For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ಜ್ವರದ ವಿರುದ್ಧ ಹೋರಾಡುವ 10 ಸೂಪರ್ ಆಹಾರಗಳು

By Super
|

ಡೆಂಗ್ಯೂ ಎಂಬ ಭಯಾನಕ ಜ್ವರದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಈ ಡೆಂಗ್ಯೂ ಜ್ವರವು ನಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳ (ರೋಗ ನಿರೋಧಕ ಶಕ್ತಿ) ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಮುಂದೆ ಪ್ರಾಣಕ್ಕೆ ಸಂಚಕಾರವನ್ನು ತರಬಹುದು. ದೇಹದಲ್ಲಿ ಕಡಿಮೆಯಿರುವ ಪ್ಲೇಟ್‍ಲೆಟ್‍ಗಳನ್ನು ತಾಂತ್ರಿಕವಾಗಿ ತ್ರೊಮ್ಬೊಸೈಟೊಪೆನಿಯ ಎಂದು ಕರೆಯಲಾಗುತ್ತದೆ.

ಇದು ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳಬಹುದು. ಅದು ವಂಶವಾಹಿಗಳಿಂದ, ಔಷಧಿಗಳಿಂದ, ಆಲ್ಕೋಹಾಲ್ ಸೇವನೆಯಿಂದ, ವೈರಸ್‍ಗಳಿಂದ, ಗರ್ಭಧಾರಣೆಯಿಂದ ಮತ್ತು ಕೆಲವೊಂದು ನಿರ್ದಿಷ್ಟ ರೋಗಗಳಿಂದ ಕಾಣಿಸಿಕೊಳ್ಳಬಹುದು. ಈ ಪ್ಲೇಟ್‍ಲೆಟ್‍ಗಳ ಸಂಖ್ಯೆಯನ್ನು ಸಮತೋಲನದಿಂದ ಕಾಪಾಡಿಕೊಳ್ಳಲು ನಾವು ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ಇಲ್ಲಿ ಪಟ್ಟಿ ಮಾಡಲಾಗಿರುವ ಆಹಾರಗಳು ಅತ್ಯಂತ ಕಡಿಮೆ ಅವಧಿಯಲ್ಲಿಯೇ ನಿಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.

ಒಂದೊಮ್ಮೆ ನೀವು ಪ್ಲೇಟ್‍ಲೆಟ್‍ಗಳ ಕೊರತೆಯ ಸಮಸ್ಯೆಯನ್ನು ಎದುರಿಸಿದಾಗ ಅಧಿಕ ವಿಟಮಿನ್‍ಗಳಿರುವ ಆಹಾರವನ್ನು ಸೇವಿಸಬೇಕಾದುದು ಅನಿವಾರ್ಯ. ಖನಿಜಾಂಶಗಳು ಸಹ ನಿಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳನ್ನು ಉತ್ಪತ್ತಿ ಮಾಡಲು ಸಹಕರಿಸುತ್ತವೆ. ಹೀಗೆ ಇವು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತವೆ.

ಇಲ್ಲಿ ನೀಡಿರುವ ಆಹಾರ ಪದಾರ್ಥಗಳು ನಿಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಹೆಚ್ಚಿಸುತ್ತವೆ. ಆದರೂ ನಿಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣವು ಕಡಿಮೆಯಾದರೆ ಕಬ್ಬಿಣಾಂಶ ಹೆಚ್ಚಿರುವ ಎರಡು ಆಹಾರ ಪದಾರ್ಥಗಳನ್ನು ಮಾತ್ರ ಸೇವಿಸಿ. ಏಕೆಂದರೆ ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಮೇಲೆ ಋಣಾತ್ಮಕ ಪರಿಣಾಮಗಳು ಬೀರಬಹುದು. ಬನ್ನಿ ನೋಡೋಣ ಪ್ಲೇಟ್‍ಲೆಟ್‍ಗಳನ್ನು ಹೆಚ್ಚಿಸಿಕೊಳ್ಳಲು ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು:

ಪರಂಗಿ ಎಲೆಗಳು

ಪರಂಗಿ ಎಲೆಗಳು

ನಿಮ್ಮ ರಕ್ತವು ಕಡಿಮೆಯಿದ್ದಾಗ ಸೇವಿಸಬಹುದಾದ ಅತ್ಯುತ್ತಮವಾದ ಆಹಾರ ಪರಂಗಿ ಎಲೆಗಳು. ಇದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ, ಒಂದು ಚೊಂಬು ನೀರಿನಲ್ಲಿ ಪರಂಗಿ ಎಲೆಗಳನ್ನು ಹಾಕಿ, ಅದನ್ನು ಹದವಾಗಿ ಕಾಯಿಸಿ, ಅದರ ರಸ ನೀರಿನಲ್ಲಿ ಬರಬೇಕು ಅಷ್ಟೇ. ಈ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿ. ಪ್ಲೇಟ್‍ಲೆಟ್‍ಗಳು ತನ್ನಷ್ಟಕ್ಕೆ ತಾನೇ ಸ್ವಾಭಾವಿಕವಾಗಿ ಬೆಳವಣಿಗೆಯಾಗುತ್ತವೆ.

ದಾಳಿಂಬೆಗಳು

ದಾಳಿಂಬೆಗಳು

ಎಲ್ಲಾ ಕೆಂಪು ಹಣ್ಣುಗಳಲ್ಲಿ ಕಬ್ಬಿಣಾಂಶವು ಹೆಚ್ಚಾಗಿರುತ್ತದೆ. ಇವುಗಳೆಲ್ಲವು ಪ್ಲೇಟ್‍ಲೆಟ್‍ಗಳನ್ನು ಹೆಚ್ಚು ಮಾಡಲು ನೆರವಾಗುತ್ತವೆ. ದಾಳಿಂಬೆಗಳಲ್ಲಿ ವಿಟಮಿನ್‍ಗಳ ಪ್ರಮಾಣವು ಕಡಿಮೆಯಿರುತ್ತದೆ. ಇವುಗಳು ಡೆಂಗ್ಯೂ ಜ್ವರದ ಮೇಲೆ ಹೋರಾಡಲು ಬೇಕಾದ ಶಕ್ತಿಯನ್ನು ನೀಡುತ್ತವೆ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳಲ್ಲಿ ವಿಟಮಿನ್ ಕೆ ಅಧಿಕ ಪ್ರಮಾಣದಲ್ಲಿರುತ್ತದೆ. ಹಸಿರು ಸೊಪ್ಪುಗಳನ್ನು ಸೇವಿಸುವುದರಿಂದ ಪ್ಲೇಟ್‍ಲೆಟ್‍ಗಳನ್ನು ಹೆಚ್ಚಿಸಿಕೊಳ್ಳಬಹುದು. ಪಾಲಕ್ ಸೊಪ್ಪು, ಕೇಲ್ ಮತ್ತು ಇನ್ನಿತರ ಹಸಿರು ಸೊಪ್ಪುಗಳನ್ನು ನೀವು ಈ ಉದ್ದೇಶಕ್ಕಾಗಿ ಸೇವಿಸಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ರಕ್ತದಲ್ಲಿ ಪ್ಲೇಟ್‍ಲೆಟ್‍ಗಳನ್ನು ಹೆಚ್ಚಿಸಿಕೊಳ್ಳಲು ನೀವು ಬೆಳ್ಳುಳ್ಳಿಯನ್ನು ತಿನ್ನಬಹುದು. ಇದು ಯಾವುದೇ ಆಹಾರ ಪದಾರ್ಥದ ಜೊತೆಗೆ ಸೇವಿಸಬಹುದಾದ ಪದಾರ್ಥವಾಗಿದೆ.

ಬೀಟ್‍ರೂಟ್

ಬೀಟ್‍ರೂಟ್

ಬೀಟ್‍ರೂಟ್‍ಗಳು ಸಹ ಪ್ಲೇಟ್‍ಲೆಟ್‍ಗಳನ್ನು ಹೆಚ್ಚಿಸುತ್ತವೆ. ಯಾರಿಗೆ ಅನಿಮಿಯಾ ಸಮಸ್ಯೆಯಿದೆಯೋ, ಅವರು ವಾರಕ್ಕೆ ಎರಡು ಬಾರಿಯಾದರು ಬೀಟ್‍ರೂಟ್ ಮತ್ತು ಕ್ಯಾರಟ್ ಜ್ಯೂಸ್ ಕುಡಿಯುವ ಪರಿಪಾಠವನ್ನು ಇರಿಸಿಕೊಳ್ಳಬೇಕು. ಆಗಲೇ ಅವರ ರಕ್ತದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣ ಸಮತೋಲನದಲ್ಲಿರುತ್ತದೆ.

ಲಿವರ್

ಲಿವರ್

ಅದು ಕೋಳಿ ಅಥವಾ ಕುರಿಯದಾಗಿರಲಿ, ಇವುಗಳು ಸಹ ನಿಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಹೆಚ್ಚಿಸುತ್ತವೆ. ಸರಿಯಾಗಿ ಬೇಯಿಸದ ಮಾಂಸಕ್ಕಿಂತ ಚೆನ್ನಾಗಿ ಬೆಂದ ಲಿವರ್ ಈ ನಿಟ್ಟಿನಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ರೈಸಿನ್‍ಗಳು

ರೈಸಿನ್‍ಗಳು

ಇವು ತುಂಬಾ ರುಚಿಕರವಾದ ಒಣ ಹಣ್ಣುಗಳಾಗಿದ್ದು, ಅಂದಾಜು ಶೇ.30 ರಷ್ಟು ಕಬ್ಬಿಣಾಂಶವನ್ನು ಹೊಂದಿರುತ್ತವೆ. ಒಂದು ಹಿಡಿಯಷ್ಟು ರೈಸಿನ್‍ಗಳು ನಿಮ್ಮ ದೇಹದಲ್ಲಿ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಪ್ರಾಕೃತಿಕವಾಗಿ ಹೆಚ್ಚಿಸುತ್ತವೆ.

ಆಪ್ರಿಕಾಟ್

ಆಪ್ರಿಕಾಟ್

ಆಪ್ರಿಕಾಟ್ ಎಂಬುದು ಅಧಿಕ ಪ್ರಮಾಣದ ಕಬ್ಬಿಣಾಂಶವಿರುವ ಹಣ್ಣಾಗಿದೆ. ಒಂದು ಬಟ್ಟಲಿನಷ್ಟು ಆಪ್ರಿಕಾಟನ್ನು ದಿನದಲ್ಲಿ ಎರಡು ಬಾರಿ ಸೇವಿಸುವುದರ ಮೂಲಕ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಕಾಪಾಡಿಕೊಳ್ಳಬಹುದು.

ಖರ್ಜೂರಗಳು

ಖರ್ಜೂರಗಳು

ಖರ್ಜೂರಗಳಲ್ಲಿ ಕಬ್ಬಿಣಾಂಶ ಮತ್ತು ಇನ್ನಿತರ ಪೋಷಕಾಂಶಗಳು ಹೆಚ್ಚಿಗೆ ಇರುತ್ತವೆ. ಇವು ಸಹ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತವೆ.

ವೋಲ್ ಗ್ರೇನ್ ಆಹಾರಗಳು

ವೋಲ್ ಗ್ರೇನ್ ಆಹಾರಗಳು

ನಿಮಗೆ ಕಾಯಿಲೆ ಬಂದಾಗ ನೀವು ಸೇವಿಸಬಹುದಾದ ಅತ್ಯುತ್ತಮ ಆಹಾರವೆಂದರೆ, ಅದು ವೋಲ್ ಗ್ರೇನ್ ಆಹಾರಗಳಾಗಿರುತ್ತವೆ. ಇವುಗಳಲ್ಲಿ ನಾರಿನಂಶ, ಪೋಷಕಾಂಶಗಳು, ಖನಿಜಾಂಶಗಳು ಮತ್ತು ಇತ್ಯಾದಿಗಳು ಇರುತ್ತವೆ. ಇವು ಸ್ವಯಂಚಾಲಿತವಾಗಿ ಪ್ಲೇಟ್‍ಲೆಟ್‍ಗಳ ಪ್ರಮಾಣವನ್ನು ಹತೋಟಿಯಲ್ಲಿಡುತ್ತವೆ.

English summary

10 Foods That Increase Platelet Levels

Dengue fever reduces platelet levels in the body and can become life-threatening. Low blood platelet count is technically called Thrombocytopenia. It can also be caused due to various reasons such as genetics, medications, alcohol intake, viruses, pregnancy and specific diseases.
X
Desktop Bottom Promotion