For Quick Alerts
ALLOW NOTIFICATIONS  
For Daily Alerts

ಲುಕ್ ನಲ್ಲಿ ಅಡಗಿದೆ ಆರೋಗ್ಯದ ರಹಸ್ಯ!

|

ಬಾಹ್ಯ ಸೌಂದರ್ಯದಿಂದ ನಮ್ಮ ಆರೋಗ್ಯದ ಬಗ್ಗೆ ತಿಳಿಯಬಹುದು. ನಮ್ಮ ಲುಕ್ ನಮ್ಮ ಆರೋಗ್ಯಕ್ಕೆ ಹಿಡಿದ ಕೈಗನ್ನಡಿ. ಅಕಾಲಿಕ ನೆರಿಗೆ ಬಿಳುವುದು, ಕೂದಲು ಉದುರುವುದು, ಉಗುರುಗಳು ಬೇಗನೆ ಕಟ್ಟಾಗುವುದು, ಕಣ್ಣಿನ ಹೊಳಪು ಕಡಿಮೆಯಾಗುವುದು ಈ ರೀತಿಯಿದ್ದರೆ ಇದು ಕೇವಲ ಸೌಂದರ್ಯದ ಸಮಸ್ಯೆ ಮಾತ್ರವೆಂದು ಭಾವಿಸಬೇಡಿ.

ನಿಮ್ಮ ಸೌಂದರ್ಯ ಸಮಸ್ಯೆ ನಿಮ್ಮಲ್ಲಿ ಯಾವುದೋ ಕಾಯಿಲೆಯಿದೆ ಎಂದು ತೋರಿಸುವ ಲಕ್ಷಣಗಳಾಗಿವೆ. ಇದು ಹೇಗೆಂದರೆ ಮೊದಲು ಸಣ್ಣ ಪುಟ್ಟ ಲಕ್ಷಣಗಳು ಕಂಡು ಬರುತ್ತದೆ, ಆಗ ಗಮನಿಸುವುದೇ ಇಲ್ಲ, ಕಾಯಿಲೆ ಜೋರಾದಾಗ ಅದರ ಬಗ್ಗೆ ಚಿಂತಿಸುತ್ತೇವೆ.

ಕಾಯಿಲೆ ಬಂದರೆ ನಮ್ಮ ಚರ್ಮದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅದರಲ್ಲೂ ಈ ಕೆಳಗಿನ ಲಕ್ಷಣಗಳು ಕಾಣಿಸಿದರೆ ಸೌಂದರ್ಯ ಸಮಸ್ಯೆವೆಂದು ಸುಮ್ಮೆನಿರುವ ಬದಲು ಆರೋಗ್ಯದ ಸಮಸ್ಯೆಯೇ ಎಂದು ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು.

ಪಾದಗಳು ಊದಿಕೊಳ್ಳುವುದು

ಪಾದಗಳು ಊದಿಕೊಳ್ಳುವುದು

ಗಾಯವಾದರೆ ಕಾಲುಗಳು ಊದಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿದ್ದರೆ ಕಾಲು ಊದಿಕೊಳ್ಳುವುದು.

ಬಳಲಿದ ಕಣ್ಣುಗಳು

ಬಳಲಿದ ಕಣ್ಣುಗಳು

ಕಣ್ಣಿನ ಸುತ್ತ ಕಪ್ಪು ವರ್ತುಲ, ಬಳಲಿದ ಕಣ್ಣುಗಳು, ಅಧಿಕ ಉಪ್ಪಿನಂಶವಿರುವ ಆಹಾರ ತಿನ್ನುವುದು, ಪೋಷಕಾಂಶದ ಕೊರತೆ ಇವೆಲ್ಲಾ ಇದ್ದರೆ ಕಣ್ಣಿನಲ್ಲಿ ಹೊಳಪು ಮಾಯವಾಗುವುದು.

ಒಣ ತ್ವಚೆ

ಒಣ ತ್ವಚೆ

ಕಾಯಿಲೆಯಿದ್ದರೆ ತ್ವಚೆ ತುಂಬಾ ಒಣಗುವುದು. ಹೈಪೋ ಥೈರಾಯ್ಡ್ ಹಾಗೂ ಮಧುಮೇಹ ಚರ್ಮದಲ್ಲಿರುವ ನೀರಿನಂಶವನ್ನು ಹೀರಿಕೊಂಡು, ತ್ವಚೆಯನ್ನು ಡ್ರೈಯಾಗಿಸುತ್ತದೆ.

ಮೈಯಲ್ಲಿ ಕೂದಲು

ಮೈಯಲ್ಲಿ ಕೂದಲು

ಮಹಿಳೆಯರಿಗೆ ಮುಖ ಮತ್ತು ಮೈಯಲ್ಲಿ ಕೂದಲು ತುಂಬಾ ಬಂದರೆ ಸೌಂದರ್ಯದ ವಿಷಯ ಮಾತ್ರವಲ್ಲ,ಆರೋಗ್ಯದ ವಿಷಯ ಕೂಡ. ಮುಖ, ಎದೆ, ಬೆನ್ನು, ಕೈ, ಕಾಲುಗಳಲ್ಲಿ ತುಂಬಾ ಕೂದಲು ಬೆಳೆದರೆ ಮಕ್ಕಳಾಗಲು ತೊಂದರೆ ಉಂಟಾಗಬಹುದು.

ನೆರಿಗೆ

ನೆರಿಗೆ

ಅಕಾಲಿಕ ನೆರಿಗೆ ಮೂಳೆಗೆ ಶಕ್ತಿ ಕಡಿಮೆಯಾದರೆ ಕಂಡು ಬರುತ್ತದೆ ಎಂದು ಇದರ ಬಗ್ಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಅದಲ್ಲದೆ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ, ಧೂಮಪಾನದ ಅಭ್ಯಾಸವಿರುವವರೆಗೆ ನೆರಿಗೆ ಬೇಗನೆ ಬೀಳುತ್ತದೆ.

ಕೂದಲು ಉದುರುವುದು

ಕೂದಲು ಉದುರುವುದು

ಕೂದಲು ಉದುರುತ್ತಿದ್ದರೆ ಬರೀ ನೀರು, ಶ್ಯಾಂಪೂ ಕಾರಣ ಅಂತ ತಿಳಿಯಬೇಡಿ. ನಿಮ್ಮ ದೇಹಕ್ಕೆ ಪೋಷಕಾಂಶದ ಕೊರತೆ ಇದ್ದರೆ, ಒತ್ತಡ, ಥೈರಾಯ್ಡ್, ಕ್ಯಾನ್ಸರ್ , ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಈ ರೀತಿಯ ಸಮಸ್ಯೆಯಿದ್ದರೆ ಕೂದಲು ಉದುರುತ್ತದೆ.

 ತುಟಿ

ತುಟಿ

ಅಲರ್ಜಿ ಸಮಸ್ಯೆಯಿದ್ದರೆ ತುಟಿ ಒಡೆಯುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತುಟಿ ತುಂಬಾ ಡ್ರೈಯಾಗುತ್ತದೆ.

ಹಲ್ಲುಗಳು

ಹಲ್ಲುಗಳು

ಹುಳುಕು ಹಲ್ಲುಗಳು, ಬಾಯಿಯನ್ನು ಸ್ವಚ್ಛ ಮಾಡಿದರೂ ಬಾಯಿ ದುರ್ವಾಸನೆ ಇವೆಲ್ಲಾ ಕಾಯಿಲೆಯ ಲಕ್ಷಣಗಳಾಗಿವೆ.

English summary

What Your Looks Say About Your Health | Tips For Health | ನಿಮ್ಮ ಲುಕ್ ಆರೋಗ್ಯದ ಬಗ್ಗೆ ಏನು ಹೇಳುತ್ತದೆ? | ಆರೋಗ್ಯಕ್ಕಾಗಿ ಕೆಲ ಸಲಹೆ

Good health often is reflected in an attractive, youthful appearance. So you might be tempted to blame aging and stress for facial lines, unsightly fingernails, or hair loss when, in fact, these flaws can signal underlying health issues.
X
Desktop Bottom Promotion