For Quick Alerts
ALLOW NOTIFICATIONS  
For Daily Alerts

ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಲು ಟಿಪ್ಸ್

|
Tips to cure hiccups
ಬಿಕ್ಕಳಿಕೆ ಯಾವ ಸಮಯದಲ್ಲಿ ಬೇಕಾದರೂ ಬರಬಹುದು. ಬಿಕ್ಕಳಿಕೆ ಒಂದು ಸಲ ಬಂದು ನಿಂತರೆ ಸರಿ, ಆದರೆ ಕೆಲವೊಮ್ಮೆ ತುಂಬಾ ಹೊತ್ತಿನವರೆಗೆ ಬಿಕ್ಕಳಿಕೆ ಬರುತ್ತಾ ಇರುತ್ತದೆ. ನಮ್ಮ ಪಕ್ಕ ಯಾರಾದರೂ ಕೂತಿದ್ದರೆ ಅವರು ಏನು ತಿಳಿದುಕೊಳ್ಳುತ್ತಾರೋ ಅನ್ನುವ ಚಿಂತೆ, ಆದರೆ ಬಿಕ್ಕಳಿಕೆಯನ್ನು ತಡೆಯಲೂ ಸಾಧ್ಯವಿಲ್ಲ. ನೀರು ಕುಡಿದರೂ ಈ ಬಿಕ್ಕಳಿಕೆ ನಿಲ್ಲುವುದಿಲ್ಲ. ಬಿಕ್ಕಳಿಕೆ ಬಂದರೆ ಚಿಂತೆ ಬಿಡಿ

ಬಿಕ್ಕಳಿಕೆಯನ್ನು ನಿಲ್ಲಿಸುವ ಟಿಪ್ಸ್ ನೋಡಿ ಇಲ್ಲಿದೆ ನೋಡಿ:

ಅಂಗೈಯನ್ನು ಒತ್ತಿ ಹಿಡಿಯಿರಿ
ಒಂದು ಕೈಯ ಹೆಬ್ಬರಳಿನಿಂದ ಮತ್ತೊಂದು ಕೈಯ ಅಂಗೈಯನ್ನು ಒತ್ತಿ ಹಿಡಿಯಿರಿ. ಮತ್ತೊಂದು ಸಲಹೆಯೆಂದರೆ ಎಡ ಕೈಯ ಹೆಬ್ಬರಳನ್ನು ಬಲಕೈಯ ಹೆಬ್ಬರಳು ಹಾಗೂ ಮಧ್ಯ ಬೆರಳಿನಿಂದ ಗಟ್ಟಿಯಾಗಿ ಚಿವುಟಿ. ಈ ರೀತಿ ಮಾಡಿದರೆ ಸ್ವಲ್ಪ ನೋವಾದರೂ ಬಿಕ್ಕಳಿಕೆ ತಕ್ಷಣ ನಿಲ್ಲುತ್ತದೆ.

ದೀರ್ಘ ಉಸಿರು
ದೀರ್ಘ ಉಸಿರು ತೆಗೆದುಕೊಂಡು ಸ್ವಲ್ಪ ಹೊತ್ತು ಅದನ್ನು ಹಿಡಿದಿರಿ, ನಂತರ ಉಸಿರನ್ನು ಬಿಟ್ಟರೆ ಬಿಕ್ಕಳಿಕೆ ನಿಲ್ಲುವುದು . ಮತ್ತೊಂದು ಸಲಹೆಯೆಂದರೆ ಕಿವಿಯನ್ನು ಒತ್ತಿ ಹಿಡಿಯುವುದು, ಈ ರೀತಿ ಮಾಡಿದರೆ ನರಗಳಿಗೆ ಸಂದೇಶ ಹೋಗುತ್ತದೆ. ಇದರಿಂದ ಬಿಕ್ಕಳಿಕೆ ನಿಲ್ಲುವುದು.

ನಾಲಗೆಯನ್ನು ಹೊರಹಾಕಿ
ನಾಲಗೆಯನ್ನು ಹೊರಹಾಕಿದರೆ ಉಸಿರಾಟ ನಿಧಾನಕ್ಕೆ ಆಗುವುದು. ಇದರಿಂದ ಬಿಕ್ಕಳಿಕೆ ನಿಲ್ಲುವುದು.

ಬಾಯಿ ಮುಚ್ಚಿ
ಬಾಯಿ ಹಾಗೂ ಮೂಗನ್ನು ಮುಚ್ಚಿ ಹಿಡಿದು ಉಸಿರಾಟವನ್ನು ಮುಂದುವರೆಸಿ, ಈ ರೀತಿ ಮಾಡಿದರೆ ಇಂಗಾಲದ ಡೈ ಆಕ್ಸೈಡ್ ಹೆಚ್ಚು ಬಿಡುಗಡೆಯಾಗಿ ಬಿಕ್ಕಳಿಕೆಯನ್ನು ನಿಲ್ಲಿಸುತ್ತದೆ.

ವೇಗವಾಗಿ ನೀರನ್ನು ಕುಡಿಯಿರಿ
10 ಗುಟುಕು ನೀರನ್ನು ನಿಲ್ಲಿಸದೆ ಕುಡಿಯಿರಿ. ಈ ರೀತಿ ಮಾಡಿದರೆ ಕೂಡ ಬಿಕ್ಕಳಿಕೆ ನಿಲ್ಲುವುದು.

English summary

Tips to cure hiccups | Tips For Health | ಬಿಕ್ಕಳಿಕೆ ಕಾಣಿಸಿದರೆ ನಿಲ್ಲಿಸಲು ಟಿಪ್ಸ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Hiccups can come at any time without warning. And sometimes, they can be extremely embarrassing. But the fact is, some simple techniques can stop hiccups. Here, take a look...
X
Desktop Bottom Promotion