For Quick Alerts
ALLOW NOTIFICATIONS  
For Daily Alerts

ತೋಫುವಿನ ಆರೋಗ್ಯಕರ ಗುಣಗಳು

By Super
|

ತೋಫು(ಸೋಯಾ ಮೊಸರು) ಅಥವಾ ದ್ವಿದಳ ಮೊಸರು ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಅತ್ಯಂತ ವಿವಾದಾತ್ಮಕ ಆಹಾರ ಪದಾರ್ಥ. ಇದನ್ನು ಕೆಲವರು ಆರೋಗ್ಯಕರವೆಂದರೆ ಮತ್ತೆ ಕೆಲವರು ಹಾನಿಕಾರಕವೆನ್ನುತ್ತಿದ್ದಾರೆ. ಸೋಯಾ ಮೊಸರಿನ ಬಗ್ಗೆ ದೀರ್ಘ ಚರ್ಚೆ ನಡೆಯುತ್ತಲೇ ಇದೆ. ತೋಫು ಎನ್ನುವುದು ಸೋಯಾದ ಒಂದು ಉತ್ಪನ್ನ ಮತ್ತು ಇದನ್ನು ವಿವಿಧ ಗಾತ್ರದಲ್ಲಿ ಮಾಡಲಾಗುತ್ತದೆ. ತೋಫುವಿನ ತಟಸ್ಥ ರುಚಿ ಮತ್ತು ಸುವಾಸನೆಯಿಂದಾಗಿ ಎಲ್ಲಾ ಅಡುಗೆಗಳಲ್ಲಿ ಇದನ್ನು ಉತ್ತಮ ಪದಾರ್ಥವನ್ನಾಗಿ ಬಳಸಲಾಗುತ್ತಿದೆ.

ಆಹಾರ ಕ್ರಮದಲ್ಲಿ ತೋಫುವನ್ನು ಪ್ರಮುಖ ಪದಾರ್ಥವನ್ನಾಗಿಸಬೇಕೆಂದು ಕೆಲವರು ವಾದಿಸುತ್ತಾರೆ. ಇದು ತುಂಬಾ ದುಬಾರಿ ಮತ್ತು ಹೆಚ್ಚಿನ ಪೋಷಕಾಂಶಗಳಿರುವ ಉತ್ಪನ್ನ. ಸಮಯ ಮತ್ತು ಹಣದೊಂದಿಗಿನ ಸ್ಪರ್ಧೆಯಿಂದಾಗಿ ಇಂದಿನ ದಿನಗಳಲ್ಲಿ ಜನರು ಯಾವುದೇ ಆಯ್ಕೆಯಿಲ್ಲದೆ ಆಹಾರದ ಆರೋಗ್ಯಕರ ಲಾಭದ ಬಗ್ಗೆ ಚಿಂತಿಸದೆ ಕೈಗೆ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಿದ್ದಾರೆ. ಫಾಸ್ಟ್ ಫುಡ್ ಸಂಸ್ಕೃತಿಯೂ ಇದಕ್ಕೆ ಒಂದು ಕಾರಣ. ಎಲ್ಲಾ ನಿಜವಾಗಿದ್ದರೂ ಕೆಲವು ಸಲ ತೋಫುವಿನಂತಹ ಉತ್ಪನ್ನಗಳ ಆರೋಗ್ಯಕರ ಲಾಭದ ಬಗ್ಗೆ ಗಮನ ಹರಿಸುವುದು ಅನಿವಾರ್ಯ. ತೋಫುವಿನ ಆರೋಗ್ಯ ಪ್ರಯೋಜನಗಳು ಅಪಾರ ಮತ್ತು ಈ ಬಹುಪ್ರತಿಭೆಯುಳ್ಳ ಸೋಯಾ ವಿವಿಧ ರೀತಿಯ ಅಡುಗೆಗಳಲ್ಲಿ ಕಾಣಸಿಗುತ್ತದೆ.

Why Tofu Is A Healthier Option?

ತೋಫು ಬಗ್ಗೆ ಹಲವಾರು ಪ್ರಶ್ನೆಗಳು ಏಳುತ್ತದೆ. ತೋಫು ಸಂಸ್ಕರಿತ ಆಹಾರವೇ? ಇದು ಹಾನಿಕಾರಕವೇ ಅಥವಾ ಆರೋಗ್ಯಕರವೇ ಅಥವಾ ಹೆಚ್ಚಿನದ್ದು. ಸೋಯಾದ ಅಲರ್ಜಿ ಇರುವವರು ತೋಫುವಿನಿಂದ ದೂರವಿರಬೇಕು. ಇತರರು ತೋಫುವಿನ ರುಚಿ ಮತ್ತು ಅದರ ಆರೋಗ್ಯಕರ ಪ್ರಯೋಜನಗಳನ್ನು ವಾರಕ್ಕೆ ಎರಡು ಸಲವಾದರೂ ಪಡೆಯಬೇಕು. ತೋಫು ಆರೋಗ್ಯಕರವೆಂದು ಹೇಳುವ ಕೆಲವು ಅಂಶಗಳನ್ನು ಇಲ್ಲಿನ ನೀಡಲಾಗಿದೆ.

1. ತೋಫು ಏನನ್ನು ನೀಡುತ್ತದೆ?
ತೋಫು ಪ್ರೋಟೀನ್ ನ ಪರಿಪೂರ್ಣ ಮೂಲ. ಅರ್ಧ ಕಪ್ ತೋಫುವಿನಲ್ಲಿ 10 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ ಎಂದರೆ ನಂಬುತ್ತೀರಾ? ಮತ್ತೊಂದು ಅಚ್ಚರಿಯೆಂದರೆ 10 ಗ್ರಾಂ ಪ್ರೋಟೀನ್ ನಲ್ಲಿ ಕೇವಲ 88 ಕ್ಯಾಲರಿಗಳಿರುತ್ತದೆ. ಇದು ಚರ್ಮವಿಲ್ಲದ ಕೋಳಿಗಿಂತ 45 ಕ್ಯಾಲರಿ ಕಡಿಮೆ ಹೊಂದಿರುತ್ತದೆ ಮತ್ತು ಇದರಿಂದ ತೋಫು ಆರೋಗ್ಯಕರ ಬೆಣ್ಣೆಯಾಗಿದೆ. ಸತು, ಕಬ್ಬಿನಾಂಶ, ಸೆಲೆನಿಯಂ, ಪೊಟಾಸಿಯಂ ಮತ್ತು ಜೀವಸತ್ವ ಹಾಗೂ ಖನಿಜಾಂಶಗಳಂತಹ ಅನೇಕ ಸಮೃದ್ಧ ಸತ್ವಗಳನ್ನು ತೋಫು ಹೊಂದಿದೆ.

2. ಪರಿಪೂರ್ಣ ಸಸ್ಯಾಹಾರಿ ಪರ್ಯಾಯ
ತೋಫುವನ್ನು ಮಾಂಸಹಾರಕ್ಕೆ ಪರಿಪೂರ್ಣ ಸಸ್ಯಾಹಾರಿ ಪರ್ಯಾಯವೆಂದು ಪರಿಗಣಿಸಲಾಗಿದೆ. ಮಾಂಸಹಾರಿಗಳಿಗೆ ಹೋಲಿಸಿದರೆ ಸಸ್ಯಹಾರಿಗಳು ಸೇವಿಸುವ ಪ್ರೋಟೀನ್ ಪ್ರಮಾಣ ಕಡಿಮೆಯಿರುತ್ತದೆ ಎನ್ನವ ತಪ್ಪು ತಿಳುವಳಿಕೆಯಿದೆ. ಅಧ್ಯಯನಗಳ ಪ್ರಕಾರ ತೋಫುವಿನ ನಿಯಮಿತ ಮತ್ತು ಸಮರ್ಪಕ ಸೇವನೆಯಿಂದ ಪ್ರೋಟೀನ್ ಸೇವನೆಯನ್ನು ಸರಿದೂಗಿಸುತ್ತದೆ. ತೋಫುವಿನ ಆರೋಗ್ಯ ಪ್ರಯೋಜನಗಳು ಅಪಾರ ಮತ್ತು ಸಸ್ಯಾಹಾರಿ ಪ್ರೇಮಿಗಳಿಗೆ ಮಾಂಸಕ್ಕೆ ಪರ್ಯಾಯವಾಗಿ ತೋಫು ಸಿಕ್ಕಿದೆ.

3. ತೋಫು ನೀಡುವ ಪ್ರಮುಖ ಆರೋಗ್ಯ ಪ್ರಯೋಜನಗಳು
ತೋಫುವಿನಲ್ಲಿ ಹಲವಾರು ಅಂಶಗಳಿದ್ದರೂ ಅದು ನೀಡುವ ಆರೋಗ್ಯಕರ ಪ್ರಯೋಜನಗಳು ಅಪಾರ. ತೋಫುವಿನ ಮುಖ್ಯ ಲಾಭವೆಂದರೆ ಅದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಮಾಂಸದ ಬದಲಿಗೆ ತೋಫು ತಿನ್ನಲು ಆರಂಭಿಸಿದರೆ ಟ್ರೈಗ್ಲಿಸರೈಡ್ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ತೋಫು ಸೇವನೆಯಿಂದಾಗಿ ಋತುಬಂಧ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ತಿಳಿದುಬಂದಿದೆ. ವಯಸ್ಸಾದ ಲಕ್ಷಣಗಳು ದೇಹದಲ್ಲಿ ಕಾಣದಂತೆ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಿಷ್ಠವಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ತೋಫುವನ್ನು ಒಮ್ಮೆ ಪ್ರಯತ್ನಿಸುವುದಿಲ್ಲವೇ? ತೋಫು ಆರೋಗ್ಯಕರ ಬೆಣ್ಣೆಯೆಂದು ನೀವೀಗ ಒಪ್ಪಿಕೊಳ್ಳುತ್ತೀರಲ್ಲಾ?

4. ಇನ್ನಷ್ಟು ಲಾಭಗಳು
ಇವೆಲ್ಲವುಗಳನ್ನು ಹೊರತುಪಡಿಸಿ ತೋಫುವಿನಲ್ಲಿ ಮತ್ತಷ್ಟು ಲಾಭಗಳಿವೆ. ತೋಫುವಿನಲ್ಲಿರುವ ಮತ್ತಷ್ಟು ಆರೋಗ್ಯಕರ ಲಾಭಗಳ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ತೋಫು ಐಸೊಫ್ಲವೊನ್ಗಳು ಹೊಂದಿದೆ ಮತ್ತು ಈ ಸಂಯುಕ್ತಗಳು ಜನಪ್ರಿಯ ಆ್ಯಂಟಿಆಕ್ಸಿಡೆಂಟ್(ಉತ್ಕರ್ಷಣ ನಿರೋಧಕಗಳು)ಗಳು. ಆ್ಯಂಟಿಆಕ್ಸಿಡೆಂಟ್ ಗಳು ನಿಮ್ಮ ಶರೀರದಲ್ಲಿ ಉತ್ಪತ್ತಿಯಾಗುವ ಮುಕ್ತ ರಾಡಿಕಲ್ ನಾಶ ಮಾಡುತ್ತದೆ. ಇದು ನಿಮ್ಮ ದೇಹದ ಚಿರಯೌವನವನ್ನು ಕಾಪಾಡುತ್ತದೆ. ತೋಫುವನ್ನು ಗರಿಷ್ಠ ಪ್ರಮಾಣದಲ್ಲಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್, ಹೃದಯ ರೋಗಗಳು ಮತ್ತು ಅಸ್ಥಿರಂಧ್ರತೆಯನ್ನು ತಡೆಗಟ್ಟಬಹುದು. ತೋಫುವಿನ ಸರಿಯಾದ ಪ್ರಮಾಣದ ಸೇವನೆ ಸ್ತ್ರೀಯರ ಬೆನ್ನುಮೂಳೆಯನ್ನು ಬಲಿಷ್ಠಗೊಳಿಸುತ್ತದೆ. ಈ ಎಲ್ಲಾ ಆರೋಗ್ಯ ಪ್ರಯೋಜನಗಳಿಂದ ತೋಫು ಆರೋಗ್ಯಕರ ಬೆಣ್ಣೆಯಾಗಿದೆ. ಇದು ನಿಮ್ಮ ಅಡುಗೆಗೆ ವಿಶೇಷ ಪರಿಮಳ ಮತ್ತು ಅಗಾಧ ಆರೋಗ್ಯ ಪ್ರಯೋಜನಗಳನ್ನು ನೀಡುವಾಗ ಚಿಂತಿಸುವುದು ಯಾಕೆ? ಪ್ರತಿಯೊಂದಕ್ಕೂ ಪರ-ವಿರೋಧಗಳಿರುವುದು ನಿಜ. ಆದರೆ ಉತ್ತಮವಾಗಿರುವುದನ್ನೇ ಆಯ್ಕೆ ಮಾಡಿ. ಆರೋಗ್ಯಕರ ಬೆಣ್ಣೆಯನ್ನು ಆಯ್ಕೆ ಮಾಡಿ ಮತ್ತು ಆರೋಗ್ಯವಾಗಿರಿ.

English summary

Why Tofu Is A Healthier Option?

There are a number of questions that arise about Tofu like is Tofu a processed food? Is it harmful or healthy and more. Some can be allergic to soy, such people keep away from Tofu, and others enjoy the taste and health benefits Tofu brings with it at least twice a week.
X
Desktop Bottom Promotion