For Quick Alerts
ALLOW NOTIFICATIONS  
For Daily Alerts

ಪುರುಷರೇ ನಿಮ್ಮ ಪ್ರೋಸ್ಟೇಟ್ ಆರೋಗ್ಯದ ಬಗ್ಗೆ ಎಚ್ಚರ

By Super
|

ಪ್ರೋಸ್ಟೇಟ್ ಒಂದು ವಾಲ್ನಟ್ ಗಾತ್ರದ ಗ್ರಂಥಿ ಮತ್ತು ಪುರುಷರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯ ಭಾಗ. ಇದು ಗಾತ್ರದಲ್ಲಿ ದೊಡ್ಡದಾದಾಗ ಆರೋಗ್ಯ ಸಮಸ್ಯೆಗಳು ಕಾಣುತ್ತದೆ. ಇದು ಪುರುಷರಿಗೆ 50 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ. ಹೀಗೆ ಪ್ರೋಸ್ಟೇಟ್ ದೊಡ್ಡದಾದಾಗ ಪುರುಷರು ತಾವು ತೆಗೆದುಕೊಳ್ಳುವ ಆಹಾರಗಳಮೇಲೆ ಗಮನವಿಡುವುದು ಒಳ್ಳೆಯದು. ಅದರ ಆರೋಗ್ಯವನ್ನು ಕಾಪಾಡಲು ನಿಮಗೆ ಕಾಳಜಿ ಇದ್ದರೆ,ಬನ್ನಿ. ನಿಮ್ಮ ಪ್ರೋಸ್ಟೇಟಿನ ಆರೋಗ್ಯ ಕಾಪಾಡಲು ಯಾವ ಯಾವ ಆಹಾರಗಳು ತೆಗೆದುಕೊಳ್ಳಬೇಕೆಂಬುದಕ್ಕಿಂತಾ ಯಾವ ಯಾವ ಆಹಾರಗಳು ನಿಷಿದ್ಧ ಎನ್ನುವ ಬಗ್ಗೆ ಗಮನ ಕೊಡಿ.

ನಮ್ಮ ಈ ಪಟ್ಟಿಯಲ್ಲಿರುವ ಕೆಲವು ಆಹಾರಗಳನ್ನು ನೀವು ತೆಗೆದುಕೊಳ್ಳಬಾರದೆಂದು ನಾವು ಸುಮ್ಮನೆ ಹೇಳಿದರೆ ನಿಮಗ ಆಶ್ಚರ್ಯವಾಗುವುದು ಖಂಡಿತ. ಈ ದಿಶೆಯಲ್ಲಿ ನಾವು ಈ ಪಟ್ಟಿಯಲ್ಲಿರುವ ಆಹಾರಗಳನ್ನು ತೆಗೆದುಕೊಂಡರೆ ನಿಮ್ಮ ಪ್ರೊಸ್ಟೇಟಿನ ಆರೋಗ್ಯಕ್ಕೆ ಯಾವ ರೀತಿಯ ಕೆಡಕು ಉಂಟಾಗಬಹುದೆಂದು ವಿವರಿಸಿದ್ದೇವೆ. ಯಾವ ಆಹಾರಗಳನ್ನು ತಿನ್ನಬಾರದೆಂದು ತಿಳಿಯಲು ಮುಂದೆ ಓದಿ:

1. ಕೆಂಪು ಮತ್ತು ಸಂಸ್ಕರಿಸಿದ ಮಾಂಸ

1. ಕೆಂಪು ಮತ್ತು ಸಂಸ್ಕರಿಸಿದ ಮಾಂಸ

ಕೆಂಪು ಮತ್ತು ಸಂಸ್ಕರಿತ ಮಾಂಸ ಬಹಳ ಕಾರಣಗಳಿಂದ ಅನಾರೋಗ್ಯಕರ ಮತ್ತು ಇದರಿಂದ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು. ಕೆಲವು ಅಧ್ಯಯನಗಳ ಪ್ರಕಾರ ಕೆಂಪು ಮಾಂಸ ಕನಿಷ್ಠವಾಗಿ ತಿನ್ನುವವವರಿಗಿಂತಾ ಹೆಚ್ಚು ತಿನ್ನವವವರಲ್ಲಿ ಶೇಕಡ 12 ಮಂದಿಗೆ ಕ್ಯಾನ್ಸರ್ ರೋಗ ಬರುತ್ತದೆ ಮತ್ತು ಶೇಕಡ 33 ಮಂದಿಗೆ ಮುಂದುವರೆದ (ಅಡ್ವಾನ್ಸ್) ಕ್ಯಾನ್ಸರ್ ಬರುತ್ತದೆ.

2. ಅಜೈವಿಕ ಮಾಂಸ

2. ಅಜೈವಿಕ ಮಾಂಸ

ಮಾರುಕಟ್ಟೆಯಲ್ಲಿ ದೊರಕುವ ಅಜೈವಿಕ ಮಾಂಸಗಳೆಂದರೆ - ಗೋಮಾಂಸ, ಹಂದಿ, ಕುರಿ, ಕೋಳಿ ಮಾಂಸಗಳು. ಈ ಪ್ರಾಣಿಗಳಿಗೆ ಕೊಡುವ ಆಹಾರದಲ್ಲಿ ಸಾಂಪ್ರದಾಯಿಕವಾಗಿ ಕೆಲವು ಹಾರ್ಮೋನುಗಳು, ಪ್ರತಿಜೀವಕಗಳು ಮತ್ತು ಸ್ಟೀರಾಯ್‍ಡ್ಸ್ ಹಾಗೂ ಕೆಲವು ಪ್ರಾಣಿಗಳು ತಿನ್ನಲು ಅರ್ಹವಾಗಿಲ್ಲದ ತಿನಿಸುಗಳು ಇವೆನ್ನೆಲ್ಲಾ ತಿನ್ನಿಸಿರು ತ್ತಾರೆ. ಇಂತಹ ಮಾಂಸ ಮನುಷ್ಯರಮೇಲೆ ಪ್ರೋಸ್ಟೇಟ್ ಮತ್ತು ಒಟ್ಟಾರೆ ಆರೋಗ್ಯಕ್ಕೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚು.

3. ಕ್ಯಾಲ್ಸಿಯಂ ಮತ್ತು ಡೈರಿ ಪದಾರ್ಥಗಳು

3. ಕ್ಯಾಲ್ಸಿಯಂ ಮತ್ತು ಡೈರಿ ಪದಾರ್ಥಗಳು

ಬಹುತೇಕ ಪೂರಕಗಳ ಮತ್ತು ಡೈರಿ ಆಹಾರಗಳಿಂದ ದೊರಕುವ ಕ್ಯಾಲ್ಸಿಯುಂ ಬಳಸಿದಾಗ ವಿಶೇಷವಾಗಿ ಆಕ್ರಮಣಕಾರಿ ಕ್ಯಾನ್ಸರಿನ ಅಪಾಯವಿರುತ್ತದೆ. ಬಹಳಷ್ಟು ಡೈರಿ ಆಹಾರಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟರಾಲ್ ಹೆಚ್ಚಾಗಿರುತ್ತವೆ. ಇವುಗಳ ಜೊತೆ ಹಾರ್ಮೋನುಗಳೂ ಇದ್ದು ಪ್ರೋಸ್ಟೇಟ್ ಆರೋಗ್ಯದಮೇಲೆ ನಕರಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳಿವೆ.

4. ಡಬ್ಬಿಯಲ್ಲಿ ಸಂರಕ್ಷಿಸಿದ ಟೊಮೆಟೋಗಳು ಮತ್ತು ಟೊಮೆಟೊ ಉತ್ಪನ್ನಗಳು

4. ಡಬ್ಬಿಯಲ್ಲಿ ಸಂರಕ್ಷಿಸಿದ ಟೊಮೆಟೋಗಳು ಮತ್ತು ಟೊಮೆಟೊ ಉತ್ಪನ್ನಗಳು

ಟೊಮೆಟೋಗಳು ಮತ್ತು ಟೊಮೆಟೊ ಉತ್ಪನ್ನಗಳಲ್ಲಿರುವ ಅಧಿಕ ಲೈಕೋಪೀನ್ ವಿಶೇಷವಾಗಿ ಪ್ರೋಸ್ಟೇಟ್ ಆರೋಗ್ಯಕ್ಕೆ ಬೆಂಬಲ ಮತ್ತು ಉತ್ತೇಜನ ಕೊಟ್ಟರೂ ಸಹ ಡಬ್ಬಿಯಲ್ಲಿ ಸಂಗ್ರಹಿಸಿದ ಟೊಮ್ಯಾಟೋ ಆಹಾರಗಳನ್ನು ದೂರವಿಡುವುದು ಒಳ್ಳೆಯದು. ಆಹಾರ ಪ್ಯಾಕ್ ಮಾಡುವ ಡಬ್ಬಿಯ ಒಳ ವಲಯದಲ್ಲಿ ಕೃತಕ ಈಸ್ಟ್ರೋಜೆನ್ ಹೊಂದಿರುವ ಬಿಸ್ಫೆನಾಲ್-ಏ(ಬಿ.ಪಿ.ಎ) ಆಮ್ಲೀಯ (ಅಸಿಡಿಕ್) ಅಧಿಕವಾಗಿರುವುದರಿಂದ ಅದು ಟೊಮೆಟೋ‍ಗೆ ಸೇರುವ ಸಂಭವವಿದೆ. ಈ ರಾಸಾಯನಿಕ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದಲ್ಲ.

5. ಮೈಕ್ರೋವೇವ್‍ನಲ್ಲಿ ಸುಟ್ಟ ಪಾಪ್‍ಕಾರ್ನ್

5. ಮೈಕ್ರೋವೇವ್‍ನಲ್ಲಿ ಸುಟ್ಟ ಪಾಪ್‍ಕಾರ್ನ್

ಪಾಪ್‍ಕಾರ್ನ್‍ಲ್ಲಿ ನಾರಿನ ಅಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಮೈಕ್ರೋ`ವೇವ್‍ನಲ್ಲಿ ಸುಟ್ಟ ಪಾಪ್‍ಕಾರ್ನ್ ತಿನ್ನುವುದನ್ನು ತಪ್ಪಿಸಿ. ಪಾಪ್‍ಕಾರ್ನ್ ಬೀಜಗಳನ್ನು ಪ್ಯಾಕ್ ಮಾಡಿರುವ ಚೀಲದ ಒಳಭಾಗದಲ್ಲಿ ಪರ್ಫ್ಲೂರೋ‍ಕ್ಟನೋಯಿಕ್

(Perfluorooctanoic)ಆಸಿಡ್ ಇರುತ್ತದೆ. ಇದು ಮಾನವರಲ್ಲಿ ಬಂಜೆತನಕ್ಕೆ ಸಂಭಂಧ ಪಟ್ಟಿರುತ್ತದೆ.

6. ಅಜೈವಿಕ ಆಲೂಗಡ್ಡೆಗಳು

6. ಅಜೈವಿಕ ಆಲೂಗಡ್ಡೆಗಳು

ಆಲೂಗಡ್ಡೆಯಲ್ಲಿ` ಉತ್ತಮ ಕೊಬ್ಬು ರಹಿತ ಮತ್ತು ನಾರಿನಾಂಶ ಇದ್ದರೂ, ಎಚ್ಚರದಿಂದಿರಿ. ಆಲೂಗಡ್ಡೆಗಳು ಮುಕ್ತವಾಗಿ ಇಡುವುದರಿಂದ ಹಲವಾರು ವಿಷಗಳು ತಗಲುವ ಸಾಧ್ಯತೆಗಳಿವೆ. ರಾಸಾಯನಿಕ ಪದಾರ್ಥಗಳು ಆಲೂಗಡ್ಡೆಯ ಒಳಗೆಯೂ ಕೂಡ ಇಳಿದಿರುವುದರಿಂದ ನೀವು ಅದನ್ನೆಲ್ಲಾ ತೊಳೆದು ಹೋಗಿಸಲು ಅಸಾಧ್ಯ. ಇದಕ್ಕೆ ಒಂದೇ ಪರಿಹಾರ - ಸಾವಯುವ (ಆರ್ಗಾನಿಕ್) ಆಲೂಗಡ್ಡೆಯನ್ನು ಬಳಸುವುದು.

7. ಚೆನ್ನಾಗಿ ಕರಿದ ಆಲೂಗಡ್ಡೆ ಮತ್ತು ಚಿಪ್ಸ್

7. ಚೆನ್ನಾಗಿ ಕರಿದ ಆಲೂಗಡ್ಡೆ ಮತ್ತು ಚಿಪ್ಸ್

ಚೆನ್ನಾಗಿ ಕರಿದ ಆಲೂಗಡ್ಡೆ ಮತ್ತು ಆಲೂಗಡ್ಡೆ ಚಿಪ್ಸ್‌ನಲ್ಲಿ ಪೂರ್ತಿ ನೆನೆದ ಕೊಬ್ಬು ಮತ್ತು ಉಪ್ಪು ಇರುತ್ತವೆ. ಆಲೂಗಡ್ಡೆಯಲ್ಲಿ ಆಸ್ಪರಾಗೀನ್ ಎಂಬುವ ಅಮಿನೊ ಆಸಿಡ್ ಇರುತ್ತದೆ. ಆಲೂಗಡ್ಡೆಯನ್ನು 2480F (1200C) ಗಿಂತ ಹೆಚ್ಚು ಕಾಯಿಸಿದಾಗ ಈ ರಾಸಾಯನವು ಅಕ್ರಿಲಾಮೈಡ್ ಎಂಬ ವಸ್ತುವಿನ ರೂಪಗೊಳ್ಳುವುದರಿಂದ ಕ್ಯಾನ್ಸರಿಗೆ ಕಾರಣವಾಗುತ್ತದೆ.

8. ಸಕ್ಕರೆ

8. ಸಕ್ಕರೆ

ಕ್ಯಾನ್ಸರ್ ಕೋಶಗಳು ಸುಲಭವಾಗಿ ಸಕ್ಕರೆಯನ್ನು ಅದರ ಇಂಧನವಾಗಿ ಉಪಯೋಗಿಸುವುದರಿಂದ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ. ನಿಮಗೆ ಸಿಹಿಯಾದ ಪದಾರ್ಥಗಳನ್ನು ತಿನ್ನುವ ಚಪಲವಿದ್ದರೆ, ಅವುಗಳ ಬದಲಾಗಿ ಸಂಸ್ಕರಿಸಿದ ಸಕ್ಕರೆಯನ್ನು ಹಣ್ಣುಗಳ ಜೊತೆ ತಿನ್ನಿ. ಇದರಿಂದ ನಿಮ್ಮ ಆಹಾರಗಳಲ್ಲಿ ಮುಖ್ಯವಾದ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು (ಆಂಟಿ ಆಕ್ಸಿಡೆಂಟ್ಸ್) ಸೇರಿರುತ್ತವೆ.

9. ಅಗಸೆ ಬೀಜ (ಫ್ಲಾಕ್ಸ್ ಸೀಡ್)

9. ಅಗಸೆ ಬೀಜ (ಫ್ಲಾಕ್ಸ್ ಸೀಡ್)

ಅಗಸೆ ಬೀಜ ಮತ್ತು ಅದರ ತೈಲ ಸಾಮಾನ್ಯವಾಗಿ ಒಮೆಗಾ 3s ನ ಮೂಲವಾಗಿದೆ. ಆದ್ದರಿಂದ ಅಗಸೆಬೀಜದ ಸೇವನೆಯಿಂದ ಪ್ರೋಸ್ಟೇಟ್ ಕ್ಯಾನ್ಸರ್ ಉತ್ತೇಜನಗೊಂಡು ಇನ್ನಷ್ಟು ಹೆಚ್ಚಬಹುದು.

10. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು (ಶರ್ಕರ ಪಿಷ್ಟ)

10. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು (ಶರ್ಕರ ಪಿಷ್ಟ)

ಮೈದಾ ಹಿಟ್ಟನ್ನು ಹೆಚ್ಚಾಗಿ ಬಳಸಿದರೆ ನಿಮ್ಮ ಪ್ರೋಸ್ಟೇಟಿನ ಮೇಲೆ ಅಷ್ಟೇನೂ ಕೆಟ್ಟ ಪರಿಣಾಮವಿರುವಿದಿಲ್ಲ. ಆದರೆ ನಿಮ್ಮ ಆರೋಗ್ಯಕ್ಕೆ ಹೆಚ್ಚಾಗಿ ಬೇಕಾಗಿರುವ ನಾರಿನಾಂಶವಿರುವ ಧಾನ್ಯಗಳನ್ನು ಬಳಸುವ ಅವಕಾಶವನ್ನು ಕಳೆದುಕೊಳ್ಳುತ್ತೀರಿ.

11. ಕೆಫೀನ್ (ಉತ್ತೇಜನಕಾರಿ ಕ್ಷಾರಸತ್ವ)

11. ಕೆಫೀನ್ (ಉತ್ತೇಜನಕಾರಿ ಕ್ಷಾರಸತ್ವ)

ಕಾಫೀ ಮತ್ತು ಇತರೆ ಕೆಫೀನ್ ಹೊಂದಿರುವ ಪಾನೀಯಗಳು ವಿಸ್ತರಿಸಿದ(ಎನ್ಲಾರ್ಜ್‍ಡ್) ಪ್ರೋಸ್ಟೇಟಿನ ಸಂಭಂದಿಸಿದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ.

12. ಮದ್ಯಸಾರ (ಆಲ್ಕೊಹಾಲ್)

12. ಮದ್ಯಸಾರ (ಆಲ್ಕೊಹಾಲ್)

ಕೆಫೀನ್ ಬಳಕೆಯ ರೀತಿಯಲ್ಲೇ ನೀವು ಮದ್ಯಸೇವನೆಮಾಡಿದಾಗ ಮೂತ್ರ ಉತ್ಪತ್ತಿಯನ್ನು ಉತ್ತೇಜಿಸುವುದಲ್ಲದೆ ಮೂತ್ರ ಹಾದುಹೋಗುವ ಮಾಗದಲ್ಲಿ ಕಿರಿಕಿರಿ‍ಉಂಟಾಗುವ ಸಾಧ್ಯತೆಗಳಿವೆ. ಹಾಗೂ ನೀವು ಆಲ್ಕೊಹಾಲ್ ಸೇವಿಸುತ್ತಿರುವಾಗ ದೊಡ್ಡಪ್ರಮಾಣದಲ್ಲಿ ದ್ರವಗಳು ಒಮ್ಮೆಗೇ ನಿಮ್ಮ ದೇಹದೊಳಗೆ ಸೇರಿ ಈಗಾಗಲೇ ಸೂಕ್ಷ್ಮವಾಗಿರುವ ಪ್ರೋಸ್ಟೇಟಿನ ಮೇಲೆ ಒತ್ತಡ ಹಾಕಬಹುದು.

English summary

Worst Foods for Prostate Health

Some of the foods on this list may surprise you, but all of them are best to cross off your menu if you want to support prostate health.
X
Desktop Bottom Promotion