For Quick Alerts
ALLOW NOTIFICATIONS  
For Daily Alerts

ಅಸ್ತಮಾ ಕಾಯಿಲೆಗೆ ಮನೆಮದ್ದು-ಸ್ಪೆಷಲ್ ಲೇಖನ

|

ಮೇ. 7 ವಿಶ್ವ ಅಸ್ತಮಾ ದಿನ. ವಿಶ್ವದಲ್ಲಿ ಅನೇಕರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅಸ್ತಮಾ ಕಾಯಿಲೆ ಇರುವವರು ಉಸಿರಾಡಲು ಕಷ್ಟ ಪಡುವುದನ್ನು ನೋಡುವಾಗ ಎಂತಹವರಿಗೂ ಅಯ್ಯೋ ಪಾಪ ಅನಿಸುತ್ತದೆ. ಅಸ್ತಮಾ ಕಾಯಿಲೆ ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳಬಹುದು. ಇದೇ ಕಾರಣದಿಂದ ಕಾಣಿಸಿಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.

ವಂಶಪಾರಂಪರ್ಯವಾಗಿ ಬರಬಹುದು. ಹವಾಮಾನ ಬದಲಾದಾಗ, ತಂಪಾದ ಹವಾಮಾನದಿಂದ, ಪರಿಸರ ಮಾಲಿನ್ಯ, ದೂಳು, ಧೂಮಪಾನ, ಆಗಾಗ ಕೆಮ್ಮು ಕಂಡು ಬರುವುದು, ಕೆಲವು ವಸ್ತುಗಳಿಂದ ಅಲರ್ಜಿ ಉಂಟಾಗಿ ಅಸ್ತಮಾ ಕಂಡು ಬರಬಹುದು. ಇದು ವಂಶಪಾರಂಪರ್ಯವಾಗಿ ಬರುವ ಕಾಯಿಲೆಯಾಗಿರುವುದರಿಂದ ತಂದೆ-ತಾಯಿಯಲ್ಲಿ ಯಾರಿಗಾದರು ಇದ್ದರೆ ಮಕ್ಕಳಿಗೆ ಬರುತ್ತದೆ ಎಂಬ ಸಂಶಯ ಹಲವರಲ್ಲಿದೆ. ಮಕ್ಕಳಿಗೆ ಬಂದೇ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಬರುವುದೇ ಇಲ್ಲ ಅಂತಲೂ ಹೇಳಲು ಸಾಧ್ಯವಿಲ್ಲ.

ಏಕೆಂದರೆ ಅಸ್ತಮಾ ಕಾಯಿಲೆಗೆ ದೇಹದಲ್ಲಿರುವ 62 ಜೀನ್ ಗಳು ಪ್ರಮುಖ ಕಾರಣವಾಗಿದೆ ಎಂದು ಡಾ. ಜಿಯಾನ್ ಜಾಂಗ್ ಎಂಬುವವರು 2008 ರಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಈ ರೀತಿಯ ವಂಶಪಾರಂಪರ್ಯವಾಗಿ ಅಸ್ತಮಾ ಬರುವ ಸಾಧ್ಯತೆ ಶೇ. 20 ಮಾತ್ರ.
ಅಸ್ತಮಾ ಕಾಯಿಲೆ ಚಿಕಿತ್ಸೆ ತೆಗೆದುಕೊಂಡರೆ ನಿಯಂತ್ರಣದಲ್ಲಿಡಬಹುದು. ಕೆಲವು ಮನೆ ಮದ್ದುಗಳು ಕೂಡ ಅಸ್ತಮಾ ಕಾಯಿಲೆಯನ್ನು ನಿಯಂತ್ರಣದಲ್ಲಿಡುವಲ್ಲಿ ಪರಿಣಾಮಕಾರಿಯಾಗಿದೆ. ಅಸ್ತಮಾ ಕಾಯಿಲೆಗೆ ಈ ಕೆಳಗಿನ ಮನೆ ಮದ್ದುಗಳಂತೂ ತುಂಬಾ ಪರಿಣಾಮಕಾರಿ.

ಅಸ್ತಮಾ ಕಾಯಿಲೆಗೆ ಮನೆಮದ್ದು

ಅಸ್ತಮಾ ಕಾಯಿಲೆಗೆ ಮನೆಮದ್ದು

ಜೇನನ್ನು ಅಸ್ತಮಾಗೆ ಉತ್ತಮ ಮನೆಮದ್ದಾಗಿ ಉಪಯೋಗಿಸಲಾಗುತ್ತೆ. ಅಸ್ತಮಾ ಕಾಣಿಸಿಕೊಂಡಾಗ ಬಿಸಿ ನೀರಿನಲ್ಲಿ ಜೇನನ್ನು ಹಾಕಿ ಅದರ ಆವಿಯನ್ನು ತೆಗೆದುಕೊಂಡರೆ ಬೇಗನೆ ಪರಿಣಾಮ ಬೀರುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಜೇನು ಬೆರೆಸಿ ಅದನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಅಸ್ತಮಾ ನಿಯಂತ್ರಿಸಬಹುದು.

ಅಸ್ತನಾ ಕಾಯಿಲೆಗೆ ಮನೆಮದ್ದು

ಅಸ್ತನಾ ಕಾಯಿಲೆಗೆ ಮನೆಮದ್ದು

2. ಒಂದು ಕಪ್ ತುರಿದ ಮೂಲಂಗಿ, ಒಂದು ಚಮಚ ಜೇನು ಮತ್ತು ಒಂದು ಚಮಚ ನಿಂಬೆರಸ ಸೇರಿಸಿ 20 ನಿಮಿಷ ಕಾಯಿಸಿ ಇದನ್ನು ದಿನವೂ ಒಂದು ಚಮಚ ಸೇವಿಸುತ್ತಾ ಬಂದರೆ ಪರಿಣಾಮಕಾರಿಯಾಗಿ ಅಸ್ತಮಾ ನಿವಾರಿಸುತ್ತೆ.

ಅಸ್ತನಾ ಕಾಯಿಲೆಗೆ ಮನೆಮದ್ದು

ಅಸ್ತನಾ ಕಾಯಿಲೆಗೆ ಮನೆಮದ್ದು

3. ನಾಲ್ಕು ಅಂಜೂರದ ಹಣ್ಣನ್ನು ಬೆಚ್ಚಗಿನ ನೀರಿನಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಅಸ್ತಮಾ ಬರುವ ಪ್ರಮಾಣ ಕಡಿಮೆಗೊಳಿಸಬಹುದು.

ಅಸ್ತನಾ ಕಾಯಿಲೆಗೆ ಮನೆಮದ್ದು

ಅಸ್ತನಾ ಕಾಯಿಲೆಗೆ ಮನೆಮದ್ದು

4. ಹಾಗಲಕಾಯಿ ಅಸ್ತಮಾಗೆ ಮತ್ತೊಂದು ಪರಿಣಾಮಕಾರಿ ಮದ್ದು. ಜೇನಿನೊಂದಿಗೆ ಹಾಗಲಕಾಯಿ ಪೇಸ್ಟ್, ತುಳಸಿ ಎಲೆ ರಸ ಸೇರಿಸಿ ಕುಡಿಯುವುದರಿಂದ ಅಲರ್ಜಿ ನಿವಾರಿಸಿ ಅಸ್ತಮಾ ಬರುವುದನ್ನೂ ತಡೆಗಟ್ಟುತ್ತದೆ.

ಅಸ್ತನಾ ಕಾಯಿಲೆಗೆ ಮನೆಮದ್ದು

ಅಸ್ತನಾ ಕಾಯಿಲೆಗೆ ಮನೆಮದ್ದು

5. ಮೆಂತ್ಯೆ ಕಾಳಿನಲ್ಲಿ ಅಲರ್ಜಿ ನಿವಾರಿಸಬಲ್ಲ ಶಕ್ತಿಯಿದೆ. ನೀರಿನೊಂದಿಗೆ ಮಂತ್ಯೆ ಕಾಳು ಬೇಯಿಸಿ ಅದಕ್ಕೆ ಒಂದು ಚಮಚ ಜೇನು ಮತ್ತು ಶುಂಠಿ ರಸದೊಂದಿಗೆ ಬೆರೆಸಿ ದಿನಕ್ಕೊಮ್ಮೆ ಸೇವಿಸಿದರೆ ಚಳಿಗಾಲದಲ್ಲಿ ಅಸ್ತಮಾ ಕಡಿಮೆಮಾಡಬಹುದು

 ಇತರ ಸಲಹೆ

ಇತರ ಸಲಹೆ

ವಿಟಮಿನ್ ಡಿ ಇರುವ ಆಹಾರ ಸೇವನೆ- ವಿಟಮಿನ್ ಡಿ ಕೊರತೆಯಿದ್ದರೆ ಅಸ್ತಮಾ ಕಾಯಿಲೆ ಹೆಚ್ಚಾಗುವುದು. ಆದ್ದರಿಂದ ವಿಟಮಿನ್ ಡಿ ಇರುವ ಆಹಾರ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು. ಮೀನು, ಅಣಬೆ, ಮೊಟ್ಟೆ, ತುನಾ ಫಿಶ್ ನಲ್ಲಿ ವಿಟಮಿನ್ ಡಿ ಅಧಿಕವಾಗಿ ಇರುತ್ತದೆ.

ಇತರ ಸಲಹೆ

ಇತರ ಸಲಹೆ

ಒಮೆಗಾ 3 ಮೀನಿನಲ್ಲಿ ಅಧಿಕವಿರುವುದರಿಂದ ಈ ಆಹಾರ ಸೇವನೆ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಮೀನು ಕೊಳ್ಳುವಾಗ ತಾಜಾ ಮೀನನ್ನು ನೋಡಿ ಕೊಳ್ಳಬೇಕು. ಇದಲ್ಲದೆ ನಾಟಿ ಕೋಳಿ, ಮೊಟ್ಟೆ ಇವುಗಳನ್ನು ತಿನ್ನುವುದು ಒಳ್ಳೆಯದು.

ಇತರ ಸಲಹೆ

ಇತರ ಸಲಹೆ

ಅಸ್ತಮಾ ಕಾಯಿಲೆ ಇರುವವರಿಗೆ ಕೊಡುವ ಆಹಾರದಲ್ಲಿ ವನಸ್ಪತಿ ಎಣ್ಣೆ ಬಳಸಬಾರದು.

ಇತರ ಸಲಹೆ

ಇತರ ಸಲಹೆ

ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಜಾಸ್ತಿಯಾಗುತ್ತದೆ. ಉತ್ತಮ ಗಾಳಿ ಸೇವನೆ ಮಾಡಿದರೆ ಅಸ್ತಮಾ ರೋಗ ಹೆಚ್ಚಾಗುವುದನ್ನು ತಡೆಯಬಹುದು. ತುಂಬಾ ತಂಪಾದ ವಾತಾವರಣವಿರುವಾಗ ಮನೆಯಲ್ಲಿಯೇ ವ್ಯಾಯಾಮ ಮಾಡುವುದು ಒಳ್ಳೆಯದು.

ಇತರ ಸಲಹೆ

ಇತರ ಸಲಹೆ

ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಂಗೀತ ಕೇಳುವುದು, ಪ್ರಾಣಾಯಾಮ ಮಾಡುವುದು ಒಳ್ಳೆಯದು.ಅರಿಶಿಣ ಹಾಕಿದ ಹಾಲಿನ ಸೇವನೆ , ಹಾಗಲಕಾಯಿ, ಮೆಂತೆ ಇವುಗಳನ್ನು ತಿನ್ನುವುದು ಒಳ್ಳೆಯದು.

ಇತರ ಸಲಹೆ

ಇತರ ಸಲಹೆ

ವಾತಾವರಣ ಬದಲಾದಾಗ ಶರೀರದಲ್ಲಿ ಬದಲಾವಣೆಯಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ತಣ್ಣನೆ ಹವಾಮಾನ ಇರುವಾಗ ಸ್ವೆಟರ್ ಅಥವಾ ಬೆಚ್ಚಗಿನ ಉಡುಪು ಧರಿಸಿ ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ದೂಳಿನಲ್ಲಿ ಹೆಚ್ಚಾಗಿ ಓಡಾಡಬಾರದು.

English summary

World Asthma Day 2013 | Tips For Health | ವಿಶ್ವ ಅಸ್ತಮಾ ದಿನ 2013 | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Suffocation, a feeling that most of us fear is a common occurrence in the lives of people suffering from asthma. With the diseases debilitating the lives of many in our country, it is time we took control.
X
Desktop Bottom Promotion