For Quick Alerts
ALLOW NOTIFICATIONS  
For Daily Alerts

ಧೂಮಪಾನ,ಮದ್ಯಪಾನ ಮಾತ್ರವಲ್ಲ, ಇವೂ ಕೆಟ್ಟ ಚಟಗಳೇ

|

ನೀವು ತುಂಬಾ ಹೊತ್ತು ಕುಳಿತು ಸಾಕಾದಾಗ ಮೈ ಮುರಿಯುತ್ತೀರಾ? ಇದು ಒಳ್ಳೆ ಆಗಾಗ ಮೂಗು ಮುಟ್ಟುವುದು, ಆಗಾಗ ಕೈ ತೊಳೆಯದಿರುವುದು, ಆಹಾರಕ್ರಮದ ಬಗ್ಗೆ ಸರಿಯಾಗಿ ಗಮನ ಹರಿಸದಿರುವುದು ಈ ರೀತಿಯೆಲ್ಲಾ ಮಾಡುತ್ತೀರಾ ? ಇವುಗಳು ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀಳುತ್ತದೆ ಎಂದು ತಿಳಿಯಲು ಮುಂದೆ ಓದಿ.

ಯಾರು, ಯಾವಾಗ ಕಾಯಿಲೆ ಬೀಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕೆಲವೊಂದು ಕಾಯಿಲೆಗಳು ಬರಲು ನಾವೇ ಕಾರಣ. ನಮ್ಮಲ್ಲಿರುವ ಚಿಕ್ಕ ಪುಟ್ಟ ಕೆಟ್ಟ ಅಭ್ಯಾಸಗಳು ಕಾರಣ. ಕೆಟ್ಟ ಅಭ್ಯಾಸ ಅಂದರೆ ಧೂಮಪಾನ, ಮದ್ಯಪಾನ, ತಂಬಾಕು ತಿನ್ನುವುದು ಮಾತ್ರವಲ್ಲ ಮೂಗು ಮುಟ್ಟುವುದು, ಕೈ ತೊಳೆಯದಿರುವುದು , ದೇಹಕ್ಕೆ ಸಾಕಷ್ಟು ದೈಹಿಕ ವ್ಯಾಯಾಮ ನೀಡದಿರುವುದು ಈ ರೀತಿಯ ಅನೇಕ ಕೆಟ್ಟ ಚಟಗಳು ನಮ್ಮಲ್ಲಿರುತ್ತವೆ.

ಕಾಯಿಲೆಯನ್ನು ತರುವ ಆ ಕೆಟ್ಟ ಚಟಗಳ ಬಗ್ಗೆ ಈ ಕೆಳಗೆ ಹೇಳಲಾಗಿದೆ ನೋಡಿ:

 ಕೈಗಳನ್ನು ತೊಳೆಯಿರಿ

ಕೈಗಳನ್ನು ತೊಳೆಯಿರಿ

ಮನೆ ಶುಚಿ ಮಾಡಿದ ಮೇಲೆ ಕೈ ತೊಳೆಯಬೇಕು. ಕೆಲವರಿಗೆ ಮೂತ್ರ ವಿಸರ್ಜನೆಗೆ ಹೋದ ಮೇಲೆ ಕೈ ತೊಳೆಯದೆ ಬರುವ ಅಭ್ಯಾಸವಿರುತ್ತದೆ. ಆ ರೀತಿಯ ಅಭ್ಯಾಸ ಒಳ್ಳೆಯದಲ್ಲ. ಇನ್ನು ಕೆಲವರು ಕೈ ಶುಚಿಯಾಗಿದೆಯೆಂದು ಕೈ ತೊಳೆಯದು ಆಹಾರವನ್ನು ತಿನ್ನುತ್ತಾರೆ. ಏನಾದರೂ ತಿನ್ನುವ ಮೊದಲು ಕೈ ತೊಳೆಯವುದು ಒಳ್ಳೆಯದು. ಕಣ್ಣಿಗೆ ಕಾಣದ ಸೂಕ್ಷ್ಮಾಣುಗಳಿದ್ದು ಅವು ಹೊಟ್ಟೆ ಸೇರಿದರೆ ಕಾಯಿಲೆ ತರುತ್ತವೆ. ಅಡುಗೆ ಮಾಡುವಾಗ ಕೈ ತೊಳೆದು ನಂತರ ಪಾತ್ರೆಗಳನ್ನು ಮುಟ್ಟಿ.

ಮೂಗಿಗೆ ಕೈ ಹಾಕುವುದು

ಮೂಗಿಗೆ ಕೈ ಹಾಕುವುದು

ಚಿಕ್ಕ ಮಕ್ಕಳಲ್ಲಿ ಮಾತ್ರವಲ್ಲ, ದೊಡ್ಡವರಲ್ಲೂ ಈ ರೀತಿಯ ಅಭ್ಯಾಸ ಕಂಡು ಬರುತ್ತದೆ. ಮೂಗಿಗೆ ಕೈ ಹಾಕಿದರೆ ನೋಡುಗರಿಗೆ ಅಸಹ್ಯ ಅನಿಸುತ್ತದೆ, ಆರೋಗ್ಯಕ್ಕೂ ಒಳ್ಳೆಯದಲ್ಲ.

ಮೈಗೆ ಯಾವುದೇ ಕೆಲಸ ಕೊಡದಿರುವುದು

ಮೈಗೆ ಯಾವುದೇ ಕೆಲಸ ಕೊಡದಿರುವುದು

ಮೈಯನ್ನು ಬಗ್ಗಿಸುವುದು, ಹಿಂದೆಕ್ಕೆ , ಮುಂದೆಕ್ಕೆ ಭಾಗುವುದು ಆರೋಗ್ಯಕ್ಕೆ ಒಳ್ಳೆಯದು. ದಿನಾವಿಡೀ ಆಫೀಸ್ ನಲ್ಲಿ ಕುಳಿತಲ್ಲಿಯೇ ಕುಳಿತುಕೊಳ್ಳುತ್ತೇವೆ. ಆದ್ದರಿಂದ ಬೆಳಗ್ಗೆ ಎದ್ದ ನಂತರ ಮೈಯನ್ನು ಹಿಂದೆಕ್ಕೆ, ಮುಂದೆಕ್ಕೆ ಬಾಗಿಸುವುದು ಮಾಡಿ, ಇದರಿಂದ ಆಲಸ್ಯ ದೂರವಾಗುತ್ತದೆ. ಮೈ ಅಲುಗಾಡಿಸದೆ ಕೂರುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ.

ಉಸಿರಾಟ

ಉಸಿರಾಟ

ಬೆಳಗ್ಗೆ ಸ್ವಲ್ಪ ಹೊತ್ತು ಉಸಿರಾಟದ ವ್ಯಾಯಾಮ ಮಾಡಿದರೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬ್ರೇಕ್ ಫಾಸ್ಟ್

ಬ್ರೇಕ್ ಫಾಸ್ಟ್

ಡಯಟ್ ಹೆಸರಿನಲ್ಲಿ ಬೆಳಗ್ಗೆ ಏನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿರುವ ಅಭ್ಯಾಸ ಒಳ್ಳೆಯದಲ್ಲ. ಈ ರೀತಿ ಸಣ್ಣಗಾಗಲು ಪ್ರಯತ್ನಿಸಿದರೆ ಆರೋಗ್ಯ ಕೈ ಕೊಡುತ್ತದೆ.

ಉಗುರನ್ನು ಕತ್ತರಿಸಿ

ಉಗುರನ್ನು ಕತ್ತರಿಸಿ

ಕೈ ಉಗುರು ಮತ್ತು ಕಾಲು ಉಗುರುಗಳನ್ನು ಸ್ವಚ್ಛವಾಗಿಡಿ. ಉಗುರುಗಳನ್ನು ಹೆಚ್ಚು ಉದ್ದ ಬೆಳೆಸಬೇಡಿ. ಬೆಳೆಸಿದರೂ ಅವುಗಳಲ್ಲಿ ಯಾವುದೇ ಕೊಳೆ ನಿಲ್ಲದಂತೆ ನೋಡಿಕೊಳ್ಳಿ. ಕೈಯ ಉಗುರುಗಳಲ್ಲಿ ಕೊಳೆ ನಿಂತರೆ ಅದು ಹೊಟ್ಟೆಯನ್ನು ಸೇರಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು.

ಪರ್ಸನಲ್ ವಸ್ತುಗಳನ್ನು ಹಂಚಿ ಕೊಳ್ಳಬೇಡಿ

ಪರ್ಸನಲ್ ವಸ್ತುಗಳನ್ನು ಹಂಚಿ ಕೊಳ್ಳಬೇಡಿ

ಮೈ ಸ್ಕ್ರಬ್ಬರ್, ರೇಝರ್, ಟೂತ್ ಬ್ರೆಷ್, ಒಳ ಉಡುಪುಗಳು ಇವುಗಳನ್ನು ಬೇರೆಯವರಿಗೆ ಬಳಸಲು ಕೊಡಬೇಡಿ.

ನಿದ್ದೆ

ನಿದ್ದೆ

ಟಿವಿ, ಚಾಟ್ ಅಂತ ಮಾಡುತ್ತಾ ತುಂಬಾ ಹೊತ್ತು ನಿದ್ದೆ ಮಾಡದೆ ಇರುವ ಬದಲು ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ತುಂಬಾ ನಿದ್ದೆ ಕೂಡ ಮಾಡಬೇಡಿ.

English summary

Top 20 healthy habits to avoid disease, Tips For Health, ಕಾಯಿಲೆ ಬರಲು ನಮ್ಮ ಅಭ್ಯಾಸಗಳು ಕೂಡ ಪ್ರಮುಖ ಕಾರಣ, ಆರೋಗ್ಯಕ್ಕಾಗಿ ಕೆಲ ಸಲಹೆಗಳು

If you want to live a healthy lifestyle and enjoy your old age without being injected with several different kinds of shots, then change your daily lifestyle because even the simplest little healthy modification can cause great benefits.
X
Desktop Bottom Promotion