For Quick Alerts
ALLOW NOTIFICATIONS  
For Daily Alerts

ಹಣೆಯ ಮೇಲಿನ ಬಿಂದಿಯ ಚಮತ್ಕಾರಿಕ ಲಾಭಗಳು ನಿಮಗೆ ತಿಳಿದಿದೆಯೇ?

By Gururaja Achar
|

ನಾನು ಚಿಕ್ಕವಳಿದ್ದಾಗಿನಿoದಲೂ ಸಹ ನನ್ನ ತಂದೆಯವರು ನನಗೆ ಹಣೆಯ ಮೇಲೆ ಬಿಂದಿಯನ್ನು ಧರಿಸುವಂತೆ ಒತ್ತಾಯಿಸುತ್ತಿದ್ದುದು ಈಗಲೂ ಸಹ ನೆನಪಿದೆ. ನಾನೋರ್ವ ಸಂಪ್ರದಾಯಸ್ಥ ತಮಿಳು ಬ್ರಾಹ್ಮಣ ಕುಟುಂಬದಿಂದ ಬಂದವಳು ಎಂಬುದನ್ನು ಪರಿಗಣಿಸುವುದಾದರೆ, ನನ್ನ ತಂದೆ ನನ್ನ ಆ ರೀತಿ ಒತ್ತಾಯಿಸುತ್ತಿದ್ದುದು ತಪ್ಪೇನೂ ಅಲ್ಲ ಬಿಡಿ. ಆದರೆ, ನಾನೋರ್ವ ವಿಜ್ಞಾನದ ವಿಧ್ಯಾರ್ಥಿನಿಯಾಗಿದ್ದುಕೊಂಡು,

ಮತ್ತೆ ಮರುಕಳಿಸಿದೆ ಬಿಂದಿ ಫ್ಯಾಷನ್

ನಾನು ನನ್ನ ತಂದೆಯ ಆಜ್ಞೆಯನ್ನು ಪಾಲಿಸಲು ಖಂಡಿತವಾಗಿಯೂ ಸಹ ನನಗೆ ಇಂತಹ ಆಚರಣೆಯ ಹಿಂದಿರುವ ಬಲವಾದ ವೈಜ್ಞಾನಿಕ ಸಾಕ್ಷಿ ಹಾಗೂ ಕಾರಣವು ಬೇಕಿತ್ತು. ಹೀಗಾಗಿ ಮುಂದೆ ಕಾಲಕ್ರಮೇಣ ಅವರು ನನಗೆ ಅದರ ಬಗ್ಗೆ ಒತ್ತಾಯಿಸುವುದನ್ನು ನಿಲ್ಲಿಸಿದರು ಹಾಗೂ ಅಂತೆಯೇ ನಾನೂ ಸಹ ಅದನ್ನು ಪಾಲಿಸುವುದನ್ನು ಬಿಟ್ಟುಬಿಟ್ಟೆ.

ಆದರೂ ಸಹ ಇಂತಹ ಒಂದು ಪರಿಪಾಠದ ಉದ್ದೇಶವಾದರೂ ಏನು ಎಂಬ ಜಿಜ್ಞಾಸೆಯoತೂ ನನ್ನನ್ನು ಎಂದೆಂದೂ ಕಾಡುತ್ತಲಿತ್ತು. ಈ ಕಾರಣಕ್ಕಾಗಿ ಇದರ ಕುರಿತು ನಾನೊoದಿಷ್ಟು ಸಂಶೋಧನೆಯಲ್ಲಿ ತೊಡಗಿಸಿಕೊಂಡೆ ಹಾಗೂ ಯಾವ ಕಾರಣಕಾಗಿ ನಮ್ಮ ಪೂರ್ವಜರು ಈ ಮಂಗಳಕರವಾದ ಬಿಂದಿ ಅಥವಾ ತಿಲಕವನ್ನು ಧರಿಸುತ್ತಿದ್ದರು ಎಂಬುದನ್ನು ಕಂಡುಕೊಂಡೆ. ಕಾರಣಗಳು ಈ ಕೆಳಗಿನಂತಿವೆ.

ನಿಮ್ಮ ಮುಖಕ್ಕೆ ಸೂಕ್ತವಾದ ಬಿಂದಿ ಯಾವುದು?

ಬಿಂದಿಯನ್ನು ಧರಿಸುವ ಸ್ಥಾನದ ಮಹತ್ವ.
ಸಾಂಪ್ರದಾಯಿಕವಾಗಿ ಬಿಂದಿಯನ್ನು ಹಣೆಯ ಮೇಲೆ, ಸರಿಯಾಗಿ ಹುಬ್ಬುಗಳ ನಡುವೆ ಧರಿಸುತ್ತಾರೆ. ಕೆಲವರು ಹಣೆಯ ಮೇಲೆ ಸ್ವಲ್ಪ ಎತ್ತರದಲ್ಲಿ ಧರಿಸಬಹುದು. ಆದರೆ, ಇದರ ಪರಿಣಾಮವoತೂ ಒಂದೇ ರೀತಿಯದ್ದಾಗಿರುತ್ತದೆ. ಧರಿಸುವ ಸ್ಥಾನದ ಮಹತ್ವವಾದರೂ ಏನು ಎಂದು ನೀವು ಪ್ರಶ್ನಿಸಬಹುದು. ಅದಕ್ಕೆ ಕಾರಣವು ಈ ಕೆಳಗಿನಂತಿದೆ.

ಏಕಾಗ್ರತೆಯ ಕೇಂದ್ರಸ್ಥಾನ:

ಏಕಾಗ್ರತೆಯ ಕೇಂದ್ರಸ್ಥಾನ:

ನಮ್ಮ ಹಣೆಯ ಮೇಲಿನ; ಕರಾರುವಕ್ಕಾಗಿ ಹೇಳಬೇಕೆಂದರೆ ನಮ್ಮ ಹುಬ್ಬುಗಳ ನಡುವಿನ ಸ್ಥಳವು, ದೇಹದ ಅತ್ಯಂತ ಪ್ರಮುಖ ನರಗಳು ಸಂಧಿಸುವ ಸಂಗಮ ಸ್ಥಾನವಾಗಿದೆ. ಇದಕ್ಕೆ ಹೊರತಾಗಿ, ಈ ಸ್ಥಾನವು 6 ನೆಯ ಮತ್ತು ಅತೀ ಮುಖ್ಯ ಚಕ್ರದ ಸ್ಥಳವಾಗಿದೆ. ಈ ಚಕ್ರವು "ಆಜ್ಞಾ ಚಕ್ರ" ಎಂದು ಗುರುತಿಸಲ್ಪಟ್ಟಿದ್ದು, ಶರೀರದ ಈ ಸ್ಥಳವು ಜಾಗೃತಿಯ ಅಥವಾ ಎಚ್ಚರದ ಬಿಂದು ಮತ್ತು ಮೂರನೆಯ ಕಣ್ಣಿನ ಸ್ಥಾನವೆಂದು ಪರಿಗಣಿತವಾಗಿದೆ.

ಈ ಸ್ಥಳವನ್ನು ಪ್ರಚೋದಿಸಿದಾಗ, ವ್ಯಕ್ತಿಯೋರ್ವನು ಅಥವಾ ವ್ಯಕ್ತಿಯೋರ್ವಳು ಶಾಂತವಾಗಿರುವಂತೆ ನೋಡಿಕೊಳ್ಳುತ್ತದೆ, ಆತನು ಅಥವಾ ಆಕೆಯು ಉದ್ವೇಗವನ್ನು ಎದುರಿಸಲು ಸಹಕರಿಸುವುದನ್ನೊಳಗೊಂಡoತೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂದು ನಂಬಲಾಗಿದೆ. ವ್ಯಕ್ತಿಯೋರ್ವಳ ಎರಡು ಭೌತಿಕ ನೇತ್ರಗಳಿಗೆ ಕಾಣಿಸದ ಅತೀoದ್ರಿಯ ಲೋಕಕ್ಕೆ ತೆರೆದುಕೊಳ್ಳಲು ಈ ಸ್ಥಾನವು ಸಹಕಾರಿ ಎಂದು ನಂಬಲಾಗಿದೆ. ಆದರೆ, ಈ ಎಲ್ಲಾ ಆಧ್ಯಾತ್ಮಿಕ ಲಾಭಗಳ ಹೊರತಾಗಿ, ಈ ಸಂಪ್ರದಾಯವು ಕೆಲವು ಅತ್ಯಂತ ವಿಸ್ಮಯಕರ ಆರೋಗ್ಯ ಲಾಭಗಳನ್ನು ಹೊಂದಿದೆ. ಈ ಸ್ಥಾನವನ್ನು ಪ್ರಚೋದಿಸುವುದರಿoದ ಈ ಕೆಳಗಿನ ಆರೋಗ್ಯ ಲಾಭಗಳನ್ನು ಪಡೆಯಬಹುದು.

ತಲೆಶೂಲೆಯಿoದ ಮುಕ್ತಿ ದೊರಕಿಸುತ್ತದೆ:

ತಲೆಶೂಲೆಯಿoದ ಮುಕ್ತಿ ದೊರಕಿಸುತ್ತದೆ:

Acupressure ಚಿಕಿತ್ಸಾ ವಿಧಾನದ ತತ್ವಗಳ ಪ್ರಕಾರ, ತಲೆಶೂಲೆಯಿಂದ ಅತೀ ಶೀಘ್ರವಾಗಿ ಮುಕ್ತಿ ಹೊಂದುವ ಮಾರ್ಗವನ್ನು ಕಣ್ಡುಕೊಳ್ಳಲು, ಶರೀರದ ಈ ಭಾಗವು ಕೀಲಿ ಕೈಯಿದ್ದಂತೆ. ಇದಕ್ಕೆ ಕಾರಣವೇನೆಂದರೆ ಈ ಸ್ಥಳವು ನರಗಳು ಮತ್ತು ರಕ್ತನಾಳಗಳ ಸ್ಥಳವಾಗಿದ್ದು, ಈ ಸ್ಥಳವನ್ನು ಮಸಾಜ್ ಗೆ ಒಳಪಡಿಸಿದರೆ, ಅವು ಬಹುಬೇಗನೆ ಒತ್ತಡಮುಕ್ತವಾಗುತ್ತವೆ. ತಲೆಶೂಲೆಯನ್ನು ನಿವಾರಿಸಲು ಲಭ್ಯವಿರುವ ನೈಸರ್ಗಿಕ ಪರಿಹಾರಗಳ ಕುರಿತು ಓದಿ ತಿಳಿಯಿರಿ.

ಸೈನಸ್ (ಮೂಗಿನ ಕುಳಿ) ಗಳನ್ನು ಸ್ವಚ್ಚಗೊಳಿಸುತ್ತದೆ:

ಸೈನಸ್ (ಮೂಗಿನ ಕುಳಿ) ಗಳನ್ನು ಸ್ವಚ್ಚಗೊಳಿಸುತ್ತದೆ:

ಭ್ರೂಮಧ್ಯ ಭಾಗವನ್ನು ತೀಡಿದಾಗ, ಕಪಾಲ ನರದ (ನಮ್ಮ ಇಡೀ ಮುಖಕ್ಕೆ ರಕ್ತ ಸರಬರಾಜು ಮಾಡುವ ನರ) (trigeminal nerve) ಒಂದು ನಿರ್ಧಿಷ್ಟ ಭಾಗವು; ವಿಶೇಷವಾಗಿ ಮೂಗು ಮತ್ತು ಅದರ ಸುತ್ತಮುತ್ತಲ ಭಾಗಗಳಿಗೆ (ಮುಖ್ಯವಾಗಿ ಕೆನ್ನೆ ಮೂಳೆ (zygomatic), temporal, ಮತ್ತು ಕಪಾಲ ನರದ buccal arm ಭಾಗ) ರಕ್ತ ಸರಬರಾಜು ಮಾಡುವ ನರವು ಪ್ರಚೋದಿತವಾಗುತ್ತದೆ. ಈ ನರದ ಪ್ರಚೋದನೆಯು ಮೂಗಿನತ್ತ, ಮೂಗಿನ ಒಳಮೇಲ್ಮೈ ಮತ್ತು ಸೈನಸ್ ಗಳಿಗೆ ರಕ್ತದ ಹರಿಯುವಿಕೆಯನ್ನು ವೃದ್ಧಿಸುವಂತೆ ಮಾಡುತ್ತದೆ. ಹಾಗೂ ತನ್ಮೂಲಕ ಕಟ್ಟಿದ ಮೂಗನ್ನು ಸ್ವಚ್ಚಗೊಳಿಸುತ್ತದೆ, ಸೈನಸ್ ಗಳ ಒಳಭಾಗದ ಹಾಗೂ ಮೂಗಿನ ಉರಿಯೂತವನ್ನು ತಗ್ಗಿಸುತ್ತದೆ. ಇದು, ಕಟ್ಟಿದ ಮೂಗು ಸ್ವಚ್ಚಗೊಳ್ಳಲು ಹಾಗೂ ಸೈನಸ್ ಗಳ ಉರಿಯೂತವು ನಿವಾರಿಸಲ್ಪಡಲು ಸಹಕಾರಿಯಾಗುತ್ತದೆ. ಸೈನಸ್ ಗಳ ಉರಿಯೂತದ ಪರಿಹಾರಕ್ಕಾಗಿ ಲಭ್ಯವಿರಬಹುದಾದ ಮನೆಮದ್ದುಗಳ ಬಗ್ಗೆ ಓದಿ ತಿಳಿಯಿರಿ.

ಮುಖದ ಸುಕ್ಕು ಅಥವಾ ನೆರಿಗೆಗಳನ್ನು ನಿವಾರಿಸುತ್ತದೆ:

ಮುಖದ ಸುಕ್ಕು ಅಥವಾ ನೆರಿಗೆಗಳನ್ನು ನಿವಾರಿಸುತ್ತದೆ:

ಭ್ರೂಮಧ್ಯ ಭಾಗವನ್ನು ಪ್ರಚೋದಿಸುವುದರ ಅತೀ ಚಮತ್ಕಾರಿಕ ಪ್ರಯೋಜನಗಳಲ್ಲಿ ಒಂದು ಏನೆಂದರೆ, ಈ ಪ್ರಕ್ರಿಯೆಯು ಮುಖದ ಸ್ನಾಯುಗಳನ್ನು ಪ್ರಚೋದಿಸುತ್ತದೆ ಮತ್ತು ಮುಖಕ್ಕೆ ಸೇರಿದ ಎಲ್ಲಾ ಸ್ನಾಯುಗಳಿಗೂ ರಕ್ತದ ಸರಬರಾಜನ್ನು ಹೆಚ್ಚಿಸುತ್ತದೆ (supratrochlear ಅಪಧಮನಿ ಮತ್ತು supratrochlear ಅಭಿದಮನಿಗಳನ್ನು ಪ್ರಚೋದಿಸುವುದರ ಮೂಲಕ). ಇಂತಹ ಒಂದು ಕ್ರಿಯೆಯು, ಸ್ನಾಯುಗಳು ತಮ್ಮ ಬಲವನ್ನು ಕಾಪಿಟ್ಟುಕೊಳ್ಳುವoತೆ ಮಾಡುತ್ತದೆ, ತ್ವಚೆಯ ಆರೈಕೆ ಮಾಡುತ್ತದೆ, ಹಾಗೂ ಚರ್ಮದ ನೆರಿಗೆಗಳನ್ನು ದೂರವಿರಿಸುತ್ತದೆ. ಇಷ್ಟು ಮಾತ್ರವಲ್ಲದೇ, ಈ ಭಾಗವು supratrochlear ನಾರದ ಮೂಲಸ್ಥಾನವಾಗಿರುವುದರಿಂದ (ತ್ವಚೆಯನ್ನು ಪೋಷಿಸುವ ನರದ ಒಂದು ಶಾಖೆ) ಚರ್ಮವು ನಯವಾಗಿ, ಆರೋಗ್ಯಯುತವಾಗಿ, ಮತ್ತು ಬಹುಕಾಲ ನೆರಿಗೆಗಳಿಂದ ಮುಕ್ತವಾಗಿರುವಂತೆ ಕಾಪಾಡುತ್ತದೆ. ವಯಸ್ಸಾಗುವ ಪ್ರಕ್ರಿಯೆಯನ್ನು ಪ್ರತಿರೋಧಿಸುವುದರ ಕುರಿತಾದ ಎಲ್ಲಾ ಮಾಹಿತಿಯನ್ನು ಪಡೆಯಿರಿ.

Bell 's palsy ಯ ರೋಗದಿಂದ ಮುಕ್ತವಾಗಿಸುತ್ತದೆ:

Bell 's palsy ಯ ರೋಗದಿಂದ ಮುಕ್ತವಾಗಿಸುತ್ತದೆ:

Bell 's palsy ಎಂಬ ರೋಗದಿಂದ ನರಳುತ್ತಿರುವವರಿಗೆ, ಭ್ರೂಮಧ್ಯ ಭಾಗದ ಮಸಾಜ್ ಕ್ರಿಯೆಯು ನoಬಲಸ್ಸಾಧ್ಯವಾದ ಫಲಿತಾಂಶಗಳನ್ನು ತೋರಿಸಿಕೊಟ್ಟಿದೆ (ಮುಖದ ಒಂದು ಬದಿ ಅಥವಾ ಪಾರ್ಶ್ವಕ್ಕೆ ಲಕ್ವಾ ಹೊಡೆಯುವ ರೋಗವೇ Bell 's palsy). ಸರಿಯಾಗಿ ಕಣ್ಣಿನ ಹುಬ್ಬುಗಳ ನಡುವೆ procerus ಸ್ನಾಯುವಿದೆ .

ತಲೆಬುರುಡೆಯ ಸ್ನಾಯು ಸಂಖ್ಯೆ VII ರ ನರತoತುಗಳನ್ನು ಹೊಂದಿರುವ temporal ನರದ ಶಾಖೆಗಳಿಂದ ಈ ಸ್ನಾಯುವು ಪೋಷಿಸಲ್ಪಡುತ್ತದೆ. ಶುಶ್ರೂಷಕರು ಔಷಧಿಯುಕ್ತ ತೈಲವನ್ನು 40 ರಿಂದ 60 ನಿಮಿಷಗಳವರೆಗೆ ಭ್ರೂಮಧ್ಯ ಭಾಗಕ್ಕೆ ನಿರಂತರವಾಗಿ ಸುರಿಯುತ್ತಾರೆ. ಈ ಪ್ರಕ್ರಿಯೆಯು ಮುಖದ ನರಗಳಿಗೆ ಗಾಢವಾದ ಪ್ರಚೋದನೆ ಉoಟುಮಾಡುವುದರಿoದ Bell 's palsy ರೋಗಲಕ್ಷಣಗಳನ್ನು ನಿವಾರಿಸುತ್ತದೆ.

ಕಣ್ಣಿನ ಸ್ನಾಯುಗಳಿಗೆ ಒಳ್ಳೆಯದು:

ಕಣ್ಣಿನ ಸ್ನಾಯುಗಳಿಗೆ ಒಳ್ಳೆಯದು:

ಭ್ರೂಮಧ್ಯ ಭಾಗವು ನೇರವಾಗಿ supratrochlear ನರಕ್ಕೆ ಸಂಪರ್ಕ ಹೊಂದಿದೆ (ಕಣ್ಣುಗಳು ಮತ್ತು ತ್ವಚೆಯ ಸ್ನಾಯುಗಳಿಗೆ ಪೋಷಣೆ ಒದಗಿಸುವ ನರಗಳ ತoತುಗಳನ್ನೊಳಗೊoಡ ಒಂದು ನರ). ಈ ನರವು ನಿಮ್ಮ ಕಣ್ಣುಗಳನ್ನು ಸುತ್ತುವರೆದಿರುವ ಎಲ್ಲಾ ಸ್ನಾಯುಗಳಿಗೂ ಸಂಪರ್ಕ ಹೊಂದಿದ್ದು ಅವು ಸುಲಭವಾಗಿ ಬೇರೆ ಬೇರೆ ದಿಕ್ಕುಗಳತ್ತ ಹೊರಳಲು ಸಹಾಯ ಮಾಡುತ್ತದೆ. ಈ ಸ್ನಾಯುಗಳು ನಿಮ್ಮ ಕಣ್ಣುಗಳ ಆಕಾರವನ್ನು ಬದಲಾಯಿಸುವಲ್ಲಿ ನೆರವಾಗಿದ್ದು, ಇದು ನೀವು ಸಮೀಪದ ಮತ್ತು ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಸಹಕರಿಸುತ್ತದೆ. ಕಣ್ಣುಗಳು ನಿಮ್ಮ ಆರೋಗ್ಯದ ಕುರಿತು ಏನು ಹೇಳುತ್ತವೆ ಎಂಬುದನ್ನು ಮತ್ತಷ್ಟು ಓದಿನ ಮೂಲಕ ತಿಳಿಯಿರಿ.

ಕೇಳುವ ಕ್ರಿಯೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ:

ಕೇಳುವ ಕ್ರಿಯೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ:

ನಿಮ್ಮ ಮುಖದ ಸ್ನಾಯುಗಳನ್ನು ಪೋಷಿಸುವ ನರಗಳ ಪೈಕಿಗಳಲ್ಲೊoದು, ನಿಮ್ಮ ಕಿವಿಯ cochlear ಭಾಗವನ್ನು ಪ್ರಚೋದಿಸುತ್ತದೆ (cochlear, ನಿಮ್ಮ ಒಳಕಿವಿಯ ಬಹುಮುಖ್ಯ ಭಾಗವಾಗಿದ್ದು ಶ್ರವಣ ಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ). ಅದ್ದರಿಂದ, ಭ್ರೂಮಧ್ಯ ಭಾಗದ ಪ್ರಚೋದನೆಯು ನಿಮ್ಮ ಕಿವಿಯ ಆರೋಗ್ಯವನ್ನು ಕಾಪಿಡುತ್ತದೆ.

ಹುಬ್ಬುಗಳ ನಡುವಿನ ನವಿರಾದ ನೆರಿಗೆಗಳನ್ನು ಕಡಿಮೆ ಮಾಡುತ್ತದೆ:

ಹುಬ್ಬುಗಳ ನಡುವಿನ ನವಿರಾದ ನೆರಿಗೆಗಳನ್ನು ಕಡಿಮೆ ಮಾಡುತ್ತದೆ:

ಹುಬ್ಬುಗಳ ನಡುವಿನ ನವಿರಾದ ನೆರಿಗೆಗಳು ಬಹುತೇಕರನ್ನು ಚಿಂತೆಗೀಡುಮಾಡುತ್ತದೆ. ಇಂತಹ ನೆರಿಗೆಗಳನ್ನು ದೂರವಿಡಬೇಕಾದರೆ, ನಿಮ್ಮ ಭ್ರೂಮಧ್ಯ ಭಾಗವನ್ನು ದಿನಕ್ಕೊಂದು ಬಾರಿ ಮಸಾಜ್ ಮಾಡಿರಿ. ಇಲ್ಲಿಯೇ procerus ಸ್ನಾಯು ಇದೆ. ಈ ಸ್ನಾಯುವನ್ನು ಮಸಾಜ್ ಮಾಡುವುದರಿಂದ ಸ್ನಾಯುವು ಬಲಗೊಳ್ಳುವುದಲ್ಲದೇ ಆ ಭಾಗದ ತ್ವಚೆಗೆ ರಕ್ತದ ಸರಬರಾಜನ್ನು ಹೆಚ್ಚಿಸಿ ನರಗಳನ್ನು ಪ್ರಚೋದಿಸುತ್ತದೆ. ಇದರ ಪರಿಣಾಮವಾಗಿ ಆ ಚಿಂತೆಯನ್ನುಂಟು ಮಾಡುವ ನೆರಿಗೆಗಳನ್ನು ದೂರ ಮಾಡುತ್ತದೆ.

ನಿಮ್ಮ ಚಿತ್ತವನ್ನು ಶಾಂತವಾಗಿರಿಸುತ್ತದೆ:

ನಿಮ್ಮ ಚಿತ್ತವನ್ನು ಶಾಂತವಾಗಿರಿಸುತ್ತದೆ:

ಉದ್ವೇಗ ಮತ್ತು ಚಿಂತೆ ಅಥವಾ ಬೇಗುದಿಯ ಕಾರಣದಿಂದ ಉಂಟಾಗುವ ಹಾನಿಗೆ ಬಹುವಾಗಿ ತುತ್ತಾಗುವ ಭಾಗವೆಂದರೆ ಆಜ್ಞಾಚಕ್ರ ಅಥವಾ ಭ್ರೂಮಧ್ಯ ಭಾಗ. ಇಲ್ಲಿಯೇ ನೋಡಿ ಬಿಂದಿಯನ್ನು ಧರಿಸುವುದರ ಮಹತ್ವ ಅಡಗಿರುವುದು. ಈ ಭಾಗಕ್ಕೆ ಪ್ರತಿದಿನ ಮಸಾಜ್ ಮಾಡುವುದರಿಂದ ಇಲ್ಲಿನ ನರಗಳು ಮತ್ತು ಸ್ನಾಯುಗಳಿಗೆ ಒಂದು ರೀತಿಯ ಆರಾಮ ದೊರೆತಂತಾಗಿ ನಿಮ್ಮ ದೇಹದಾದ್ಯoತ ಸಮಾಧಾನದ ಭಾವನೆಯನ್ನು ಉಂಟುಮಾಡುತ್ತದೆ. ನಿಮಗೆ ಅತಿಯಾದ ಒತ್ತಡ ಉಂಟಾದಾಗ ಬಹುಷಃ ನೀವು ಈ ಭಾಗವನ್ನೇ ಢಾಳಾಗಿ ನೇವರಿಸಿಕೊಳ್ಳುತ್ತೀರಿ ಅಲ್ಲವೇ ?! ಅದ್ದರಿಂದ, ನಿಮ್ಮ ಮನಸ್ಸು ಶಾಂತವಾಗಿ ಏಕಾಗ್ರವಾಗಿರಲು ಪ್ರತಿದಿನ ಒಂದು ಬಾರಿ ಈ ಭಾಗವನ್ನು ನೇವರಿಸಿರಿ.

ನಿದ್ರಾಹೀನತೆಯನ್ನು ದೂರಮಾಡುತ್ತದೆ:

ನಿದ್ರಾಹೀನತೆಯನ್ನು ದೂರಮಾಡುತ್ತದೆ:

ನೀವು ಹಣೆಯ ಮೇಲೆ ಬಿಂದಿಯನ್ನು ಧರಿಸುವ ಭಾಗವು ನಿದ್ರಾಹೀನತೆಯನ್ನು ನಿವಾರಿಸುವಲ್ಲಿ ಬಹು ಪರಿಣಾಮಕಾರಿ. ಇದು ನಿಮ್ಮ ಚಿತ್ತವನ್ನು ಶಾoತವಾಗಿರಿಸುವುದಲ್ಲದೇ ನಿಮ್ಮ ಮುಖ, ಕುತ್ತಿಗೆ, ಬೆನ್ನು, ಮತ್ತು ದೇಹದ ಮೇಲ್ಭಾಗದ ಸ್ನಾಯುಗಳು ವಿಶ್ರಾಂತಿ ಪಡೆಯುವಲ್ಲಿ ಸಹಕರಿಸುತ್ತದೆ. ಆಯುರ್ವೇದ ಶಾಸ್ತ್ರದ ಪ್ರಕಾರ ನಿದ್ರಾಹೀನತೆಗೆ ಅತೀ ಪ್ರಮುಖ ಕಾರಣಗಳೆಂದರೆ; ಮನಃ ಕ್ಲೇಶ, ತಲೆ ಸುತ್ತು ಬರುವುದು, ಮತ್ತು ಅತಿಯಾಗಿ ಚಿಂತಿಸುವ ಮನಸ್ಸು ಅಥವಾ ಬುದ್ಧಿ. ನಿಮ್ಮ ನಿದ್ರಾಹೀನತೆಯನ್ನು ಹೋಗಲಾಡಿಸಲು ಭ್ರೂಮಧ್ಯ ಭಾಗವನ್ನು ಕೆಲವು ಸೆಕೆಂಡುಗಳ ಕಾಲ ಪ್ರತಿದಿನ ಹಾಗೆಯೇ ಒತ್ತಿ ಹಿಡಿಯಿರಿ. ಒಂದು ವೇಳೆ ನಿಮಗೆ ಇದರಿಂದ ಪ್ರಯೋಜನವಾಗದೆ ಇದ್ದರೆ, ಶಿರೋಧರದಂತಹ ಚಿಕಿತ್ಸೆಗಳು ನೀವು ಕೆಲವು ಕಾಲ ಕಣ್ಣು ಮುಚ್ಚಿ ನಿದ್ರಿಸಲು ನೆರವಾಗಬಹುದು. ನಿದ್ರಾಹೀನತೆಯನ್ನು ಪರಿಹರಿಸಲು ಲಭ್ಯವಿರುವ ಕೆಲವು ಯೋಗಾಸನಗಳ ಕುರಿತು ಓದಿ ತಿಳಿಯಿರಿ.

English summary

10 amazing health benefits of wearing a bindi on your forehead

Bindis are traditionally worn on the forehead, right between our eyebrows. Some people prefer to wear it a bit higher, but the effects remain the same. Why does the position matter you ask? Here is why:
Story first published: Thursday, May 8, 2014, 16:39 [IST]
X
Desktop Bottom Promotion