For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಈ ಆಹಾರಗಳನ್ನು ದೂರ ಮಾಡಬೇಡಿ!

|

ಬೇಸಿಗೆಯಲ್ಲಿ ನೀರಿನಂಶ ಅಧಿಕವಿರುವ ಹಣ್ಣು, ತರಕಾರಿಗಳನ್ನು ತಿನ್ನಬೇಕು. ಇದರಿಂದ ದೇಹದಲ್ಲಿ ಉಷ್ಣತೆಯನ್ನು ಸಮತೋಲನದಲ್ಲಿಡಬಹುದು. ಅದರಲ್ಲೂ ಸೀಸನ್ ಫುಡ್ಸ್ (ಆಯಾ ಆಯಾ ಕಾಲಕ್ಕೆ ಬೆಳೆಯುವ ಆಹಾರಗಳು) ಅಧಿಕ ತಿನ್ನಬೇಕು. ಶೀತಲೀಕರಣ ಮಾಡಿದ ಆಹಾರಗಳನ್ನು ದೂರವಿಡಿ.

ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅಜೀರ್ಣ, ಮಲಬದ್ಧತೆ, ಪೈಲ್ಸ್, ಕಿಡ್ನಿಯಲ್ಲಿ ಕಲ್ಲು ಈ ರೀತಿಯ ಸಮಸ್ಯೆಗಳು ಕಂಡು ಬರಬಹುದು. ಅದಲ್ಲದೆ ಬೇಸಿಗೆಯಲ್ಲಿ ಮೈ ಬೆವರುವುದರಿಂದ ದೇಹಕ್ಕೆ ಅಧಿಕ ನೀರಿನಂಶ ಅವಶ್ಯಕ. ಆದ್ದರಿಂದ ಅಧಿಕ ನೀರಿನಂಶವಿರುವ ಆಹಾರಗಳನ್ನು ತಿನ್ನಲು ಮರೆಯಬೇಡಿ.

ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಈ ಕೆಳಗಿನ ಆಹಾರಗಳನ್ನು ತಿನ್ನುವುದು ಒಳ್ಳೆಯದು:

ಟೊಮೆಟೊ

ಟೊಮೆಟೊ

ಟೊಮೆಟೊದಲ್ಲಿ ಪೊಟಾಷ್ಯಿಯಂ, ಲೈಕೊಪೆನೆ, ವಿಟಮಿನ್ ಸಿ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟೊಮೆಟೊ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಇರುತ್ತದೆ. ಇದನ್ನು ಆಹಾರಕ್ರಮದಲ್ಲಿ ಸೇರಿಸಲು ಮರೆಯಬೇಡಿ.

ಕ್ಯಾರೆಟ್

ಕ್ಯಾರೆಟ್

ಬೆಳಗ್ಗೆ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿದರೆ ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವುದರಿಂದ ತ್ವಚೆಯೂ ಆಕರ್ಷಕವಾಗಿರುತ್ತದೆ, ನಿರ್ಜಲೀಕರಣ ಕೂಡ ಉಂಟಾಗುತ್ತದೆ.

ನೂಕೋಲು ಮತ್ತು ಮೂಲಂಗಿ

ನೂಕೋಲು ಮತ್ತು ಮೂಲಂಗಿ

ನೂಕೋಲು ಹಾಗೂ ಮೂಲಂಗಿಯನ್ನು ತಿಂದರೆ ಇದು ರಕ್ತವನ್ನು ಶುದ್ಧ ಮಾಡುತ್ತದೆ, ಅಲ್ಲದೆ ಮಲಬದ್ಧತೆ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ.

 ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯನ್ನು ತಿಂದರೆ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲ, ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ.

ಕಿತ್ತಳೆ

ಕಿತ್ತಳೆ

ಪ್ರತೀದಿನ ಒಂದು ಕಿತ್ತಳೆ ತಿಂದರೆ ಇದರಲ್ಲಿ ನೀರಿನಂಶ ಹಾಗೂ ನಾರಿನಂಶ, ವಿಟಮಿನ್ ಸಿ ಇರುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು.

ಪೈನಾಪಲ್

ಪೈನಾಪಲ್

ಪೈನಾಪಲ್ ಕೂಡ ಬೇಸಿಗೆಯಲ್ಲಿ ತಿನ್ನಲು ಸೂಕ್ತವಾದ ಹಣ್ಣಾಗಿದೆ. ಆದರೆ ಗರ್ಭಿಣಿಯರು ಮಾತ್ರ ಈ ಹಣ್ಣನ್ನು ಮುಟ್ಟಲೇಬಾರದು.

 ಕಲ್ಲಂಗಡಿ

ಕಲ್ಲಂಗಡಿ

ಇದು ಅತ್ಯಧಿಕ ನೀರಿನಂಶ ಇರುವ ಹಣ್ಣಾಗಿದೆ. ಬೇಸಿಗೆಯಲ್ಲಿ ತಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಈ ಹಣ್ಣು ಕೂಡ ಇರುವುದು ಒಳ್ಳೆಯದು. ಮಧುಮೇಹ ಇರುವವರು ಈ ಹಣ್ಣನ್ನು ತಿನ್ನಬಾರದು.

ಸ್ಟ್ರಾಬೆರಿ

ಸ್ಟ್ರಾಬೆರಿ

ಸ್ಟ್ರಾಬೆರಿಯಲ್ಲಿ ವಿಟಮಿನ್, ಪ್ರೊಟೀನ್, ಅಯೋಡಿನ್,ಪೋಷಕಾಂಶಗಳು ಅಧಿಕವಾಗಿದೆ.

ದ್ರಾಕ್ಚಿ

ದ್ರಾಕ್ಚಿ

ದ್ರಾಕ್ಷಿ ತಿಂದರೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ನಿರ್ಜಲೀಕರಣ ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ದ್ರಾಕ್ಷಿಯನ್ನು ಮಧುಮೇಹ ಇರುವವರು ಮಿತಿಯಲ್ಲಿ ತಿನ್ನಬಹುದು.

English summary

Water Rich Foods To Include In Diet| Tips For Health | ನೀರಿನಂಶ ಅಧಿಕವಿರುವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Dehydration can lead to many health problems like constipation, improper bowel movements, piles, kidney stones etc.However, including some water-rich foods can keep you hydrated and also help you overcome health problems.
 
X
Desktop Bottom Promotion