For Quick Alerts
ALLOW NOTIFICATIONS  
For Daily Alerts

ಜಲ ಚಿಕಿತ್ಸೆ - ಹಲವು ರೋಗಗಳಿಗೆ ರಾಮಬಾಣ!

By Super
|

ಮುಂಜಾನೆ ನೀವು ಹಾಸಿಗೆಯಿಂದ ಏಳುತ್ತಿದ್ದಹಾಗೆ ಮುಖ ತೊಳೆಯುವುದಕ್ಕೂ ಮುನ್ನ ಖಾಲಿ ಹೊಟ್ಟೆಯಲ್ಲಿ 1.5 ಲೀಟರ್ ಅಥವಾ 5 ರಿಂದ 6 ಗ್ಲಾಸ್ ನೀರು ಕುಡಿಯಿರಿ. ಇದೇ ಜಲ ಚಿಕಿತ್ಸೆ! ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ಅಂಶವೆಂದರೆ ಹಿಂದಿನ ರಾತ್ರಿ ಯಾವುದೇ ರೀತಿಯ ಮದ್ಯ ಅಥವಾ ಮದ್ಯಸಾರ ಹೊಂದಿರುವ ಪಾನೀಯಗಳನ್ನು ಸೇವಿಸಿರಬಾರದು. ಜಲ ಚಿಕಿತ್ಸೆಗೆ ಕುದಿಸಿದ ಅಥವಾ ಶುದ್ದೀಕರಿಸಿದ ನೀರನ್ನೂ ಕೂಡ ಉಪಯೋಗಿಸಬಹುದು.

ಆರಂಭದಲ್ಲಿ ಕೆಲವರಿಗೆ ಒಂದೇ ಬಾರಿಗೆ1.5 ಲೀಟರ್ ನೀರು ಕುಡಿಯುವುದು ಕಷ್ಟವೆನಿಸಬಹುದು ಆದರೆ ಕ್ರಮೇಣ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಅಭ್ಯಾಸವಾಗುವವರೆಗೂ ನೀವು ಮೊದಲು ನಾಲ್ಕು ಗ್ಲಾಸ್ ನೀರು ಕುಡಿದು ನಂತರ ಎರಡು ನಿಮಿಷ ವಿಶ್ರಮಿಸಿ ಮಿಕ್ಕ 2 ಗ್ಲಾಸ್ ನೀರನ್ನು ಕುಡಿಯಬಹುದು. ಮೊದಮೊದಲು ಕೇವಲ 1 ಗಂಟೆಯ ಅವಧಿಯಲ್ಲಿ 2-3 ಬಾರಿ ಮೂತ್ರವಿಸರ್ಜಿಸುವಂತಾಗುವುದು ಆದರೆ ತದನಂತರ ಹಾಗನಿಸುವುದಿಲ್ಲ.

Water Therapy Treatment

ಜಲ ಚಿಕಿತ್ಸೆಯ ಉಪಯೋಗಗಳು

ಜಲ ಚಿಕಿತ್ಸೆ ಮಾನಸಿಕ ಒತ್ತಡದಿಂದ ವಿಮುಕ್ತಿ ದೊರಕಿಸುತ್ತದೆ. ನೀವು ಜಲ ಚಿಕಿತ್ಸೆ ಪಾಲಿಸಿದರೆ ದಿನವಿಡೀ ಉಲ್ಲಾಸ ಹಾಗು ಚೈತನ್ಯದಿಂದ ಪುಟಿಯುವಿರಿ. ಜಲ ಚಿಕಿತ್ಸೆ ದೇಹದ ತೂಕವನ್ನೂ ಇಳಿಸುತ್ತದೆ ಹಾಗು ಬೆವರು ಮತ್ತು ಮೂತ್ರದ ಮೂಲಕ ವಿಷಕಾರಿ ಅಂಶಗಳನ್ನು ಹೊರ ಹಾಕುವ ಮೂಲಕ ದೇಹವನ್ನು ನಿರ್ವಿಷಗೊಳಿಸುತ್ತದೆ. ನೀವು ಆರೋಗ್ಯದಿಂದ ಕೂಡಿದ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಸಹಕರಿಸುತ್ತದೆ. ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ದೇಹದಿಂದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕಲು ಸಹಕರಿಸುತ್ತದೆ.

ಜಲ ಚಿಕಿತ್ಸೆಯನ್ನು ದಿನವೂ ಪ್ರಯೋಗಿಸಿದರೆ ಒಂದು ದಿನದಲ್ಲಿ ಮಲಬದ್ದತೆಯನ್ನು ಎರಡು ದಿನದಲ್ಲಿ ಉಳಿ ತೇಗು/ಎದೆ ಉರಿ, ಮಧುಮೇಹವನ್ನು ಏಳು ದಿನಗಳಲ್ಲಿ, ಕ್ಯಾನ್ಸರ್ ಅನ್ನು ನಾಲ್ಕು ದಿನಗಳಲ್ಲಿ, ಶ್ವಾಶಕೋಶದ ಟಿ ಬಿ ಯನ್ನು ಮೂರು ತಿಂಗಳಲ್ಲಿ, ಗ್ಯಾಸ್ಟ್ರಿಕ್ ಅನ್ನು ಹತ್ತು ದಿನಗಳಲ್ಲಿ ಹಾಗು ರಕ್ತದೊತ್ತಡ, ಉದ್ವಿಗ್ನತೆ ಯನ್ನು ನಾಲ್ಕು ವಾರಗಳಲ್ಲಿ ತಹಬದಿಗೆ ತರುತ್ತದೆ.

ಇದಲ್ಲದೆ ತಲೆ ನೋವು, ಮೈಕೈ ನೋವು, ಸಂಧಿವಾತ, ವೇಗದ ಹೃದಯದ ಬಡಿತ, ಮೂರ್ಚೆ ರೋಗ, ಗೂರಲು, ಅಸ್ಥಮ, ಸ್ಥೂಲಕಾಯ, ಟಿ ಬಿ, ಮೆನಿಂಜೈಟಿಸ್, ಕಿಡ್ನಿ ಮತ್ತು ಮೂತ್ರಕೋಶ ಸಂಬಂಧಿ ರೋಗಗಳು, ವಾಂತಿ, ಬೇಧಿ, ಅತಿಸಾರ, ಮೂಲವ್ಯಾಧಿ, ಮಧುಮೇಹ, ಎಲ್ಲಾ ವಿಧವಾದ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು, ಮುಟ್ಟಿನ ತೊಂದರೆಗಳು, ಕಿವಿ, ಮೂಗು ಹಾಗು ಗಂಟಲಿನ ಸಮಸ್ಯೆಗಳನ್ನೂ ಕೂಡ ಗುಣ ಪಡಿಸುತ್ತದೆ. ಜಲ ಚಿಕಿತ್ಸೆ ಹೃದಯದ ವ್ಯವಸ್ತೆಯನ್ನು ಉತ್ತಮವಾಗಿರಿಸುತ್ತದೆ.

English summary

Water Therapy Treatment | Tips For Health | ಜಲ ಚಿಕಿತ್ಸೆ - ಹಲವು ರೋಗಗಳಿಗೆ ರಾಮಬಾಣ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Early morning after you get up from bed, drink 1.5 litres of water i.e., 5 to 6 glasses of water in empty stomach. You may wash your face thereafter. This is called Water Therapy.
X
Desktop Bottom Promotion