For Quick Alerts
ALLOW NOTIFICATIONS  
For Daily Alerts

ಅಜೀರ್ಣ ಸಮಸ್ಯೆ ಉಂಟಾಗದಿರಲು ಟಿಪ್ಸ್

|

ನಾವು ತಿಂದ ಆಹಾರ ಜೀರ್ಣವಾಗಲು ನಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಿಬೇಕು. ಈ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾದರೆ ಅಜೀರ್ಣ, ಹೊಟ್ಟೆ ಉಬ್ಬುವುದು, ಹೊಟ್ಟೆ ತೊಳೆಸುವಿಕೆ ಮುಂತಾದ ಸಮಸ್ಯೆ ಕಂಡು ಬರುವುದು.

ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಮ್ಮ ದೇಹದ ಎಲ್ಲಾ ಅಂಗಗಳ ಕಾರ್ಯ ವ್ಯವಸ್ಥೆಗೆ ಅಡಚಣೆ ಉಂಟಾಗುವುದು. ಆದ್ದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಅವಶ್ಯಕ. ಈ ಕೆಳಗೆ ನೀಡಿದ ಟಿಪ್ಸ್ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಕಾರಿಯಾಗಿದೆ. ಆದಾಗ್ಯೂ ಅಜೀರ್ಣ ಸಮಸ್ಯೆ ಆಗಾಗ ಕಾಣುತ್ತಿದ್ದರೆ ವೈದ್ಯರ ಹತ್ತಿರ ಸಲಹೆ ಪಡೆಯಿರಿ.

ನಾರಿನ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಿ

ನಾರಿನ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಿ

ನಾರಿನಂಶವಿರುವ ಆಹಾರಗಳು ಜೀರ್ಣಕ್ರಿಯೆಗೆ ತುಂಬಾ ಸಹಾಯಕಾರಿ. ನಾರಿನಂಶವಿರುವ ಆಹಾರಗಳು ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಇರುವಂತೆ ನೋಡಿಕೊಳ್ಳಿ.

ನೀರು

ನೀರು

ಕಮ್ಮಿ ಪ್ರಮಾಣದಲ್ಲಿ ನೀರು ಕುಡಿದರೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ. ಊಟವಾದ ಬಳಿಕ ಒಂದು ಲೋಟ ಬಿಸಿ ನೀರು ಕುಡಿಯುವುದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

ವ್ಯಾಯಾಮ

ವ್ಯಾಯಾಮ

ದೇಹಕ್ಕೆ ಶ್ರಮವಿಲ್ಲದಿದ್ದರೆ ನಮ್ಮ ದೇಹದ ಅಂಗಳ ಕಾರ್ಯ ವೈಖರಿ ಕೂಡ ಕಡಿಮೆಯಾಗುವುದು. ಬೆವರು ಸುರಿಯುವಂತೆ ಕೆಲಸ ಮಾಡುವುದು ಅಥವಾ ವ್ಯಾಯಾಮ ಮಾಡುವುದು ಮಾಡಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

 ಊಟವನ್ನು ನಿಧಾನಕ್ಕೆ ತಿನ್ನಿ

ಊಟವನ್ನು ನಿಧಾನಕ್ಕೆ ತಿನ್ನಿ

ಊಟ ಮಾಡುವಾಗ ನಿಧಾನಕ್ಕೆ ಚೆನ್ನಾಗಿ ಜಗಿದು ತಿನ್ನಿ. ಹೀಗೆ ತಿಂದರೆ ಜೀರ್ಣಕ್ರಿಯೆ ಸುಲಭವಾಗುವುದು.

ಮಿತಿ ಮೀರಿ ತಿನ್ನಲು ಹೀಗಬೇಡಿ

ಮಿತಿ ಮೀರಿ ತಿನ್ನಲು ಹೀಗಬೇಡಿ

ಹೊಟ್ಟೆ ಬಿರಿಯುವಂತೆ ತಿಂದರೆ ಜೀರ್ಣಕ್ರಿಯೆಗೆ ತೊಂದರೆಯಾಗುವುದು. ಆದ್ದರಿಂದ ಯಾವಾಗಲೂ ಮಿತಿ ಆಹಾರ ಸೇವನೆ ಆರೊಗ್ಯದ ದೃಷ್ಟಿಯಿಂದ ಒಳ್ಳೆಯದು.

ಲೋಳೆಸರದ ಜ್ಯೂಸ್

ಲೋಳೆಸರದ ಜ್ಯೂಸ್

ಅಜೀರ್ಣ ಸಮಸ್ಯೆ ಉಂಟಾಗಿ ಹೊಟ್ಟೆ ನೋವು, ಮಲಬದ್ಧತೆ ಕಾಣಿಸಿಕೊಂಡರೆ ಲೋಳೆಸರದ ಜ್ಯೂಸ್ ಕುಡಿಯುವುದು ಒಳ್ಳೆಯದು.

ಸಕ್ಕರೆಯಂಶವಿರುವ ಆಹಾರವನ್ನು ಕಮ್ಮಿ ಮಾಡಿ

ಸಕ್ಕರೆಯಂಶವಿರುವ ಆಹಾರವನ್ನು ಕಮ್ಮಿ ಮಾಡಿ

ನಿಮ್ಮ ಡಯಟ್ ನಲ್ಲಿ ಸಕ್ಕರೆಯಂಶವನ್ನು ಕಮ್ಮಿ ತಿನ್ನಿ. ಕೆಫೀನ್ ಅಂಶವನ್ನು ಕೂಡ ಮಿತಿಯಲ್ಲಿ ಸೇವಿಸಿ.

ಒತ್ತಡ

ಒತ್ತಡ

ನಮ್ಮನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಕಾರಣ ಮಾನಸಿಕ ಒತ್ತಡ. ಇದನ್ನು ಕಮ್ಮಿ ಮಾಡಿದರೆ ನಿಮ್ಮ ಅನೇಕ ಸಮಸ್ಯೆಗೆ ಪರಿಹಾರ ದೊರಕಿದಂತೆ.

English summary

Tips To To Improve Digestion

Any changes in your regular diet can definitely cause bloating, nausea, irritable bowel syndrome and celiac disease. To improve digestion, slowly start including fibers, probiotics and water in your diet. Here are some simple tips that can bring big changes in improving your digestive health.
X
Desktop Bottom Promotion