For Quick Alerts
ALLOW NOTIFICATIONS  
For Daily Alerts

ಥೈರಾಯ್ಡ್ ನಿಂದ ಹೆಚ್ಚಿದ ತೂಕ ಕಮ್ಮಿ ಮಾಡಲು ಟಿಪ್ಸ್

|

ಹೈಪೋ ಥೈರಾಯ್ಡ್ ಬಂದರೆ ದೇಹದ ತೂಕ ಮಿತಿ ಮೀರಿ ಹೆಚ್ಚಾಗುವುದು ಹಾಗೂ ಹಾರ್ಮೋನ್ ಗಳ ವ್ಯತ್ಯಾಸದಿಂದ ದೇಹದ ತೂಕ ಹೆಚ್ಚಾಗುವ ಕಾರಣ ಸುಲಭದಲ್ಲಿ ಮೈ ತೂಕ ಕರಗುವುದಿಲ್ಲ. ಮೈ ತೂಕ ಕಮ್ಮಿಯಾಗಲು ಹಾರ್ಮೋನ್ ಗಳು ಸಮತೋಲನಕ್ಕೆ ಬರಬೇಕು.

ಹಾರ್ಮೋನ್ ಗಳು ಸಮತೋಲನಕ್ಕೆ ಬರಲು ಡಾ, ಹೇಳಿದ ಮಾತ್ರೆಯ ಜೊತೆಗೆ ಆಹಾರಕ್ರಮ ಮತ್ತು ವ್ಯಾಯಾಮ ಮಾಡಿ, ಹೆಚ್ಚಾದ ಮೈ ತೂಕ ಕಡಿಮೆಯಾಗುವುದು. ಥೈರಾಯ್ಡ್ ಇರುವವರು ಈ ಕೆಳಗಿನ ಪ್ರತ್ಯೇಕ ಡಯಟ್ ಚಾರ್ಟ್ ಪಾಲಿಸಿದರೆ ಮೈ ತೂಕವನ್ನು ಕಡಿಮೆ ಮಾಡಬಹುದು.

ಮೊದಲಿಗೆ ಡಯಟ್ ಚಾರ್ಟ್ ಮಾಡಿಟ್ಟುಕೊಳ್ಳಿ

ಮೊದಲಿಗೆ ಡಯಟ್ ಚಾರ್ಟ್ ಮಾಡಿಟ್ಟುಕೊಳ್ಳಿ

ಮೈ ತೂಕ ಕಮ್ಮಿ ಮಾಡಬೇಕೆಂದು ಬಯಸುವವರು ಮೊದಲಿಗೆ ಡಯಟ್ ಚಾರ್ಟ್ ರೂಪಿಸಬೇಕು. ಇಲ್ಲದಿದ್ದರೆ ತಿನ್ನುವ ಆಹಾರದ ಬಗ್ಗೆ ನಿಗಾ ಇಡಲು ಸಾಧ್ಯವಿಲ್ಲ.

ಈ ಹಸಿರು ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ

ಈ ಹಸಿರು ತರಕಾರಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ

ಅದರಲ್ಲೂ ಕ್ಯಾಬೇಜ್, ಬೀನ್ಸ್, ಬ್ರೊಕೋಲಿ ಈ ರೀತಿಯ ತರಕಾರಿಗಳು ತುಂಬಾ ಹಾರ್ಮೋನ್ ಗಳನ್ನು ಸಮತೋಲನಕ್ಕೆ ತರುವಲ್ಲಿ ತುಂಬಾ ಸಹಕಾರಿ.

ಸಿಟ್ರಸ್ ಆಹಾರ

ಸಿಟ್ರಸ್ ಆಹಾರ

ಪ್ರತೀದಿನ ಸಿಟ್ರಸ್ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಲು ಮರೆಯಬೇಡಿ. ಸಿಟ್ರಸ್ ಅಂಶ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮೈ ತೂಕವನ್ನು ಕಡಿಮೆ ಮಾಡುವುದು.

ನೀರು

ನೀರು

ಸಾಕಷ್ಟು ನೀರು ಕುಡಿಯಿರಿ. ನೀರು ಹೊಟ್ಟೆ ಹಸಿವನ್ನು ನಿಯಂತ್ರಿಸುತ್ತದೆ, ಮೈ ತೂಕವನ್ನು ಕರಗಿಸುತ್ತದೆ. ಅದಲ್ಲದೆ ಥೈರಾಯ್ಡ್ ಬಂದರೆ ಸ್ಕಿನ್ ಡ್ರೈಯಾಗುವುದು. ಸಾಕಷ್ಟು ನೀರು ಕುಡಿದು ತ್ವಚೆಯಲ್ಲಿ ನೀರಿನಂಶವನ್ನು ಕಾಪಾಡಬಹುದು.

 ನಾರಿನಂಶ

ನಾರಿನಂಶ

ನಾರಿನಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ, ನಾರಿನಂಶದ ಆಹಾರಗಳು ಥೈರಾಯ್ಡ್ ತೊಂದರೆ ಬಂದಾಗ ಕಾಡುವ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿಯನ್ನು ನೀಡುತ್ತದೆ.

ಅಂಜೂರ

ಅಂಜೂರ

ಥೈರಾಯ್ಡ್ ಸಮಸ್ಯೆ ಇರುವವರು ಅಂಜೂರವನ್ನು ತಿನ್ನುವುದು ತುಂಬಾ ಒಳ್ಳೆಯದು. ಅಂಜೂರದಲ್ಲಿ ನಾರಿನಂಶ ಮಾತ್ರವಲ್ಲ, ಖಣಿಜಾಂಶಗಳು ಕೂಡ ಅಧಿಕವಾಗಿದೆ.

ಗ್ರೀನ್ ಟೀ

ಗ್ರೀನ್ ಟೀ

ಪ್ರತೀದಿನ ಒಂದು ಲೋಟ ಗ್ರೀನ್ ಟೀ ಕುಡಿಯಿರಿ. ಗ್ರೀನ್ ಟೀಯಲ್ಲಿ antioxidants ಅಧಿಕವಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು ಮತ್ತು ಬೊಜ್ಜು ಕೂಡ ಕರಗುವುದು.

ಐಯೋಡಿನ್

ಐಯೋಡಿನ್

ಐಯೋಡಿನ್ ಇರುವ ಆಹಾರ ಪದಾರ್ಥಗಳನ್ನು ತಿನ್ನಿ. ಮೀನು, ಸ್ಟ್ರಾಬೆರಿ ಇವೆಲ್ಲಾ ತುಂಬಾ ಒಳ್ಳೆಯದು.

English summary

Weight Loss Diet For Thyroid Patients

This healthy thyroid diet helps lose weight and maintain it. Dieting can help thyroid patients lose weight. Thyroid hormones can also help shed some weight and get in shape.
X
Desktop Bottom Promotion