For Quick Alerts
ALLOW NOTIFICATIONS  
For Daily Alerts

ಕಣ್ಣಿನ ದೃಷ್ಟಿ ಸಾಮರ್ಥ್ಯ ಕಾಪಾಡಲು ಟಾಪ್ 20 ಟಿಪ್ಸ್

|

ಪ್ರತಿಯೊಬ್ಬರ ಮುಖದ ಸೌಂದರ್ಯವನ್ನು ಹೆಚ್ಚಿಸುವುದು ನಮ್ಮ ಕಣ್ಣುಗಳು ತಾನೆ? ಸುಂದರವಾದ ಜಗತ್ತನ್ನು ನಮಗೆ ತೋರಿಸುವ ಕಣ್ಣೇ ಸಮಸ್ಯೆಗೆ ಒಳಗಾದರೆ?!

ಹೌದು, ಇಂದು ಅತೀ ಹೆಚ್ಚು ಜನರು ಅನಿಯಮಿತ ಜೀವನ ಕ್ರಮದ ಕಾರಣದಿಂದ ದೃಷ್ಟಿ ದುರ್ಬಲತೆಗೆ ಬಲಿಪಶುಗಳಾಗುತ್ತಿದ್ದಾರೆ. ತಮ್ಮ ಕಂಪ್ಯೂಟರ್ ಗಳಿಗೆ, ಎಲ್ಸಿಡಿಗಳಿಗೆ ನಾವು ಅಂಟಿಕೊಂಡುಬಿಟ್ಟಿದ್ದೇವೆ. ಮನಸ್ಸಿನ ಮನರಂಜನೆಗೆ ಅಥವಾ ಕೆಲಸದ ಸಲುವಾಗಿ ತಮ್ಮ ಕಣ್ಣಿನ ದೃಷ್ಟಿ ನಿರಂತರವಾಗಿ, ಹಂತ ಹಂತವಾಗಿ ಹಾಳಾಗುತ್ತಿದೆ. ಇಂತಹ ಸಮಸ್ಯೆಗೆ ಸರಿಯಾದ ಪರಿಹಾರವನ್ನೂ ನಾವೇ ಕಂಡುಕೊಳ್ಳಬೇಕು.

ನಿಮ್ಮ ದೃಷ್ಟಿ ಸುಧಾರಣೆಗೆ ಕೆಲವು ಸಲಹೆಗಳು ಇಲ್ಲಿವೆ:

1. ಮೀನುಗಳು

1. ಮೀನುಗಳು

ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳ ತುಂಬಿಕೊಂಡಿರುವ ಮೀನನ್ನು ಸೇರಿಸಿ. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮೀನನ್ನು ಸೇವಿಸಿ. ಇದು ಒಣ-ಕಣ್ಣಿನ ಸಿಂಡ್ರೋಮ್ ತಪ್ಪಿಸಲು ಉತ್ತಮ ಮಾರ್ಗವಾಗಿದೆ.

2. ನಿಯಮಿತ ಚೆಕ್-ಅಪ್

2. ನಿಯಮಿತ ಚೆಕ್-ಅಪ್

ನೀವು ಉತ್ತಮ ದೃಷ್ಟಿಯನ್ನು ಹೊಂದಿದ್ದರೂ ಮತ್ತು ಓದುವಿಕೆಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ, ಕನಿಷ್ಠ ವರ್ಷಕ್ಕೊಮ್ಮೆಯಾದರೂ ದೃಷ್ಟಿಯನ್ನು ಪರೀಕ್ಷಿಸಿ. ಇದು ಕಣ್ಣಿನ ಸಂಬಂಧಿತ ವಿವಿಧ ಕಾಯಿಲೆಗಳನ್ನು ಪತ್ತೆ ಮಾಡಲು ಮತ್ತು ಸರಿಯಾದ ಚಿಕಿತ್ಸೆ ನೀಡಿ ಇದನ್ನು ತಡೆಯಲು ಉತ್ತಮ ಮಾರ್ಗವಾಗಿದೆ.

3. ಕಣ್ಣು ಮಿಟುಕಿಸುವುದು

3. ಕಣ್ಣು ಮಿಟುಕಿಸುವುದು

ನಿರಂತರವಾಗಿ ನಿಮ್ಮ ಕಣ್ಣುಗಳನ್ನು ಮಿಟುಕಿಸುತ್ತಿರುವುದು ನಿಮ್ಮ ಕಣ್ಣುಗಳನ್ನು ಫ್ರೇಶ್ ಆಗಿಡಲು ಮತ್ತು ಕಣ್ಣಿನ ಸುಸ್ತು/ನೋವನ್ನು ತಪ್ಪಿಸಲು ಬಹಳ ಸರಳ ಮಾರ್ಗವಾಗಿದೆ. ಕಂಪ್ಯೂಟರ್ ಬಳಕೆದಾರರು ಹೀಗೆ ತಮ್ಮ ಕಣ್ಣುಗಳನ್ನು ಪ್ರತಿ ಮೂರು ನಾಲ್ಕು ಸೆಕೆಂಡುಗಳಿಗೊಮ್ಮೆ ಮಿಟುಕಿಸುತ್ತಿರುವುದು ಒಳ್ಳೆಯದು.

4. ವಿಶ್ರಾಂತಿ ವ್ಯಾಯಾಮ ಮಾಡಿ

4. ವಿಶ್ರಾಂತಿ ವ್ಯಾಯಾಮ ಮಾಡಿ

ನಿಮ್ಮ ಎರಡು ಕೈಗಳನ್ನು ಒಂದಕ್ಕೊಂದು (ಅಂಗೈ) ಉಜ್ಜಿ. ಆಗ ಬಿಸಿ ಅಥವಾ ಶಾಖ ಉತ್ಪತ್ತಿಯಾಗುತ್ತದೆ. ಈಗ ನಿಮ್ಮ ಕೈಗಳನ್ನು ಕಣ್ಣುಗಳಿಗೆ ಒತ್ತಿ. ಇದು ನಿಮ್ಮ ಕಣ್ಣುಗಳ ಸುಸ್ತನ್ನು ಶಮನ ಮಾಡಲು ಉತ್ತಮ ಕ್ರಮ. ಕಣ್ಣಿಗೆ ನೀಡಬಹುದಾದ ಇನ್ನೊಂದು ಉತ್ತಮವಾದ ವ್ಯಾಯಾಮವೆಂದರೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮಗಿಷ್ಟವಾದ ವಿಷಯವನ್ನು ನೆನಪಿಸಿಕೊಳ್ಳಿ. ನಿಮಗೆ ಇಷ್ಟವಾದ ಜಗತ್ತಿಗೆ ಪ್ರವೇಶಿಸುತ್ತಿದ್ದಂತೆ ನಿಮ್ಮ ಕಣ್ಣಿಗೆ ಖುಷಿಯ ಅನುಭವವಾಗುತ್ತದೆ.

5. ದೂರದೃಷ್ಟಿತ್ವ

5. ದೂರದೃಷ್ಟಿತ್ವ

ನಾವು ವಸ್ತುಗಳನ್ನು ಅತ್ಯಂತ ನಿಕಟವಾಗಿ ನೋಡಲು ಅಭ್ಯಾಸ ಮಾಡಿಕೊಂಡಿರುತ್ತೇವೆ. ನೀವು ವಾಕಿಂಗ್ ಮಾಡುವಾಗ ಅಥವಾ ಕುಳಿತುಕೊಂಡಿರುವಾಗ ನಿಮ್ಮ ಸುತ್ತಮುತ್ತಲಿನ ದೂರದ ವಸ್ತುಗಳನ್ನು ನೋಡುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ.

6. ಸನ್ಶೈನ್ / ಸೂರ್ಯನ ಕಿರಣಗಳು

6. ಸನ್ಶೈನ್ / ಸೂರ್ಯನ ಕಿರಣಗಳು

ಸನ್ಶೈನ್ ನಿಮ್ಮ ಕಣ್ಣುಗಳು ಅತ್ಯುತ್ತಮ ಉಚಿತ ಚಿಕಿತ್ಸೆಯಾಗಿದೆ. ಬೆಳಿಗ್ಗೆ ಅಥವಾ ಸಂಜೆ ಸೂರ್ಯನ ಕಿರಣ ಕಣ್ಣಿನ ಮೇಲೆ ಬೀಳುವುದರಿಂದ ಬಿಗಿಯಾದ ನರ ಸ್ನಾಯುಗಳ ಬಿಡಿಬಿಡಿಯಾಗಿ ಕಣ್ಣುಗಳು ಉತ್ತಮ ದೃಷ್ಟಿಯನ್ನು ಪಡೆಯಲು ಸಹಾಯವಾಗುತ್ತದೆ.

7. ನೀರು

7. ನೀರು

ನೀರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ. ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಡಿಹೈಡ್ರೇಶನ್ ನಿಂದ ದೃಷ್ಟಿಯು ಸುಧಾರಿಸುತ್ತದೆ.

8. ಒಣ ಗಾಳಿಯಿಂದ ದೂರವಿರಿ

8. ಒಣ ಗಾಳಿಯಿಂದ ದೂರವಿರಿ

ನಿಮ್ಮ ಕಾರು ಅಥವಾ ನಿಮ್ಮ ಕಛೇರಿಯಿಂದ ಹವಾನಿಯಂತ್ರಿತ ಗಾಳಿ ನಿಮ್ಮ ಕಣ್ಣುಗಳಲ್ಲಿ ಎಲ್ಲಾ ತೇವಾಂಶ ಎಳೆದುಕೊಳ್ಳಲು ಯಾವತ್ತಿಗೂ ಬಿಡಬೇಡಿ. ನಿಮ್ಮ ಮುಖ ಆದಷ್ಟು ಹವಾನಿಯಂತ್ರಿತ ಫಲಕದ ಕೆಳಕ್ಕೆ ಅಥವಾ ದೂರವಿರಲಿ. ಏರ್ ಕಂಡಿಷನರ್ ನ ಗಾಳಿ ಮತ್ತಷ್ಟು ಕುರುಡು ಅಥವಾ ಯಾವುದೇ ಇತರ ಕಾರ್ನಿಯಾ ಅಸ್ವಸ್ಥತೆ ಉಂಟುಮಾಡಬಲ್ಲ ಗಂಭೀರ ಶುಷ್ಕತೆಗೆ ಕಾರಣವಾಗಬಹುದು.

9. ಸುರಕ್ಷತೆಯ ಕನ್ನಡಕ ಧರಿಸಿ

9. ಸುರಕ್ಷತೆಯ ಕನ್ನಡಕ ಧರಿಸಿ

ಕಣ್ಣಿನ ಗಾಯಗಳು ನಿಮ್ಮ ಕಣ್ಣಿನ ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಆದ್ದರಿಂದ ಯಾವಾಗಲೂ, ರಾಸಾಯನಿಕ ಕೆಲಸ ಮಾಡುವಾಗ, ಆಟವಾಡುವಾಗ, ಪಟಾಕಿ ಸಿಡಿಸುವಾಗ, ಅಥವಾ ಈಜುವಾಗ ಸುರಕ್ಷತೆಯ ಕನ್ನಡಕಗಳನ್ನು ಧರಿಸಲು ಮರೆಯದಿರಿ.

10. ಬ್ರೈಟ್ ನೆಸ್ (ಕಾಂತಿ)ನ ಮಟ್ಟ ಕಡಿಮೆ ಇರಲಿ

10. ಬ್ರೈಟ್ ನೆಸ್ (ಕಾಂತಿ)ನ ಮಟ್ಟ ಕಡಿಮೆ ಇರಲಿ

ನೀವು ಮುಂದೆ ಇರುವ ಕಂಪ್ಯೂಟರ್ ಅನ್ನು ಹೆಚ್ಚು ಬಳಸುವುದದರೆ ನಿಮ್ಮ ಕಣ್ಣುಗಳು ವಿಶ್ರಾಂತಿಯ ಸಲುವಾಗಿ ಕಂಪ್ಯೂಟರ್ ಪರದೆಯ ಬ್ರೈಟ್ನೆಸ್ ನ್ನು ಕಡಿಮೆ ಮಾಡಿ. ಆದರೆ ತುಂಬಾ ಕಡಿಮೆ ಮಾಡದೆ ಮಧ್ಯಮ ಪ್ರಮಾಣದಲ್ಲಿಡಿ.

11. ಮೊಟ್ಟೆ ಸೇವಿಸಿ

11. ಮೊಟ್ಟೆ ಸೇವಿಸಿ

ಮೊಟ್ಟೆಗಳು ನಿಮ್ಮ ಸರಿಯಾದ ದೃಷ್ಟಿಗೆ ಮತ್ತು ಕುರುಡು ಮಾಡಬಲ್ಲ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಲ್ಯೂಟೀನ್ ಮತ್ತು ಝಿಯಾಕ್ಸಾಂತಿನ್ ನಿಮ್ಮ ದೇಹಕ್ಕೆ ಉತ್ತಮ ಅಂಶಗಳನ್ನು ಒದಗಿಸುತ್ತದೆ.

12. ನಿಮ್ಮ ಕಣ್ಣುಗಳನ್ನು ಆಗಾಗ ತೊಳೆಯಿರಿ

12. ನಿಮ್ಮ ಕಣ್ಣುಗಳನ್ನು ಆಗಾಗ ತೊಳೆಯಿರಿ

ನಿಮ್ಮ ಕಣ್ಣುಗಳು ಬಿಗಿಯಾದಂತೆ ಅನುಭವವಾದರೆ ಸಂಪೂರ್ಣವಾಗಿ ನಿಮ್ಮ ಕಣ್ಣುಗಳು ತೊಳೆಯಿರಿ. ಇದು ದಿನದ ಅಭ್ಯಾಸವಾಗಿರಲಿ. ನೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆದಾಗ ವಿಪರೀತ ಒತ್ತಡವಿದ್ದಾಗ ನಿಮ್ಮ ಕಣ್ಣುಗಳ ಸುಸ್ತನ್ನು ನಿವಾರಿಸಲು ಮತ್ತು ಕಣ್ಣುಗಳನ್ನು ಫ್ರೆಶ್ ಆಗಿಡಲು ಸಹಾಯ ಮಾಡುತ್ತದೆ.

13. ಧೂಮಪಾನವನ್ನು ಬಿಡಿ

13. ಧೂಮಪಾನವನ್ನು ಬಿಡಿ

ಅತಿಯಾದ ಧೂಮಪಾನ ಕಣ್ಣಿನ, ಆಪ್ಟಿಕ್ ನರಕ್ಕೆ ಹಾನಿ ಮಾಡುತ್ತದೆ ಮತ್ತು ಅಕ್ಷಿಪಟಲದ ಅವನತಿಯಂತಹ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಣ್ಣಿನ ಸಮಸ್ಯೆಗಳನ್ನು ತಪ್ಪಿಸುವ ದೃಷ್ಟಿಯಿಂದ ಮತ್ತು ಉತ್ತಮ ಕಣ್ಣಿನ ಆರೋಗ್ಯಕ್ಕೆ ಧೂಮಪಾನವನ್ನು ತ್ಯಜಿಸುವುದು ಒಳಿತು.

14. ಸನ್ ಗ್ಲಾಸಸ್ ಧರಿಸಿ

14. ಸನ್ ಗ್ಲಾಸಸ್ ಧರಿಸಿ

ನೀವು ಹೊರಾಂಗಣದಲ್ಲಿದ್ದಾಗ ಸನ್ ಗ್ಲಾಸ್ ಧರಿಸಿ ಸೂರ್ಯನ ಹಾನಿಯಿಂದ ನಿಮ್ಮ ಕಣ್ಣುಗಳು ರಕ್ಷಿಸುವುದು ಉತ್ತಮ. ನಿಮ್ಮ ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ಕಣ್ಣಿನ ದೃಷ್ಟಿ ಮತ್ತು ಇತರ ಕಣ್ಣಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ನೀವು ಸನ್ ಗ್ಲಾನ್ ಗಳನ್ನು ಕೊಂಡುಕೊಳ್ಳುವಾಗ ಅದು 100% ಸೂರ್ಯನ ನೇರಳಾತೀತ ಕಿರಣಗಳನ್ನು ತಪ್ಪಿಸುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಿ.

15. ಕಣ್ಣಿನ ಮೇಕಪ್ ತೆಗೆಯಿರಿ

15. ಕಣ್ಣಿನ ಮೇಕಪ್ ತೆಗೆಯಿರಿ

ಹಾಸಿಗೆ ಹೋಗುವ ಮೊದಲು, ನೀವು, ನಿಮ್ಮ ಕಣ್ಣಿನ ಮೇಕಪ್ ತೆಗೆಯಲು/ತೊಳೆಯಲು ಮರೆಯದಿರಿ. ರಾತ್ರಿಯಲ್ಲಿ ಕಣ್ಣಿನ ಮೇಕಪ್ ತೆಗೆಯುವುದರಿಂದ ಮೇಕಪ್ ನಿಮ್ಮ ಕಣ್ಣುಗಳ ಒಳಹೋಗದಂತೆ, ಕಣ್ಣೀನಲ್ಲಿ ತುರಿಕೆ ಕಾಣಿಸಿಕೊಳ್ಳದಂತೆ ತಡೆಯಬಹುದು.

16. ಪಾಲಾಕ್ ತಿನ್ನಿ

16. ಪಾಲಾಕ್ ತಿನ್ನಿ

ಕುದಿಸಿ ಇದು ಅಥವಾ ಸ್ವಲ್ಪವೇ ಎಣ್ಣೆ ಹಾಕಿ ಬೇಗನೆ ಹುರಿದ ಪಾಲಾಕನ್ನು ನಿಮ್ಮ ಆಹಾರಕ್ಕೆ ಸೇರಿಸಿ ತಿನ್ನಿ. ಪಾಲಕ ಕಣ್ಣಿನ ಮತ್ತು ತೆಳುವಾದ ದೃಷ್ಟಿತ್ವ ಹಾಗೂ ಇನ್ನಿತರ ಅನೇಕ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡಬಹುದು. ಇದು ಲ್ಯೂಟೀನ್ ಮತ್ತು ವಿವಿಧ ಇತರ ಪೋಷಕಾಂಶಗಳಿಂದ ತುಂಬಿದೆ.

17. ವಿರಾಮ ಪಡೆದುಕೊಳ್ಳಿ

17. ವಿರಾಮ ಪಡೆದುಕೊಳ್ಳಿ

ನೀವು ಬಹಳ ಹೊತ್ತಿನವರೆಗೆ ಕೆಲವು ಪುಸ್ತಕ ಓದುವುದು ಅಥವಾ ಕೆಲಸ ಮಾಡುತ್ತಿದ್ದರೆ ಆಗಾಗ ವಿರಾಮವನ್ನು ತೆಗೆದುಕೊಳ್ಳಿ. ಸ್ವಲ್ಪ ವಾಕಿಂಗ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ಆಯಾಸ ತಡೆಯಲು ಸಾಧ್ಯ.

18. ಹೆಡ್ ಮಸಾಜ್

18. ಹೆಡ್ ಮಸಾಜ್

ವಾರಕ್ಕೊಮ್ಮೆ ಮಲ್ಲಿಗೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ನಿಮ್ಮ ತಲೆಯನ್ನು ಮಸಾಜ್ ಮಾಡಿ. ಇದು ಜಾಗರೂಕತೆಯನ್ನು ಹೆಚ್ಚಿಸುವ ಮತ್ತು ಗಮನವನ್ನು ಸಕ್ರಿಯಗೊಳಿಸುವನಿಮ್ಮ ಮೆದುಳಿನ ಬೀಟಾ ಅಲೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

19. ಚೆನ್ನಾಗಿ ನಿದ್ದೆ ಮಾಡಿ

19. ಚೆನ್ನಾಗಿ ನಿದ್ದೆ ಮಾಡಿ

ಅಸಮರ್ಪಕ ನಿದ್ರೆ ನಿಮ್ಮ ಆಯಾಸಕ್ಕೆ, ತಲೆನೋವಿಗೆ ಕಾರಣವಾಗಬಹುದು. ಇದು ನಿಮ್ಮಲ್ಲಿ ಕಣ್ಣಿನ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಚೆನ್ನಾಗಿ ನಿದ್ದೆ ಮಾಡಿ. ಇದು ಉತ್ತಮ ದೃಷ್ಟಿಗೆ ಸಹಾಯ ಮಾಡಬಹುದು ಮತ್ತು ನಿಮ್ಮ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.

20. ಕಣ್ಣಿಗೆ ಸಂಬಂಧಿಸಿದ ಆಹಾರ ಸೇವಿಸಿ

20. ಕಣ್ಣಿಗೆ ಸಂಬಂಧಿಸಿದ ಆಹಾರ ಸೇವಿಸಿ

ಕ್ಯಾರೆಟ್, ಏಪ್ರಿಕಾಟ್ ಮತ್ತು ಬೆರಿಹಣ್ಣುಗಳು ಇಂತಹ ಕಣ್ಣಿನ ಆರೋಗ್ಯ ಹೆಚ್ಚಿಸುವ ಆಹಾರಗಳು ನಿಮ್ಮ ಕಣ್ಣುಗಳಿಗೆ ಪುಷ್ಟಿ ನೀಡುತ್ತವೆ. ಈ ಎಲ್ಲಾ ಆಹಾರಗಳಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಕಣ್ಣುಗಳು ಒಳ್ಳೆಯದು.

ಹೀಗೆ ಉತ್ತಮ ಕಣ್ಣಿನ ಆರೋಗ್ಯಕ್ಕಾಗಿ ಉತ್ತಮ ರೀತಿಯಲ್ಲಿ ಕಣ್ಣಿನ ಆರೈಕೆಯನ್ನು ಮಾಡುವುದೂ ಬಹಳ ಅಗತ್ಯ. ಈಗಿಂದಲೇ ಕಣ್ಣಿಗೆ ಸಾಕಷ್ಟು ಆರೈಕೆ ಮಾಡಿದರೆ ವರ್ಷ ನಲವತ್ತು ದಾಟುತ್ತಿದ್ದಂತೆ 'ಚಸ್ಮಿಸ್' ಎನ್ನಿಸಿಕೊಳ್ಳುವುದು ತಪ್ಪುತ್ತದೆ!

English summary

Tips for good eye vision

Today more and more people are turning to a victim of vision impairment due to erratic lifestyles. Stuck to their computers, LCDs every body is busy ruining their eye sight for the sake of entertainment or work.Here are a few tips to improve your vision
X
Desktop Bottom Promotion