For Quick Alerts
ALLOW NOTIFICATIONS  
For Daily Alerts

ದೇಹದ ಕೊಬ್ಬು ಕರಗಿಸುವ ಅತ್ಯದ್ಭುತ ತರಕಾರಿಗಳು

By ಮನೋಹರ್
|

ಹೊಟ್ಟೆ ಬೊಜ್ಜು ಬಂದರೆ ಅದನ್ನು ಹೋಗಲಾಡಿಸಲು ಕಷ್ಟ ಪಡುವುದಕ್ಕಿಂತ, ಅದನ್ನು ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳು ಪಾಲಿಸುವುದು ಸೂಕ್ತ ಅಲ್ಲವೇ? ಹೊಟ್ಟೆ ಮತ್ತು ಸೊಂಟದ ಗಾತ್ರವನ್ನು ಸರಿಯಾದ ರೀತಿಯಲ್ಲಿ ಇಡುವುದು ಸುಲಭದ ಕೆಲಸವಲ್ಲ, ಅದಕ್ಕಾಗಿ ಉತ್ತಮವಾದ ಆಹಾರಕ್ರಮ ಪಾಲಿಸಬೇಕು, ದೈಹಿಕ ಶ್ರಮ ಪಡಬೇಕು. ಇದರತ್ತ ಏಕಾಗ್ರತೆ ಇರಬೇಕಾಗುತ್ತದೆ. ಬನ್ನಿ ಕೊಬ್ಬು ಕರಗಿಸುವ ತರಕಾರಿಗಳಾವುವು ಎಂಬುದನ್ನು ನೋಡೋಣ...

ಅವರೆಕಾಯಿ (ಬೀನ್ಸ್)

ಅವರೆಕಾಯಿ (ಬೀನ್ಸ್)

ಅವರೆಕಾಯಿಯಲ್ಲಿ ಪ್ರಮುಖವಾಗಿರುವ catechins ಎಂಬ ಪೋಷಕಾಂಶವನ್ನು ಅರಗಿಸಿಕೊಳ್ಳಲು ನಮ್ಮ ಕರುಳುಗಳಿಗೆ ಹೆಚ್ಚಿನ ಸಕ್ಕರೆಯ ಅವಶ್ಯಕತೆ ಇದೆ. ಪರಿಣಾಮವಾಗಿ ಸಕ್ಕರೆಯು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಟ್ಟು ಕೊಬ್ಬು ಸಹಾ ಕರಗುತ್ತದೆ. ದೇಹದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯ ಶೇಖರಣೆ ಸ್ಥೂಲಕಾಯಕ್ಕೆ ಆಹ್ವಾನ ನೀಡುತ್ತದೆ. ಅಲ್ಲದೇ lutein, zeaxanthin, ಮತ್ತು betacarotenes ಎಂಬ ಆಂಟಿ ಆಕ್ಸಿಡೆಂಟುಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ.

ಶತಾವರಿ (Asparagus)

ಶತಾವರಿ (Asparagus)

ಈರುಳ್ಳಿಯ ಮೇಲಿನ ಕೋಡುಗಳಂತೆ ಕಾಣುವ ಶತಾವರಿಯಲ್ಲಿ glutathione ಎಂಬ ಪೋಷಕಾಂಶ ಪ್ರಮುಖವಾಗಿದ್ದು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಉತ್ತಮ ಪ್ರಮಾಣದಲ್ಲಿ ವಿಟಮಿನ್ A, C ಮತ್ತು E, B-ಕಾಂಪ್ಲೆಕ್ಸ್ ವಿಟಮಿನ್ ಗಳು, ಪೊಟಾಶಿಯಂ ಮತ್ತು ಸತು ಇರುವುದರಿಂದ ಜೀವರಸಾಯನಿಕ ಕ್ರಿಯೆಗೆ ಪ್ರೋತ್ಸಾಹ ನೀಡುತ್ತದೆ. ಪರಿಣಾಮವಾಗಿ ದೇಹದಲ್ಲಿ ಶೇಖರವಾಗಿದ್ದ ಕೊಬ್ಬು ಶೀಘ್ರ ಕರಗಿ ಸ್ಥೂಲಕಾಯ ಹಿಂದೆ ಸರಿಯುತ್ತದೆ.

ಹಸಿಮೆಣಸು

ಹಸಿಮೆಣಸು

ನಾಲಿಗೆಗೆ ಚುರುಕು ಮುಟ್ಟಿಸುವ ಮೆಣಸು ಹೊಟ್ಟೆ ಸೇರಿದಾಗ ವಿಭಿನ್ನ ರೀತಿಯಲ್ಲಿ ವರ್ತಿಸುತ್ತದೆ. ಮೆಣಸಿನ ಖಾರಕ್ಕೆ ಕ್ಯಾಪ್ಸೈಸಿನ್ ಎಂಬ ಅಂಶ ಕಾರಣವಾಗಿದೆ. ಇದು ಹೊಟ್ಟೆಯಲ್ಲಿರುವ ಆಮ್ಲದೊಡನೆ ಸಂಯೋಜಿತಗೊಂಡಾಗ ಹೊಟ್ಟೆಯಲ್ಲಿ ಶಾಖ ಉತ್ಪನ್ನವಾಗುತ್ತದೆ. diet-induced thermogenesis ಎಂಬ ಹೆಸರಿನ ಈ ಶಾಖವನ್ನು ಶಮನಗೊಳಿಸಲು ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಶೇಖರಗೊಂಡ ಕೊಬ್ಬನ್ನು ಕರಗಿಸಬೇಕಾಗಿ ಬರುತ್ತದೆ. ಪರಿಣಾಮವಾಗಿ ಸ್ಥೂಲಕಾಯ ನಿಧಾನವಾಗಿ ಹಿಂದೆ ಸರಿಯುತ್ತದೆ.

ಹಸಿರು ಬಟಾಣಿ

ಹಸಿರು ಬಟಾಣಿ

ಬಟಾಣಿಯಲ್ಲಿ phytonutrients, ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ಹಾಗೂ ಆಂಟಿ ಆಕ್ಸೆಡೆಂಟುಗಳು ಹೇರಳವಾಗಿವೆ. ಇದರಿಂದಾಗಿ ಜೀವರಸಾಯನಿಕ ಕ್ರಿಯೆ ಚುರುಕುಗೊಂಡು ಕೊಬ್ಬು ಕರಗುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಫೋಲೇಟ್ ಮತ್ತು ಅಸರ್ಬಿಕ್ ಆಮ್ಲ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕರಿಸುತ್ತವೆ.

ಕೇಲ್ ಎಲೆಗಳು (Kale)

ಕೇಲ್ ಎಲೆಗಳು (Kale)

ಕೇಲ್ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಕೆ, ಸಿ ಹಾಗೂ ಕ್ಯಾಲ್ಸಿಯಂ ಇದೆ. ಇದರಲ್ಲಿರುವ lutein ಮತ್ತು zeaxanthin ಎಂಬ ಪೋಷಕಾಂಶಗಳು ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತವೆ. ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಕೇಲ್ ಎಲೆಗಳು ಕೊಬ್ಬನ್ನು ಕರಗಿಸುವಲ್ಲಿ ಸಹಕಾರಿಯಾಗಿವೆ.

English summary

Best Fat Burning Vegetables You Must Eat Daily

Lifestyles today are undergoing massive transformations with a majority of people laying heightened focus on diet habits and foods they consume. Weight loss is perhaps the most extensively discussed topics today. Here are the 10 best fat burning vegetables. Read on...
X
Desktop Bottom Promotion