For Quick Alerts
ALLOW NOTIFICATIONS  
For Daily Alerts

ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಈ ತ್ರಿಫಲಾ

By Super
|

ಆಯುರ್ವೇದ ಜಗತ್ತು ಹಿಂದಿನಿಂದಲೂ ಸಾಕಷ್ಟು ಹೆಸರು ಮಾಡಿದ, ಸವಾಲಾದ ಹಲವಾರು ಖಾಯಿಲೆಯನ್ನು ವಾಸಿಮಾಡಿದ ವೈದ್ಯಕೀಯ ಪದ್ಧತಿ.. ಅಂದಿನಿಂದ ಇಂದಿನವರೆಗೂ ಹೆಚ್ಚಿನ ಜನರು ಆಯುರ್ವೇದಿಕ ಚಿಕಿತ್ಸೆಯ ಮೊರೆಹೋಗುತ್ತಾರೆ. ಅದರಲ್ಲಿನ ಹಲವಾರು ಔಷಧಗಳು ಇಂದಿಗೂ ಪವಾಡಗಳನ್ನು ಮಾಡುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೇ ಇಂದಿಗೂ ಹೆಚ್ಚಿನ ಬೇಡಿಕೆಯುಳ್ಳ ತ್ರಿಫಲಾ!

ತ್ರಿಫಲಾ ಎಂದರೇನು?

ರಸಾಯನ ಅಥವಾ ಪುನರ್ ಚೇತನ ಎಂದೇ ಕರೆಯಲ್ಪಡುವ ತ್ರಿಫಲಾ, ಒಂದು ಆಯುರ್ವೇದಿಕ ಔಷಧ. ತ್ರಿಫಲಾ ಮೂರು ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ತ್ರಿಫಲಾ ಒಳಗೊಂಡಿರುವ ಗಿಡಮೂಲಿಕೆಗಳೆಂದರೆ, Amalaki, Haritak, Bhibitaki.

ತ್ರಿಫಲಾ ಹೇಗೆ ಸಹಾಯಕಾರಿ ?

ತ್ರಿಫಲಾ ಔಷಧವು ಮಾಂತ್ರಿಕ ಆಯುರ್ವೇದಿಕ ಸಿದ್ಧತೆಯಾಗಿದ್ದು, ವಿಶ್ವದ ಆಯುರ್ವೇದಿಕ ವೈದ್ಯರಿಂದ ಆಯ್ಕೆ ಮಾಡಲ್ಪಟ್ಟ ಅದ್ಭುತ ಔಷಧ. ಇದು ವಿಶ್ವದ ಯಾವುದೇ ರೀತಿಯ ರೋಗಗಳಿಗೂ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬಲ್ಲದು. ಇನ್ನೊಂದು ಆಶ್ವರ್ಯಕರವಾದ ಸಂಗತಿಯೆಂದರೆ, ಆಯುರ್ವೇದಿಕ ಗ್ರಂಥವಾದ ಚರಕ ಸಂಹಿತದ ಪ್ರಥಮ ಭಾಗದಲ್ಲಿಯೇ ತ್ರಿಫಲಾ ಬಗ್ಗೆ ಪ್ರಸ್ತಾಪವಿದೆ! ಇದರಲ್ಲಿ ಅಡಕವಾಗಿರುವ ಗಿಡಮೂಲಿಕೆಗಳು (Amalaki, Haritaki,Bhibitaki) ಎಲ್ಲಾ ಖಾಯಿಲೆಗಳಿಗೂ ಅಮೃತದಂತೆ ಪರಿಹಾರವನ್ನು ನೀಡುತ್ತದೆ. ಅವುಗಳ ಕೆಲ ಪ್ರಯೋಜನಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ರೋಗ ನಿರೋಧಕ ಶಕ್ತಿ ಮಾಡ್ಯುಲೇಟರ್

ರೋಗ ನಿರೋಧಕ ಶಕ್ತಿ ಮಾಡ್ಯುಲೇಟರ್

ಆಯುರ್ವೇದಿಕ ತ್ರಿಫಲಾ ಆರೋಗ್ಯಕ್ಕೆ ಮರುಜೀವವನ್ನು ನೀಡುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಜೀವನಕ್ಕೆ ರೋಗನಿರೋಧಕ ಶಕ್ತಿ ದೇಹದಲ್ಲಿರುವುದು ಅತ್ಯಂತ ಅಗತ್ಯ. ತ್ರಿಫಲಾ ಬಾಹ್ಯ ಶಕ್ತಿಗಳ ವಿರುದ್ಧ ಅಂದರೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಲ್ಲಿ ದೇಹವನ್ನು ಸದೃಢಗೊಳಿಸುತ್ತದೆ. ದೇಹದಲ್ಲಿ ಯಾವುದೇ ರೋಗಾಣುಗಳೂ ಸೇರದಂತೆ ತಡೆಗೋಡೆಯಂತೆ ಕಾರ್ಯ ನಿರ್ವಹಿಸುತ್ತದೆ. ಜೀವಕೋಶಗಳ ಉತ್ಪಾದನೆ ಕಾರ್ಯದಲ್ಲಿಯೂ ತ್ರಿಫಲಾ ಪಾತ್ರವಹಿಸುತ್ತದೆ.

ಆಕ್ಸಿಡೀಕರಣ ವಿರೋಧಿ

ಆಕ್ಸಿಡೀಕರಣ ವಿರೋಧಿ

ದೇಹದಲ್ಲಿ ಜೀವಕೋಶಗಳ ಚಯಾಪಚಯ ಕ್ರಿಯೆ ಸರಿಯಾಗಿ ಆಗುವಂತೆ ಆಕ್ಸಿಡೀಕರಣ ವಿರೋಧಿ ಕಾರ್ಯವನ್ನು ಮಾಡುತ್ತದೆ. ರಾಡಿಕಲ್ ಉತ್ಪಾದನೆ ವಯಸ್ಸಾದಂತೆ ಕಾಣಲು ಪ್ರಮುಖ ಕಾರಣ. ಇದರ ಉತ್ಪಾದನೆಯನ್ನು ತಪ್ಪಿಸುತ್ತದೆ. ಮೈಟೊಕಾಂಡ್ರಿಯ, ಗಾಲ್ಗಿ ಕಾಯಗಳು ಮತ್ತು ನ್ಯೂಕ್ಲಿಯಸ್ ನಂತಹ ಜೀವಕೋಶದ ಅಂಗಾಂಶಗಳನ್ನು ಕಾರ್ಯವಿಧಾನವನ್ನು ಪ್ರಚೋದಿಸುತ್ತದೆ.

ಅಜೀರ್ಣ

ಅಜೀರ್ಣ

ತ್ರಿಫಲಾ, ಜೀರ್ಣಕಾರಿ ಸಮಸ್ಯೆಗಳಿಗೆ ಮ್ಯಾಜಿಕ್ ನಂತೆ ಪರಿಹಾರ ಒದಗಿಸುತ್ತದೆ. ಇದು ಗ್ಯಾಸ್ಟ್ರೊ ಕರುಳಿನಲ್ಲಿ ಕ್ರಮಾಕುಂಚಕ (peristaltic) ಚಲನೆಯನ್ನು ಸುಧಾರಿಸುವಲ್ಲಿ ಸೌಮ್ಯ ವೀರೇಚಕವಾಗಿ ಕೆಲಸ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಗೆ ತುಂಬಾ ಅಗತ್ಯವಾಗಿರುವ ಪಿತ್ತರಸವನ್ನು ಸ್ರವಿಸುವಂತೆ ಯಕೃತ್ತನ್ನು ಪ್ರಚೋದಿಸುತ್ತದೆ. pH ಮಟ್ಟವನ್ನು ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.

ಮಲಬದ್ಧತೆ

ಮಲಬದ್ಧತೆ

ತ್ರಿಫಲಾ, ಅತ್ಯುತ್ತಮ ಕೊಲೊನ್ ಕ್ಲೆನ್ಸರ್ ನಲ್ಲಿ ಒಂದಾಗಿದೆ ಮತ್ತು ಮಲಬದ್ಧತೆಯನ್ನು ನಿಯಂತ್ರಿಸುತ್ತದೆ. ಇದು ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ತ್ರಿಫಲಾ ಲಘು ವೀರೇಚಕವಾಗಿ ಜನಪ್ರಿಯತೆಯನ್ನು ಗಳಿಸಿದೆ.

ಜಂತು ಮತ್ತು ಸೋಂಕುಗಳು

ಜಂತು ಮತ್ತು ಸೋಂಕುಗಳು

ಸೋಂಕುಗಳು ಮತ್ತು ಜಂತು ಮುತ್ತಿಕೊಳ್ಳುವಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದಮನಮಾಡುವುದಕ್ಕೆ ಸಹಾಯಕಾರಿ. ಇದು ರಿಂಗ್ ವರ್ಮ್ ( ringworm) ಮತ್ತು tapeworm ಮುತ್ತಿಕೊಳ್ಳುವಿಕೆಯನ್ನು ಹೊರದೂಡುತ್ತದೆ. ಇದು ಸೂಕ್ಷ್ಮಾಣುಜೀವಿ ಮತ್ತು ಜಂತು ಹುಳುಗಳ ಅತ್ಯಂತ ವಿಷಕಾರಿ ಬೆಳವಣಿಗೆಗೆ ಕಡಿವಾಣ ಹಾಕಿ ನಮ್ಮ ದೇಹವನ್ನು ಸರಿಯಾದ ಸ್ಥಿತಿಗಳನ್ನು ಉಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ರಕ್ತಹೀನತೆ

ರಕ್ತಹೀನತೆ

ಇದು ರಕ್ತಹೀನತೆ ಎಂಬ ಪರಿಸ್ಥಿತಿಗೆ (ಹಿಮೋಗ್ಲೋಬಿನ್ನ ಪ್ರಮಾಣದ ಕುಸಿತದ ಒಂದು ಪರಿಸ್ಥಿತಿ) ಚಿಕಿತ್ಸೆನೀಡಿ ತುಂಬಾ ಪರಿಣಾಮಕಾರಿ ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.

ಮಧುಮೇಹ

ಮಧುಮೇಹ

ತ್ರಿಫಲಾ, ಮಧುಮೇಹ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ. ಇದು ಮೇದೋಜೀರಕ ಗ್ರಂಥಿ ಉತ್ತೇಜಿಸುತ್ತದೆ. ಇನ್ಸುಲಿನ್ ದೇಹದ ಸರಿಯಾದ ಗ್ಲುಕೋಸ್ ಮಟ್ಟದ ನಿರ್ವಹಣೆಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರ ಕಹಿ ರುಚಿಗೆ ಕಾರಣವಾದ ಹೈಪರ್ಗ್ಲೈಸೀಮಿಯಾ ನಿಯಂತ್ರಕ.

ಬೊಜ್ಜು

ಬೊಜ್ಜು

ತ್ರಿಫಲಾವನ್ನು ಬೊಜ್ಜು ರೋಗಿಗಳಿಗೆ ಸೂಚಿಸಲಾಗುತ್ತದೆ. ಅದರ ಗುಣಗಳಿಂದಾಗಿ ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಇದು ದೇಹದಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾದ ಅಡಿಪೋಸ್ ಜೀವಕೋಶಗಳನ್ನು ನಿಯಂತ್ರಿಸುತ್ತದೆ.

ತ್ವಚೆಯ ಸಮಸ್ಯೆಗಳು

ತ್ವಚೆಯ ಸಮಸ್ಯೆಗಳು

ತ್ರಿಫಲಾ, ರಕ್ತ ಶುದ್ಧೀಕರಿಸುವಲ್ಲಿ ಸಹಾಯಕವಾಗುತ್ತದೆ ಮತ್ತು ದೇಹದಿಂದ ಜೀವಾಣು ಹೊರದೂಡಲು ಸಹಾಯಕ. ಇದು ನಮ್ಮ ದೇಹವನ್ನು ಜೀವಾಣುಗಳಿಲ್ಲದಂತೆ ಸ್ವಚ್ಛಗೊಳಿಸುತ್ತದೆ ಮತ್ತು ಯಾವುದೇ ರೀತಿಯ ಸೋಂಕು ಭಾದಿಸದಂತೆ ನೋಡಿಕೊಳ್ಳುತ್ತದೆ.

ಒತ್ತಡ ನಿವಾರಕ

ಒತ್ತಡ ನಿವಾರಕ

ಸೈನಸ್ ಸಮಸ್ಯೆಯನ್ನು ಕಡಿಮೆಗೊಳಿಸುವಲ್ಲಿ ತ್ರಿಫಲಾ ಚಿಕಿತ್ಸೆ ಪರಿಣಾಮಗಾರಿ. ಅಷ್ಟೇ ಅಲ್ಲ ಇದು ಉಸಿರಾಟದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ತ್ವಚೆಯಲ್ಲಿ ಬ್ಯಾಕ್ಟೀರಿಯಾ ನಿವಾರಿಸುವಲ್ಲಿಯೂ ತ್ರಿಫಲಾ ಅತ್ಯಂತ ಸಹಾಯಕಾರಿ.

ತಲೆನೋವು

ತಲೆನೋವು

ತ್ರಿಫಲಾ ತಲೆನೋವನ್ನು ನಿವಾರಿಸುತ್ತದೆ. ಅದರಲ್ಲೂ ಜೀರ್ಣಕ್ರಿಯೆಯಿಂದ ಉಂಟಾಗುವ ತಲೆನೋವನ್ನು ನಿವಾರಿಸುತ್ತದೆ.

ಕ್ಯಾನ್ಸರ್

ಕ್ಯಾನ್ಸರ್

ಇತ್ತೀಚಿಗೆ ಭಾರತದ ಜೆಎನ್ ಯು, ನಡೆಸಿದ ಇತ್ತೀಚಿನ ಅಧ್ಯಯನಗಳ ಪ್ರಕಾರ, ತ್ರಿಫಲಾ ಕ್ಯಾನ್ಸರ್ ವಿರೋಧಿ ಚಿಕಿತ್ಸಕ ಎಂದು ಹೇಳಲಾಗಿದೆ. ಇದು ಕ್ಯಾನ್ಸರ್ ಜೀವಕೋಶಗಳನ್ನು ಸ್ಥಾನಾಂತರಣದ ಬೆಳವಣಿಗೆ ಅಪಾಯವನ್ನು ಕಡಿಮೆ ಮಾಡಿ, ಕೋಶ ವಿಭಜಕ ಹಂತದ ಸ್ಪಿಂಡಲ್ ರಚನೆಗಳನ್ನು ಕಡಿಮೆ ಮಾಡುತ್ತದೆ.

English summary

Triphala: The Cure of All Sorrows

Triphala is an ayurvedic traditional medicine that is popular as rasayana or the rejuvenator.Triphala is the combination of three herbs.
X
Desktop Bottom Promotion