For Quick Alerts
ALLOW NOTIFICATIONS  
For Daily Alerts

ದಿನಾ ವ್ಯಾಯಾಮ ಮಾಡುವಿರಾ? ಹಾಗಾದರೆ ನೋ ಟೆನ್ಷನ್

By Super
|

ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮತ್ತು ವ್ಯಾಯಾಮ ಎರಡೂ ಬಹುಮುಖ್ಯ. ಸಾಮಾನ್ಯವಾಗಿ ನಾವು ಆಹಾರದಲ್ಲಿ ಗಮನವಿಟ್ಟು ವ್ಯಾಯಾಮವನ್ನು ಮರೆತು ಬಿಡುತ್ತೀವಿ. ಹೀಗೆ ಮಾಡದೆ ನಿತ್ಯ ವ್ಯಾಯಾಮ ಮಾಡುವುದೇ ಸೈ.

ವ್ಯಾಯಾಮವು ದೇಹದ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕೆಲವು ವ್ಯಾಯಾಮಗಳು ದೇಹವನ್ನು ಬಳಪಡಿಸಿದರೆ ಕೆಲವು ವ್ಯಾಯಾಮಗಳು ಖಾಯಿಲೆಗಳನ್ನು ದೂರ ಮಾಡುತ್ತವೆ. ಇನ್ನೂ ಯೋಗದಂತಹ ವ್ಯಾಯಾಮಗಳು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.

ಇಲ್ಲಿ ನಾವು ವ್ಯಾಯಾಮದಿಂದ ದೊರೆಯುವ 20 ಅರೋಗ್ಯ ಲಾಭದ ಬಗ್ಗೆ ಹೇಳಿದ್ದೇವೆ ನೋಡಿ.

1. ಮಾನಸಿಕ ಆರೋಗ್ಯದ ವೃದ್ಧಿ

1. ಮಾನಸಿಕ ಆರೋಗ್ಯದ ವೃದ್ಧಿ

ಕ್ರಮಬದ್ಧವಾಗಿ 30-45 ನಿಮಿಷಗಳ ವ್ಯಾಯಾಮದಿಂದ ಆರೋಗ್ಯವು ಹೆಚ್ಚುತ್ತೆ ಹಾಗೂ ಒಳ್ಳೆಯ ಮನಃಸ್ಥಿತಿ ಉಂಟಾಗುತ್ತದೆ. ಮೆದುಳಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಹಾಗು ಹೊಸ ನರಕೊಶಗಳು ಉಂಟಾಗುತ್ತವೆ. ಇದರ ಪರಿಣಾಮ ಅಲ್ಜ್ಹೈಮರ್ಸ್, ಪಾರ್ಕಿನ್ಸನ್ಸ್ ನಂತಹ ರೋಗಗಳನ್ನು ದೂರವಿಡುವುದು. ಇಷ್ಟೇ ಏಕೆ ಜೀವನದ ಕಡೆಯ ಹಂತದಲ್ಲಿ ಉಂಟಾಗುವ ಬುದ್ಧಿಮಾಂದ್ಯವನ್ನೂ ಸಹ ದೂರವಿಡಬಹುದು.

2. ಲೈಂಗಿಕ ಸಂತೋಷ

2. ಲೈಂಗಿಕ ಸಂತೋಷ

ಕ್ರಮಬದ್ಧವಾದ ವ್ಯಾಯಾಮವು ಬಲವನ್ನು ಹೆಚ್ಚಿಸಿ ಜೋಡಿಗಳಲ್ಲಿ ಪರಸ್ಪರ ಆಕರ್ಷಣೆಯನ್ನು ಉಂಟುಮಾಡುತ್ತದೆ. ದೈಹಿಕ ಚಟುವಟಿಕೆಯು ಸ್ತ್ರೀಯಲ್ಲಿ ಕಾಮ ಪ್ರಚೋದನೆಗೆ ಸಹಾಯವಾಗಿ ಮತ್ತು ಪುರುಷರಲ್ಲಿ ನಪುಂಸಕತ್ವ ಬಾರದಿರಲು ಸಹಾಯಮಾಡುತ್ತದೆ.

3. ವ್ಯಾಕುಲ ಪರಿಹಾರ

3. ವ್ಯಾಕುಲ ಪರಿಹಾರ

ನಿರಂತರ ವ್ಯಾಕುಲದಿಂದ ಪರಿಹಾರವನ್ನು ವ್ಯಾಯಾಮ ನೀಡಬಲ್ಲದು. ವ್ಯಾಯಾಮವು ಮನಃಶಾಂತಿ ನೀಡಿ ಆತ್ಮವಿಶ್ವಾಸ ಹೆಚ್ಚಿಸಿ ನಿಮ್ಮ ಚಿಂತೆಗಳನ್ನು ದೂರಮಾಡಬಲ್ಲದು.

4. ಹೃದಯ ಆರೋಗ್ಯ ವರ್ಧನೆ

4. ಹೃದಯ ಆರೋಗ್ಯ ವರ್ಧನೆ

ಕ್ರಮಬದ್ಧ ವ್ಯಾಯಾಮ ಮಾರಣಾಂತಕ ಹೃದ್ರೋಗಗಳನ್ನು ದೂರವಿಡುತ್ತದೆ. ವಂಶಪಾರಂಪರ್ಯವಾಗಿ ಹೃದ್ರೋಗಗಳು ಕಂಡುಬಂದಲ್ಲಿ ನಿಮಗೆ ಬರುವ ಸಾಧ್ಯತೆಯನ್ನು ವ್ಯಾಯಾಮದಿಂದ ಕಡಿಮೆ ಮಾಡಬಹುದು ಹಾಗೂ ಒಳ್ಳೆಯ ಅರೋಗ್ಯಕರ ಜೀವನವನ್ನು ನೀವು ಪಡೆಯಬಹುದು.

5. ದೇಹದ ತೂಕ ನಿಯಂತ್ರಣ

5. ದೇಹದ ತೂಕ ನಿಯಂತ್ರಣ

ವ್ಯಾಯಾಮದ ಪರಿಣಾಮದಿಂದಾಗಿ ದೇಹದ ತೂಕವು ಆರೋಗ್ಯಕರವಾದ ಸ್ಥಿತಿಗೆ ಬರುತ್ತದೆ. ಹಿತವಾದ ಪ್ರಮಾಣದ ತೂಕ ಯಾರಿಗೆ ತಾನೇ ಬೇಡ ? ವ್ಯಾಯಾಮ ಮತ್ತು ಆರೋಗ್ಯಕರ ಆಹಾರದಿಂದ ಹೆಚ್ಚಿನ ತೂಕವನ್ನು ಇಳಿಸಬಹುದು.

6. ಸಕ್ಕರೆ ಖಾಯಿಲೆಯ ತಡೆ

6. ಸಕ್ಕರೆ ಖಾಯಿಲೆಯ ತಡೆ

ವ್ಯಾಯಾಮವು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದರ ಪರಿಣಾಮದಿಂದ ಸಕ್ಕರೆ ಖಾಯಿಲೆಯ ಬರುವಿಕೆಯನ್ನು ಕಡಿಮೆ ಮಾಡುತ್ತದೆ. ಇನ್ನೂ ತೂಕ ಕಡಿಮೆ ಮಾಡುವುದಲ್ಲದೆ ಹೆಚ್ಚು ತೂಕ ಮತ್ತು ಬೊಜ್ಜು ಇರುವವರಿಗೆ ಮಧುಮೇಹ ಬರದಿರುವಂತೆ ವ್ಯಾಯಾಮ ನೋಡಿಕೊಳ್ಳುತ್ತದೆ.

7. ರಕ್ತದೊತ್ತಡದ ಹತೋಟಿ

7. ರಕ್ತದೊತ್ತಡದ ಹತೋಟಿ

ವ್ಯಾಯಾಮ ಅತಿ ರಕ್ತದೊತ್ತಡವನ್ನು ಪಡೆಯದಿರಲು ಸಹಕಾರಿಯಾಗಿರುತ್ತದೆ. ವ್ಯಾಯಾಮ ಇಲ್ಲದೆ ಇದು ಜೀವಕ್ಕೆ ಮಾರಕವೇ ಆಗುತ್ತದೆ. ವ್ಯಾಯಾಮವು ರಕ್ತದ ಪರಿಚಲನೆಯನ್ನು ಸರಿಪಡಿಸಿ ಮಾಂಸಖಂಡಗಳಿಗೆ ಆಮ್ಲಜನಕವನ್ನು ಪೂರೈಸಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

8. ಶಕ್ತಿ ವರ್ಧನೆ

8. ಶಕ್ತಿ ವರ್ಧನೆ

ದೀರ್ಘಾವಧಿಯಲ್ಲಿ ವ್ಯಾಯಾಮವು ತ್ರಾಣ(ಶಕ್ತಿ) ಹೆಚ್ಚಿಸುವುದಲ್ಲದೆ ಆಯಾಸವನ್ನು ಹೋಗಲಾಡಿಸುವುದು.

9. ರಕ್ಷಣಾಕವಚ

9. ರಕ್ಷಣಾಕವಚ

ವ್ಯಾಯಾಮವು ದೇಹದ ರಕ್ಷಣಾಕವಚವನ್ನು ಬಲಿಷ್ಠಗೊಳಿಸಿ ನೆಗಡಿ ಫ್ಲೂ ಜ್ವರದಂತಹ ಖಾಯಿಲೆಗಳನ್ನು ದೂರವಿಡುತ್ತದೆ.

10. ಆರೋಗ್ಯ

10. ಆರೋಗ್ಯ

ವ್ಯಾಯಾಮ ಬೊಜ್ಜು ಮಧುಮೇಹ ರಕ್ತದೊತ್ತಡ ಹೃದ್ರೋಗ ಲಕ್ವಾದಂತಹ ನಾನಾ ಅನಾರೋಗ್ಯಗಳಿಂದ ದೂರವಿಟ್ಟು ಆರೋಗ್ಯವನ್ನು ನೀಡುತ್ತದೆ.

11. ಕೆಟ್ಟ ಕೊಲೆಸ್ಟ್ರಾಲ್ ನ ನಿಯಂತ್ರಣ

11. ಕೆಟ್ಟ ಕೊಲೆಸ್ಟ್ರಾಲ್ ನ ನಿಯಂತ್ರಣ

ವ್ಯಾಯಾಮ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ವರ್ಧಿಸುತ್ತದೆ. ಅಪಧಮನಿಯನ್ನು (ಆರ್ಟರಿ) ಸ್ವಚ್ಚವಾಗಿ ಇಡುತ್ತದೆ.

12. ಸ್ನಾಯು ಬಲವರ್ಧನೆ

12. ಸ್ನಾಯು ಬಲವರ್ಧನೆ

ವ್ಯಾಯಾಮವು ಸ್ನಾಯುಗಳ ಬಳವರ್ಧಿಸಿ ಮುಪ್ಪಿನಲ್ಲಿ ಚಲನೆಗೆ ಸುಲಭಮಾಡಿಕೊಡುತ್ತದೆ.

13. ಉತ್ತಮ ಮನಸ್ಥಿತಿ

13. ಉತ್ತಮ ಮನಸ್ಥಿತಿ

ಮನಸ್ಸಿನ ಉತ್ಸಾಹಕ್ಕಾಗಿ ನಿಮ್ಮ ಇಷ್ಟವಾದ ತಿನಿಸು ಮಾತ್ರವಲ್ಲ, ವ್ಯಾಯಾಮ ಸಹ ಉಪಯೋಗವಾಗುವುದು.

14. ಶಕ್ತಿ ವರ್ಧನೆ

14. ಶಕ್ತಿ ವರ್ಧನೆ

ಕ್ರಮಬದ್ದವಾದ ವ್ಯಾಯಾಮವು ಸ್ನಾಯುಗಳಿಗೆ ಬಲ ನೀಡಿ ಶಕ್ತಿ ವರ್ಧಿಸಿ ಶ್ರಮಸಾಧ್ಯತೆಯನ್ನು ನೀಡುತ್ತದೆ. ಅಂಗಾಂಶಗಳಿಗೆ ಸಮರ್ಥವಾಗಿ ಆಮ್ಲಜನಕವನ್ನು ನೀಡಿ ದೇಹದ ವ್ಯವಸ್ಥೆಗಳಿಗೆ ಸಹಾಯ ಮಾಡುತ್ತದೆ.

15. ಸವಿ ನಿದ್ದೆ

15. ಸವಿ ನಿದ್ದೆ

ವ್ಯಾಯಾಮ ಮಾಡುವವರಿಗೆ ದಿನದ ದೈಹಿಕ ಚಟುವಟಿಕೆಯ ನಂತರ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ. ಆದರೆ ಮಲಗುವ ಮುನ್ನ ವ್ಯಾಯಾಮ ಕೂಡದು.

16. ಮೂಳೆಗಳ ಆರೋಗ್ಯ

16. ಮೂಳೆಗಳ ಆರೋಗ್ಯ

ವ್ಯಾಯಾಮ ಮೂಳೆಗಳ ರಚನೆಗೆ ಕಾರಣವಾಗಿರುತ್ತೆ ಇದರ ಪರಿಣಾಮವಾಗಿ ಮೂಳೆ ಸಂಬಂಧಿ ರೋಗ ಹಾಗೂ ಆರ್ಥ್ರೈಟಿಸ್ ನಂತಹ ಮೂಳೆರೋಗಗಳಿಂದ ರಕ್ಷಣೆ ಕೊಡುತ್ತೆ.

17.ಶರ್ಕರ ರೋಗದ ತಡೆ

17.ಶರ್ಕರ ರೋಗದ ತಡೆ

ಕೊಲೋನ್ ಸ್ತನ ಶ್ವಾಸಕೋಶ ಇತ್ಯಾದಿ ಅಂಗಾಂಗಗಳಿಗೆ ಬರುವ ಶರ್ಕರ ರೋಗದಿಂದ ನಿಮ್ಮನ್ನು ಕಾಪಾಡಲು ವ್ಯಾಯಾಮ ಉತ್ತಮವಾಗಿರುತ್ತದೆ.

18. ದೀರ್ಘಾಯಸ್ಸು

18. ದೀರ್ಘಾಯಸ್ಸು

ವ್ಯಾಯಾಮ ದೀರ್ಘಾಯಸ್ಸು ನೀಡಬಲ್ಲದು. ಮುಪ್ಪನ್ನು ತಡವಾಗಿ ಹಾಗೂ ಆರೋಗ್ಯಕರವಾಗಿ ಬರುವಂತೆ ಮಾಡುತ್ತದೆ.

19. ಬೆನ್ನೋವು ನಿವಾರಣೆ

19. ಬೆನ್ನೋವು ನಿವಾರಣೆ

ಬೆನ್ನೋವಿನಿಂದ ಬಳಲುತ್ತಿರುವರು ಮತ್ತು ದೇಹದ ನಿಲುವು ಸರಿಯಾಗಿಲ್ಲದವರು ವ್ಯಾಯಾಮದಿಂದ ಪರಿಹಾರ ಪಡೆಯಬಹುದು. ವ್ಯಾಯಾಮ ಬೆನ್ನೋವು ನಿವಾರಣೆಗೆ ನೋವಿಲ್ಲದ ಔಷಧಿ ಇಲ್ಲದ ಉತ್ತಮವಾದ ಪರಿಹಾರ.

20. ಉತ್ತಮ ಕಲಿಯುವಿಕೆ

20. ಉತ್ತಮ ಕಲಿಯುವಿಕೆ

ಕ್ರಮಬದ್ದ ವ್ಯಾಯಾಮವು ಮೆದುಳಿನಲ್ಲಿ ರಾಸಾಯನಿಕ ಚಟುವಟಿಕೆಯನ್ನು ಹೆಚ್ಚಿಸಿ ಹೊಸ ಮೆದುಳಿನ ಕೋಶಗಳನ್ನು ಸೃಷ್ಟಿಸಲು ಸಹಾಯವಾಗಿರುತ್ತದೆ. ಪರಸ್ಪರ ಮೆದುಳಿನ ಸಂಪರ್ಕ ಹೆಚ್ಚುವುದರಿಂದ ಗ್ರಹಣಶಕ್ತಿಯು ಹೆಚ್ಚುತ್ತದೆ. ಏಕಾಗ್ರತೆ ಹಾಗೂ ಗ್ರಹಣಶಕ್ತಿ ವರ್ಧಿಸಲು ಟೆನ್ನಿಸ್ ಬಾಸ್ಕೆಟ್ಬಾಲ್ ತರಹದ ತೊಡಕಿನ ಆಟಗಳನ್ನು ಆಡುವುದು ಉತ್ತಮ.

English summary

Top 20 Health Benefits Of Exercise

Exercise plays animportant role in sculpting your body and spiking your fitness levels. There are different exercises for different things. Some are for healthy body, some are for healing diseases. Some exercises like yoga are intent for mental health.
 
 
X
Desktop Bottom Promotion