For Quick Alerts
ALLOW NOTIFICATIONS  
For Daily Alerts

ಹಲ್ಲುಗಳಿಗೆ ಫ್ಲೋಸಿಂಗ್ ಯಾಕೆ ಬೇಕು?

By ಲೇಖಕ
|

ಪ್ರತಿದಿನ ನವಿರಾದ ನೂಲಿನಿಂದ ಹಲ್ಲುಗಳ ನಡುವೆ ಫ್ಲೋಸಿಂಗ್ ಮಾಡುವುದು ಹಲ್ಲುಗಳ ಆರೋಗ್ಯಕ್ಕೆ ಬಹಳ ಅವಶ್ಯಕ. ಇದು ಹಲ್ಲುಗಳ ಮೇಲಿರುವ ಲೋಳೆಯಂತಹ ಅಂಶವನ್ನು ತೆಗೆದು ಹಲ್ಲುಗಳು ಜಿಂಜ್ವೈಟಿಸ್ ಮತ್ತು ಒಸಡುಗಳ ರೋಗಕ್ಕೆ ತುತ್ತಾಗದ ಹಾಗೆ ಮಾಡುತ್ತವೆ. ದಂತ ವೈದ್ಯರ ಬಳಿ ಆಗಾಗ ಹೋಗಿ ಇದನ್ನು ತೆಗೆಯುತ್ತಾ ಇರುವುದು ಹಲ್ಲುಗಳ ಆರೈಕೆಯ ಒಂದು ಮುಖ್ಯವಾದ ಅಂಶ.

ಅಧ್ಯಯನಗಳು ಫ್ಲೋಸಿಂಗ್ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಾಧ್ಯತೆಗಳನ್ನು ಕೂಡ ದೂರ ಮಾಡುವುದನ್ನು ಸಾಧಿಸಿವೆ. ನಿಮ್ಮ ಆರೋಗ್ಯ ಮತ್ತು ಮುಗುಳ್ನಗೆಯನ್ನು ಸುಂದರಗೊಳಿಸಲು ಪ್ರತಿದಿನ ಫ್ಲೋಸಿಂಗ್ ಮಾಡಿ.

Why Should People Floss?

ಪ್ರಾಮುಖ್ಯತೆ

ಹಲ್ಲುಜ್ಜುವ ಬ್ರಷ್ ತೆಗೆಯಲು ಸಾಧ್ಯವಾಗದ ಹಲ್ಲಿನ ನಡುವಿರುವ ಉಳಿದ ಆಹಾರದ ತುಣುಕುಗಳು ಮತ್ತು ಹಲ್ಲಿನ ಮೇಲಿರುವ ಲೋಳೆಯಂತಹ ಅಂಶವನ್ನು ಫ್ಲೋಸಿಂಗ್ ತೆಗೆಯುವುದರಿಂದ ದಿನಕ್ಕೊಮ್ಮೆಯಾದರೂ ಫ್ಲೋಸಿಂಗ್ ಮಾಡಬೇಕು. ಹಲ್ಲಿನ ಮೇಲಿರುವ ಲೋಳೆಯಂತಹ ಪದಾರ್ಥ (ಪ್ಲೇಕ್) ಅಂಟಿನಂತಿದ್ದು ಇದು ದಂತಕ್ಷಯಕ್ಕೆ ಕಾರಣವಾಗುತ್ತದೆ ಮತ್ತು ಒಸಡುಗಳು ಕೂಡ ಹಾಳಾಗಿ ಜಿಂಜ್ವೈಟಿಸ್ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ. ಮತ್ತು ಇದರಿಂದ ಪರಿದಂತದ ರೋಗಗಳೂ ತಪ್ಪಿದ್ದಲ್ಲ.

ಪ್ಲೇಕ್ ನೀವು ಹಲ್ಲುಜ್ಜಿದ ನಾಲ್ಕು ಗಂಟೆಗಳ ಒಳಗಾಗಿ ನಿಮ್ಮ ಹಲ್ಲಿನ ಮೇಲೆ ತಯಾರಾಗಲು ಆರಂಭವಾಗುತ್ತದೆ. ಇದನ್ನು ಗಟ್ಟಿಯಾಗುವ ಮೊದಲು ತೆಗೆಯದೇ ಇದ್ದರೆ ಇದು ಹಲ್ಲಿನ ಕಿಟ್ಟ (ಟಾರ್ಟಾರ್) ವಾಗಿ ಬದಲಾಗುತ್ತದೆ. ಇದನ್ನು ನಂತರ ಕೇವಲ ದಂತ ವೈದ್ಯರಷ್ಟೇ ತೆಗೆಯಲು ಸಾಧ್ಯ.

ಎಚ್ಚರಿಕೆ:

ಟಾರ್ಟಾರಿನ ಮೇಲೆ ಬಹಳ ಅಪಾಯಕಾರಿ ಬಾಕ್ಟೀರಿಯಾಗಳು ಬೆಳೆಯಲು ಆರಂಭವಾಗುತ್ತದೆ ಮತ್ತು ಇದು ವಿಷಕಾರಕ ಅಂಶವನ್ನು ತಯಾರಿಸುತ್ತವೆ. ಇದು ಒಸಡುಗಳ ಮೇಲೆ ಪ್ರಭಾವ ಬೀರಿ ಜಿಂಜ್ವೈಟಿಸ್ ಗೆ ಕಾರಣವಾಗುತ್ತದೆ. ಇದು ಮುಂದುವರಿದು ಹಲ್ಲಿಗೆ ಬಲ ನೀಡುವ ಮೂಳೆಗಳನ್ನು ಹಾಳು ಮಾಡುವ ಪರಿದಂತದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ಮೂಳೆಗಳು ಸವೆದು ಹೋಗಿ ಹಲ್ಲು ಬಿದ್ದುಹೋಗುವ ಸಾಧ್ಯತೆಗಳು ಹೆಚ್ಚಾಗಿವೆ.

ಗಮನಿಸಬೇಕಾದ ಅಂಶಗಳು

ಅಧ್ಯಯನಗಳು ಫ್ಲೋಸಿಂಗ್ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಾಧ್ಯತೆಗಳನ್ನು ಕೂಡ ದೂರ ಮಾಡುವುದನ್ನು ಸಾಧಿಸಿವೆ. ಪರಿದಂತದ ರೋಗಗಳು ಮತ್ತು ಜಿಂಜ್ವೈಟಿಸ್ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಿವೆ. ಪಾರ್ಶ್ವವಾಯು ರೋಗಿಗಳ ಮೇಲೆ ನಡೆದ ಒಂದು ಅಧ್ಯಯನದ ಪ್ರಕಾರ ಬಹಳ ಹೆಚ್ಚಾಗಿದ್ದ ಪರಿದಂತಕ ಸಮಸ್ಯೆಗಳೇ ಪಾರ್ಶ್ವವಾಯುವಿನ ಸಾಧ್ಯತೆಗಳನ್ನು ಹೆಚ್ಚಿಸಲು ಕಾರಣ.

ನಿವಾರಣೆ/ಪರಿಹಾರ

ಇದು ನಿಮ್ಮ ಸೌದರ್ಯವನ್ನೂ ಹೆಚ್ಚಿಸುತ್ತದೆ. ಇದು ಟಾರ್ಟಾರ್ ನ ಸಂಗ್ರಹವನ್ನು ತಡೆದು ನಿಮ್ಮ ಹಲ್ಲುಗಳ ಆರೋಗ್ಯವನ್ನು ಮತ್ತು ಉಸಿರಾಡುವಾಗ ದುರ್ಗಂಧ ಬರುವುದನ್ನು ತಡೆಯುತ್ತದೆ. ಇದು ಹೇಗೆ ಉಸಿರಿನ ದುರ್ಗಂಧವನ್ನು ತಡೆಯುತ್ತದೆ ಎಂದು ನೋಡಲು ಫ್ಲೋಸಿಂಗ್ ತೆಗೆದ ಟಾರ್ಟಾರ್ ನ ದುರ್ಗಂಧವನ್ನು ನೀವು ನೋಡಿದರೆ ಸಾಕು.

ವಿಧಗಳು

ಹಲವು ಮಾದರಿಯ ಫ್ಲೋಸ್ ಗಳು ಉಪಲಬ್ಧವಿದೆ. ವಾಕ್ಸ್ಡ್ ಮತ್ತು ಅನ್ವಾಕ್ಸ್ಡ್, ಅಗಲವಾದ ಮತ್ತು ಸಾಮಾನ್ಯ ಹಾಗೂ ಇಷ್ಟೇ ಅಲ್ಲ ಹಲವು ಸುಗಂಧದ ಫ್ಲೋಸ್ ಗಳೂ ಇವೆ ಉದಾಹರಣೆಗೆ ಪುದಿನ ಮತ್ತು ಲವಂಗ. ಎಲ್ಲದರ ಕೆಲಸ ಒಂದೇ ರೀತಿಯಾಗಿದೆ. ನಿಮ್ಮ ಹಲ್ಲುಗಳ ನಡುವಿನ ಅಂತರ ಬಹಳ ಹೆಚ್ಚಾಗಿದ್ದಲ್ಲಿ ಅಂತರ ಹೆಚ್ಚಿರುವ ಫ್ಲೋಸ್ ಗಳನ್ನು ಬಳಸಬಹುದು. ಆದರೆ ಅದಕ್ಕಿಂತ ಮುಖ್ಯವಾದುದೆಂದರೆ ಒಂದು ಉತ್ಪನ್ನವನ್ನು ಆರಿಸಿ ಅದನ್ನು ಪ್ರತಿದಿನ ಬಳಸುವುದು.

ವಾಟರ್ ಪಿಕ್ ಗಳು ಪ್ಲೇಕ್ ಗಳನ್ನು ತೆಗೆಯದ ಕಾರಣ ಫ್ಲೋಸ್ ಗಳಷ್ಟು ಉಪಯೋಗಕಾರಿಯಲ್ಲ.

ವಿಧಾನ

ಫ್ಲೋಸ್ ಅನ್ನು ಹಲ್ಲುಗಳ ಮೇಲಿನಿಂದ ಕೆಳಕ್ಕೆ ಮತ್ತು ಹಲ್ಲು ಮತ್ತು ಒಸಡುಗಳ ನಡುವಣ ಜಾಗದಲ್ಲಿ ನಿಧಾನವಾಗಿ ಉಜ್ಜಬೇಕು

English summary

Why Should People Floss? | How To Do Tips | ಫ್ಲೋಸಿಂಗ್ ಯಾಕೆ ಬೇಕು

Daily flossing is an essential element of proper dental hygiene. It removes plaque, which can turn into tartar and cause gingivitis and gum disease. Regular cleanings by a dentist or hygienist help reduce tartar build-up.
Story first published: Thursday, January 3, 2013, 16:23 [IST]
X
Desktop Bottom Promotion