For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರನ್ನು ನಿಯಂತ್ರಿಸುವ 10 ಅದ್ಭುತವಾದ ತರಕಾರಿಗಳು

|

ಕ್ಯಾನ್ಸರ್ ಎಂಬುದು ನಿಜಕ್ಕು ಪ್ರಾಣಾಂತಕವಾದ ರೋಗವಾಗಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚಿನ ಬಲಿಗಳನ್ನು ಪಡೆಯುವ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿ ಗುರುತಿಸಲ್ಪಟ್ಟಿದೆ. ಸತ್ಯಾಂಶವೆಂದರೆ, ಬದಲಾದ ಜೀವನ ಶೈಲಿಗಳು ಮತ್ತು ಜನಸಂಖ್ಯೆಯ ಹೆಚ್ಚಳದಿಂದಾಗಿ, ಕ್ಯಾನ್ಸರ್ ರೋಗಿಗಳ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೆ ಇದೆಯೇ ಹೊರತು ಕಡಿಮೆಯಾಗುತ್ತಿಲ್ಲ.

ಇದಕ್ಕಾಗಿಯೇ ನಾವು ಕ್ಯಾನ್ಸರ್ ನಿಯಂತ್ರಿಸುವ ತರಕಾರಿಗಳ ಕುರಿತಾಗಿ ಆಲೋಚಿಸಬೇಕಾಗುತ್ತದೆ. ಈ ಅಂಕಣದಲ್ಲಿ ಈ ನಿಟ್ಟಿನಲ್ಲಿ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ನಾವು ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ, ಅದರಲ್ಲೂ ಮುಖ್ಯವಾಗಿ ಕ್ಯಾನ್ಸರನ್ನು ತಡೆಯುವ ತರಕಾರಿಗಳ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದೇವೆ.

ಕ್ಯಾನ್ಸರ್ ರೋಗವನ್ನು ನಿರ್ಣಯಿಸುವ 11 ಅಂಶಗಳು

ತರಕಾರಿಗಳು ಕಾಯಿಲೆಗಳ ವಿರುದ್ಧ ಹೋರಾಡುವ ಪ್ರಾಕೃತಿಕ ಆಹಾರ ಪದಾರ್ಥಗಳಾಗಿವೆ. ಇನ್ನು ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಯನ್ನು ನಿಯಂತ್ರಿಸಲು ಹೋದಾಗ ಪ್ರಪಂಚದಲ್ಲಿನ ಅತ್ಯಂತ ಆರೋಗ್ಯಕಾರಿ ತರಕಾರಿಗಳ ಬಗೆಗೆ ನಾವು ಗಮನ ಹರಿಸಬೇಕಾಗುತ್ತದೆ.

ಅವುಗಳಲ್ಲಿ ವಿಟಮಿನ್‍ಗಳು ಮತ್ತು ಖನಿಜಗಳು ಯಥೇಚ್ಛವಾಗಿರಬೇಕು. ಕ್ಯಾನ್ಸರ್ ಮೇಲೆ ಹೋರಾಡುವ ತರಕಾರಿಗಳ ಪಟ್ಟಿಯನ್ನು ಇಲ್ಲಿ ನಿಮಗಾಗಿ ನೀಡಿದ್ದೇವೆ. ಇವುಗಳನ್ನು ಸೇವಿಸಿ, ಕ್ಯಾನ್ಸರ್ ವಿರುದ್ಧ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಅಂತಹ 10 ತರಕಾರಿಗಳ ಬಗೆಗೆ ಮುಂದೆ ವಿವರವಾದ ಮಾಹಿತಿ ಇದೆ ಓದಿಕೊಳ್ಳಿ..

ಸ್ತನ ಕ್ಯಾನ್ಸರ್ ಬರದಂತೆ ತಡೆಯಲು 7 ಉತ್ತಮ ಸಲಹೆಗಳು!

ಎಲೆಕೋಸು

ಎಲೆಕೋಸು

ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಒಳಗೊಂಡಿರುವ ಎಲೆಕೋಸಿನಲ್ಲಿ ಪೊಟಾಶಿಯಂ ಮತ್ತು ಫೋಲೆಟ್‍ಗಳಂತ ಖನಿಜಾಂಶಗಳು ಅಧಿಕವಾಗಿ ಇರುತ್ತವೆ. ಕ್ಯಾನ್ಸರನ್ನು ನಿಯಂತ್ರಿಸುವಲ್ಲಿ ಎಲೆಕೋಸುಗಳು ಮುಂಚೂಣಿಯಲ್ಲಿ ನಿಲ್ಲುವ ತರಕಾರಿಯಾಗಿದೆ. ಇದರಲ್ಲಿರುವ ಸಿನಿಗ್ರಿನ್, ಸಲ್ಫೋರಫೇನ್ ಮತ್ತು ಲುಪಿಯೊಲ್‍ಗಳು ನಮ್ಮ ದೇಹದಲ್ಲಿ ಟ್ಯೂಮರ್ ಬೆಳವಣಿಗೆಯನ್ನು ನಿಯಂತ್ರಿಸುವ ಎನ್‍ಜೈಮ್‍ಗಳನ್ನು ಉದ್ಧೀಪನಗೊಳಿಸುತ್ತದೆ.

ಈರುಳ್ಳಿಗಳು

ಈರುಳ್ಳಿಗಳು

ಈರುಳ್ಳಿಗಳು ಕ್ಯಾನ್ಸರನ್ನು ನಿಯಂತ್ರಿಸುವ ಅಧ್ಬುತವಾದ ತರಕಾರಿಗಳಾಗಿವೆ. ಇವುಗಳಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ನಮ್ಮ ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿವಾರಿಸುತ್ತವೆ. ಇವುಗಳಲ್ಲಿ ಫೈಟೊಕೆಮಿಕಲ್‍ಗಳು ಕ್ಯಾನ್ಸರನ್ನು ನಿವಾರಿಸುವ ಅಂಶಗಳು ಗಣನೀಯವಾಗಿ ಹೆಚ್ಚಿರುತ್ತವೆ. ಗಂಡಸರ ಜನನಾಂಗದಲ್ಲಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯಲು ಈರುಳ್ಳಿಗಳು ಸಹಾಯ ಮಾಡುತ್ತವೆ.

ಹಸಿರು ಬಟಾಣಿ

ಹಸಿರು ಬಟಾಣಿ

ಹಸಿರು ಬಟಾಣಿಗಳು ಕ್ಯಾನ್ಸರನ್ನು ನಿಯಂತ್ರಿಸಲು ಇರುವ ಅತ್ಯಂತ ಶಕ್ತಿಶಾಲಿ ತರಕಾರಿಗಳಾಗಿವೆ. ಅದರಲ್ಲೂ ಮುಖ್ಯವಾಗಿ ಜಠರದ ಕ್ಯಾನ್ಸರ್ ನಿವಾರಿಸಲು ಇವು ಸಹಾಯ ಮಾಡುತ್ತವೆ. ಇದರಲ್ಲಿ ಪೊಟಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‍ಗಳು ಯಥೇಚ್ಛವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇವು ನೆರವು ನೀಡುತ್ತವೆ.

ಬೀನ್ಸ್

ಬೀನ್ಸ್

ಬೀನ್ಸ್‌ಗಳಲ್ಲಿ ವಿಟಮಿನ್ ಬಿಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಕ್ಯಾನ್ಸರ್ ನಿಯಂತ್ರಿಸಲು ಗಣನೀಯವಾದ ಕೊಡುಗೆಯನ್ನು ನೀಡುತ್ತದೆ. ಇವುಗಳು ಕಾರ್ಸಿನೊಜೆನ್‍ಗಳನ್ನು ನಿವಾರಿಸುವ ಲುಲುಟೇನ್ ಮತ್ತು ವೈಯೊಲಕ್ಸಂಥಿನ್ ಮತ್ತು ಬೀಟಾ-ಕೆರೊಟಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಕ್ಯಾರಟ್‍ಗಳು

ಕ್ಯಾರಟ್‍ಗಳು

ಕ್ಯಾರಟ್‍ಗಳಲ್ಲಿ ವಿಟಮಿನ್ ಎ, ಕೆ, ನಾರಿನಂಶ ಮತ್ತು ಲುಟೆನಿನ್‍ಗಳು ಇರುತ್ತವೆ. ಇವೆಲ್ಲವು ಒಟ್ಟಾರೆಯಾಗಿ ಕ್ಯಾನ್ಸರನ್ನು ನಿಯಂತ್ರಿಸಲು ಸಮರ್ಥವಾಗಿ ಕೆಲಸ ಮಾಡುತ್ತವೆ.

ಗೆಣಸು

ಗೆಣಸು

ಗೆಣಸಿನಲ್ಲಿ ಮ್ಯೆಗ್ನಿಶಿಯಂ, ಒಮೆಗಾ-3 ಫ್ಯಾಟ್ಟಿ ಆಸಿಡ್‍ಗಳು, ನಾರಿನಂಶ ಮತ್ತು ವಿಟಮಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವೆಲ್ಲವು ಕ್ಯಾನ್ಸರನ್ನು ನಿಯಂತ್ರಿಸಲು ನೆರವಾಗುತ್ತವೆ.

ಕೇಲ್

ಕೇಲ್

ಕೇಲ್‍ನ ಆರೋಗ್ಯಕಾರಿ ಪ್ರಯೋಜನಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಅಧಿಕ ವಿಟಮಿನ್‍ಗಳನ್ನು ಒಳಗೊಂಡಿರುವ ಅತ್ಯಂತ ಸುಲಭವಾಗಿ ದೊರಕುವ ತರಕಾರಿಯಾಗಿರುತ್ತದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಕೆಗಳು ಹಾಗು ಕ್ಯಾಲ್ಸಿಯಂ ಮತ್ತು ಮ್ಯೆಗ್ನಿಶಿಯಂಗಳನ್ನು ಸಹ ಒಳಗೊಂಡಿರುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ಸಹ ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅದರಲ್ಲೂ ಇದು ಕ್ಯಾನ್ಸರನ್ನು ನಿಯಂತ್ರಿಸುವ ಆಹಾರ ಪದಾರ್ಥವಾಗಿರುವುದು ಸಹ ಇದರ ಹೆಚ್ಚುಗಾರಿಕೆ. ಸ್ಪೈನಚ್‍ನಲ್ಲಿ ಪೊಟಾಶಿಯಂ, ಸತು, ವಿಟಮಿನ್ ಕೆ, ಇ, ಮತ್ತು ಎ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಕ್ಯಾನ್ಸರನ್ನು ನಿಯಂತ್ರಿಸಲು ಸ್ವಾಭಾವಿಕವಾಗಿ ನೆರವಾಗುತ್ತವೆ.

ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು ರಕ್ತ ಪರಿಚಲನೆಯನ್ನು ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಇವುಗಳು ರಕ್ತದೊತ್ತಡವನ್ನು ನಿವಾರಿಸುವ ಅಂಶಗಳನ್ನು ಸಹ ಹೊಂದಿರುತ್ತವೆ. ವಿಶೇಷವಾಗಿ ಸಕ್ಕರೆಯ ಪ್ರಮಾಣವನ್ನು ಹದ್ದು ಬಸ್ತಿನಲ್ಲಿಡಲು ಇದು ಖ್ಯಾತಿಯನ್ನು ಪಡೆದಿದೆ. ಜೊತೆಗೆ ಕ್ಯಾನ್ಸರನ್ನು ಸಹ ನಿಯಂತ್ರಿಸುತ್ತದೆ.

ಬ್ರೊಕ್ಕೊಲಿ

ಬ್ರೊಕ್ಕೊಲಿ

ಬ್ರೊಕ್ಕೊಲಿಯು ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಹಣ್ಣುಗಳಲ್ಲಿ ಒಂದಾಗಿದೆ. ಇದರ ಆಂಟಿ-ಕ್ಯಾನ್ಸರ್ ಅಂಶಗಳು ಸಹ ಇದಕ್ಕೆ ಒಳ್ಳೆಯ ಹೆಸರನ್ನು ನೀಡಿದೆ. ಇದರಲ್ಲಿ ಮೂಲತಃ ಆಂಟಿ-ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ರೂಪುಗೊಳ್ಳುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ.

English summary

10 Brilliant Vegetables That Prevent Cancer

Cancer is easily the deadliest and most dreaded disease in the world today. As a matter of fact, with changing lifestyles and increase in pollution levels, the number of cancer cases are only going up. This article takes a look at foods that prevent cancer, particularly at vegetables that prevent cancer.
Story first published: Monday, September 15, 2014, 12:02 [IST]
X
Desktop Bottom Promotion