For Quick Alerts
ALLOW NOTIFICATIONS  
For Daily Alerts

ಪಿಸ್ತಾದಲ್ಲಿದೆ 21 ಬಗೆಯ ಆರೋಗ್ಯವರ್ಧಕ ಗುಣಗಳು

By Super
|

ಪಿಸ್ತಾವು ಪಶ್ಚಿಮ ಏಷ್ಯಾ ಮೂಲದ ಒಂದು ಹಣ್ಣಾಗಿದೆ. ಆದರೂ ಇದು ಮೆಡಿಟೇರಿಯನ್ ಪ್ರಾಂತ್ಯದಲ್ಲಿ ಸಹ ಕಂಡು ಬರುತ್ತದೆ. ಪೋಷಕಾಂಶ ಭರಿತವಾದ ಈ ಬೀಜವು ಮೂಲತಃ ಒಂದು ಹಣ್ಣು. ಆದರೆ ಅದರ ಹೊರ ತಿರುಳಿನ್ನು ಸುಲಿದು ನಾವು ಕೇವಲ ಬೀಜವನ್ನು ಮಾತ್ರ ತಿನ್ನುವುದರಿಂದ ಇದನ್ನು ಬೀಜ ಎಂದು ಪರಿಗಣಿಸಿದ್ದೇವೆ.

ಹಳದಿ ಬಣ್ಣದಲ್ಲಿ ಮಿಂಚುವ ಇದರ ಬೀಜ ಎಷ್ಟು ಆರೋಗ್ಯಕಾರಿ ಎಂಬುದನ್ನು ನೀವು ಈಗಾಗಲೇ ತಿಳಿದಿದ್ದೀರಿ. ಬನ್ನಿ ಇದರ ಜೊತೆಗೆ ತ್ವಚೆಗೆ, ಕೂದಲಿಗೆ ಮತ್ತು ಹೆಚ್ಚುವರಿ ಆರೋಗ್ಯಕ್ಕೆ ಇದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳೋಣ.

1. ಆರೋಗ್ಯವಂತ ಹೃದಯಕ್ಕೆ

1. ಆರೋಗ್ಯವಂತ ಹೃದಯಕ್ಕೆ

ಪಿಸ್ತಾವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕೊಲೆಸ್ಟ್ರಾಲ್, ಎಲ್ ಡಿ ಎಲ್‍ಗಳನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕಾರಿ ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿರುವ ಎಚ್ ಡಿ ಎಲ್‍ಗಳು ನಮ್ಮಹೃದಯಕ್ಕ್ ಬರುವ ಕಾಯಿಲೆಗಳನ್ನು ತಡೆಗಟ್ಟುತ್ತವೆ. ಇದರ ಜೊತೆಗೆ ಇವು ಹೃದಯವನ್ನು ಸಂಪರ್ಕಿಸುವ ರಕ್ತ ನಾಳಗಳನ್ನು ಸದೃಢಗೊಳಿಸುತ್ತವೆ.

2. ಉರಿಬಾವು ಮತ್ತು ಊತಗಳನ್ನು ತಡೆಯುವ ಅಂಶಗಳು

2. ಉರಿಬಾವು ಮತ್ತು ಊತಗಳನ್ನು ತಡೆಯುವ ಅಂಶಗಳು

ಪಿಸ್ತಾದಲ್ಲಿ ವಿಟಮಿನ್ ಎ, ಇ ಮತ್ತು ಉರಿಬಾವುಗಳನ್ನು ತಡೆಯುವ ಅಂಶಗಳು ಯಥೇಚ್ಛವಾಗಿ ಇವೆ. ಇವುಗಳು ನಮ್ಮ ದೇಹದಲ್ಲಿ ಯಾವುದಾದರು ತೊಂದರೆಯಿಂದ ಊತ ಮತ್ತು ಬಾವುಗಳು ಉಂಟಾಗುವುದನ್ನು ತಪ್ಪಿಸುತ್ತವೆ.

3. ಮಧುಮೇಹವನ್ನು ತಡೆಯುತ್ತದೆ

3. ಮಧುಮೇಹವನ್ನು ತಡೆಯುತ್ತದೆ

ನಮ್ಮ ದೇಹಕ್ಕೆ ಪ್ರತಿದಿನದ ಮಟ್ಟಿಗೆ ಅಗತ್ಯವಾದಷ್ಟು ರಂಜಕದಲ್ಲಿ ಶೇ 60ರಷ್ಟು ಭಾಗವನ್ನು ಪಿಸ್ತಾವೇ ಒದಗಿಸುತ್ತದೆ. ಇದು ಟೈಪ್ -2 ಮಧುಮೇಹ ಬರದಂತೆ ತಡೆಯುತ್ತದೆ. ಪಿಸ್ತಾದಲ್ಲಿರುವ ರಂಜಕವು ಪ್ರೋಟಿನ್‍ಗಳಲ್ಲಿರುವ ಅಮೈನೋ ಆಸಿಡ್‍ಗಳನ್ನು ಕತ್ತರಿಸಿ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.

4. ಹಿಮೋಗ್ಲೋಬಿನ್ ಮತ್ತು ರಕ್ತ

4. ಹಿಮೋಗ್ಲೋಬಿನ್ ಮತ್ತು ರಕ್ತ

ರಕ್ತದಲ್ಲಿರುವ ಆಮ್ಲಜನಕವನ್ನು ಸಾಗಿಸಲು ವಿಟಮಿನ್ B6 ಸಹಾಯ ಮಾಡುತ್ತದೆ. ಪಿಸ್ತಾದಲ್ಲಿ ಈ ವಿಟಮಿನ್ B6 ಅಧಿಕ ಪ್ರಮಾಣದಲ್ಲಿರುತ್ತದೆ. ಪಿಸ್ತಾವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತದೆ.

5. ನರವ್ಯೂಹ ವ್ಯವಸ್ಥೆ

5. ನರವ್ಯೂಹ ವ್ಯವಸ್ಥೆ

ಪಿಸ್ತಾದಲ್ಲಿರುವ ವಿಟಮಿನ್ B6 ನರವ್ಯೂಹ ವ್ಯವಸ್ಥೆಗು ಭಾರೀ ಪ್ರಯೋಜನವನ್ನುಂಟು ಮಾಡುತ್ತದೆ. ಅಮೈನೊಗಳು ನರವ್ಯೂಹದಲ್ಲಿ ಸಂವಹನದ ಕೆಲಸವನ್ನು ಮಾಡುತ್ತವೆ. ಈ ಅಮೈನೋ ಆಮ್ಲವನ್ನು ಅಧಿಕಗೊಳಿಸಲು ನಮ್ಮದೇಹಕ್ಕೆ ಅಧಿಕ ಪ್ರಮಾಣದಲ್ಲಿ ವಿಟಮಿನ್ B6 ಬೇಕಾಗುತ್ತೆ. ಈ ವಿಟಮಿನ್‍ಗಳು ನರಗಳ ಎಳೆಗಳ ಸುತ್ತ ಮೈಯೆಲಿನ್ ಎಂಬ ಪದರವನ್ನು ನಿರ್ಮಾಣ ಮಾಡುತ್ತವೆ. ಸಂದೇಶಗಳು ಈ ಎಳೆಗಳ ಮೂಲಕ ನರದಿಂದ ನರಕ್ಕೆ ವರ್ಗಾವಣೆಗೊಳ್ಳುತ್ತವೆ. ವಿಟಮಿನ್ B6 ಅಮೈನೊ ಆಮ್ಲವನ್ನು ಹೆಚ್ಚು ಮಾಡಿ ನರಗಳಲ್ಲಿ ಸಂವಹನ ಸರಾಗವಾಗಿ ಸಾಗುವಂತೆ ಮಾಡಲು ನೆರವಾಗುತ್ತದೆ.

6. ಮ್ಯಾಕುಲರ್ ಡಿಜೆನರೇಷನ್

6. ಮ್ಯಾಕುಲರ್ ಡಿಜೆನರೇಷನ್

ಮ್ಯಾಕುಲರ್ ಡಿಜೆನರೇಷನ್ ಎಂಬುದು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಯಾಗಿರುತ್ತದೆ. ಇದು ವಯಸ್ಕರಲ್ಲಿ ದೃಷ್ಟಿಯನ್ನು ಕುಂದಿಸುತ್ತದೆ. ಇದರಿಂದ ಅವರು ಕೆಲಸ ಮಾಡಲು ಮತ್ತು ಓದಲು ತೊಂದರೆಯಾಗುತ್ತದೆ. ಇದರ ಜೊತೆಗೆ ಜನರನ್ನು ಗುರುತಿಸಲು ಸಹ ಇವರಿಗೆ ತೊಂದರೆಯಾಗುತ್ತದೆ. ಫ್ರೀ ರಾಡಿಕಲ್‍ಗಳು ಜೀವಕೋಶಗಳ ಮೇಲೆ ದಾಳಿ ಮಾಡಿ ಮ್ಯಾಕುಲರ್ ಡಿಜೆನರೇಷನ್ ಉಂಟಾಗುವಂತೆ ಮಾಡುತ್ತವೆ. ಪಿಸ್ತಾದಲ್ಲಿ ಲುಟೇನ್ ಮತ್ತು ಝಿಯಾಕ್ಸಂತಿನ್ ಎಂಬ ಎರಡು ವಿಧದ ಆಂಟಿ ಆಕ್ಸಿಡೆಂಟ್‍ಗಳು ದೊರೆಯುತ್ತವೆ. ಇವುಗಳು ಫ್ರೀ ರಾಡಿಕಲ್‍ಗಳ ಮೇಲೆ ದಾಳಿ ಮಾಡಿ,ಅವುಗಳನ್ನು ನಾಶಗೊಳಿಸುವುದರ ಜೊತೆಗೆ ಮ್ಯಾಕುಲರ್ ಡಿಜೆನರೇಷನ್ ಬರದಂತೆ ಕಾಪಾಡುತ್ತದೆ.

7. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

7. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ವಿಟಮಿನ್ B6ಗಳು ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಭಾರೀ ಪ್ರಯೋಜನಕಾರಿಯಾಗಿರುತ್ತವೆ. ಇವುಗಳು ರಕ್ತವನ್ನು ಹೆಚ್ಚಿಸುತ್ತವೆ ಮತ್ತು ದೇಹದಲ್ಲಿ ಸರಾಗವಾಗಿ ರಕ್ತ ಪರಿಚಲನೆಯಾಗುವಂತೆ ಮಾಡುತ್ತವೆ.

8. ಆರೋಗ್ಯಕರ ಮಿದುಳಿಗಾಗಿ

8. ಆರೋಗ್ಯಕರ ಮಿದುಳಿಗಾಗಿ

ಪಿಸ್ತಾದಲ್ಲಿ ಯಥೇಚ್ಛವಾಗಿ ದೊರೆಯುವ ವಿಟಮಿನ್ B6 ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಅಧಿಕಗೊಳಿಸುತ್ತದೆ. ಆಮ್ಲಜನಕವನ್ನು ಸಮೃದ್ಧವಾಗಿ ಹೊಂದಿದ ಈ ರಕ್ತವು ನಮ್ಮ ಮೆದುಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

9. ಆರೋಗ್ಯಕಾರಿ ರಸಗ್ರಂಥಿಗಳಿಗಾಗಿ( ಗ್ಲ್ಯಾಂಡ್ಸ್)

9. ಆರೋಗ್ಯಕಾರಿ ರಸಗ್ರಂಥಿಗಳಿಗಾಗಿ( ಗ್ಲ್ಯಾಂಡ್ಸ್)

ಸ್ಪೀನ್, ಥೈಮಸ್ ಮುಂತಾದ ರಸ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಅಧಿಕ ಪ್ರಮಾಣದಲ್ಲಿ ಬಿಳಿ ರಕ್ತ ಕಣಗಳಿರುವ ರಕ್ತದ ಅವಶ್ಯಕತೆ ಇರುತ್ತದೆ. ಈ ಬಿಳಿ ರಕ್ತಕಣಗಳು ರೋಗಕಾರಕ ಬ್ಯಾಕ್ಟೀರಿಯಾಗಳ ಮೇಲೆ ಹೋರಾಡುತ್ತವೆ. ಪಿಸ್ತಾ ತಿನ್ನುವುದರಿಂದ ಬಿಳಿ ರಕ್ತ ಕಣಗಳು ಅಧಿಕಗೊಳ್ಳುತ್ತವೆ.

10. ಆರೋಗ್ಯಕಾರಿ ತ್ವಚೆಗಾಗಿ

10. ಆರೋಗ್ಯಕಾರಿ ತ್ವಚೆಗಾಗಿ

ಪಿಸ್ತಾ ಸೇವಿಸುವುದರಿಂದ ನಮ್ಮ ದೇಹಕ್ಕೆ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ. ಇವುಗಳಿಂದ ನಮಗೆ ಆರೋಗ್ಯಕಾರಿ ತ್ವಚೆಯು ದೊರೆಯುತ್ತದೆ. ಈ ವಿಟಮಿನ್ ಚರ್ಮದ ಪೊರೆಯಲ್ಲಿರುವ ಜೀವಕೋಶಗಳ ಪೊರೆ ಮತ್ತು ಮ್ಯೂಕಸ್ ಮೆಂಬ್ರೇನ್‍ಗಳ ಮಧ್ಯೆ ಐಕ್ಯತೆಯನ್ನು ತರುತ್ತದೆ. ಇದು ತ್ವಚೆಯನ್ನು ಅತಿ ನೇರಳೆ ಕಿರಣಗಳಿಂದ ಕಾಪಾಡಿ ಚರ್ಮ ರೋಗಗಳು ಬರದಂತೆ ತಡೆಯುತ್ತದೆ. ಹೀಗೆ ನಮಗೆ ಆರೋಗ್ಯಕಾರಿ ತ್ವಚೆ ಲಭ್ಯವಾಗುತ್ತದೆ.

11. ವಯಸ್ಸನ್ನು ಮರೆ ಮಾಚಲು

11. ವಯಸ್ಸನ್ನು ಮರೆ ಮಾಚಲು

ಪಿಸ್ತಾದಲ್ಲಿರುವ ವಿಟಮಿನ್ ಇಯು ತ್ವಚೆಗೆ ವಯಸ್ಸಾಗಿದ್ದನ್ನು ಕಾಣದಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ನಿಮ್ಮ ತ್ವಚೆಯು ಸದಾ ಕಳೆಯಿಂದ ಕೂಡಿ, ಯೌವನಭರಿತವಾಗಿರುತ್ತದೆ. ಪಿಸ್ತಾದಲ್ಲಿರುವ ಎಣ್ಣೆಯು ಮೃದುಕಾರಕ ಗುಣಗಳನ್ನು ಹೊಂದಿದ್ದು, ಇದು ತ್ವಚೆಯನ್ನು ಒಣಗಲು ಬಿಡದಂತೆ ಕಾಪಾಡಿ ಮತ್ತಷ್ಟು ಮೊಯಿಶ್ಚರೈಸ್ ಮಾಡುತ್ತದೆ. ಜೊತೆಗೆ ಈ ಎಣ್ಣೆ ಅಂಶವನ್ನು ಆರೋಮಾಗಳಿಗೆ, ಔಷಧೀಯ ಮಸಾಜ್ ಆಯಿಲ್‍ ಇತ್ಯಾದಿಗಳಿಗೆ ಬಳಸಲಾಗುತ್ತದೆ.

12. ಕ್ಯಾನ್ಸರ್ ಮತ್ತು ಇನ್‍ಫೆಕ್ಷನ್ ಅನ್ನು ತಡೆಯಲು

12. ಕ್ಯಾನ್ಸರ್ ಮತ್ತು ಇನ್‍ಫೆಕ್ಷನ್ ಅನ್ನು ತಡೆಯಲು

ವಿಟಮಿನ್ B‍6 ರಕ್ತಕಣಗಳನ್ನು ಹೆಚ್ಚು ಮಾಡುತ್ತದೆ. ಇದರಿಂದ ರಕ್ತದಲ್ಲಿ ಬಿಳಿ ರಕ್ತ ಕಣಗಳು ಸಹ ಹೆಚ್ಚಾಗುತ್ತವೆ. ಇವುಗಳು ವಿವಿಧ ಬಗೆಯ ಕ್ಯಾನ್ಸರ್ ಮತ್ತು ಇನ್‍ಫೆಕ್ಷನ್ ಬರದಂತೆ ತಡೆಯುತ್ತವೆ.

13.ತ್ವಚೆಗೆ ದೊರೆಯುವ ಪ್ರಯೋಜನಗಳು

13.ತ್ವಚೆಗೆ ದೊರೆಯುವ ಪ್ರಯೋಜನಗಳು

ಪಿಸ್ತಾ ಎಣ್ಣೆಯು ಒಂದು ಅತ್ಯುತ್ತಮ ಪ್ರಾಕೃತಿಕ ಮೊಯಿಶ್ಚರೈಸರ್ ಆಗಿರುತ್ತದೆ. ಇದು ತ್ವಚೆಯಲ್ಲಿ ತೇವಾಂಶವನ್ನು ಮತ್ತು ಮೃದುತ್ವವನ್ನು ಹೆಚ್ಚಿಸುವ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ನಿಮ್ಮ ತ್ವಚೆ ಮೃದು ಮತ್ತು ರೇಷ್ಮೆಯಂತೆ ಮಿಂಚಲು ಮೊಯಿಶ್ಚರೈಸರ್ ಬಳಸುವ ಬದಲು ಪಿಸ್ತಾ ಎಣ್ಣೆಯನ್ನು ಬಳಸಿ.

14. ವಯಸ್ಸಾದವರ ಮೇಲೆ ಪಿಸ್ತಾದ ಪ್ರಭಾವ

14. ವಯಸ್ಸಾದವರ ಮೇಲೆ ಪಿಸ್ತಾದ ಪ್ರಭಾವ

ನಿಮಗೆ ಗೊತ್ತೇ? ಪಿಸ್ತಾವು ವಯಸ್ಸಾದವರಿಗೆ ಭಾರೀ ಪ್ರಯೋಜನಗಳನ್ನು ನೀಡುತ್ತದೆ. ಇವುಗಳಲ್ಲಿರುವ ಸಮೃದ್ಧವಾದ ಅಂಟಿ ಆಕ್ಸಿಡೆಂಟ್‍ಗಳು ಫ್ರೀ ರಾಡಿಕಲ್‍ಗಳನ್ನು ತಟಸ್ಥಗೊಳಿಸುತ್ತವೆ. ಈ ಫ್ರೀ ರಾಡಿಕಲ್‍ಗಳು ಅವಧಿ ಪೂರ್ವ ವಯಸ್ಸನ್ನು ತಡೆಯುತ್ತವೆ ಮತ್ತು ತ್ವಚೆಗೆ ಮೃದುತ್ವವನ್ನು ಮತ್ತು ರೇಷ್ಮೆಯಂತಹ ಮೆರಗನ್ನು ತರುತ್ತವೆ. ಆಗ ತ್ವಚೆಯ ತಾಜಾತನವನ್ನು ಬಹುಕಾಲ ಕಾಯ್ದುಕೊಳ್ಳುತ್ತದೆ.

15. ಕೊಬ್ಬಿನ ಆಮ್ಲಗಳು

15. ಕೊಬ್ಬಿನ ಆಮ್ಲಗಳು

ಪಿಸ್ತಾದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಕೊಬ್ಬಿನ ಆಮ್ಲಗಳು ದೊರೆಯುತ್ತವೆ. ಇವು ನಿಮ್ಮ ದೇಹದಲ್ಲಿ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಸಮತೋಲನ ಮಾಡಲು ನೆರವಾಗುತ್ತವೆ. ಪಿಸ್ತಾದ ಜೊತೆಗೆ ಹಸಿರು ಸೇಬು, ರೊಬುಸ್ಟಾ ಬಾಳೆ ಹಣ್ಣನ್ನು ಸೇವಿಸಿ ಸದಾ ಹೊಳೆಯುವ, ನುಣುಪಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಿ.

16. ವಿಟಮಿನ್ ಇ

16. ವಿಟಮಿನ್ ಇ

ಪಿಸ್ತಾದಲ್ಲಿ ಸಮೃದ್ಧವಾಗಿರುವ ವಿಟಮಿನ್ ಇ ಯು ಒಂದು ಉತ್ತಮವಾದ ಕರಗುವ ಗುಣ ಹೊಂದಿದೆ ಆಂಟಿ ಆಕ್ಸಿಡೆಂಟ್ ಆಗಿರುತ್ತದೆ. ಪಿಸ್ತಾವು ಚರ್ಮದ ಮೇಲೆ ಸೂರ್ಯನ ಬಿಸಿಲಿನ ಪರಿಣಾಮ ಬೀರದಂತೆ ತಡೆಯುತ್ತದೆ. ಹಾಗಾಗಿ ಚರ್ಮದ ಕ್ಯಾನ್ಸರ್ ಮತ್ತು ಸನ್ ಬರ್ನ್ ಗೆ ಪಿಸ್ತಾವು ಪರಿಣಾಮಕಾರಿ ಔಷಧಿಯಾಗಿರುತ್ತದೆ.

17. ಕೂದಲಿನ ರಕ್ಷಣೆ

17. ಕೂದಲಿನ ರಕ್ಷಣೆ

ಯಾವುದೇ ರೀತಿಯ ದೃಷ್ಟಿ ದೋಷದಿಂದ ಬಳಲುತ್ತಿರುವವರಿಗೆ ಪಿಸ್ತಾವು ಒಂದು ಪ್ರಯೋಜನಕಾರಿ ಹಣ್ಣಾಗಿರುತ್ತದೆ. ಇದು ಆರೋಗ್ಯಕಾರಿ ದೃಷ್ಟಿಯನ್ನು ಅಭಿವೃದ್ಧಿಪಡಿಸುತ್ತದೆ. ಪಿಸ್ತಾದಲ್ಲಿ ಕೂದಲಿಗೆ ಸಹ ನೆರವಾಗುವಂತಹ ಅಂಶಗಳು ಇವೆ. ಹಾಗಾಗಿ ಇವುಗಳನ್ನು ಕೂದಲಿನ ರಕ್ಷಣೆಗು ಸಹ ಬಳಸುತ್ತಾರೆ.

18. ಕೂದಲಿನ ಆರೋಗ್ಯ ವೃದ್ಧಿಸುತ್ತದೆ

18. ಕೂದಲಿನ ಆರೋಗ್ಯ ವೃದ್ಧಿಸುತ್ತದೆ

ಪಿಸ್ತಾದಲ್ಲಿರುವ ಕೊಬ್ಬಿನ ಆಮ್ಲಗಳು ಕೂದಲನ್ನು ಸದೃಢವಾಗಿ ಮತ್ತು ಸೊಂಪಾಗಿ ಬೆಳೆಯುವಂತೆ ಮಾಡುತ್ತವೆ.

19. ಕೂದಲಿನ ಆರೋಗ್ಯ

19. ಕೂದಲಿನ ಆರೋಗ್ಯ

ಪಿಸ್ತಾ ಸೇವಿಸುವುದರಿಂದ ಬಲಿಷ್ಟವಾದ ಜುಟ್ಟನ್ನು ಹೊಂದಬಹುದು.

20. ಕೂದಲಿನ ಸಮಸ್ಯೆ ಹೋಗಲಾಡಿಸುವುದು

20. ಕೂದಲಿನ ಸಮಸ್ಯೆ ಹೋಗಲಾಡಿಸುವುದು

ಪಿಸ್ತಾದಿಂದ ತಯಾರಿಸಿದ ಹೇರ್ ಮಾಸ್ಕ್ ಕೂದಲನ್ನು ಆಳವಾಗಿ ಮೊಯಿಶ್ಚರೈಸ್ ಮಾಡಿ, ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಇದು ಕೂದಲಿನ ಎಳೆಗಳಿಗೆ ನಮ್ಯತೆಯನ್ನು ಒದಗಿಸುತ್ತದೆ. ಜೊತೆಗೆ ಒಡೆದ ಕೂದಲು, ತೇವಾಂಶವಿಲ್ಲದ ಒಣಕೂದಲು, ಬಣ್ಣಗುಂದಿದ ಹಾಗು ಒರಟಾದ ಕೂದಲಿಗೆ ಪಿಸ್ತಾ ಪರಿಣಾಮಕಾರಿಯಾದ ಪರಿಹಾರವಾಗಿರುತ್ತದೆ.

21. ಕೂದಲಿಗೆ ಅಗತ್ಯದ ವಿಟಮಿನ್ ದೊರೆಯುವುದು

21. ಕೂದಲಿಗೆ ಅಗತ್ಯದ ವಿಟಮಿನ್ ದೊರೆಯುವುದು

ಕೂದಲು ಉದುರಲು ಬೈಯೊಟಿನ್ ಡಿಫಿಸಿಯೆನ್ಸಿ ಮೂಲ ಕಾರಣ. ಪಿಸ್ತಾವು ಅಗತ್ಯ ಪ್ರಮಾಣದ ಬೈಯೊಟಿನ್ ಹೊಂದಿರುತ್ತದೆ. ಪ್ರತಿದಿನ ಪಿಸ್ತಾವನ್ನು ಸೇವಿಸುವುದರಿಂದ ಕೂದಲು ಉದುರುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು.

English summary

Top 21 Amazing Benefits Of Pistachios

Actually pistachio is a fruit, but the the outer shell of the fruit is removed and the yellow coloured seed kernel is usually eaten as it is edible. You might already know about the health benefits of nuts. So let’s take a deep look into pistachio health benefits. 
X
Desktop Bottom Promotion