For Quick Alerts
ALLOW NOTIFICATIONS  
For Daily Alerts

ಪೂರ್ವ ರಕ್ತದೊತ್ತಡ ಎಂದರೇನು?

By ಲೇಖಕ
|

ರಕ್ತದೊತ್ತಡ- ಇದು ನಿಮ್ಮ ಆರೋಗ್ಯದ ಸ್ಥಿತಿಯನ್ನು ಸೂಚಿಸಲು ವೈದ್ಯರು ಬಳಸುವ ಸಾಮಾನ್ಯ ಸಂಕೇತ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಐದು ವಿಭಾಗಗಳಲ್ಲಿ ರಕ್ತದೊತ್ತಡವನ್ನು ನಿರ್ಧರಿಸಿದೆ. ಪೂರ್ವ ರಕ್ತದೊತ್ತಡ ಎಂಬುದು ಈ ಐದು ವಿಭಾಗಗಳಲ್ಲೊಂದು. ನೀವು ಪೂರ್ವ ರಕ್ತದೊತ್ತಡವನ್ನು ಹೊಂದಿದ್ದರೆ ಕೆಲವೊಂದು ಗಂಭೀರವಾದ

ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಸುವ ಸಾಧ್ಯತೆ ಮತ್ತು ಅಪಾಯ ಹೆಚ್ಚಿದೆ.

What Is Prehypertension?

ಗಮನಿಸಿ:

ರಕ್ತದ ಒತ್ತಡವೆಂದರೆ ನಿಮ್ಮ ಹೃದಯ ಶುದ್ದೀಕರಿಸಿದ ರಕ್ತ ರಕ್ತನಾಳ ಮತ್ತು ರಕ್ತಧಮನಿಗಳ ಗೋಡೆಗಳಿಗೆ ಬಡಿಯುವಾಗ ಬಳಸುವ ಬಲದ ಅಳತೆ. ರಕ್ತ ಹರಿಯುವಾಗ ಹೆಚ್ಚು ಬಲ ಪ್ರಯೋಗಿಸಿದರೆ ನಿಮ್ಮ ರಕ್ತದೊತ್ತಡ ಹೆಚ್ಚುತ್ತದೆ. ನಿಮ್ಮ ರಕ್ತದೊತ್ತಡವನ್ನು ಓದುವಾಗ ಎರಡು ಸಂಖ್ಯೆಗಳು ಒಂದರ ಮೇಲೊಂದು ಬರೆದಿರುತ್ತವೆ. ಮೇಲಿನ ಸಂಖ್ಯೆ- ಸಿಸ್ಟೋಲಿಕ್ ಒತ್ತಡ- ಇದು ಹೃದಯ ಬಡಿಯುವಾಗ ರಕ್ತಧಮನಿಗಳಲ್ಲಿ ಬಳಸಲ್ಪಡುವ ಒತ್ತಡ. ಕೆಳಗಿನ ಸಂಖ್ಯೆ-ಡಯಾಸ್ಟೋಲಿಕ್ ಒತ್ತಡ- ಹೃದಯ ಬಡಿತ ಮತ್ತು ಹೃದಯ ವಿಶ್ರಾಂತಿಯಲ್ಲಿರುವ ಸಮಸಯದ ನಡುವಿನ ಒತ್ತಡ.

ರಕ್ತದೊತ್ತಡ ಓದುವ ವಿಭಾಗಗಳು:

ರಕ್ತದೊತ್ತಡದ ಐದು ವಿಭಾಗಗಳೆಂದರೆ- ಸಹಜ ರಕ್ತದೊತ್ತಡ, ಪೂರ್ವ ರಕ್ತದೊತ್ತಡ, ಮೊದಲ ಹಂತದ ರಕ್ತದೊತ್ತಡ, ಎರಡನೇ ಹಂತದ ರಕ್ತದೊತ್ತಡ ಮತ್ತು ಅತಿರಕ್ತದೊತ್ತಡ ಸಮಸ್ಯೆ. ಹೈಪರ್ ಟೆನ್ಷನ್ ಎಂಬುದು ಅತಿ ರಕ್ತದೊತ್ತಡಕ್ಕಿರುವ ವೈದ್ಯಕೀಯ ಹೆಸರು.

ಗುರುತುಗಳು:

ಪೂರ್ವ ರಕ್ತದೊತ್ತಡವೆಂದರೆ ಸಹಜ ರಕ್ತದೊತ್ತಡಕ್ಕಿಂತ ಸ್ವಲ್ಪ ಹೆಚ್ಚಾಗಿದ್ದು ಅತಿ ರಕ್ತದೊತ್ತಡಕ್ಕಿಂತ ಕಡಿಮೆಯಿರುವ ಸ್ಥಿತಿ. ನೀವು ಪೂರ್ವ ರಕ್ತದೊತ್ತಡ ಹೊಂದಿದ್ದರೆ ನಿಮ್ಮ ರಕ್ತದೊತ್ತಡ 120/80 ಮತ್ತು 139/8 ನಡುವೆ ಇರುತ್ತದೆ. ಮೊದಲ ಹಂತದ ರಕ್ತದೊತ್ತಡ 140/90 ಮತ್ತ 159/99 ನಡುವಿರುತ್ತದೆ. ಮತ್ತು ಎರಡನೇ ಹಂತದ ರಕ್ತದೊತ್ತಡ ಸುಮಾರು 160/100 ಇರುತ್ತದೆ. ಅತ್ಯುಚ್ಚ ರಕ್ತದೊತ್ತಡದ ಸಂಕಷ್ಟ ಬಂದರೆ ನಿಮ್ಮ ಬಿ.ಪಿ. 180/110 ಕ್ಕೂ ಮಿಗಿಲಾಗಿರುತ್ತದೆ ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿದೆ.

ಮಹತ್ವ ಮತ್ತು ಅಗತ್ಯ:

ನೀವು ಪೂರ್ವ ರಕ್ತದೊತ್ತಡ ಹೊಂದಿದ್ದರೆ ನಿಮಗೆ ಅತಿ ರಕ್ತದೊತ್ತಡ ಬರಬಹುದಾದ ಸಾದ್ಯತೆ ಹೆಚ್ಚು. ಇದರಿಂದ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗಳಾದ ಪಾರ್ಶ್ವವಾಯು, ಹಾರ್ಟ್ ಅಟ್ಯಾಕ್, ಕೆಲವೊಮ್ಮೆ ಹೃದಯಾಘಾತ ಕೂಡ ಸಂಭವಿಸಬಹುದು. ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡರೆ ನೀವು ಅತಿ ರಕ್ತದೊತ್ತಡದಿಂದ ಮುಕ್ತಿ ಪಡೆಯಬಹುದು. ಆರೋಗ್ಯಕರ ಪಥ್ಯ, ನಿಯಮಿತವಾದ ನಿರಂತರ ವ್ಯಾಯಾಮ, ಅತಿಯಾದ ತೂಕವಿದ್ದರೆ ತೂಕವಿಳಿಸುವುದು , ಸೀಗರೇಟು ಸೇವನೆ ಬಿಡುವುದು, ಆಲ್ಕೋಹಾಲ್ ಬಿಡುವುದು ಮತ್ತು ಒತ್ತಡವನ್ನು ನಿಯಂತ್ರಸುವುದನ್ನೂ ಕೂಡ ಪಾಲಿಸಬೇಕು.

English summary

What Is Prehypertension? | ಪೂರ್ವ ರಕ್ತದೊತ್ತಡ ಎಂದರೇನು?

Blood pressure is one of the vital signs your doctor uses to determine the state of your health. The American Heart Association defines five categories of blood pressure readings.
X
Desktop Bottom Promotion