For Quick Alerts
ALLOW NOTIFICATIONS  
For Daily Alerts

ಈ 21 ಭಾರತೀಯ ಆಹಾರಗಳ ವೈಶಿಷ್ಟ್ಯ ಗೊತ್ತಿದೆಯೇ?

By Super
|

ಭಾರತೀಯರಿಗೆ ತಿಂಡಿ ಅಂದರೆ ಮೊದಲು ಬಿಸಿಬಿಸಿ, ಖಾರವಾದ, ಘಮ ಘಮ ಮಸಾಲೆವಾಸನೆಯುಳ್ಳ, ಎಣ್ಣೆಯಲ್ಲಿ ಕರೆದ, ಕೊಬ್ಬು ಮತ್ತು ಬೆಣ್ಣೆಯಿಂದ ಮಾಡಿದ ತಿಂಡಿಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಹಾಗೆಯೇ ಬಾಯಲ್ಲಿ ನೀರು ಸಹ ಸುರಿಯುತ್ತದೆ. ಇದಕ್ಕೆ ನಾವು ನಡೆದುಬಂದ ಪದ್ಧತಿಯೇ ಕಾರಣ. ಆದರೆ ನಮ್ಮ ಭಾರತೀಯ ಆಹಾರಗಳು ಬಹಳ ಪ್ರಸಿದ್ಧವಾಗಿದ್ದರೂ ಅವುಗಳ ಬಗ್ಗೆ ಅತೀವ ತಪ್ಪು ತಿಳಿವಳಿಕೆಯಾಗಿದೆ.

ವಾಸ್ತವವಾಗಿ ನಮ್ಮಲ್ಲಿರುವ ಆರೋಗ್ಯಪೂರ್ಣ ಮಸಾಲೆಗಳ ಶ್ರೇಣಿಯು ಭಾರತೀಯ ಆಹಾರಗಳ ತಿನಿಸುಗಳು ತಮ್ಮ ಪೌಷ್ಟಿಕಾಂಶಗಳನ್ನು ಉಳಿಸಿಕೊಳ್ಳುತ್ತದೆ. ಇದು ನಾವು ನಮ್ಮದೇ ಆದ ರೀತಿಯಲ್ಲಿ ಬೇಯಿಸುವುದರಿಂದ ಪೌಷ್ಟಿಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಭಾರತೀಯ ಆಹಾರಗಳು ಕಾರ್ಬೋಹೈಡ್ರೇಟ್ಸ್, ಪ್ರೊಟೀನ್ಸ್ ಮತ್ತು ಕೊಬ್ಬು ಇವುಗಳನ್ನೊಳಗೊಂಡ ಒಂದು ಸಮತೋಲಿತ ಆಹಾರವಾಗಿದೆ.

ಏನು ನಿಮ್ಮ ಶರೀರದ ಗಾತ್ರದ ಬಗ್ಗೆ ಯೋಚನೆಮಾಡುತ್ತಿರುವಿರಾ? ನಿಮ್ಮ ಸೊಂಟದ ಸುತ್ತಳತೆಯ ಬಗ್ಗೆ ನಿಮ್ಮ ಗಮನ ಹರಿದಿದೆಯೇ? ಹಾಗಿದ್ದಲ್ಲಿ ನಿಮ್ಮ ಸೊಂಟದ ಸುತ್ತಳತೆಯನ್ನು ಕಾಪಾಡಿಕೊಳ್ಳಲು ಯಾವ ಆರೋಗ್ಯಪೂರ್ಣ 20 ಭಾರತೀಯ ಆಹಾರಗಳ ಪಟ್ಟಿಯಿಂದ ಸಹಾಯವಾಗುವುದು ನೋಡೋಣ ಬನ್ನಿ.

1. ಮಜ್ಜಿಗೆ

1. ಮಜ್ಜಿಗೆ

ಮಜ್ಜಿಗೆಯಲ್ಲಿ ಬೆಣ್ಣೆ ಇರುತ್ತದೆ ಎಂಬ ಅನಿಸಿಕೆ ಅಥವಾ ನಂಬಿಕೆಯಿದ್ದರೆ ವಾಸ್ತವವಾಗಿ ಸಾಮಾನ್ಯವಾಗಿ ಬೆಣ್ಣೆ ಇರುವುದಿಲ್ಲ ಮತ್ತು ವಾಸ್ತವದಲ್ಲಿ ಕೊಬ್ಬು ಕಡಿಮೆಯಿರುತ್ತದೆ. ಕಡಿಮೆ ಪ್ರಮಾಣದ ಹಾಲಿನಿಂದ ಮಾಡಿದ ಒಂದು ಕಪ್ ಮಜ್ಜಿಗೆಯಲ್ಲಿ ಸುಮಾರು 100 ಕ್ಯಾಲೋರಿ ಮತ್ತು 2 ಗ್ರಾಂ ಕೊಬ್ಬು ಇರುತ್ತವೆ.

2. ಸಾಂಬಾರ್ ದಾಲ್

2. ಸಾಂಬಾರ್ ದಾಲ್

ಇದು ಗಜ್ಜರಿ, ಬೇಳೆಗಳು ಮತ್ತು ವಿವಿಧ ರೀತಿಯ ಮಸಾಲೆಗಳನ್ನು ಉಪಯೋಗಿಸಿ ತಯಾರಿಸಲಾದ ಒಂದು ಘನ ಭಕ್ಷ್ಯ ಅಥವಾ ಸೂಪ್. ಒಂದು ಬಟ್ಟಲು ಸೂಪಿನಲ್ಲಿ ಸುಮಾರು 50 ಕ್ಯಾಲೋರಿ, 2.6 ಗ್ರಾಂ ಕಾರ್ಬೋಹೈಡ್ರೇಟ್ಸ್, 15 ಗ್ರಾಂ ಪ್ರೋಟೀನ್ ಮತ್ತು 1.8 ಗ್ರಾಂ ಕೊಬ್ಬು ಇರುತ್ತವೆ.

3. ತಂದೂರಿ ಚಿಕನ್

3. ತಂದೂರಿ ಚಿಕನ್

ತಂದೂರಿ ಚಿಕನ್ ನಲ್ಲಿ 260 ಕ್ಯಾಲೋರಿ, 13 ಗ್ರಾಂ ಕೊಬ್ಬು, 5 ಗ್ರಾಂ ಕಾರ್ಬೋಹೈಡ್ರೇಟ್ಸ್ ಇರುತ್ತವೆ..

4. ರಾಜ್ಮಾ

4. ರಾಜ್ಮಾ

ರಾಜ್ಮಾ ಒಂದು ಉತ್ತರ ಭಾರತದ ಭಕ್ಷ್ಯ. ಇದನ್ನು ಕೆಂಪು ಹುರಳಿಕಾಳಿನಿಂದ(Red Kidney Beans) ತಯಾರಿಸುತ್ತಾರೆ. ಸಾಮಾನ್ಯವಾಗಿ ಅನ್ನ ಮತ್ತು ರೊಟ್ಟಿಯ ಜೊತೆ ಇದನ್ನು ಬಳಸುತ್ತಾರೆ. ಒಂದು ಬಟ್ಟಲು ರಾಜ್ಮಾದಲ್ಲಿ ಸುಮಾರು 120 ಕ್ಯಾಲೋರಿ, 5 ಗ್ರಾಂ ಪ್ರೊಟೀನ್ ಇರುತ್ತವೆ.

5. ಹರಾ ಭರಾ ಕಬಾಬ್

5. ಹರಾ ಭರಾ ಕಬಾಬ್

ಗರಿಗರಿಯಾದ ಹರ ಬರಾ ಕಬಾಬ್ ಒಂದು ಸಸ್ಯಾಹಾರಿ ಖಾದ್ಯ. ಇದು ಸುಗಂಧಿತ ಮಸಾಲೆಗಳು, ಆರೋಗ್ಯಪೂರ್ಣ ಅಂಶಗಳು ಮತ್ತು ಒಂದು ಅದ್ಭುತ ರುಚಿ ಹೊಂದಿರುವ ತಿನಿಸಾಗಿದೆ ಒಂದು ಸರ್ವಿಂಗ್ ನಲ್ಲಿ 73 ಕ್ಯಾಲೋರಿ ಮತ್ತು 2 ಗ್ರಾಂ ಪ್ರೋಟೀನ್ ಇರುತ್ತವೆ.

6. ತೊಗರಿ ಬೇಳೆ ಭಕ್ಷ್ಯ

6. ತೊಗರಿ ಬೇಳೆ ಭಕ್ಷ್ಯ

ಇದು ತೊಗರಿಬೇಳೆಯನ್ನು ಉಪಯೊಗಿಸಿ ಮಾಡುವ ಭಕ್ಷ್ಯ. ಒಂದು ಬಟ್ಟಲು ಭಕ್ಷ್ಯದಲ್ಲಿ ಸುಮಾರು 53 ಕ್ಯಾಲೋರಿ, 1.2 ಗ್ರಾಂ ಕೊಬ್ಬು, 8 ಗ್ರಾಂ ಕಾರ್ಬೋಹೈಡ್ರೇಟ್ಸ್ ಮತ್ತು 2.8 ಗ್ರಾಂ ಪ್ರೊಟೀನ್ಸ್ ಇರುತ್ತವೆ.

7. ಬೆಂಡೆಕಾಯಿ ಪಲ್ಯ

7. ಬೆಂಡೆಕಾಯಿ ಪಲ್ಯ

ಈ ಸರಳ ಪಲ್ಯ ಚಪಾತಿ ಮತ್ತು ಪರಾತಗಳ ಜೊತೆಗೆ ತಿನ್ನಲು ಸಖತ್ತಾಗಿರುತ್ತದೆ ಮತ್ತು ಸಸ್ಯಹಾರಿ ಊಟಕ್ಕೆ ಸೊಗಸಾಗಿರುತ್ತದೆ. ಇದರ ಒಂದು ಸರ್ವಿಂಗಿನಲ್ಲಿ ಸುಮಾರು 80 ಕ್ಯಾಲೋರಿ ಮತ್ತು 5 ಗ್ರಾಂ ಪ್ರೊಟೀನ್ ಇರುತ್ತವೆ.

8. ಸೋಲ್ಕಡಿ

8. ಸೋಲ್ಕಡಿ

ಇದು ಕೋಕಂ ಮತ್ತು ತೆಂಗಿನಕಾಯಿಯ ಹಾಲಿನಿಂದ ತಯಾರಿಸಿದ ಗುಲಾಬಿ ಬಣ್ಣದ ಪಾನೀಯ. ಇದು ರುಚಿಯಾದ ಮತ್ತು ಜೀರ್ಣಕಾರಕ ಪಾನೀಯ. ಇದು ಖಾರ ಮತ್ತು ಮಸಾಲೆಭರಿತ ಊಟವಾದಮೇಲೆ ತೆಗೆದುಕೊಳ್ಳುವುದು ಒಳ್ಳೆಯದು. ಒಂದು ಲೋಟ ಸೋಲ್ಕಡಿಯಲ್ಲಿ 138 ಕ್ಯಾಲೋರಿ ಇರುತ್ತದೆ.

9. ಕಡಲೆ ಮತ್ತು ಪಾಲಕ್ ಪಲ್ಯ

9. ಕಡಲೆ ಮತ್ತು ಪಾಲಕ್ ಪಲ್ಯ

ತಾಜಾ ಪಾಲಕ್ ಸೊಪ್ಪು ಹೆಚ್ಚಾಗಿದ್ದರೆ ಈ ಕಡಲೆ ಪಲ್ಯ ಬಹಳ ಹಸಿರಾಗಿದ್ದು ಕಳೆಗೂಡಿಗೊಂಡಿರುತ್ತದೆ. ಈ ಖಾದ್ಯದಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಒಂದು ಸರ್ವಿಂಗಿನಲ್ಲಿ ಸುಮಾರು 142 ಕ್ಯಾಲೋರಿ ಇರುತ್ತದೆ.

10. ರಾಯತ

10. ರಾಯತ

ಈ ರಾಯತ ಹಣ್ಣುಗಳು ಮತ್ತು ತರಕಾರಿಗಳನ್ನು ಕಡೆದ ಮೊಸರಿನಲ್ಲಿ ಸೇರಿಸಿ ಸರಳವಾಗಿ ಮಾಡಬಹುದಾಗಿದೆ. ಒಂದು ಸರ್ವಿಂಗಿನಲ್ಲಿ ಸುಮಾರು 60 ಕ್ಯಾಲೋರಿ ಇರುತ್ತದೆ.

11. ಅಳಸಂದೆ ಕಾಳು

11. ಅಳಸಂದೆ ಕಾಳು

ಅಳಸಂದೆಕಾಳನ್ನು ನೆನೆಸಿ ಬೇಯಿಸಿದಮೇಲೆ ಹುಳಿಯಾದ ಟೊಮಾಟೊ ರಸದಲ್ಲಿ ಮಸಾಲೆಗಳ ಮಿಶ್ರಣದ ಜೊತೆ ಕುದಿಸಿ ಮಾಡುವ ಇದು ಉತ್ತರ ಭಾರತ ಜನಪ್ರಿಯ ಭಕ್ಷ್ಯ. ಒಂದು ಸಾಧಾರಣ ಸರ್ವಿಂಗಿನಲ್ಲಿ 198 ಕ್ಯಾಲೋರಿ ಇರುತ್ತದೆ.

12. ಪಾಲಕ್ ಸೊಪ್ಪಿನ ಸಾಗು

12. ಪಾಲಕ್ ಸೊಪ್ಪಿನ ಸಾಗು

ಪಾಲಕ್ ಸೊಪ್ಪಿನ ಸಾಗು ಅತ್ಯಂತ ಜನಪ್ರಿಯ ಹಾಗೂ ಆರೋಗ್ಯಕರ ಪಂಜಾಬಿ ಭಕ್ಷ್ಯ. ಇದನ್ನು ಸಾಮಾನ್ಯವಾಗಿ ರೋಟಿ ಅಥವಾ ನಾನ್ ಜೊತೆಗೆ ತಿನ್ನಲು ಕೊಡುತ್ತಾರೆ. ಒಂದು ಸರ್ವಿಂಗಿನಲ್ಲಿ ಸುಮಾರು 126.2 ಕ್ಯಾಲೋರಿ ಮತ್ತು 6.3 ಗ್ರಾಂ ಪ್ರೊಟೀನ್ ಇರುತ್ತವೆ.

13. ದಾಲಿಯಾ ಅಥವಾ ಗೋಧಿ ನುಚ್ಚು:

13. ದಾಲಿಯಾ ಅಥವಾ ಗೋಧಿ ನುಚ್ಚು:

ದಾಲಿಯದಿಂದ ಮಾಡುವ ಉಪ್ಮಾ ಉಪಹಾರ ಅತ್ಯಂತ ಹಗುರವಾದ ಮತ್ತು ಆರೋಗ್ಯಕರ ಬೆಳಗಿನ ತಿಂಡಿ. ಇದು ನಾರಿನ ಉತ್ತಮ ಮೂಲವಾಗಿದ್ದು ಜೀರ್ಣಕಾರಿ ವ್ಯವಸ್ತೆಯನ್ನು ನಿರ್ವಹಿಸಲು ಸಹಾಯಮಾಡುತ್ತದೆ. ಪ್ರತಿ 170 ಗ್ರಾಮ್ ಸಂಪೂರ್ಣ ಗೋಧಿಯಲ್ಲಿ ಸುಮಾರು 85 ಕ್ಯಾಲೋರಿ ಇರುತ್ತದೆ.

14. ಆಲೂ ಪಾಲಕ್

14. ಆಲೂ ಪಾಲಕ್

ಇದನ್ನು ಬೇಯಿಸಿ ಹಿಸುಕಿದ (Mashed) ಆಲೂಗಡ್ಡೆ ಜೊತೆಗೆ ಸಣ್ಣಗೆ ಹೆಚ್ಚಿರುವ ಪಾಲಕ್ ಅಥವಾ ಯಾವುದೇ ಹಸಿರು ಸೊಪ್ಪನ್ನು ಸೇರಿಸಿ ಮಾಡುತ್ತಾರೆ. 142 ಗ್ರಾಮ್ ಇರುವ ಒಂದು ಸರ್ವಿಂಗಿನಲ್ಲಿ ಸುಮಾರು 100 ಕ್ಯಾಲೋರಿ ಮತ್ತು 3 ಗ್ರಾಮ್ ಪ್ರೋಟೀನ್ ಇರುತ್ತವೆ.

15. ಹೆಸರುಬೇಳೆ ಪಲ್ಯ:

15. ಹೆಸರುಬೇಳೆ ಪಲ್ಯ:

ಮೊಳಕೆಯೊಡೆದ ಹೆಸರುಬೇಳೆಯಿಂದ ತ್ವರಿತವಾಗಿ ಮತ್ತು ಸುಲಭವಾಗಿ ತಯಾರಿಸುವ ಈ ಭಾಜಿ ಆರೋಗ್ಯಕರ ಭಕ್ಷ್ಯ. ಮೊಳಕೆಯಿಂದ ಬರುವ ಪ್ರೋಟೀನ್ ತುಂಬಾ ಆರೋಗ್ಯಪೂರ್ಣವಾಗಿದೆ. ಒಂದು ಸರ್ವಿಂಗಿನಲ್ಲಿ 125 ಕ್ಯಾಲೋರಿ ಮತ್ತು 4 ಗ್ರಾಂ ಕೊಬ್ಬಿರುತ್ತವೆ.

16. ಬೈಗನ್ ಭರ್ತ

16. ಬೈಗನ್ ಭರ್ತ

ಬೈಗನ್ ಭರ್ತ ಅಂದರೆ ಬದನೆಕಾಯಿಯನ್ನು ಸುಟ್ಟು, ಸಿಪ್ಪೆಯನ್ನು ತೆಗೆದು ಮಾಡುವ ಒಂದು ಸರಳ ಹಾಗೂ ಅಸಮಾನ್ಯ ಉತ್ತರ ಭಾರತದ ವಿಶೇಷ ಭಕ್ಷ್ಯ. 100 ಗ್ರಾಂ ಬೈಗನ್ ಭರ್ತದಲ್ಲಿ ಸುಮಾರು 102 ಕ್ಯಾಲೋರಿ ಮತ್ತು 5 ಗ್ರಾಂ ಕೊಬ್ಬಿರುತ್ತದೆ.

17. ಸಿಹಿ ಕುಂಬಳಕಾಯಿ ಪಲ್ಯ

17. ಸಿಹಿ ಕುಂಬಳಕಾಯಿ ಪಲ್ಯ

ಈ ಖಾದ್ಯ ಎಷ್ಟು ರುಚಿಯಾಗಿರುತ್ತೆಯೆಂದರೆ ಮೆತ್ತಗಿರುವ ಚಪ್ಪಾತಿ, ಫುಲ್ಕ ಅಥವಾ ಯಾವುದೇ ರೊಟ್ಟಿಯ ಜೊತೆ ಸವಿಯಲು ಅಪ್ಯಾಯಮಾನವಾಗಿರುತ್ತದೆ. ಇದನ್ನು ಅನ್ನದಲ್ಲಿ ಕಲೆಸಿಕೊಂಡು ತಿನ್ನಲೂ ಚೆನ್ನಾಗಿ ಇರುತ್ತದೆ. ಒಂದು ಸರ್ವಿಂಗಿನಲ್ಲಿ 151 ಕ್ಯಾಲೋರಿ ಇರುತ್ತದೆ.

18. ಗೋಬಿ (ಹೂ ಕೋಸು) ಪಲ್ಯ

18. ಗೋಬಿ (ಹೂ ಕೋಸು) ಪಲ್ಯ

ಇದು ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧ ಭಕ್ಷ್ಯ. ಈ ಹೂ ಕೋಸಿನ ಜೊತೆ ಟೊಮಾಟೊ ಅಥವಾ ಅವರೆಕಾಳು ಸೇರಿಸಿ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಒಂದು ಸರ್ವಿಂಗಿನಲ್ಲಿ ಸುಮಾರು 65 ಕ್ಯಾಲೋರಿ ಮತ್ತು 2.2 ಗ್ರಾಂ ಪ್ರೊಟೀನ್ ಇರುತ್ತವೆ.

19. ಪತ್ರಾಣಿ ಮಚ್ಚಿ

19. ಪತ್ರಾಣಿ ಮಚ್ಚಿ

ಇದು ಪಾರ್ಸಿಜನಾಂಗದವರ ಜನಪ್ರಿಯ ಖಾದ್ಯ. ಮೀನನ್ನು ಬಾಳೆ ಎಲೆಯಲ್ಲಿ ಸುತ್ತಿ ಆವಿಯಲ್ಲಿ ಬೇಯಿಸಿ ಮಾಡುವ ಖಾದ್ಯ. ಒಂದು ಸರ್ವಿಂಗಿನಲ್ಲಿ ಸುಮಾರು 290.3 ಕ್ಯಾಲೋರಿ ಮತ್ತು 13.6 ಗ್ರಾಂ ಕೊಬ್ಬು ಇರುತ್ತವೆ.

20. ಚಿಕನ್ ಧನ್ಸಕ್

20. ಚಿಕನ್ ಧನ್ಸಕ್

ಇದು ಪಾರ್ಸಿ ಮತ್ತು ಗುಜರಾತಿ ಜನಗಳ ಜನಪ್ರಿಯ ಖಾದ್ಯ. ರುಚಿಯಾದ ಇದನ್ನು ಕೋಳಿ ಮತ್ತು ಸಿಹಿ ಕುಂಬಳಕಾಯಿ ಜೊತೆಗೆ ವಿವಿಧ ಮಸಾಲೆಗಳನ್ನು ಹಾಕಿ ತಯಾರು ಮಾಡುತ್ತಾರೆ. ಇದರ ಜೊತೆಗೆ ಕೆಂಪಕ್ಕಿ ಅನ್ನ ಮತ್ತು ಸೌತೆಕಾಯಿ ಸಲಾಡ್ ಬಳಸುತ್ತಾರೆ. ಒಂದು ಸರ್ವಿಂಗಿನಲ್ಲಿ ಸುಮಾರು 505 ಕ್ಯಾಲೋರಿ ಇರುತ್ತದೆ.

ರಾಗಿ ಮುದ್ದೆ

ರಾಗಿ ಮುದ್ದೆ

ರಾಗಿ ಮುದ್ದೆ ಅಥವಾ ರಾಗಿ ರೊಟ್ಟಿ ತಿನ್ನುವವರಿಗೆ ಮೈ ತೂಕ ಹೆಚ್ಚುತ್ತದೆ ಎಂಬ ಟೆನ್ಷನ್ ಇರುವುದಿಲ್ಲ.

Read more about: ತೂಕ ಆಹಾರ weight food
English summary

Top 20 healthy Indian dishes

The first words that come to mind when one thinks of Indian food are: Hot, spicy, oily, rich, fatty and creamy. Find out which Indian dishes will help you maintain your waistline, with our list of top 20 healthy Indian dishes
X
Desktop Bottom Promotion