For Quick Alerts
ALLOW NOTIFICATIONS  
For Daily Alerts

ಸ್ನಾಯುಗಳ ಬೆಳವಣಿಗೆಗೆ ಅಗತ್ಯ ವಿಟಮಿನ್ ಗಳು

By Poornima Hegde
|

ಯುವತಿಯರಿಗೆ ಸೌಂದರ್ಯ ಹೇಗೆ ಮುಖ್ಯವೋ ಹಾಗೆಯೇ ಹುಡುಗರಿಗೆ ಸದೃಢ ಮೈಕಟ್ಟು ಬಹಳ ಮುಖ್ಯ. ಯುವಕರು ಆಕರ್ಷಕವಾಗಿ ಕಾಣುವುದು ಅವರ ಮೈಕಟ್ಟಿನಿಂದಲೇ. ಅದರಲ್ಲೂ ಮುಖ್ಯವಾಗಿ ಸ್ನಾಯುಗಳು ಅಥವಾ ಮಾಂಸ ಖಂಡಗಳು. ಬಿಗಿಯಾದ ಟಿ ಶರ್ಟ್ ಹಾಕಿ ಕೈಯನ್ನು ಮಡಚಿದಾಗ ತೋಳು ದಪ್ಪನಾಗಿ ಮಾಂಸಖಂಡಗಳು ದಪ್ಪನಾಗಿ ಕಂಡರೆ ಅದೇ ಯುವಕರ ಪಾಲಿನ ಸ್ವರ್ಗ. ಹೀಗೆ ಆಕರ್ಷಕ ಸ್ನಾಯುಗಳು ಬೇಕಾದರೆ ಆಹಾರವೂ ಆರೋಗ್ಯಕರವಾಗಿರಬೇಕು.

ಸ್ನಾಯುಗಳು ನಿಮಗೆ ಅನೇಕ ಕೆಲಸಗಳಲ್ಲಿ ನೆರವಾಗುತ್ತವೆ. ಬಿದ್ದ ಪೆನ್ನನ್ನು ಹೆಕ್ಕುವುದರಿಂದ ಹಿಡಿದು, ಕಂಪ್ಯೂಟರ್ ಟೈಪಿಂಗ್ ಮಾಡುವ ತನಕ ಮತ್ತು ಓಡುವುದರಿಂದ ಹಿಡಿದು ಸಂಜೆಯ ವಾಕಿಂಗ್ ತನಕ ಎಲ್ಲದಕ್ಕೂ ಸ್ನಾಯುಗಳು ಬೇಕು. ನೀವು ಸಾಕಷ್ಟು ದೈಹಿಕ ಕೆಲಸ ಮಾಡದೇ ಇದ್ದರೆ ನಿಮ್ಮ ಹೃದಯದ ಸ್ನಾಯುಗಳು ಸರಿಯಾಗಿ ಕೆಲಸ ಪಡೆಯದೇ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ.

ನೀವು ಸರಿಯಾಗಿ ವ್ಯಾಯಾಮ ಮಾಡುತ್ತಿದ್ದರೆ ನಿಮ್ಮ ದೇಹದ ತೂಕ ಮತ್ತು ಸ್ನಾಯುಗಳೆರಡೂ ಆರೋಗ್ಯಕರವಾಗಿರುತ್ತದೆ. ನೀವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೀರೋ ಸ್ನಾಯುಗಳು ಅಷ್ಟೇ ಚೆನ್ನಾಗಿ ಕಾಣುತ್ತವೆ. ಇವುಗಳ ಬೆಳವಣಿಗೆಗೆ ನೀವು ಸರಿಯಾಗಿ ಆಹಾರ ಸೇವಿಸುವ ಜೊತೆಗೆ ಅದರಲ್ಲಿ ಸ್ನಾಯುಗಳ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳು ಇರುವಂತೆ ಜಾಗೃತೆ ವಹಿಸಬೇಕಾಗುತ್ತದೆ. ಯಾವುದೇ ತರಹದ ನಿರ್ಲಕ್ಷ ಬಹಳ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳಿವೆ.

ಆಹಾರದಲ್ಲಿ ವಿಟಮಿನ್ ಮತ್ತು ಪ್ರೋಟೀನ್ ಗಳು ಸಮರ್ಪಕ ಪ್ರಮಾಣದಲ್ಲಿ ಬೇಕಾಗುತ್ತದೆ. ವಿಟಮಿನ್ ಗಳಲ್ಲಿ ಬಿ1, ಬಿ2, ಸಿ3 ಮುಂತಾದ ವಿಟಮಿನ್ ಗಳು ಬಹಳ ಅಗತ್ಯ. ನಿಮ್ಮ ದೇಹ ಪ್ರೊಟೀನ್ ಗಳನ್ನು ನಿಮ್ಮ ಸ್ನಾಯುಗಳ ಬೆಳವಣಿಗೆಗೆ ಮತ್ತು ವಿಟಮಿನ್ ಗಳನ್ನು ಸ್ನಾಯುಗಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತವೆ. ಹೆಚ್ಚಿನ ವಿಟಮಿನ್ ಗಳು ಹಣ್ಣುಗಳು, ತರಕಾರಿಗಳು ಮತ್ತು ಮಾಂಸದಲ್ಲಿ ದೊರಕುತ್ತದೆ. ಹೀಗಾಗಿ ಎಲ್ಲಾ ತರಹದ ತರಕಾರಿಗಳನ್ನು ಸೇವಿಸಿ ನಿಮ್ಮ ದೇಹದ ವಿಟಮಿನ್ ಮತ್ತು ಪ್ರೋಟೀನ್ ಗಳ ಸಂತುಲನ ಮಾಡಬೇಕಾಗುತ್ತದೆ.

ನಿಮ್ಮ ಸ್ನಾಯುಗಳ ಬೆಳವಣಿಗೆ ಅಗತ್ಯವಾದ ಕೆಲವು ವಿಟಮಿನ್ ಗಳು

ವಿಟಮಿನ್ ಬಿ 1

ವಿಟಮಿನ್ ಬಿ 1

ಸ್ನಾಯುಗಳ ಬೆಳವಣಿಗೆಯಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನೀವು ಪ್ರತಿದಿನ ಸೇವಿಸುವ ಕಾರ್ಬೋಹೈಡ್ರೇಟ್ ಗಳನ್ನು ನಿಮ್ಮ ದೇಹದ ಬೆಳವಣಿಗೆಗೆ ಬಳಸಿಕೊಳ್ಳುವಂತೆ ಮಾಡುವಲ್ಲಿ ಇದು ಅಗತ್ಯವಾಗಿದೆ. ಸೂರ್ಯಕಾಂತಿಯ ಬೀಜಗಳು ಬಹಳ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 1 ಅನ್ನು ಹೊಂದಿರುತ್ತವೆ.

ವಿಟಮಿನ್ ಬಿ 2

ವಿಟಮಿನ್ ಬಿ 2

ರಿಬೋಫ್ಲಾವಿನ್ ಎಂದೂ ಕರೆಯಲಾಗುವ ವಿಟಮಿನ್ ಬಿ2 ಇನ್ನೊಂದು ಪ್ರಮುಖ ವಿಟಮಿನ್ ಆಗಿದೆ. ಇದು ನಮ್ಮ ಆಹಾರದಲ್ಲಿ ಇರುವ ಮಾಕ್ರೋನ್ಯೂಟ್ರೀಯೆಂಟ್ಸ್ ಪ್ರೊಟೀನ್, ಕಾರ್ಬ್ಸ್ ಮತ್ತು ಕೊಬ್ಬನ್ನು ದೇಹದ ಕೆಲಸಗಳಿಗಾಗಿ ಬಳಸಲು ನೆರವಾಗುತ್ತದೆ. ಹಾಲಿನಲ್ಲಿ ರಿಬೋಫ್ಲಾವಿನ್ ಹೆಚ್ಚಿನ ಪ್ರಮಾಣದಲ್ಲಿ ಇದೆ.

ವಿಟಮಿನ್ ಬಿ3

ವಿಟಮಿನ್ ಬಿ3

ನಿಯಾಸಿನ್ ವಿಟಮಿನ್ ಬಿ3 ಯ ಪ್ರಮುಖ ಅಂಶ. ಇದು ನಮ್ಮ ನರ ವ್ಯವಸ್ಥೆ ಸಮರ್ಪಕ ಕೆಲಸಕ್ಕೆ ಬಹಳ ಅಗತ್ಯ. ಇದರ ಜೊತೆಗೆ ಇದು ಜೀರ್ಣವ್ಯವಸ್ಥೆಯಲ್ಲೂ ಬಹಳ ಸಹಕಾರಿ. ನಿಯಾಸಿನ್ ನಮ್ಮ ದೇಹಕ್ಕೆ ಚಿಕನ್ ನ ಮೂಲಕ ಹೇರಳವಾಗಿ ದೊರೆಯುತ್ತದೆ.

ವಿಟಮಿನ್ ಸಿ

ವಿಟಮಿನ್ ಸಿ

ಮೃದು ಎಲುಬುಗಳು ಮತ್ತು ಸ್ನಾಯುಗಳ ಮತ್ತು ಸಂಯೋಜಕ ಅಂಗಾಶಗಳ ಸಮರ್ಪಕ ನಿರ್ವಹಣೆಗೆ ವಿಟಮಿನ್ ಸಿ ಅಗತ್ಯವಾಗಿದೆ. ಇದರಲ್ಲಿ ಆಕ್ಸಿಡೀಕರಣ ಮಾಡುವ ಅಂಶಗಳು ಬಹಳ ಹೆಚ್ಚಾದ ಪ್ರಮಾಣದಲ್ಲಿದೆ. ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಸ್ಟ್ರಾಬೆರಿ, ಬ್ರಸಲ್ಸ್ ಮೊಗ್ಗುಗಳು, ಕೋಸುಗಡ್ಡೆ, ಕೆಂಪು ಮೆಣಸುಗಳು ಮತ್ತು ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಲಭ್ಯವಾಗಿರುತ್ತದೆ.

ಬಯೋಟಿನ್

ಬಯೋಟಿನ್

ನಿಮ್ಮ ದೇಹ ಆಹಾರದ ಮೂಲಕ ಪಡೆಸುಕೊಳ್ಳುವ ಎಲ್ಲಾ ಪೋಷಕಾಂಶಗಳ ಬಳಕೆಯನ್ನು ಈ ವಿಟಮಿನ್ ಮಾಡುತ್ತದೆ. ದೇಹದಲ್ಲಿ ಆಮ್ಲಜನಕದ ಪೂರೈಕೆ ಕೆಂಪು ರಕ್ತಕಣಗಳಿಂದಾಗಿ ಆಗುವ ಕಾರಣ ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗುವವರಿಗೆ ಇದು ಅಗತ್ಯವಾಗಿದೆ.

ಫೋಲಿಕ್ ಆಸಿಡ್

ಫೋಲಿಕ್ ಆಸಿಡ್

ಹೊಸ ಜೀವಕೋಶಗಳ ಉಗಮಕ್ಕೆ ಕಾರಣವಾಗುವ ಮೂಲಕ ಅನೀಮಿಯಾವನ್ನು ಬಾರದ ಹಾಗೆ ನೋಡಿಕೊಳ್ಳುವ ಕೆಲಸವನ್ನು ಫಾಲಿಕ್ ಆಸಿಡ್ ಮಾಡುತ್ತದೆ. ಒಂದು ಕಪ್ ಮಸೂರ ಫಾಲಿಕ್ ಆಸಿಡ್ ಅನ್ನು ಸಾಕಷ್ಟು ಪ್ರಮಾಣಾದಲ್ಲಿ ನಮ್ಮ ದೇಹಕ್ಕೆ ಒದಗಿಸುತ್ತದೆ.

ವಿಟಮಿನ್ ಎ

ವಿಟಮಿನ್ ಎ

ವಿಟಮಿನ್ ಎ ಯನ್ನು ರೆಟಿನೋಲ್ ಎಂದೂ ಕರೆಯುತ್ತಾರೆ. ಇದು ನಮ್ಮ ದೃಷ್ಟಿಗೆ ಮತ್ತು ರೋಗ ನಿರೋಧಕ ಶಕ್ತಿಗೆ ಬಹಳ ಅಗತ್ಯ. ಕ್ಯಾರೆಟ್, ಪಾಲಕ್, ಸಿಹಿಗೆಣಸು, ಚಳಿಗಾಲದ ಸ್ಕ್ವಾಷ್ ಮತ್ತು ಟರ್ನಿಪ್ ಯಲ್ಲಿ ವಿಟಮಿನ್ ಎ ಹೇರಳವಾಗಿರುತ್ತದೆ.

ವಿಟಮಿನ್ ಡಿ

ವಿಟಮಿನ್ ಡಿ

ವಿಟಮಿನ್ ಡಿ ಯನ್ನು ಸನ್ ಶೈನ್ ವಿಟಮಿನ್ ಎನ್ನುತ್ತಾರೆ. ಇದಕ್ಕೆ ಕಾರಣವಿಷ್ಟೇ ನಮ್ಮ ದೇಹದ ಮೇಲೆ ನೇರವಾಗಿ ಸೂರ್ಯನ ಬೆಳಕು ಬಿದ್ದಾಗ ನಮ್ಮ ದೇಹ ಇದನ್ನು ಉತ್ಪಾದಿಸುತ್ತದೆ. ಇದು ಫೋರ್ಟಿಫೈ ಮಾಡಿದ ಹಾಲು, ಸಾಲ್ಮನ್, ಸಿಗಡಿ ಮತ್ತು ಇಡಿಯಾದ ಮೊಟ್ಟೆಯಲ್ಲಿ ಸಿಗುತ್ತದೆ.

English summary

Top Vitamins For Muscle Building

For men, muscles matter a lot. In general muscles are one of the most vital and important parts of your body.
Story first published: Thursday, December 12, 2013, 10:31 [IST]
X
Desktop Bottom Promotion