For Quick Alerts
ALLOW NOTIFICATIONS  
For Daily Alerts

ನೆನೆಪಿನ ಶಕ್ತಿ ಹೆಚ್ಚಿಸಬೇಕೆ? ಈ ರೀತಿ ಮಾಡಿ

|

ನಮಗೆ ಆಧುನಿಕ ಸೌಲಭ್ಯಗಳು ಜಾಸ್ತಿಯಾದಂತೆ ಜ್ಞಾಪಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ ಅಂದರೆ ತಪ್ಪಾಗಲಾರದು. ಎಲ್ಲಾ ವಿಷಯಗಳಿಗೂ ಕಂಪ್ಯೂಟರ್ , ಮೊಬೈಲ್ ಅಂತ ಅವಲಂಭಿಸುತ್ತೇವೆ. ಹೆಚ್ಚಿನವರಿಗೆ ತಮ್ಮ ಅಮ್ಮ, ಅಪ್ಪನ ಮೊಬೈಲ್ ನಂಬರ್ ಕೂಡ ನೆನೆಪಿನಲ್ಲಿರುವುದಿಲ್ಲ. ಏಕೆಂದರೆ ಮೊಬೈಲ್ ನಲ್ಲಿ ಸ್ಟೋರ್ ಆಗಿರುವಾಗ ತಲೆಯಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳುವುದು ಏಕೆಂದು ಭಾವಿಸುತ್ತೇವೆ. ಇನ್ನು ಕೆಲವರಿಗೆ ಅವರ ಮೊಬೈಲ್ ನಂಬರ್ ಕೂಡ ಗೊತ್ತಿರುವುದಿಲ್ಲ, ಅದನ್ನು save ಮಾಡಿ ಇಟ್ಟು ಕೊಂಡಿರುತ್ತಾರೆ.

ಇನ್ನು ಸಣ್ಣ ಪುಟ್ಟ ಲೆಕ್ಕ ಗಳನ್ನು ಮಾಡಲು ನಮಗೆ ಕ್ಯಾಲ್ಕುಲೇಟರ್ ಸಹಾಯಬೇಕು. ನಮ್ಮ ಮೆದುಳಿಗೆ ಕೆಲಸ ಕೊಡದೆ ಅದು ಜಡವಾಗಿ ಬಿಟ್ಟಿದೆ. ಆದ್ದರಿಂದಲೇ ನಮಗೆ ಜ್ಷಾಪಕ ಶಕ್ತಿ ಕಡಿಮೆಯಾಗುತ್ತದೆ. ನಂತರ ನನಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ ಎಂದು ಭಯ ಪಡುತ್ತೇವೆ. ನಮ್ಮ ಮೆದುಳನ್ನು ಶಾರ್ಪ್ ಮಾಡಲು ಕೆಲವೊಂದು ಚಟುವಟಿಕೆಗಳನ್ನು ಮಾಡಬೇಕು. ಮೆದುಳು ಚುರುಕುಗೊಳಿಸುವ ಆಹಾರಗಳನ್ನು ತಿನ್ನಬೇಕು.

ಇಲ್ಲಿ ಕೆಲವು ಟಿಪ್ಸ್ ಇವೆ. ಅವುಗಳನ್ನು ಪಾಲಿಸಿದರೆ ನೀವು ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ.

1. ನೆನೆಪಿನ ಶಕ್ತಿ ಕಡಿಮೆಯಾಗಿದೆ ಎಂಬ ಚಿಂತೆ ಬಿಡಿ

1. ನೆನೆಪಿನ ಶಕ್ತಿ ಕಡಿಮೆಯಾಗಿದೆ ಎಂಬ ಚಿಂತೆ ಬಿಡಿ

ನನಗೆ ಯಾವುದು ಜ್ಞಾಪಕದಲ್ಲಿ ಇರುವುದೇ ಇಲ್ಲ ಎಂದು ಚಿಂತಿಸುವ ಬದಲು ನನಗೆ ಎಲ್ಲವು ನೆನೆಪಿನಲ್ಲಿರುತ್ತದೆ ಎಂದು ನಿಮ್ಮ ಮನಸ್ಸಿಗೆ ನೀವೇ ಹೇಳಿಕೊಳ್ಳಿ. ಆತ್ಮವಿಶ್ವಾಸ ಜ್ಞಾಪಕ ಶಕ್ತಿ ವೃದ್ಧಿಸುವಲ್ಲಿ ಅವಶ್ಯಕ.

2.ಕ್ಯಾಲ್ಕುಲೇಟರ್ ಬೇಡ

2.ಕ್ಯಾಲ್ಕುಲೇಟರ್ ಬೇಡ

ಚಿಕ್ಕ ಲೆಕ್ಕಗಳನ್ನು ಮಾಡಲು ನಿಮ್ಮಬುದ್ಧಿ ಶಕ್ತಿಯನ್ನೇ ಉಪಯೋಗಿಸಿ. ಆದಷ್ಟು ಕ್ಯಾಲ್ಕುಲೇಟರ್ ಬಳಸುವುದು ಕಡಿಮೆ ಮಾಡಿ. 100-25 ಮಾಡಿದರೆ ಎಷ್ಟು ಅನ್ನುವುದು ತಿಳಿಯಲು ಕ್ಯಾಲ್ಕುಲೇಟರ್ ಮಾಡುತ್ತಾ ಇದ್ದರೆ ನೆನೆಪಿನ ಶಕ್ತಿ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ.

3. ಶಾಪಿಂಗ್ ಲಿಸ್ಟ್

3. ಶಾಪಿಂಗ್ ಲಿಸ್ಟ್

ಶಾಪಿಂಗ್ ಗೆ ಹೋಗಿ ಮುಖ್ಯವಾದ ವಸ್ತುಗಳನ್ನು ತೆಗೆಯದೆ ಮರೆತು ಬರುವಿರಿ ಎಂಬ ಭಾವನೆ ನಿಮ್ಮಲ್ಲಿದ್ದರೆ ಶಾಪಿಂಗ್ ಲಿಸ್ಟ್ ಮಾಡಿಟ್ಟುಕೊಂಡು ಅವುಗಳನ್ನು ನೋಡುತ್ತಾ ತನ್ನಿ. ಮನೆಯಲ್ಲಿ ವಸ್ತುಗಳನ್ನು ಸುಲಭದಲ್ಲಿ ಸಿಗುವ ರೀತಿಯಲ್ಲಿ ಇಡಿ. ಕೀ, ಪರ್ಸ್ ಇವುಗಳನ್ನು ಇಡಲು ಒಂದೇ ಸ್ಥಳಗಳಲ್ಲಿ ಇಡಿ. ಬೇರೆ-ಬೇರೆ ಕಡೆ ಇಟ್ಟರೆ ಎಲ್ಲಿ ಇಟ್ಟಿದ್ದೀರಿ ಎಂದು ತಿಳಿಯದೆ ಪರೆದಾಡಬೇಕಾಗುತ್ತದೆ.

4. ಮೆದುಳು ಚುರುಕಾಗುವ ಆಟ

4. ಮೆದುಳು ಚುರುಕಾಗುವ ಆಟ

ಮೆದುಳು ಚುರುಕಾಗುವ ಆಟ ಆಡಬೇಕು. ಚೆಸ್, ಪದಬಂಧ, ಚುಟುಕು ಇವೆಲ್ಲಾ ನಿಮ್ಮಲ್ಲಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಮೆಂತ್ಯೆ ಸೊಪ್ಪು, ಮೂಲಂಗಿ, ಜೀರಿಗೆ

ಮೆಂತ್ಯೆ ಸೊಪ್ಪು, ಮೂಲಂಗಿ, ಜೀರಿಗೆ

ಮೆಂತ್ಯೆ ಸೊಪ್ಪು, ಮೂಲಂಗಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಮಿಶ್ರಣ ಮಾಡಿ ಅದಕ್ಕೆ ಉಪ್ಪು, ಮೆಣಸು, ಜೀರಿಗೆಯ ಒಗ್ಗರಣೆ ನೀಡಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ಹಸಿಯಾಗಿಯೂ ತಿನ್ನಬಹುದು, ಇಲ್ಲವೆಂದರೆ ಸ್ವಲ್ಪ ಬೇಯಿಸಿಯೂ ತಿನ್ನಬಹುದು.

ಶುಂಠಿ, ಜೀರಿಗೆ, ಕಲ್ಲು ಸಕ್ಕರೆ

ಶುಂಠಿ, ಜೀರಿಗೆ, ಕಲ್ಲು ಸಕ್ಕರೆ

ಒಂದು ಚೂರು ಹಸಿ ಶುಂಠಿ, ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆ ರುಚಿ ಹೆಚ್ಚುವುದರ ಜೊತೆ ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಸೇಬನ್ನು ಪ್ರತಿದಿನ ಊಟವಾದ ನಂತರ ನಿರಂತರವಾಗಿ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯನ್ನು ತಿನ್ನುತ್ತಿದ್ದರೆ ಜ್ಞಾಪಕ ಶಕ್ತಿ ಕ್ರಮೇಣ ಹೆಚ್ಚುತ್ತದೆ.

 ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಕುದಿಸಿ ಜೇನು ತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಟೀ

ಟೀ

ಟೀಯಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದರಲ್ಲಿ anti oxidants ಅಂಶ ಉಳಿದೆಲ್ಲಾ ತರಕಾರಿ ಮತ್ತು ಹಣ್ಣುಗಳಲ್ಲಿ ಇರುವುದಕ್ಕಿಂತ ಹೆಚ್ಚಾಗಿರುತ್ತದೆ. ಈ ಅಂಶವನ್ನು ಪಾಲಿಫಿನೊಲ್ಸ್ಎಂದು ಕರೆಯಲಾಗುವುದು, ಇದು ಮೆದುಳಿನ ಚಟುವಟಿಕೆಗಳನ್ನು ಹೆಚ್ಚು ಮಾಡುತ್ತದೆ. ಇದರಲ್ಲಿರುವ ಅಮೈನೊ ಆಸಿಡ್ ವಿಷಯವನ್ನು ಸರಿಯಾದ ರೀತಿಯಲ್ಲಿ ಯೋಚಿಸಲು ಸಹಾಯ ಮಾಡುತ್ತದೆ.

ತರಕಾರಿ

ತರಕಾರಿ

ನೀಲಿ, ಕೆಂಪು ಮತ್ತು ಹಸಿರು ಬಣ್ಣದಲ್ಲಿರುವ ತರಕಾರಿಗಳು ಮೆದುಳಿಗೆ ಒಳ್ಳೆಯದು. ಬದನೆಕಾಯಿ, ಬೀಟ್ ರೂಟ್ಸ್, ಈರುಳ್ಳಿ, ಸೊಪ್ಪುಗಳು ಮೆದುಳಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

 ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು

ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶವು ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಈ ಅಂಶವು ಆಹಾರದಿಂದ ಮಾತ್ರ ನಮ್ಮ ದೇಹ ಸೇರುವುದು.

English summary

Ways To Increase Memory Power | Tips For Health | ಜ್ಞಾಪಕ ಶಕ್ತಿ ಹೆಚ್ಚಿಸಲು ಮಾರ್ಗಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

There are many things that we can do to help improve our memory, but one simple technique that we can do right away is to add healthy foods to our diet, following some practice. Here are few tips to increase your memory power.
X
Desktop Bottom Promotion