For Quick Alerts
ALLOW NOTIFICATIONS  
For Daily Alerts

ಮೂಳೆಸವೆತದ ವಿರುದ್ಧ ಹೋರಾಡುವ ಮಾರ್ಗಗಳು

By Super
|

ಹೆಚ್ಚಿನ ಜನರಿಗೆ ಕ್ಯಾಲ್ಸಿಯಂ ನಮ್ಮ ಮೂಳೆಗಳಿಗೆ ಬಲವನ್ನು ನೀಡುತ್ತದೆ ಎಂದು ತಿಳಿದಿದೆ. ಆದರೆ ಗೊತ್ತೇ ಆಗದಂತೆ ನಿಮ್ಮ ಮೂಳೆಯನ್ನು ಬಲಹೀನವನ್ನಾಗಿ ಮಾಡುವ ಇದರ ಮೂಲಕ ಮೂಳೆ ಮುರಿತ ಸಾಧ್ಯವಾಗಬಹುದಾದ, ಬೆನ್ನು ನೋವು ಹಾಗೂ ಕುತ್ತಿಗೆ ನೋವು ಹಾಗೂ ಒಂದೇ ಬಾರಿ ಆರು ಇಂಚುಗಳಷ್ಟು ಎತ್ತರ ಕಡಿಮೆ ಮಾಡಬಲ್ಲ ಅಸ್ಥಿರಂಧ್ರತೆಯ ವಿರುದ್ಧ ಹೋರಾಡಲು ಹಲವು ದಾರಿಗಳಿವೆ.

ಪುರುಷ ಮತ್ತು ಮಹಿಳೆಯರಿಬ್ಬರೂ ಅಸ್ಥಿರಂಧ್ರತೆಯನ್ನು ಹೊಂದಬಹುದು ಆದರೆ ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಹಾಗೂ ಮುಟ್ಟು ನಿಂತ ಬಳಿಕೆ ಈ ಸಮಸ್ಯೆ ಹೆಚ್ಚು ಸಾಧಾರಣವಾಗಿದೆ. ಅಮೇರಿಕಾದಲ್ಲಿ ಪ್ರತಿ 50 ರಲ್ಲಿ ಒಬ್ಬ ಮಹಿಳೆಗೆ ಈ ಅನಾರೋಗ್ಯ ಇದೆ. ಇದಕ್ಕೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ನಿಮಗೆ ನಿಮ್ಮಲ್ಲಿ ಯಾವ ಅನಾರೋಗ್ಯ ಇದೆ ಎಂದು ತಿಳಿಯುವ ಮೊದಲೇ ನಿಮ್ಮಲ್ಲಿ ಮೂಳೆ ಸವೆತ ಆರಂಭವಾಗಿಬಿಡಬಹುದು.

ಅಸ್ಥಿರಂಧ್ರತೆಯ ವಿರುದ್ಧ ಹೋರಾಡುವ ಮಾರ್ಗಗಳು

ವ್ಯಾಯಾಮ

ವ್ಯಾಯಾಮ

ಈ ಅನಾರೋಗ್ಯದ ವಿರುದ್ಧ ಹೋರಾಡಲು ನಿಯಮಿತವಾದ ವ್ಯಾಯಾಮ ಬಹಳ ಮುಖ್ಯವಾಗಿದೆ. ರೋಗಿಗಳು ವಾರದಲ್ಲಿ ಐದರಿಂದ ಆರು ದಿನಗಳು ಮೂವತ್ತು ನಿಮಿಷಗಳ ಕಾಲ ನಿಯಮಿತ ವ್ಯಾಯಾಮ ಹಾಗೂ ಮೂಳೆಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಬೇಕು.

ಉಪ್ಪಿನ ಅಂಶವನ್ನು ಹೊಂದಿ

ಉಪ್ಪಿನ ಅಂಶವನ್ನು ಹೊಂದಿ

ಮೂತ್ರ ವಿಸರ್ಜನೆ ಹಾಗೂ ಬೆವರಿನಲ್ಲಿ ಹೋದ ಉಪ್ಪಿನ ಅಂಶವನ್ನು ಮರಳಿ ಭರ್ತಿ ಮಾಡುತ್ತದೆ. ಹಾಗೂ ಹೆಚ್ಚಿನ ರಕ್ತದೊತ್ತಡ ಹೊಂದಿರುವ ಜನರು ತಮ್ಮ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪಿನ ಅಂಶವನ್ನು ಕಳೆದುಕೊಳ್ಳುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ.

ಕೆಫೀನ್ ಸೇವನೆ ಕಡಿಮೆ ಮಾಡಿ

ಕೆಫೀನ್ ಸೇವನೆ ಕಡಿಮೆ ಮಾಡಿ

ಕೆಫೀನ್ ನಿಮ್ಮಲ್ಲಿ ಕ್ಯಾಲ್ಸಿಯಂ ಕರಗುವಿಕೆಗೆ ಅಡ್ಡಿ ಉಂಟುಮಾಡುತ್ತದೆ ಹಾಗಾಗಿ ಸೋಡಾ, ಕಾಫಿ ಅಥವಾ ಚಾಕಲೇಟ್ ಯಾವುದೇ ಆಗಿರಲಿ ಕೆಫೀನ್ ಹೆಚ್ಚಿರುವ ವಸ್ತುಗಳನ್ನು ಆದಷ್ಟು ದೂರವಿಡಬೇಕು.

ಧೂಮಪಾನ ಮಾಡಬೇಡಿ

ಧೂಮಪಾನ ಮಾಡಬೇಡಿ

ಧೂಮಪಾನ ನಿಮ್ಮ ದೇಹದ ರೋಗ ಗುಣಪಡಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆಯ ರಚನೆಗೂ ಅಡ್ಡಿ ಉಂಟುಮಾಡುತ್ತದೆ. ಧೂಮಪಾನವನ್ನು ದೂರವಿಟ್ಟ ಕೂಡಲೆ ನಿಮ್ಮ ದೇಹದ ಮೂಳೆ ರಚನೆಯ ಶಕ್ತಿ ಮರಳಿ ಪಡೆಯುತ್ತೀರಿ ಹೀಗಾಗಿ ಅನಾರೋಗ್ಯದಿಂದ ಕೂಡಲೆ ಆರಾಮವಾಗಲು ನೆರವಾಗುತ್ತದೆ.

ಕ್ಯಾಲ್ಸಿಯಂ

ಕ್ಯಾಲ್ಸಿಯಂ

national institute of health (ಎನ್.ಐ.ಎಚ್) ಹಿರಿಯರು ಪ್ರತಿದಿನ 1,000 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಸೇವಿಸಬೇಕು. ಹಾಗೂ ಈ ಪ್ರಮಾಣ 50 ದಾಟಿದ ಮಹಿಳೆಯರಿಗೆ ಹಾಗೂ 70 ದಾಟಿದ ಪುರುಷರಿಗೆ 1200 ಆಗಿರುತ್ತದೆ.

ವಿಟಮಿನ್ ಡಿ

ವಿಟಮಿನ್ ಡಿ

ವಿಟಮಿನ್ ಡಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಉಳಿಸಿಕೊಳ್ಳಲು ಮತ್ತು ಬಳಸಿಕೊಳ್ಳಲು ನೆರವಾಗುತ್ತದೆ. ಸೂರ್ಯನ ಬೆಳಕು ನಮ್ಮಲ್ಲಿ ವಿಟಮಿನ್ ಡಿ ಯ ಉತ್ಪಾದನೆಯನ್ನು ಮಾಡುತ್ತದೆ. ಇದರ ಜೊತೆಗೆ ಹಾಲು, ಉತ್ತಮವಾದ ಆಹಾರ, ಕಿತ್ತಳೆ ಹಣ್ಣಿನ ರಸ ಸೆರೆಲ್ಸ್ ನ ಮೂಲಕ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ..

ಸೋಡಾ ಬಳಕೆಯನ್ನು ಕಡಿಮೆ ಮಾಡಿ

ಸೋಡಾ ಬಳಕೆಯನ್ನು ಕಡಿಮೆ ಮಾಡಿ

ಯಾವುದೇ ರೀತಿಯ ಕೋಲಾ ಸೇವನೆ ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯದಲ್ಲ. ಇದು ಮೂಳೆ ಮುರಿತಕ್ಕೆ ಕಾರಣವಾಗುತ್ತದೆ ಎಂದು 2006 ರಲ್ಲಿ ಮಾಡಿದ ಸಂಶೋಧನೆ ಹೇಳುತ್ತದೆ. ಆದರೆ ಸೋಡಾ ನಿಜವಾಗಿಯೂ ನಮ್ಮ ದೇಹದ ಮೂಳೆ ಮುರಿತಕ್ಕೆ ಮತ್ತು ಮೂಳೆ ಬಲಹೀನವಾಗಲು ಕಾರಣವೇ ಎಂದು ಸ್ಪಷ್ಟವಾಗಿಲ್ಲ. ಒಂದು ಸಂಶೋಧನೆಯ ಪ್ರಕಾರ ಸೋಡಾವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವವರು ಹಾಲಿನ ಪದಾರ್ಥಗಳನ್ನು ಕಡಿಮೆ ಸೇವಿಸುತ್ತಾರೆ ಹೀಗಾಗಿ ಮೂಳೆ ಬಲಹೀನವಾಗಲು ಕಾರಣ ಎಂದು ಅಂದಾಜಿಸಲಾಗಿದೆ

ಔಷಧಗಳ ಬಗ್ಗೆ ಗಮನವಿರಲಿ

ಔಷಧಗಳ ಬಗ್ಗೆ ಗಮನವಿರಲಿ

ಕೆಲವು ಔಷಧಗಳು ನಿಮ್ಮಲ್ಲಿ ಅನಾರೋಗ್ಯವನ್ನು ತರಬಲ್ಲ ಅಂಶಗಳನ್ನು ಹೊಂದಿವೆ. ಇವುಗಳಲ್ಲಿ ಉರಿಯೂತ ಉಂಟು ಮಾಡುವ ಅಂಶವಿದ್ದು ಮೂಳೆ ಬಲಹೀನವಾಗಲು ಕಾರಣವಾಗುತ್ತದೆ

ಮದ್ಯಪಾನ ಸೇವನೆ ಕಡಿಮೆ ಮಾಡಿ

ಮದ್ಯಪಾನ ಸೇವನೆ ಕಡಿಮೆ ಮಾಡಿ

ದಿನಕ್ಕೆ ಕೇವಲ ಎರಡು ಪೆಗ್ ಸೇವನೆ ನಿಮ್ಮ ಮೂಳೆಗಳಿಗೆ ಒಳ್ಳೆಯದೇ ಆದರೂ ಮಿತಿ ಮೀರಿದಲ್ಲಿ ಇದು ನಿಮ್ಮ ಮೂಳೆಗಳಿಗೆ ಶತ್ರುವಾಗಿಬಿಡುತ್ತದೆ. ಹೆಚ್ಚಿನ ಮದ್ಯಪಾನ ಸೇವನೆಯಿಂದಾಗಿ ಮೂಳೆಯ ರಚನೆಗೆ ಕಾರಣವಾಗಿರುವ ಎಸ್ಟ್ರೋಜನ್ ನಂತಹ ಹಾರ್ಮೋನ್ ನ ಉತ್ಪಾದನೆ ಕಡಿಮೆ ಆಗುತ್ತದೆ

English summary

Ways to Fight Osteoporosis

Both men and women can get osteoporosis, but it's more common in women, especially after menopause. About one in five women over age 50 in the United States have it. Taking preventive measures is key, as many people with osteoporosis will get bone fractures before they even know they have the disease.
X
Desktop Bottom Promotion