For Quick Alerts
ALLOW NOTIFICATIONS  
For Daily Alerts

ಕಡಿಮೆ ರಕ್ತದೊತ್ತಡವುಂಟಾಗಲು ಪ್ರಮುಖ 10 ಕಾರಣಗಳು

By Super
|

ತೀವ್ರತರದ ಮಾನಸಿಕ ಒತ್ತಡವು ಕಡಿಮೆ ರಕ್ತದೊತ್ತಡವೆಂದೆ ಸಾಮಾನ್ಯವಾಗಿ ಗುರುತಿಸಲ್ಪಡುತ್ತದೆ. ಇದರರ್ಥ ಪ್ರತಿ ಬಾರಿಯು ಹೃದಯ ಬಡಿತವು ಸಾಮಾನ್ಯಕ್ಕಿಂತ ಕಡಿಮೆ ಬಡಿದುಕೊಂಡಾಗ ಮತ್ತು ಆದ ನಂತರ ರಕ್ತದ ಒತ್ತಡವು ರಕ್ತ ನಾಳಗಳ ಗೋಡೆಗೆ ಅತಿಯಾಗಿ ಘರ್ಷಣೆ ಮಾಡುವುದನ್ನು ಕಡಿಮೆ ರಕ್ತದೊತ್ತಡ ಎಂದು ಹೇಳುತ್ತಾರೆ. ಈ ತೋರಿಕೆಯು ವಿಶ್ವದಲ್ಲಿ ಬಹುತೇಕ ಮಂದಿಯಲ್ಲಿ ಕಂಡುಬರುತ್ತದೆ. ನಮ್ಮಲ್ಲಿ ಹಲವಾರು ಜನರಿಗೆ ಈ ಸಮಸ್ಯೆಯು ಕಂಡುಬರುತ್ತದೆ. ಆದರೆ ನಾವು ಇದನ್ನು ತಲೆಸುತ್ತುವಿಕೆ ಮತ್ತು ನಿರ್ಜಲೀಕರಣದ ಇನ್ನೊಂದು ರೂಪವೆಂದು ಭಾವಿಸಿ ಇದರ ಕುರಿತಾಗಿ ಉದಾಸೀನ ಮಾಡುತ್ತೇವೆ.

ನಿರಂತರವಾಗಿರುವ ಕಡಿಮೆ ರಕ್ತದೊತ್ತಡವು ಮೆದುಳಿನತ್ತ ಸಾಗುವ ಆಮ್ಲಜನಕ ಮತ್ತು ಇನ್ನಿತರ ಪೋಷಕಾಂಶಗಳ ಚಲನೆಯನ್ನು ತಡೆಯುತ್ತದೆ. ಇದು ತೀರಾ ಆದಾಗ ಜೀವಕ್ಕೆ ಅಪಾಯ ಮತ್ತು ಸಾವು ಸಹ ಸಂಭವಿಸಬಹುದು. ಕಡಿಮೆ ರಕ್ತದೊತ್ತಡದಿಂದ ನಿಮ್ಮ ಜೀವನದಲ್ಲಿ ಮುಂದೆ ಸಂಭವಿಸಬಹುದಾದ ಅಚಾತುರ್ಯಗಳನ್ನು ನಿಗ್ರಹಿಸಲು ನಾವು ಇಲ್ಲಿ ನಿಮಗೆ ಕಡಿಮೆ ರಕ್ತದೊತ್ತಡವುಂಟಾಗಲು ಇರುವ ಕಾರಣಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಕಡಿಮೆ ರಕ್ತದೊತ್ತಡ ಉಂಟಾಗಲು ಹಲವು ಕಾರಣಗಳು ಇರಬಹುದು. ಆದರೆ ಇಲ್ಲಿ ನಾವು ಅವುಗಳಲ್ಲಿ ಇರುವ ಸಾಮಾನ್ಯ ಕಾರಣಗಲ ಪಟ್ಟಿಯನ್ನು ನೀಡಿದ್ದೇವೆ.

ಕಡಿಮೆ ರಕ್ತದೊತ್ತಡವುಂಟಾಗಲು ಇರುವ ಕಾರಣಗಳು

1. ನಿರ್ಜಲೀಕರಣ

1. ನಿರ್ಜಲೀಕರಣ

ನಿರ್ಜಲೀಕರಣವು ನಮ್ಮ ದಿನನಿತ್ಯದಲ್ಲಿ ಎದುರಾಗುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಈ ನಿರ್ಜಲೀಕರಣದ ಹಿಂದೆ ಬಹುದಿನಗಳಿಂದ ಕಾಡುತ್ತಿರುವ ವಾಕರಿಕೆ, ವಾಂತಿ ಅಥವಾ ಡಯೇರಿಯಾ ಸಮಸ್ಯೆ ಇರಬಹುದು. ಮತ್ತೊಂದು ಕಾರಣ ಅತಿಯಾಗಿ ವ್ಯಾಯಾಮ ಮಾಡುವುದು, ಅತಿಯಾಗಿ ಬೆವರುವುದು ಮತ್ತು ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಲ್ಲುವ ಕಾರಣದಿಂದ ಸಹ ನಿರ್ಜಲೀಕರಣದ ಸಮಸ್ಯೆ ಕಾಡಬಹುದು.

2. ರಕ್ತ ಸ್ರಾವ

2. ರಕ್ತ ಸ್ರಾವ

ರಕ್ತಸ್ರಾವವು ಅಧಿಕವಿದ್ದರು ಅಥವಾ ಕಡಿಮೆಯಿದ್ದರು ಅದು ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತದೆ. ಈ ರಕ್ತಸ್ರಾವವು ಅಪಘಾತ, ಶಸ್ತ ಚಿಕಿತ್ಸೆ ಅಥವಾ ಇನ್ನಿತರ ಕಾರಣಗಳಿಂದ ಸಂಭವಿಸಬಹುದು.

3. ಅವಯವಗಳಲ್ಲಿ ಬಾವು

3. ಅವಯವಗಳಲ್ಲಿ ಬಾವು

ನಮ್ಮ ದೇಹದ ಅಂಗಾಂಗಳಲ್ಲಿ ತೀವ್ರ ತರದ ಬಾವು ಕಾಣಿಸಿಕೊಂಡಾಗ ಸಹ ಕಡಿಮೆ ರಕ್ತದೊತ್ತಡವು ಸಂಭವಿಸುತ್ತದೆ. ಇದು ಹೇಗೆ ಸಾಧ್ಯ? ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಯೋಚಿಸಿ ನಿಮ್ಮ ದೇಹದ ಅಂಗದಲ್ಲಿ ಒಂದು ಬಾವು ಆಗಿದೆ. ಅದಕ್ಕೆ ರಕ್ತ ಪರಿಚಲನೆಯಾಗುವಾಗ, ಆ ರಕ್ತವು ಬಾವಿನಲ್ಲಿರುವ ಜೀವಕೋಶಗಳ ಜೊತೆ ಸಂಪರ್ಕ ಪಡೆದು, ತನ್ನ ಶಕ್ತಿಯನ್ನು ಕುಂದಿಸಿಕೊಳ್ಳುತ್ತದೆ.

4.ದುರ್ಬಲವಾದ ಹೃದಯ ಸ್ನಾಯುಗಳು

4.ದುರ್ಬಲವಾದ ಹೃದಯ ಸ್ನಾಯುಗಳು

ನಿಮಗೆ ದುರ್ಬಲವಾದ ಹೃದಯ ಸ್ನಾಯುಗಳು ಇದ್ದರೆ, ನಿಮಗೆ ಕಡಿಮೆ ರಕ್ತದೊತ್ತಡ ಬರುವ ಸಾಧ್ಯತೆ ಇರುತ್ತದೆ. ದುರ್ಬಲ ಹೃದಯವು ಹೃದಯಾಘಾತದ ಅಪಾಯವನ್ನು ಎದುರಿಸುತ್ತದೆ. ಅಲ್ಲದೆ ಇದು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯವು ಕ್ಷೀಣವಾಗಿರುತ್ತದೆ. ಇದರಿಂದಾಗಿ ಹಲವು ಬಾರಿ ಲಘು ಹೃದಯಾಘಾತ ಆಗುವ ಸಾಧ್ಯತೆ ಇರುತ್ತದೆ ಅಥವಾ ವೈರಸ್‍ಗಳ ಪ್ರಭಾವದಿಂದ ಹೃದಯದ ಸ್ನಾಯುಗಳಲ್ಲಿ ನಂಜು ಉಂಟಾಗುತ್ತದೆ.

5. ಹೃದಯ ಸ್ತಂಭನ

5. ಹೃದಯ ಸ್ತಂಭನ

ಹೃದಯ ಸ್ತಂಭನವು ಹೃದಯಾಘಾತದಿಂದ ಸಂಭವಿಸುತ್ತದೆ ಅಥವಾ ಅತೆರೊಸ್ಕೆಲೆರೊಸಿಸ್‍ನಿಂದ ಸಂಭವಿಸುತ್ತದೆ. ಹೃದಯ ಸ್ತಂಭನದಲ್ಲಿ ಹೃದಯದಲ್ಲಿ ವಿದ್ಯುತ್ತನ್ನು ಉತ್ಪಾದಿಸುವ ವಿಶೇಷ ಕೋಶಗಳು ಹಾಳಾಗುತ್ತವೆ ಮತ್ತು ದೇಹದ ಇನ್ನಿತರ ಭಾಗದಿಂದ ಹೃದಯಕ್ಕೆ ತಲುಪ ಬೇಕಾದ ವಿದ್ಯುತ್ ಸಂಕೇತಗಳು ಸ್ಥಗಿತಗೊಳ್ಳುತ್ತವೆ. ಇವು ಮುಂದೆ ಸಂಪರ್ಕವನ್ನು ಕಡಿದುಕೊಂಡು ತಟಸ್ಥಗೊಳ್ಳುತ್ತವೆ.

6. ಅಸಾಮಾನ್ಯ ಹೃದಯದ ಬಡಿತದ ಪ್ರಮಾಣ

6. ಅಸಾಮಾನ್ಯ ಹೃದಯದ ಬಡಿತದ ಪ್ರಮಾಣ

ಯಾವಾಗ ಹೃದಯದ ಬಡಿತವು ಎಂದಿನಂತಿರುವುದಿಲ್ಲವೊ ಅಥವಾ ಹೆಚ್ಚಾಗಿರುತ್ತದೊ, ಆಗ ಹೃದಯದ ಬಡಿತವು ಊಹೆಗು ನಿಲುಕದಷ್ಟು ವೇಗವಾಗಿ ಬಡಿದುಕೊಳ್ಳುತ್ತದೆ. ಈ ವೇಗದಿಂದಾಗಿ ಉಂಟಾಗುವ ಹೃದಯನಾಳಗಳ ಅಸಾಮಾನ್ಯ ಸಂಕೋಚನವು ಅಗತ್ಯ ಪ್ರಮಾಣದ ರಕ್ತವನ್ನು ತೆಗೆದೊಕೊಳ್ಳಲು ಮತ್ತು ಪಂಪ್ ಮಾಡಲು ವಿಫಲವಾಗುತ್ತದೆ.

7. ಬಸಿರು

7. ಬಸಿರು

ನೀವು ಒಂದು ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದರೆ, ನಿಮ್ಮ ರಕ್ತದೊತ್ತಡವು ಕಡಿಮೆಯಾಗುತ್ತದೆ. ಆದರು ಈ ಅವಧಿಯಲ್ಲಿ ಇದು ಸಾಮಾನ್ಯ. ಆದರೆ ಹಾಗೆಂದು ಇದನ್ನು ಉದಾಸೀನ ಮಾಡದೆ ಮೊದಲು ತಙ್ಞರ ಬಳಿ ತಪಾಸಣೆ ನಡೆಸಿ.

8. ತೀವ್ರ ತರದ ಸೊಂಕು

8. ತೀವ್ರ ತರದ ಸೊಂಕು

ನಂಜು ಅಥವಾ ತೀವ್ರ ತರದ ಸೊಂಕು ಸಹ ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತದೆ. ಬ್ಯಾಕ್ಟೀರಿಯಾಗಳು ಶ್ವಾಸಕೋಶದ ಮೂಲಕ ಅಥವಾ ಅಬ್ಡೊಮೆನ್ ಮೂಲಕ ರಕ್ತದೊಳಗೆ ಪ್ರವೇಶಿಸಿದಾಗ ಇದು ಸಂಭವಿಸುತ್ತದೆ. ಈ ಬ್ಯಾಕ್ಟೀರಿಯಾಗಳು ರಕ್ತದಲ್ಲಿ ವಿಷಕಾರಿಗಳನ್ನು ಉತ್ಪಾದಿಸಿ, ರಕ್ತ ನಾಳಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತವೆ. ಅಲ್ಲದೆ ಇವು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತ ಸಾಗುತ್ತವೆ.

9. ಅಪೌಷ್ಟಿಕತೆ

9. ಅಪೌಷ್ಟಿಕತೆ

ನಾವೆಲ್ಲರು ಆರೋಗ್ಯವಾಗಿರಲು ನಮಗೆ ಪೌಷ್ಟಿಕಾಂಶಗಳ ಅವಶ್ಯಕತೆ ಇದೆ. ಕೇವಲ ಸ್ವಲ್ಪ ಮಾತ್ರ ಪೌಷ್ಟಿಕಾಂಶದ ಏರು ಪೇರು ನಿಮ್ಮ ದೇಹದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿ, ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತದೆ.

10. ಎಂಡೋಕ್ರೈನ್ ಸಮಸ್ಯೆಗಳು

10. ಎಂಡೋಕ್ರೈನ್ ಸಮಸ್ಯೆಗಳು

ಹೈಪೊಥೈರಾಯ್ಡಿಸಂ, ಪ್ಯಾರಾಥೈರಾಯಿಡ್ ಸಮಸ್ಯೆ, ಅಡ್ರೆನಲ್ ಕೊರತೆ, ರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣ ಮತ್ತು ಮಧುಮೇಹಗಳಂತಹ ಎಂಡೋಕ್ರೈನ್ ಸಮಸ್ಯೆಗಳು ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತವೆ. ಎಂಡೋಕ್ರೈನನ್ನು ಉತ್ಪಾದಿಸುವ ಹಾರ್ಮೋನ್‍‍ಗಳಲ್ಲಿ ಕೆಲವೊಂದು ಸಮಸ್ಯೆ ಉಂಟಾಗಿ ಈ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳೆಲ್ಲ ಸೇರಿ ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತವೆ.

English summary

Top 10 Causes Of Low Blood Pressure | Tips For Health | ಕಡಿಮೆ ರಕ್ತದೊತ್ತಡವುಂಟಾಗಲು ಪ್ರಮುಖ 10 ಕಾರಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Constant low blood pressure can obstruct oxygen and other important nutrients from flowing towards the brain, which can cause fatality or even death. In order, to avoid major consequences of low blood pressure, today we share some of the prominent causes of low blood pressure.
X
Desktop Bottom Promotion