ಯುವ ವಯಸ್ಸಿನ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿಟ್ಟುಕೊಂಡಿರಲು ಸಹಾಯವಾಗುತ್ತದೆ. ನೀವೇನೂ ಅತಿ ಹೆಚ್ಚು ಬಾದಾಮಿಯನ್ನು ಸೇವಿಸಬೇಕಾಗಿಲ್ಲ. ದಿನಕ್ಕೆ 8 ರಿಂದ 10 ಬಾದಾಮಿಯನ್ನು ತೆಗೆದುಕೊಂಡರೆ ನಿಮ್ಮ ಅಗತ್ಯ ಪೂರೈಸುತ್ತದೆ.

6. ಬ್ರೊಕೋಲಿ

6. ಬ್ರೊಕೋಲಿ

ದಟ್ಟ ಹಸಿರುಬಣ್ಣದ ಬ್ರೊಕೋಲಿಯಲ್ಲಿ ವಿಟಮಿನ್ ಸಿ, ಲ್ಯೂಟೈನ್ ಮತ್ತು ಜಿಯಾಕ್ಸಂತಿನ್‌ಗಳು ಸಮೃದ್ಧಿಯಾಗಿವೆ. ಹೀಗಿದ್ದಾಗ ಇದನ್ನು ಬಿಟ್ಟು ಕಣ್ಣುಗಳಿಗೆ ಬೇರೆ ಯಾವ ಉತ್ತಮ ಆಹಾರವನ್ನು ಹುಡುಕಬೇಕು? ಒಂದು ಮರದ ರೂಪದಲ್ಲಿರುವ ತರಕಾರಿಯು ಕಣ್ಣುಗಳಿಗೆ ಉತ್ತಮ ಆರೋಗ್ಯವನ್ನು ಕೊಡುತ್ತದೆಯಾದರೂ ಅದು ತಾಜಾ ತರಕಾರಿಯಾಗಿರಬೇಕು ಎನ್ನುವುದನ್ನು ಗಮನಿಸಿ. ಅದರ ಬಣ್ಣ ಎಷ್ಟು ಗಾಢವಾದಷ್ಟೂ ಅಷ್ಟು ಉತ್ತಮ.

7. ಪ್ರೋಟೀನ್‌ಯುಕ್ತ ಆಹಾರ

7. ಪ್ರೋಟೀನ್‌ಯುಕ್ತ ಆಹಾರ

ಸಮುದ್ರಾಹಾರಗಳಲ್ಲಿ ಸಾಲ್ಮನ್ ಮತ್ತು ಸಾರ್ಡೀನ್‌ಗಳು ಪ್ರೋಟೀನ್ ಮತ್ತು ಒಮೇಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳು. ಅವುಗಳಲ್ಲಿ ಉತ್ತಮ ಕಣ್ಣಿಗೆ ಅವಶ್ಯಕವಾದ ಮತ್ತೊಂದು ಖನಿಜಾಂಶವಿರುವ ಸತು (Zinc) ಸಮೃದ್ಧವಾಗಿ ಇರುತ್ತದೆ. ಹೀಗಾಗಿ ಈ ಸಮುದ್ರದ ಜೀವಿಗಳು ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳ ಗುಂಪಿಗೆ ಸೇರುತ್ತವೆ.

8. ಸಿಟ್ರಸ್ ಜಾತಿಯ ಹಣ್ಣುಗಳು

8. ಸಿಟ್ರಸ್ ಜಾತಿಯ ಹಣ್ಣುಗಳು

ವಿಟಮಿನ್ ಸಿ ಎಂದು ಹೇಳಿದರೆ ಅದು ಸಿಟ್ರಸ್ ಹಣ್ಣುಗಳಲ್ಲಿವೆ ಎಂದು ಗೊತ್ತಿದೆ. ಕಿತ್ತಲೆ ಮತ್ತು ದ್ರಾಕ್ಷಿಹಣ್ಣುಗಳು ತಿನ್ನಲು ರುಚಿಯಾಗಿರುತ್ತದಲ್ಲದೆ ಶೀತ ಮತ್ತು ಕೆಮ್ಮನ್ನು ವಾಸಿಮಾಡುವುದು ಮತ್ತು ಕಣ್ಣುಗಳಿಗೂ ಸಹ ಉತ್ತಮ ಆಹಾರ. ನಾವು ಆಹಾರಗಳ ಜೊತೆ ಸಿಟ್ರಸ್ ಹಣ್ಣುಗಳನ್ನು ಸೇವಿಸಿ ಅಕ್ಷಿಪಟಲದ ಅವನತಿ ಮತ್ತು ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಇವುಗಳಿಂದ ದೂರವಿರಬಹುದು.

9. ಹುರುಳಿ, ಅವರೆ, ಇತ್ಯಾದಿ ಕಾಳುಗಳು

9. ಹುರುಳಿ, ಅವರೆ, ಇತ್ಯಾದಿ ಕಾಳುಗಳು

ಎಲ್ಲ ರೀತಿಯ ಕಾಳುಗಳಲ್ಲಿ ಕಣ್ಣುಗಳಿಗೆ ಅಗತ್ಯವಾದ ಸತು ಇರುತ್ತದೆ. ಈ ಖನಿಜ ಸೇವನೆಯಿಂದ ಬೆಳಕಿನ ಹಾನಿಕಾರಕ ಪರಿಣಾಮಗಳಿಂದ ಕಣ್ಣುಗಳನ್ನು ರಕ್ಷಿಸಬಹುದು.

10. ಟೋಫು

10. ಟೋಫು

ಸೋಯಾ ಹಾಲಿನಿಂದ ಟೋಫು‌ವನ್ನು ತಯಾರಿಸುತ್ತಾರೆ. ಸೋಯಾ ಕೂಡ ಒಂದು ದ್ವಿದಳ ಧಾನ್ಯ. ಎಲ್ಲಾ ಕಾಳುಗಳಂತೆಯೆ ಟೋಫು‌ವಿನಲ್ಲಿ ಸತುವಿನ ಅಂಶವು ಉತ್ತಮವಾಗಿದ್ದು ಅದರ ಸೇವನೆಯಿಂದ ಕಣ್ಣುಗಳಿಗೆ ಲಾಭದಾಯಕವಾಗಿರುತ್ತದೆ.

English summary

10 Foods That Protects Eyes

Here are the list of foods that protects eyes. Read on.
X
Desktop Bottom Promotion