For Quick Alerts
ALLOW NOTIFICATIONS  
For Daily Alerts

ಹುಷಾರಿಲ್ಲದಿದ್ದಾಗ ತಿನ್ನಬಾರದ ಆಹಾರಗಳು

|

ಶೀತದ ಕಾಲವೆಂದರೆ ಎಲ್ಲ ಕಡೆ ನೆಗಡಿ, ಕೆಮ್ಮು ಸಾಮಾನ್ಯ. ಹಬ್ಬದ ಸಿಹಿತಿನಿಸುಗಳನ್ನು ಹಂಚುವಂತೆ ನಾವಿದನ್ನು ಎಲ್ಲರಿಗೂ ಹಂಚುತ್ತಿರುತ್ತೇವೆ. ಬೆಳ್ಳುಳ್ಳಿ, ಶುಂಠಿಯಂತಹ ವಸ್ತುಗಳ ಬಳಕೆ ಶೀತಕ್ಕೆ ರಾಮಬಾಣವಿದ್ದಂತೆ ಆದರೂ ಶೀತವಾದಾಗ, ಹುಷಾರಿಲ್ಲದಾಗ ನಾವು ಯಾವ ಆಹಾರಗಳನ್ನು ಬಳಸಬಾರದು ಎಂದು ತಿಳಿದುಕೊಳ್ಳುವುದು ಒಳ್ಳೆಯದು.

ಇಂತಹ ಆಹಾರಗಳ ಬದಲಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಸೇವಿಸುವುದರಿಂದ ರೋಗದಿಂದ ಬೇಗ ಗುಣಮುಖರಾಗಬಹದು ಮತ್ತು ಶೀತ ಹೆಚ್ಚಾಗುವುದನ್ನು ತಡೆಯಬಹುದು.

1. ಸಿಹಿತಿಂಡಿಗಳು

1. ಸಿಹಿತಿಂಡಿಗಳು

ನಿಮಗೆ ಹುಷಾರಿಲ್ಲ ಅನ್ನಿಸಿದಾಗ ನೀವು ಕ್ಯಾಂಡಿಗಳಿಂದ ದೂರ ಉಳಿಯುವುದು ಉತ್ತಮ. ಸಿಹಿತಿಂಡಿಗಳಲ್ಲಿ ಕೊಬ್ಬಿನಂಶವಿರುತ್ತದೆ. ಇವು ಜೀರ್ಣಾಂಗಗಳ ಮೇಲೆ ಒತ್ತಡವುಂಟುಮಾಡುತ್ತದೆ. ಕೆಲವೊಮ್ಮೆ ಇಂತಹ ಸಿಹಿತಿಂಡಿಗಳೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು!

2. ಸಂಸ್ಕರಿಸಲಾದ ಮಾಂಸ

2. ಸಂಸ್ಕರಿಸಲಾದ ಮಾಂಸ

ಈ ಬಗೆಯ ಮಾಂಸಗಳಲ್ಲಿ ಸಕ್ಕರೆ ಅಥವ ಉಪ್ಪು ಸೇರಿರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಉಪ್ಪೂರಿಸಿ ಒಣಗಿಸಿದ ಹಂದಿಮಾಂಸ. ಸಂಸ್ಕರಿಸಲಾದ ಮಾಂಸದಲ್ಲಿ ನೈಟ್ರೇಟ್ ಗ ನೈಟ್ರೈಟ್ಸ್ ಆಗಿ ಪರಿವರ್ತಿತವಾಗುತ್ತದೆ. ಇದು ಕ್ಯಾನ್ಸರ್ಗೆ ಕಾರಣವಾಗಬಹುದು. ಆರೋಗ್ಯ ಸರಿಯಿಲ್ಲದಿದ್ದಾಗ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಈ ನೈಟ್ರೈಟ್ಸ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

3. ಕಿತ್ತಳೆಹಣ್ಣಿನ ರಸ

3. ಕಿತ್ತಳೆಹಣ್ಣಿನ ರಸ

ಯಾವಾಗಲೂ ಕಿತ್ತಳೆ ಹಣ್ಣಿನ ರಸವನ್ನು ಆರೋಗ್ಯಕ್ಕೆ ಒಳ್ಳೆಯದು ಎಂದೇ ಹೇಳಲಾಗುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಇರುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಕಿತ್ತಳೆಯ ರಸವನ್ನು ಹಿಂಡಿದಾಗ ಅದರಲ್ಲಿ ಸೋಡಾದಲ್ಲಿರುವಷ್ಟೇ ಸಕ್ಕರೆ ಇರುತ್ತದೆ ಎಂದು ತಿಳಿದು ಬಂದಿದೆ. ಅನಾರೋಗ್ಯದ ಸಮಯದಲ್ಲಿ ಸಕ್ಕರೆ ಕೂಡ ಒಳ್ಳೆಯದಲ್ಲ. ಈ ಸಮಯದಲ್ಲಿ ಆ್ಯಸಿಡ್ ಗಳು ಹೊಟ್ಟೆಯನ್ನು ಹಾಳುಮಾಡುತ್ತದೆ.

4. ಕಾಳುಗಳು

4. ಕಾಳುಗಳು

ನೀವು ಹುಷಾರಿಲ್ಲದೆ ಮಲಗಿರುವಾಗ ಎಲ್ಲ ತರಹದ ಕಾಳುಗಳಿಂದ ದೂರವಿರುವುದು ಒಳ್ಳೆಯದು. ಅದರಲ್ಲೂ ಕಡಲೆಬೀಜ ಶೀತವಾದಾಗ ಹೆಚ್ಚಿನ ಮ್ಯೂಕಸ್ ಉತ್ಪಾದನೆ ಮಾಡಿ ತೊಂದರೆ ಉಂಟುಮಾಡುತ್ತದೆ. ಕಾಳುಗಳು ಮಲಬದ್ಧತೆಗೂ ಕಾರಣವಾಗುತ್ತವೆ.

5. ಕೆಂಪುಮಾಂಸ

5. ಕೆಂಪುಮಾಂಸ

ಕಾಳುಗಳಂತೆ ಕೆಂಪುಮಾಂಸ ಕೂಡ ಅನಾರೋಗ್ಯದ ಸಮಯದಲ್ಲಿ ಹಾನಿಕಾರಕ. ನೀವು ಶೀತವಾದಾಗ ಬರ್ಗರ್ ಜೊತೆ ಇದನ್ನು ತಿಂದಿರಾದರೆ ಎದೆಗೂಡಿನಲ್ಲಿ ಮತ್ತು ಮೂಗಿನಲ್ಲಿ ಹೆಚ್ಚಿನ ದ್ರವ ಶೇಖರಣೆಯಾಗಿ ತೊಂದರೆಯಾಗುತ್ತದೆ. ಮಾಂಸದಲ್ಲಿರುವ ಕೊಬ್ಬಿನಂಶ ಅನಾರೋಗ್ಯದ ಸಮಯದಲ್ಲಿ ಜೀರ್ಣಾಂಗದ ಮೇಲೆ ಒತ್ತಡ ಹೆಚ್ಚಿಸಿ ತೊಂದರೆ ಉಂಟುಮಾಡುತ್ತದೆ. ಅನಾರೋಗ್ಯ ಸಮಯದಲ್ಲಿ ದೇಹ ಒತ್ತಡದಲ್ಲಿರುತ್ತದೆ. ಇಂತಹ ಆಹಾರದ ಸೇವನೆಯಿಂದ ಇನ್ನಷ್ಟು ಪರಿಸ್ಥಿತಿ ಹದಗೆಡುತ್ತದೆ.

6. ಆಲ್ಕೊಹಾಲ್

6. ಆಲ್ಕೊಹಾಲ್

ಆಲ್ಕೋಹಾಲ್ ನೀವು ತೆಗೆದುಕೊಳ್ಳುವ ಎಲ್ಲ ಔಷಧಿಗಳ ಮೇಲೂ ಪ್ರಭಾವಬೀರಿ ಅವುಗಳನ್ನು ನಿಸ್ತೇಜ ಮಾಡಿಬಿಡುತ್ತದೆ. ಹೆಚ್ಚಿನ ಆಲ್ಕೋಹಾಲ್ ಸೇವನೆಯಿಂದ ಆ್ಯಸಿಡ್ ಉತ್ಪತ್ತಿ ಹೆಚ್ಚುತ್ತದೆ ಇದು ಹೊಟ್ಟೆಯ ಮೇಲೆ ಕೆಟ್ಟಪರಿಣಾಮವುಂಟುಮಾಡುತ್ತದೆ.

7. ಕೆಫೈನ್

7. ಕೆಫೈನ್

ಕೆಫೈನ್ ಕೂಡ ಅನಾರೋಗ್ಯದ ಸಮಯದಲ್ಲಿ ಹಾನಿಕಾರಿ. ಸೋಡ, ಕಾಫಿ ಮತ್ತು ಚಾಕೊಲೇಟ್ನ ಮಿತವಾದ ಸೇವನೆ ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು. ಕೆಫೈನ್ ಹೆಚ್ಚಿರುವ ಆಹಾರ ಮತ್ತು ಪಾನೀಯಗಳೆಲ್ಲವೂ ಯಾವಾಗಲೂ ಸಕ್ಕರೆಯ ಅಂಶ ಹೆಚ್ಚಿರುತ್ತದೆ. ಆದ್ದರಿಂದ ಇವುಗಳಿಗೆ ಟಾ ಟಾ ಹೇಳುವುದು ಒಳ್ಳೆಯದು!

8 ಮಸಾಲೆ ಆಹಾರಗಳು

8 ಮಸಾಲೆ ಆಹಾರಗಳು

ಹುಷಾರಿಲ್ಲದ ಸಮಯದಲ್ಲಿ ಮಸಾಲೆಭರಿತ ಆಹಾರದಿಂದ ದೂರವಿರಿ. ನಾಲಗೆ ಕೆಟ್ಟಿದೆ ಸ್ವಲ್ಪ ರುಚಿಯಾಗಿರುತ್ತದೆ ಎಂದು ಮಸಾಲೆ ಆಹಾರ ತಿನ್ನುವ ಎಂದು ಯೋಚನೆ ಕೂಡ ಮಾಡಬೇಡಿ. ನೆಗಡಿಯಾಗಿ ಮೂಗು ಸೋರುತ್ತಿರುವಾಗ ಗ್ಯಾಸ್ ನಿಂದ ತೊಂದರೆಯಾಗಿ ಹೊಟ್ಟೆಕೆಟ್ಟು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

9. ಹಸಿ ಆಹಾರಗಳು

9. ಹಸಿ ಆಹಾರಗಳು

ಹಸಿ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ಆದರೂ ಅನಾರೋಗ್ಯದಿಂದ ಮಲಗಿ ಚೇತರಿಸಿಕೊಳ್ಳುತ್ತಿರುವಾಗ ಬೇಯಿಸಿದ ಆಹಾರ ತಿನ್ನುವುದು ಒಳ್ಳೆಯದು. ಹಸಿಯಾಗಿ ತಿಂದಾಗ ಅನಾರೋಗ್ಯದ ಸಮಯದಲ್ಲಿ ಬ್ಯಾಕ್ಟೀರಿಯಾ ಸೋಂಕು ಹೆಚ್ಚಾಗುವ ಸಂಭವವಿರುತ್ತದೆ.

10. ಹಾಲಿನ ಉತ್ಪನ್ನಗಳು

10. ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳಲ್ಲಿ ಕೊಬ್ಬಿನಂಶ ಹೆಚ್ಚಿರುತ್ತದೆ. ಇವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕೆಲವರಿಗೆ ಹಾಲಿನಿಂದ ಅಲರ್ಜಿ ಕೂಡ ಆಗಬಹುದು.

English summary

What Foods Should You Avoid When Sick?

It’s also good to know which foods to avoid while sick or battling a cold. By eliminating these foods, while hopefully consuming immune-boosting foods, you can recover more quickly and reduce the severity of your symptoms.
X
Desktop Bottom Promotion