For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ತಡೆಯಲು ಮುನ್ನೆಚ್ಚರಿಕೆ ಕ್ರಮಗಳು!

|

ಪೋಲಿಯೋ ಬರದಂತೆ ತಡೆಯಲು ಚುಚ್ಚುಮದ್ದು ಇರುವಾಗೆ ಕ್ಯಾನ್ಸರ್ ಬರದಂತೆ ತಡೆಯಲು ಯಾವುದೇ ಚುಚ್ಚು ಮದ್ದಿಲ್ಲ. ಕ್ಯಾನ್ಸರ್ ಗೆ ಚಿಕ್ಕ ಮಗುವಿನಿಂದ ಹಿಡಿದು ದೊಡ್ಡವವರೆಗೆ ಯಾರಿಗೆ ಬೇಕಾದರೂ ಬರಬಹುದು. ಕ್ಯಾನ್ಸರ್ ಬಂದ ಮೇಲೆ ಧೂಮಪಾನದಿಂದ ಕ್ಯಾನ್ಸರ್ ಬಂತು, ಹೊಟ್ಟೆಯಲ್ಲಿ ಗಡ್ಡೆ ಬಂದು ಕ್ಯಾನ್ಸರ್ ಉಂಟಾಗಿದೆ, ರಕ್ತ ಶುದ್ಧವಿಲ್ಲದೆ ಕ್ಯಾನ್ಸರ್ ಉಂಟಾಗಿದೆ ಹೀಗೆ ನಾನಾ ಕಾರಣಗಳನ್ನು ವೈದ್ಯರು ಹೇಳುತ್ತಾರೆ.

ಕ್ಯಾನ್ಸರ್ ಬರುವುದನ್ನು ತಡೆಯಲು ಮುಂಜಾಗ್ರತೆ ಕ್ರಮವಾಗಿ ಯಾವುದೇ ಚುಚ್ಚು ಮದ್ದು ಇಲ್ಲದಿದ್ದರೂ, ಕೆಲವು antioxidants ಆಹಾರಗಳಿವೆ. ಅವು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವುದರಲ್ಲಿ ಸಹಾಯ ಮಾಡುತ್ತದೆ. ನಮ್ಮ ಜೀವನ ಶೈಲಿಯಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು.

ಕ್ಯಾನ್ಸರ್ ಬಂದು ಕಷ್ಟ ಪಡುವ ಬದಲು, ಕ್ಯಾನ್ಸರ್ ಬರದಂತೆ ನಮ್ಮ ಕೈಯಲ್ಲಾಗುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲವೇ? ನನ್ನ ಮಾತು ನಿಮಗೂ ಸರಿಯೆನಿಸಿದರೆ ಮುಂದೆ ಓದಿ:

 ಸಕ್ಕರೆಯಂಶ ಕಡಿಮೆ ತಿನ್ನಿ

ಸಕ್ಕರೆಯಂಶ ಕಡಿಮೆ ತಿನ್ನಿ

ಪ್ರತಿಯೊಬ್ಬರ ದೇಹದಲ್ಲಿ ಕ್ಯಾನ್ಸರ್ ಕಣಗಳಿರುತ್ತದೆ. ಅದಕ್ಕೆ ಬೂಸ್ಟ್ ನೀಡುವ ಆಹಾರ ತಿಂದರೆ ಕ್ಯಾನ್ಸರ್ ಕಣಗಳು ವೃದ್ಧಿಸಲಾರಂಭಿಸುತ್ತದೆ. ಶರ್ಕರ ಪದಾರ್ಥಗಳನ್ನು, ಸಿಹಿಯನ್ನು ಮಿತಿಯಲ್ಲಿ ತಿಂದರೆ ಯಾವುದೇ ಅಪಾಯವಿಲ್ಲ.

ಧೂಮಪಾನ

ಧೂಮಪಾನ

ಧೂಮಪಾನ ಚಟ ಕಲಿಯುವಾಗ ಖುಷಿ ಕೊಟ್ಟರೂ ನಂತರ ನಾನಾ ಆರೋಗ್ಯಕರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದರಲ್ಲೊಂದು ಶ್ವಾಸಕೋಶದ ಕ್ಯಾನ್ಸರ್.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀಯಲ್ಲಿ antioxidants ಅಧಿಕವಿರುವುದರಿಂದ ಇವು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.

ಮಿತಿಮೀರಿದ ಮದ್ಯಪಾನ

ಮಿತಿಮೀರಿದ ಮದ್ಯಪಾನ

ಮಿತಿ ಮೀರಿದ ಮದ್ಯಪಾನದಿಂದ ಆರೋಗ್ಯ ಮಾತ್ರವಲ್ಲ, ಮನಸ್ಸಿನ ನೆಮ್ಮದಿ, ಮನೆಯವರ ನೆಮ್ಮದಿಯನ್ನು ಹಾಳು ಮಾಡುವುದು. ಮದ್ಯಪಾನ ಮಿತಿವಾಗಿ ಮಾಡಿದರೆ ಆರೋಗ್ಯಕರ, ಮಿತಿಮೀರಿದರೆ ಸರ್ವನಾಶ.

 ಕೆಂಪು ಮಾಂಸ ತುಂಬಾ ತಿನ್ನದಿರುವುದು ಒಳ್ಳೆಯದು

ಕೆಂಪು ಮಾಂಸ ತುಂಬಾ ತಿನ್ನದಿರುವುದು ಒಳ್ಳೆಯದು

ಕೆಂಪು ಮಾಂಸ ತಿನ್ನುವವರು ಮಿತಿಯಲ್ಲಿ ತಿಂದರೆ ಒಳ್ಳೆಯದು. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ.

 ಮೀನು

ಮೀನು

ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮೀನನ್ನು ಫ್ರೈ ಮಾಡಿ ತಿನ್ನುವ ಬದಲು ಸಾರು ಮಾಡಿ ತಿಂದರೆ ಒಳ್ಳೆಯದು.

ಕೆಂಪು ದುಂಡು ಮೆಣಸು ಒಳ್ಳೆಯದು

ಕೆಂಪು ದುಂಡು ಮೆಣಸು ಒಳ್ಳೆಯದು

ಕೆಂಪು ದುಂಡು ಮೆಣಸನ್ನು ಕ್ಯಾನ್ಸರ್ ರೋಗಿಗಳಿಗೆ ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ, ಇದರಲ್ಲಿ ಲೈಕೋಪೆನೆ ಕ್ಯಾನ್ಸರ್ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ.

ಮೊಬೈಲ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿ

ಮೊಬೈಲ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿ

ತಂತ್ರಜ್ಞಾನ ನಮ್ಮನ್ನು ಬೆಳೆಸುವಂತೆ ಅವುಗಳನ್ನು ಉಪಯೋಗಿಸಬೇಕು. ತುಂಬಾ ಹೊತ್ತು ಫೋನ್ ನಲ್ಲಿ ಮಾತನಾಡಿದರೆ ಮೆದುಳು ಕ್ಯಾನ್ಸರ್, ಕಿವುಡುತನ ಮುಂತಾದ ತೊಂದರೆ ಕಾಣಿಸಿಕೊಳ್ಳಬಹುದು.

 ಬೆಳ್ಳುಳ್ಳಿ ತಿನ್ನುವುದು ತುಂಬಾ ಒಳ್ಳೆಯದು

ಬೆಳ್ಳುಳ್ಳಿ ತಿನ್ನುವುದು ತುಂಬಾ ಒಳ್ಳೆಯದು

ಬೆಳ್ಳುಳ್ಳಿ ಎಲ್ಲಾ ರೀತಿಯಲ್ಲೂ ಆರೋಗ್ಯಕರ. ಇದು ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿ, ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ.

ಕೃತಕ ಆಹಾರದಿಂದ ದೂರವಿರಿ

ಕೃತಕ ಆಹಾರದಿಂದ ದೂರವಿರಿ

ಸಾಧ್ಯವಾದಷ್ಟು ನೈಸರ್ಗಿಕವಾದ ಆಹಾರಗಳನ್ನು ತಿನ್ನಿ. ಮಾತ್ರೆಗಳನ್ನು ತಿನ್ನುವ ಬದಲು ಅವುಗಳಿರುವ ಆಹಾರಗಳನ್ನು ತಿನ್ನಿ.

ಮೈ ಬೆವರುವುದು ಒಳ್ಳೆಯದು

ಮೈ ಬೆವರುವುದು ಒಳ್ಳೆಯದು

ಆಫೀಸ್ ನಲ್ಲಿ ಕುಳಿತು ಕೆಲಸ ಮಾಡುವವರಿಗೆ ಮೈ ಬೆವರುವುದು ಕಡಿಮೆ. ಇಂಥವರು ವ್ಯಾಯಾಮ ಮಾಡುವುದು ಅವಶ್ಯಕ. ವ್ಯಾಯಾಮ ಮಾಡುವುದರಿಂದ ದಿನಾಪೂರ್ತಿ ಲವಲವಿಕೆಯಿಂದ ಇರುವುದರ ಜೊತೆಗೆ ಅನೇಕ ಕಾಯಿಲೆಗಳು ನಿಮ್ಮಿಂದ ದೂರವಿರುವುದು.

ಕಡಿಮೆ ಗುಣ ಮಟ್ಟದ ಪ್ಲಾಸ್ಟಿಕ್ ಡಬ್ಬ ಬಳಸಬೇಡಿ

ಕಡಿಮೆ ಗುಣ ಮಟ್ಟದ ಪ್ಲಾಸ್ಟಿಕ್ ಡಬ್ಬ ಬಳಸಬೇಡಿ

ನೀರು ಕುಡಿಯುವ ಬಾಟಲಿ, ಊಟದ ಡಬ್ಬ, ಆಹಾರ ಸಂಗ್ರಹಿಸುವ ಪ್ಲಾಸ್ಟಿಕ್ ಡಬ್ಬಗಳು ಗುಣ ಮಟ್ಟದಾಗಿರಲಿ. ಪ್ಲಾಸ್ಟಿಕ್ ಕ್ಕಿಂತ ಸ್ಟೀಲ್, ಗಾಜಿನ ಪಾತ್ರೆಗಳು ಒಳ್ಳೆಯದು.

 ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿ ಕೂಡ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಇತ್ತೀಚಿಗೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಇದರಲ್ಲಿ ಲೈಕೋಪೆನೆ ಅಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ತಪಾಸಣೆ

ತಪಾಸಣೆ

ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಬೇಕೆಂದೇನು ಇಲ್ಲ. ಕಾಯಿಲೆ ಇಲ್ಲದಿದ್ದರೂ ಅಪರೂಪಕ್ಕೆ ವೈದ್ಯರನ್ನು ಕಂಡು ದೇಹ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಕೆಲ ಕಾಯಿಲೆಗಳು ಆರಂಭಿಕ ಹಂತದಲ್ಲಿ ಇರುವ ಕಾಯಿಲೆಗಳನ್ನು ತಿಳಿಯಲು ಈ ತಪಾಸಣೆ ನೆರವಿಗೆ ಬರುವುದು.

ಹಾನಿಕಾರಕ ಕಿರಣಗಳಿಂದ ದೂರವಿರಿ

ಹಾನಿಕಾರಕ ಕಿರಣಗಳಿಂದ ದೂರವಿರಿ

ಸೂರ್ಯನ ನೇರಳಾತೀತ ಕಿರಣಗಳು, ಮೈಕ್ರೋವೇವ್ ನ ಕಿರಣಗಳು, ಮೊಬೈಲ್ ಪೋನ್ ಹೊರಸುಸುವ ಕಿರಣಗಳು ಕ್ಯಾನ್ಸರ್ ಕಣಗಳನ್ನು ವೃದ್ಧಿಸುತ್ತದೆ. ಆದ್ದರಿಂದ ಇಂತಹ ಕಿರಣಗಳಿಂದ ದೂರವಿರಲು ಪ್ರಯತ್ನಿಸಿ.

English summary

Ways To Fight Cancer Naturally | Tips For Health | ಕ್ಯಾನ್ಸರ್ ಬರದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

You cannot take vaccination against cancer. So prevention of cancer is one of the best ways out, but natural ways to fight cancer can surely help you.
X
Desktop Bottom Promotion