For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಕಿಡ್ನಿಗಾಗಿ 10 ಪರಿಣಾಮಕಾರಿ ಆಹಾರಗಳು

|

ಕಿಡ್ನಿ ನಮ್ಮ ದೇಹದ ಅತ್ಯಂತ ಮಹತ್ವದ ಅಂಗಗಳಲ್ಲಿ ಒಂದಾಗಿದೆ. ಕಾರಣ ಇದು ದೇಹದ ಅತ್ಯಂತ ಪ್ರಮುಖ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಈ ಮೂತ್ರಪಿಂಡದ (ಕಿಡ್ನಿ) ಆರೋಗ್ಯವು ದೇಹದ ಆರೋಗ್ಯವನ್ನು ಪ್ರತಿನಿಧಿಸುತ್ತದೆ. ಇದನ್ನು ಆರೋಗ್ಯವಾಗಿಡಲು ಕೆಲವೊಂದು ಆಹಾರ ಪದಾರ್ಥಗಳು ಸಹಾಯ ಮಾಡುತ್ತವೆ. ಈ ಅಂಕಣದಲ್ಲಿ ಅಂತಹ ಮಹತ್ವದ ಆಹಾರ ಪದಾರ್ಥಗಳ ಕುರಿತು ನಾವು ತಿಳಿದುಕೊಳ್ಳೋಣ.

ಕೆಲವೊಂದು ಪ್ರಬಲವಾದ ಆಹಾರ ಪದಾರ್ಥಗಳು ಮೂತ್ರಪಿಂಡವನ್ನು ಸಮರ್ಪಕವಾಗಿ ಕೆಲಸ ಮಾಡಲು ಸಹಾಯ ಮಾಡಿ, ರೋಗ ರುಜಿನಗಳನ್ನು ದೂರವಿಡುತ್ತವೆ. ಈ ಆಹಾರಗಳು ಪೋಷಕಾಂಶ ಭರಿತವಾಗಿರುತ್ತವೆ ಮತ್ತು ಇವು ಕೇವಲ ಮೂತ್ರಪಿಂಡವನ್ನಷ್ಟೇ ಅಲ್ಲದೆ ದೇಹದ ಇತರ ಅಂಗಗಳನ್ನು ಸಹ ಆರೋಗ್ಯಕರವಾಗಿಡುತ್ತವೆ.

ಮೂತ್ರಪಿಂಡದ ಅನಾರೋಗ್ಯದಿಂದ ನಮ್ಮ ದೇಹದ ಮೇಲೆ ಉಂಟಾಗುವ ಹಾನಿಗಳ ಬಗೆಗೆ ನಮಗೆಲ್ಲರಿಗು ಗೊತ್ತು. ಇದನ್ನು ಗಮನದಲ್ಲಿರಿಸಿಕೊಂಡು,ನಾವು ಮೂತ್ರ ಪಿಂಡಗಳನ್ನು ಆರೋಗ್ಯಕರವಾಗಿಡುವ ಆಹಾರಗಳನ್ನೇ ಸೇವಿಸಬೇಕು. ಏಕೆಂದರೆ ಮೂತ್ರಪಿಂಡವು ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧವಾಗಿಡುವ ಕಾರ್ಯವನ್ನು ಮಾಡುತ್ತದೆ.

ಆರೋಗ್ಯಕರವಾದ ಮೂತ್ರಪಿಂಡವಿಲ್ಲದಿದ್ದಲ್ಲಿ, ನಮ್ಮ ಇಡೀ ದೇಹದ ಆರೋಗ್ಯವೇ ಹಳಿ ತಪ್ಪುವುದರಲ್ಲಿ ಯಾವುದೇ ಸಂಶಯವಿಲ್ಲ. ಬನ್ನಿ ಹಾಗಾದರೆ ನಾವು ಮೊದಲು ನಮ್ಮ ಮೂತ್ರಪಿಂಡವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಬೇಕಾಗುವ ಆಹಾರ ಪದಾರ್ಥಗಳ ಕುರಿತು ನೋಡೋಣ. ಈ ಆಹಾರ ಪದಾರ್ಥಗಳನ್ನು ಮೂತ್ರ ಪಿಂಡದ ಕಾಯಿಲೆಗಳಿಗೆ ಮತ್ತು ಅವುಗಳ ಕಾರ್ಯಾಚರಣೆಗೆ ಎಂದು ವಿಂಗಡಿಸಲಾಗಿದೆ. ಬನ್ನಿ ಹಾಗಾದರೆ ಆ ಆಹಾರ ಪದಾರ್ಥಗಳು ಯಾವುವು ಎಂದು ನೋಡೋಣ. ಕಿಡ್ನಿ ಕಲ್ಲುಗಳ ನಿವಾರಣೆಗೆ ಇಲ್ಲಿದೆ ಸೂಕ್ತ ಪರಿಹಾರ

ಎಲೆಕೋಸು

ಎಲೆಕೋಸು

ಎಲೆಕೋಸು ಮೂತ್ರಪಿಂಡಗಳ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ಆಹಾರ ಪದಾರ್ಥವಾಗಿದೆ. ಇದರಲ್ಲಿರುವ ಸಮೃದ್ಧ ಪೋಷಕಾಂಶಗಳು ಕೇವಲ ಮೂತ್ರಪಿಂಡಗಳನ್ನಷ್ಟೇ ಅಲ್ಲದೆ, ದೇಹದ ಇತರ ಅಂಗಗಳನ್ನು ಸಹ ಆರೋಗ್ಯವಾಗಿಡಲು ಸಹಕರಿಸುತ್ತವೆ. ಎಲೆಕೋಸುಗಳಲ್ಲಿ ಫೋಲೆಟ್, ಫೈಟೊ ಕೆಮಿಕಲ್‍ಗಳು ಯಥೇಚ್ಛವಾಗಿರುತ್ತವೆ. ಇವು ಕ್ಯಾನ್ಸರ್ ಕಾರಕ ಕೋಶಗಳ ಮೇಲೆ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತವೆ. ಇದರ ಜೊತೆಗೆ ಫೈಟೋ ನ್ಯೂಟ್ರಿಯೆಂಟ್‍ಗಳು ಹಾಗು ವಿಟಮಿನ್ ಕೆ, ಬಿ12, ಬಿ6, ಫೋಲಿಕ್ ಆಮ್ಲ ಮತ್ತು ಡಯಟೆರಿ ಫೈಬರ್ ಎಲ್ಲವೂ ಸೇರಿ ಮೂತ್ರಪಿಂಡವನ್ನು ಆರೋಗ್ಯವಾಗಿಡುತ್ತವೆ.

ಹೂಕೋಸು

ಹೂಕೋಸು

ಫೋಲೆಟ್ ಮತ್ತು ನಾರಿನಂಶದ ಸಮೃದ್ಧ ಆಗರವಾಗಿರುವ ಹೂಕೋಸುಗಳು ವಿಶ್ವದ ಅತ್ಯಂತ ಆರೋಗ್ಯಕಾರಿ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಇದರಲ್ಲಿರುವ ಸಮೃದ್ಧವಾದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂತ್ರ ವಿಸರ್ಜನಾಂಗದ ಆರೋಗ್ಯವನ್ನು ಸಹ ಸುಧಾರಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಸೋಡಿಯಂ, ರಂಜಕ ಮತ್ತು ಪೊಟಾಶಿಯಂಗಳಂತಹ ಆರೋಗ್ಯಕಾರಿ ಅಂಶಗಳು ಇರುತ್ತವೆ. ಇದೊಂದು ಉರಿಯೂತ ನಿರೋಧಕವಾದ ಆಹಾರ ಪದಾರ್ಥವಾಗಿದೆ. ಇದು ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ.

ಸೇಬು ಹಣ್ಣು

ಸೇಬು ಹಣ್ಣು

ಸೇಬು ಹಣ್ಣು ವಿಶ್ವದ ಅತ್ಯಂತ ಆರೋಗ್ಯಕರವಾದ ಆಹಾರ ಪದಾರ್ಥವಾಗಿದೆ. ಇವುಗಳು ಶಕ್ತಿಶಾಲಿಯಾದ ಕ್ಯಾನ್ಸರ್ ನಿರೋಧಕ ಗುಣಗಳನ್ನು ತನ್ನೊಳಗೆ ಹೊಂದಿವೆ. ಸೇಬುಗಳಲ್ಲಿ ಸಮೃದ್ಧವಾದ ನಾರಿನಂಶವಿರುತ್ತದೆ ಮತ್ತು ಇದರಿಂದ ಇದು ಕ್ಯಾನ್ಸರ್ ಮೇಲೆ ಹೋರಾಡಲು ಸಮರ್ಥವಾಗಿದೆ. ಸೇಬುಗಳು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುವ ಜೊತೆಗೆ, ಸಂಪೂರ್ಣವಾದ ಮೂತ್ರ ವಿಸರ್ಜನಾಂಗದ ಆರೋಗ್ಯವನ್ನು ಸಹ ಸುಸ್ಥಿತಿಯಲ್ಲಿಡುತ್ತದೆ.

ಈರುಳ್ಳಿಗಳು

ಈರುಳ್ಳಿಗಳು

ಈರುಳ್ಳಿಗಳು ಒಂದು ಅದ್ಭುತವಾದ ಕ್ಯಾನ್ಸರ್ ನಿರೋಧಕ ಆಹಾರ ಪದಾರ್ಥವಾಗಿದೆ. ಶ್ವಾಸಕೋಶದ ಆರೋಗ್ಯಕ್ಕೆ ಈರುಳ್ಳಿಯು ಹೇಳಿ ಮಾಡಿಸಿದಂತಹ ಆಹಾರವಾಗಿದೆ. ಈರುಳ್ಳಿಗಳಲ್ಲಿ ಕ್ವೆರ್ಸೆಟಿನ್ ಎಂಬ ಫ್ಲಾವೊನಾಯ್ಡ್‌ಗಳು ಕಂಡು ಬರುತ್ತವೆ. ಇದು ಒಂದು ಶಕ್ತಿಶಾಲಿ ಘಟಕಾಂಶವಾಗಿದ್ದು, ಹೃದ್ರೋಗ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ನೀವು ಈರುಳ್ಳಿಯನ್ನು ಸೇವಿಸುತ್ತಿದ್ದಲ್ಲಿ, ನಿಮ್ಮ ಮೂತ್ರಪಿಂಡಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ.

ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು ಬಹು ಹಿಂದಿನಿಂದಲೂ ರಕ್ತ ಪರಿಚಲನೆ ಮತ್ತು ದೇಹದಲ್ಲಿ ರಕ್ತದೊತ್ತಡವನ್ನು ನಿಭಾಯಿಸಲು ಹೇಳಿ ಮಾಡಿಸಿದ ತರಕಾರಿಯಾಗಿ ಗುರುತಿಸಿಕೊಂಡಿದೆ. ಇವುಗಳಲ್ಲಿ ವಿಟಮಿನ್ ಬಿ6 ಮತ್ತು ಕೆ ಗಳು ಇರುತ್ತವೆ. ಇವುಗಳು ಆರೋಗ್ಯಕರ ಮೂತ್ರಪಿಂಡದ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ.

ದಾಳಿಂಬೆ

ದಾಳಿಂಬೆ

ದಾಳಿಂಬೆ ಜ್ಯೂಸ್ ಕಿಡ್ನಿ ಸ್ಟೋನ್ ಬರದಂತೆ ತಡೆಯುತ್ತದೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ಹೆಚ್ಚಿನ ಉಪಯೋಗ ಪಡೆಯಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಮೂಲಂಗಿ ಸೊಪ್ಪು/ಕೊತ್ತಂಬರಿ ಸೊಪ್ಪು

ಮೂಲಂಗಿ ಸೊಪ್ಪು/ಕೊತ್ತಂಬರಿ ಸೊಪ್ಪು

ಒಂದು ಹಿಡಿ ಮೂಲಂಗಿ ಸೊಪ್ಪು ಅಥವ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ ಅದನ್ನು ಕುದಿಯುವ ನೀರಲ್ಲಿ ಹಾಕಿ 10 ನಿಮಿಷ ಬೇಯಿಸಿಬೇಕು. ನಂತರ ಸೋಸಿಕೊಂಡು ತಂಪಾದ ಸ್ಥಳ ಅಥವಾ ಪ್ರಿಜ್ ನಲ್ಲಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ದಿನವು ಒಂದು ಗ್ಲಾಸ್ ಈ ನೀರನ್ನು ಕುಡಿಯುತ್ತಿರಿ ಕಿಡ್ನಿ ಸ್ವಚ್ಛವಾಗುತ್ತದೆ.

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇವುಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ರಕ್ತ ಪರಿಚಲನೆಯನ್ನು ಸುಗಮಗೊಳಿಸುವ ಕಾರ್ಯವನ್ನು ಮಾಡುತ್ತವೆ. ಆದ್ದರಿಂದ ಇವುಗಳು ಆರೋಗ್ಯಕರವಾದ ಮೂತ್ರಪಿಂಡಗಳಿಗೆ ಅತ್ಯಾವಶ್ಯಕವಾಗಿವೆ.

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು ಅಂತೊಸೈನೈಡಿನ್‍ಗಳು ಎಂದು ಕರೆಯಲ್ಪಡುವ ಫೈಟೊಕೆಮಿಕಲ್‍ಗಳ ಸಮೃದ್ಧ ಆಗರವಾಗಿವೆ. ಇವುಗಳು ನಮ್ಮ ದೇಹದ ಮೇಲೆ ಆಂಟಿ ಆಕ್ಸಿಡೆಂಟ್‍ಗಳಿಂದ ಉಂಟಾಗಿರುವ ಪರಿಣಾಮಗಳನ್ನು ಹೋಗಲಾಡಿಸುತ್ತವೆ. ಇವುಗಳು ಮೆಗ್ನೇಶಿಯಂ ಮತ್ತು ಸತುವಿನ ಸಮೃದ್ಧ ಆಗರವನ್ನು ಹೊಂದಿರುತ್ತವೆ. ಇವು ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಅಂಶಗಳಾಗಿವೆ.

English summary

10 Brilliant Foods You Must Eat For Healthy Kidneys

In this article, we look at foods that are good for the kidneys. We look at some potent foods that help to boost kidney functioning and keep diseases at bay. These foods, owing to their nutrient composition, serve to benefit not just the kidneys but several other organs of the human body as well.
X
Desktop Bottom Promotion