For Quick Alerts
ALLOW NOTIFICATIONS  
For Daily Alerts

ಈ ಅಪಾಯಕಾರಿ ಮರೆವಿನ ಕಾಯಿಲೆ ತಡೆಗಟ್ಟಿ

|

ಇವತ್ತು ವಿಶ್ವ ಅಲ್ಜೈಮರ್ಸ್ ದಿನ. ಮರೆವು ಎನ್ನುವುದು ನಮಗೆಲ್ಲಾ ಇದ್ದೇ ಇರುತ್ತದೆ. ಎಷ್ಟೋ ಬಾರಿ ನಮ್ಮ ಅಲಕ್ಷ್ಯಯಿಂದ ಕೆಲವೊಂದು ವಿಷಯಗಳನ್ನು, ವಸ್ತುಗಳನ್ನು ಮರೆತಿರುತ್ತೇವೆ . ಅದನ್ನು ಕಾಯಿಲೆ ಎನ್ನಲು ಸಾಧ್ಯವಿಲ್ಲ. ಆದರೆ ಮರೆವಿನ ಕಾಯಿಲೆ ಅಥವಾ ಅಲ್ಜೈಮರ್ಸ್ ಇದೆಯೆಲ್ಲಾ ಅದು ಮಾತ್ರ ತುಂಬಾ ಅಪಾಯಕಾರಿಯಾದದು. ಈ ಕಾಯಿಲೆ ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡು ಬರುತ್ತದೆ. ಈ ಕಾಯಿಲೆ ಕಾಣಿಸಿದರೆ ಅದಕ್ಕೆ ಪರಿಹಾರ ಕಷ್ಟ.

ಅನುವಂಶೀಯತೆ, ಜೀವನ ಶೈಲಿ, ವಯಸ್ಸು ಅಲ್ಜೈಮರ್ಸ್ ಕಾಯಿಲೆ ಅನೇಕ ಕಾರಣಗಳಿಂದ ಬರಬಹುದು. ಬುದ್ಧಿಶಕ್ತಿಯನ್ನು ಹರಿತಗೊಳಿಸುವ ಜೀವನ ಶೈಲಿ ಪಾಲಿಸಿದರೆ ಈ ಕಾಯಿಲೆ ಬರದಂತೆ ತಡೆಯಬಹುದು. ಈ ಕಾಯಿಲೆ ಬಗ್ಗೆ ಜಾಗ್ರತೆ ಮೂಡಿಸುವ ಸಲುವಾಗಿ ಸೆ. 21ರಂದು ವಿಶ್ವ ಅಲ್ಜೈಮರ್ಸ್ ದಿನವನ್ನು ಆಚರಿಸಲಾಗುವುದು.

ಈ ಮರೆವು ಕಾಯಿಲೆ ಬಂದರೆ ಜೀವನ ಕಷ್ಟವಾಗುವುದು. ಯಾವ ವಿಷಯವೂ ನೆನಪಿನಲ್ಲಿರುವುದಿಲ್ಲ. ಕೈ ತೊಳೆಯುವುದು, ಹಲ್ಲುಜ್ಜುವುದು ಈ ರೀತಿಯ ನಿತ್ಯಕರ್ಮಗಳನ್ನು ಮಾಡಲು ಕೂಡ ಮರೆತು ಹೋಗುತ್ತಾರೆ. ಈ ಕಾಯಿಲೆಯ ಪ್ರಮುಖ ಲಕ್ಷಣಗಳು ನೋಡಿ ಇಂತಿವೆ.

World Alzheimer's Day Spcl

1. ದಿನದಿಂದ ದಿನಕ್ಕೆ ಮರೆವು ಹೆಚ್ಚಾಗುವುದು. ಇಟ್ಟ ವಸ್ತುಗಳು ತಕ್ಷಣ ನೆನೆಪಿಗೆ ಬರದಿರುವುದು, ಎಲ್ಲಿಗೋ ಹೊರಟಿರುತ್ತೇವೆ, ಆದರೆ ಮಧ್ಯ ದಾರಿಯವರೆಗೆ ಬಂದ ಮೇಲೆ ಎಲ್ಲಿಗೆ ಹೋಗಬೇಕೆನ್ನುವುದು ಮರೆತು ಹೋಗುವುದು.

2. ದಿನನಿತ್ಯದ ಕೆಲಸಗಳನ್ನು ಮಾಡಲು ಸಾಧ್ಯವಾಗದಿರುವುದು. ತುಂಬಾ ಪರಿಚಿತರ ಹೆಸರು ಮೆರೆತು ಹೋಗುವುದು. ಗೊತ್ತಿರುವ ಕೆಲಸವನ್ನು ಮರೆಯುವುದು, ದಿನಾ ಓಡಾಡುವ ರೋಡ್ ನಲ್ಲಿ ಕೆಲವೊಮ್ಮೆ ದಾರಿ ಮರೆತು ಹೋಗುವುದು, ಡ್ರೈವಿಂಗ್ ಮಾಡುವಾಗ ಅದೇ ರಸ್ತೆಯಲ್ಲಿ ಅನೇಕ ಬಾರಿ ಹೋಗಿದ್ದರೂ ಕೂಡ ಆ ರಸ್ತೆಯಲ್ಲಿ ಚಾಲನೆ ಮಾಡುವಾಗ ಚಾಲನೆ ತಪ್ಪುವುದು, ದಿನಾ ಆಡುತ್ತಿರುವ ಆಟದ ನಿಯಮಗಳು ಮರೆತು ಹೋಗುವುದು.

3. ಈ ಕಾಯಿಲೆಯಿಂದ ದೃಷ್ಟಿ ಸಮಸ್ಯೆ ಕಂಡು ಬರುವುದು. ಓದಲು ಅಥವಾ ದೂರದಲ್ಲಿರುವ ವಸ್ತುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ರೂಮಿನಲ್ಲಿರುವ ಕನ್ನಡಿಯಲ್ಲಿ ತಮ್ಮದೇ ಪ್ರತಿಬಿಂಬ ನೋಡಿ ಬೇರೆ ಯಾರೋ ಇದ್ದಾರೆ ಎಂದು ಭಾವಿಸುವುದು ಇವೆಲ್ಲಾ ಈ ಕಾಯಿಲೆಯ ಲಕ್ಷಣವಾಗಿದೆ.

4. ಈ ರೀತಿ ಕಾಯಿಲೆ ಬಂದವರು ಮಾತನಾಡುತ್ತಿರುವಾಗಲೇ ತಕ್ಷಣ ಮಾತು ನಿಲ್ಲಿಸುತ್ತಾರೆ, ನಂತರ ಮಾತನ್ನು ಹೇಗೆ ಮುಂದುವರೆಸಬೇಕೆಂದು ಮರೆತು ಹೋಗಿ ತಲೆಯಲ್ಲಿ ಏನೂ ಹೊಳೆಯದೆ ಖಾಲಿ ಆದಂತೆ ಅನಿಸುತ್ತದೆ.

5. ಈ ರೀತಿ ಕಾಯಿಲೆ ಬಂದರೆ ಯಾವುದೇ ವಿಷಯದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಏಕೆಂದರೆ ಆಲೋಚನೆ ಶಕ್ತಿ ಕಡಿಮೆಯಾಗಿ ಮರೆವು ಜಾಸ್ತಿ ಆಗುತ್ತದೆ.

6. ಈ ರೀತಿ ಕಾಯಿಲೆ ಉಂಟಾದರೆ ನಿಧಾನಕ್ಕೆ ತಮ್ಮ ಹವ್ಯಾಸ, ಸಾಮಾಜಿಕ ಚಟುವಟಿಕೆಗಳನ್ನು ನಿಲ್ಲಿಸುತ್ತಾರೆ. ಏಕೆಂದರೆ ಅವರಿಗೆ ತಮ್ಮ ಹವ್ಯಾಸದ ಬಗ್ಗೆ ನೆನಪು ಇರುವುದಿಲ್ಲ.

7. ಈ ಕಾಯಿಲೆ ಬಂದರೆ ಮನಸ್ಸಿನಲ್ಲಿ ಗೊಂದಲ, ಸಂಶಯ, ಖಿನ್ನತೆ ಕಾಣಿಸಿಕೊಳ್ಳುತ್ತದೆ. ಮನೆಯವರ ಜೊತೆಗೆ, ಕೆಲಸದ ಜಾಗದಲ್ಲಿ, ಸ್ನೇಹಿತರ ಜೊತೆ ಬೆರೆಯಲು ಇಷ್ಟಪಡುವುದಿಲ್ಲ. ಅಲ್ಲದೆ ಮನಸ್ಸಿನಲ್ಲಿ ಅಭದ್ರತೆ ಭಾವನೆ ಉಂಟಾಗುತ್ತದೆ. ಈ ರೀತಿಯ ಕಾಯಿಲೆಯನ್ನು ಮೊದಲನೇ ಹಂತದಲ್ಲಿ ಗುರುತಿಸಿದರೆ, ವೈದ್ಯರನ್ನು ಕಂಡು ಚಿಕಿತ್ಸೆಯನ್ನು ಪಡೆದು, ಮಿದುಳಿನ ಸಾಮರ್ಥ್ಯ ಹೆಚ್ಚಿಸುವ ಅಭ್ಯಾಸಗಳನ್ನು ಮಾಡಿದರೆ ನೆನಪಿನ ಶಕ್ತಿಯನ್ನು ಉಳಿಸಿಕೊಳ್ಳಬಹುದು.

English summary

World Alzheimer's Day Spcl

The most important risk factors of Alzheimer's disease are age, family history, and heredity. There are many other factors as well, which increase the risk of getting Alzheimer's disease that are generally related to your lifestyle.
 
X
Desktop Bottom Promotion