For Quick Alerts
ALLOW NOTIFICATIONS  
For Daily Alerts

ಗಮನಿಸಲೇಬೇಕಾದ ಒಬೆಸಿಟಿಯ ಲಕ್ಷಣಗಳಿವು

|

ಹೆಚ್ಚಿನವರು ಮೈ ತೂಕ ಹೆಚ್ಚಾದರೆ ಒಬೆಸಿಟಿ ಸಮಸ್ಯೆ ಅಂದುಕೊಳ್ಳುತ್ತಾರೆ. ಒಬೆಸಿಟಿ ಮತ್ತು ಅಧಿಕ ತೂಕಕ್ಕೂ ವ್ಯತ್ಯಾಸವಿದೆ. ಅಧಿಕ ತೂಕವೆಂದರೆ ಸಾಮಾನ್ಯ ತೂಕಕ್ಕಿಂತ ಅಧಿಕ ತೂಕವಿರುವುದು. ಮೈ ತೂಕ ಜಾಸ್ತಿ ಆದ ತಕ್ಷಣ ಕಾಯಿಲೆ ಬೀಳುವುದಿಲ್ಲ. ಆದರೆ ಹೆಚ್ಚಿದ ಮೈ ತೂಕವನ್ನು ಕರಗಿಸದೆ ಹಾಗೇ ಬಿಟ್ಟರೆ ಒಬೆಸಿಟಿ ಬರಬಹುದು. ಒಬೆಸಿಟಿ ಬಂದರೆ ಅನೇಕ ಕಾಯಿಲೆಗಳು ನಿಮ್ಮ ದೇಹದಲ್ಲಿ ಮನೆ ಮಾಡುತ್ತದೆ.

ಅಧಿಕ ತೂಕದಿಂದ ಒಬೆಸಿಟಿಗೆ ಪರಿವರ್ತನೆ ಆಗುವಾಗ ನಿಮ್ಮ ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರುತ್ತದೆ. ಆಗ ಎಚ್ಚೆತ್ತು ಕೊಂಡು, ತೂಕವನ್ನು ಕಮ್ಮಿ ಮಾಡುವತ್ತ ನಿಜವಾಗಿ ಶ್ರಮ ನಡೆಸಿದರೆ ಒಬೆಸಿಟಿ ಸಮಸ್ಯೆ ಬರದಂತೆ ತಡೆಯಬಹುದು.

ಏನೂ ತಿನ್ನದಿದ್ದರೂ ಮೈ ತೂಕ ಹೆಚ್ಚಾಗುವುದು

ಏನೂ ತಿನ್ನದಿದ್ದರೂ ಮೈ ತೂಕ ಹೆಚ್ಚಾಗುವುದು

ಕೆಲವರು ಹೇಳುವುದನ್ನು ಕೇಳಬಹುದು, "ದಪ್ಪಗಾಗುತ್ತಿದ್ಧೇನೆ ಎಂದು ಸರಿಯಾಗಿ ಊಟ ಕೂಡ ಮಾಡುವುದಿಲ್ಲ, ಆದರೂ ದಪ್ಪಗಾಗುತ್ತಿದ್ದೇನೆ" ಇದು ಒಬೆಸಿಟಿಯ ಲಕ್ಷಣವಾಗಿದೆ. ದಪ್ಪಗಾಗುತ್ತಿದ್ದೇವೆ ಎಂದು ಏನೂ ತಿನ್ನದಿದ್ದರೆ ಆರೋಗ್ಯ ಮತ್ತಷ್ಟು ಹದ ಕೆಡುವುದು. ವ್ಯಾಯಾಮ ಮಾಡಿ, ಆರೋಗ್ಯಕರ ಆಹಾರವನ್ನು ಮಿತಿಯಲ್ಲಿ ತಿನ್ನಿ, ಮಾನಸಿಕ ಒತ್ತಡ ಬಿಡಿ, ಇಷ್ಟು ಮಾಡಿದರೆ ಖಂಡಿತ ದೇಹದ ತೂಕ ಕಮ್ಮಿಯಾಗುವುದು.

ಕೊಬ್ಬು ಶೇಖರವಾಗುವುದು

ಕೊಬ್ಬು ಶೇಖರವಾಗುವುದು

ಹೊಟ್ಟೆ, ಸೋಮಟದ ಸುತ್ತ, ತೊಡೆ ಈ ಭಾಗದಲ್ಲಿ ಕೊಬ್ಬು ಶೇಖರವಾಗುವುದರ ಜೊತೆಗೆ ತ್ವಚೆಯ ಬಣ್ಣ ಕೂಡ ಬದಲಾಗುತ್ತದೆ, ಹೆಚ್ಚಿದ ತೂಕದ ಕಾರಣ ಸ್ಟ್ರೆಚ್ ಮಾರ್ಕ್ಸ್ ಬೀಳುವುದು.

 ಮಂಡಿ ನೋವು

ಮಂಡಿ ನೋವು

ತೂಕ ಹೆಚ್ಚಾದಂತೆ ಮಂಡಿನೋವು ಕಾಣಿಸಿಕೊಳ್ಳುವುದು, ಮಂಡಿ ನೋವಿಗೆ ಪರಿಹಾರ ತೂಕ ಕಮ್ಮಿ ಮಾಡುವುದೊಂದೇ.

 ನರ ಸೆಳೆತ

ನರ ಸೆಳೆತ

ತೂಕ ಹೆಚ್ಚಾದಂತೆ ತುಂಬಾ ನರ ಸೆಳೆತದ ಸಮಸ್ಯೆ ಕಂಡು ಬರುವುದು. ಈ ಲಕ್ಷಣಗಳು ಕಂಡು ಬಂದರೆ ತೂಕ ಕಮ್ಮಿ ಮಾಡುವುದರ ಬಗ್ಗೆ ಪ್ರಯತ್ನ ಮಾಡದಿದ್ದರೆ ಇನ್ನು ಕೆಲವು ಕಾಯಿಲೆಗಳು ಪ್ರಾರಂಭವಾಗುವುದು.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್ ಹೆಚ್ಚಾಗುವುದು ಪ್ರಮುಖವಾಗಿ ನಮ್ಮ ಆಹಾರಕ್ರಮದಿಂದ. ಕೊಲೆಸ್ಟ್ರಾಲ್ ಮೂಳೆಗಳಲ್ಲಿ ರಕ್ತ ಸಂಚಾರಕ್ಕೆ ತೊಂದರೆ ಉಂಟು ಮಾಡುವುದು.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಸ್ವಲ್ಪ ನಡೆದಾಡಿದರೆ, ವ್ಯಾಯಾಮ ಮಾಡಿದರೆ ಏದು ಉಸಿರು ಬರುವುದಾದರೆ ಅದು ಒಬೆಸಿಟಿಯ ಲಕ್ಷಣವಾಗಿದೆ.

ಹೃದಯದ ತೊಂದರೆಗಳು

ಹೃದಯದ ತೊಂದರೆಗಳು

ದೇಹದಲ್ಲಿ ಕೊಬ್ಬು ಹೆಚ್ಚು ಶೇಖರವಾಗುತ್ತಾ ಹೋದಂತೆ ರಕ್ತ ಪರಿಚಲನೆಗೆ ತೊಂದರೆ ಉಂಟಾಗಿ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುವುದು.

ಅನಿಯಮಿತ ಮುಟ್ಟು

ಅನಿಯಮಿತ ಮುಟ್ಟು

ಒಬೆಸಿಟಿ ಇರುವ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಕಂಡು ಬರುವುದು ಹಾಗೂ ಗರ್ಭದಾರಣೆ ಆಗುವ ಸಾಧ್ಯತೆ ಕೂಡ ಕಮ್ಮಿ.

ತಲೆಸುತ್ತು

ತಲೆಸುತ್ತು

ಒಬೆಸಿಟಿಯ ಮತ್ತೊಂದುಲಕ್ಷಣ ತಲೆ ಸುತ್ತು ಕಂಡು ಬರುವುದು. ತೂಕ ಹೆಚ್ಚಾಗುವುದು, ತಲೆಸುತ್ತು ಥೈರಾಯ್ಡ್ ನ ಕೂಡ ಲಕ್ಷಣವಾಗಿದೆ.

 ಒಬೆಸಿಟಿ

ಒಬೆಸಿಟಿ

ಒಬೆಸಿಟಿ ವ್ಯಕ್ತಿಗಳು ಮಧುಮೇಹ ಕಾಯಿಲೆಗೆ ಬೇಗನೆ ತುತ್ತಾಗುತ್ತಾರೆ.

English summary

Warning Signs Of Obesity To Watch Out | Tips For Health | ಗಮನಿಸಬೇಕಾದ ಒಬೆಸಿಟಿಯ ಲಕ್ಷಣಗಳಿವು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Most often people confuse obesity with being overweight. But obesity is much more than just your weight. It is a disease, a chronic condition that will lead you to have several other health disorders.
X
Desktop Bottom Promotion