For Quick Alerts
ALLOW NOTIFICATIONS  
For Daily Alerts

ಈ ಸಮಸ್ಯೆಗಳು ಅಸ್ತಮಾಕ್ಕೆ ತಿರುಗಬಹುದು ಜಾಗ್ರತೆ!

|

ಅಸ್ತಮಾ ಕಾಯಿಲೆ ಒಮ್ಮೆ ಬಂದರೆ ಮತ್ತೆ ಅದರಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆವಹಿಸಿ ನಿಯಂತ್ರಣದಲ್ಲಿಡಬಹುದೇ ಹೊರತು, ಸ್ವಲ್ಪ ಎಚ್ಚರವಹಿಸದಿದ್ದರೂ ಅಸ್ತಮಾ ಉಲ್ಬಣವಾಗುತ್ತದೆ.

ಅಸ್ತಮಾ ಕಾಯಿಲೆ ತರುವ ನಿರ್ದಿಷ್ಟ ಕಾರಣಗಳ ಬಗ್ಗೆ ಹೇಳಲು ಸಾಧ್ಯವಿಲ್ಲ. ಕೆಲವರಿಗೆ ವಂಶಪಾರಂಪರ್ಯವಾಗಿ ಬರಬಹುದು, ಮತ್ತೆ ಕೆಲವರಿಗೆ ತಂಪಾದ ವಾತಾವರಣದಿಂದ, ದೂಳಿನಿಂದ, ಆಹಾರದಿಂದ ಹೀಗೆ ನಾನಾ ಕಾರಣಗಳಿಂದ ಬರಬಹುದು. ಇಲ್ಲಿ ನಾವು ಅಸ್ತಮಾ ಕಾಯಿಲೆಗೆ ಪರಿವರ್ತನೆಯಾಗುವ ಕೆಲ ಸಾಮಾನ್ಯ ಕಾಯಿಲೆಗಳ ಬಗ್ಗೆ ಹೇಳಿದ್ದೇವೆ ನೋಡಿ:

ದೂಳಿನ ಅಲರ್ಜಿ

ದೂಳಿನ ಅಲರ್ಜಿ

ಕೆಲವರಿಗೆ ದೂಳಿಗೆ ಹೋದರೆ ಅಲರ್ಜಿ ಉಂಟಾಗುತ್ತದೆ. ಇದಕ್ಕೆ ಪರಿಹಾರವೆಂದರೆ ದೂಳಿಗೆ ಹೋಗದಿರುವುದು ಮತ್ತು ಒಂದು ವೇಳೆ ದೂಳಿಗೆ ಹೋಗುವುದಾದರೆ ಮುಖಕ್ಕೆ ಮಾಸ್ಕ್ ಹಾಕಿ ದೂಳಿನಿಂದ ರಕ್ಷಣೆ ಪಡೆಯುವುದು. ದೂಳು ಅಲರ್ಜಿಯನ್ನು ನಿರ್ಲಕ್ಷ್ಯ ಮಾಡಿದರೆ ಕೊನೆಗೆ ಅದು ಅಸ್ತಮಾ ಕಾಯಿಲೆಯಾಗಿ ಪರಿವರ್ತನೆಯಾಗುವುದು.

ವಾಯು ಮಾಲಿನ್ಯ

ವಾಯು ಮಾಲಿನ್ಯ

ಮಾಲಿನ್ಯ ಕೂಡ ಅಸ್ತಮಾ ಕಾಯಿಲೆಯನ್ನು ಉಂಟು ಮಾಡುತ್ತದೆ. ಆದ್ದರಿಂದಲೇ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ವಾಯು ಮಾಲಿನ್ಯ ಹೆಚ್ಚಿರುವ ಕಡೆ ವಾಸಿಸುವವರು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ.

ಧೂಮಪಾನದಿಂದ ಕೆಮ್ಮು ಬಂದರೆ

ಧೂಮಪಾನದಿಂದ ಕೆಮ್ಮು ಬಂದರೆ

ಕೆಲವರಿಗೆ ಧೂಮಪಾನ ಮಾಡಿದರೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ವಿಪರೀತ ಕೆಮ್ಮು ಬರುತ್ತದೆ. ಈ ರೀತಿಯ ಲಕ್ಷಣ ಕಂಡು ಬಂದಾಗ ಧೂಮಪಾನವನ್ನು ಸಂಪೂರ್ಣವಾಗಿ ಬಿಡದಿದ್ದರೆ ಅಸ್ತಮಾ ಕಾಯಿಲೆಗೆ ತುತ್ತಾಗುವಿರಿ.

ಅಲರ್ಜಿ

ಅಲರ್ಜಿ

ಒಬ್ಬೊಬ್ಬರಿಗೆ ಒಂದೊಂದು ಕಾರಣದಿಂದ ಅಲರ್ಜಿ ಉಂಟಾಗುತ್ತದೆ. ಕೆಲವರಿಗೆ ದೂಳು ಅಲರ್ಜಿಯಾದರೆ, ಮತ್ತೆ ಕೆಲವರಿಗೆ ಕೆಲವೊಂದು ಹೂಗಳು ಅಲರ್ಜಿಯನ್ನು ತರುತ್ತದೆ. ಅಲರ್ಜಿ ಉಂಟು ಮಾಡುವ ವಸ್ತುಗಳಿಂದ ದೂರವಿರಿ, ಇಲ್ಲದಿದ್ದರೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.

ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಮಾನಸಿಕ ಒತ್ತಡ ಅನ್ನುವುದು ಇದೆಯೆಲ್ಲಾ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅತೀಯಾದ ಮಾನಸಿಕ ಒತ್ತಡ ಉಸಿರಾಟದ ತೊಂದರೆಯನ್ನು ತರುವುದು.

ಗ್ಯಾಸ್ಟ್ರಿಕ್

ಗ್ಯಾಸ್ಟ್ರಿಕ್

ಗ್ಯಾಸ್ಟ್ರಿಕ್ ಸಮಸ್ಯೆ ಶ್ವಾಸಕೋಶದಲ್ಲಿ ಗಾಳಿಯ ಸಂಚಾರಕ್ಕೆ ಅಡಚಣೆ ಉಂಟು ಮಾಡಿ, ಅಸ್ತಮಾ ಕಾಯಿಲೆ ತರಬಹುದು.

ಸೈನಸ್

ಸೈನಸ್

ಸೈನಸ್ ತಲೆನೋವು ಅಸ್ತಮಾ ಕಾಯಿಲೆ ತರಬಹುದು. ಏಕೆಂದರೆ ಸೈನಸ್ ಕಾಯಿಲೆ ಬಂದರೆ ಮೂಗಿನ ನರಗಳು ಊದಿಕೊಂಡು ಉಸಿರಾಟದ ತೊಂದರೆ ತರಬಹುದು, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಉಸಿರಾಟದ ತೊಂದರೆ ಅಸ್ತಮಾವಾಗಿ ಪರಿವರ್ತನೆಯಾಗುವುದು.

ಒಬೆಸಿಟಿ

ಒಬೆಸಿಟಿ

ಒಬೆಸಿಟಿ ಹೆಚ್ಚಿರುವವರಲ್ಲಿ ಉಸಿರಾಟದ ತೊಂದರೆ ಬೇಗನೆ ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆ ತಡೆಯಲು ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳುವುದು ಒಳ್ಳೆಯದು.

ಆಹಾರಗಳು

ಆಹಾರಗಳು

ಕೆಲವರಿಗೆ ಕೆಲವೊಂದು ಆಹಾರಗಳು ಅಲರ್ಜಿಯನ್ನು ಉಂಟು ಮಾಡಿ ಉಸಿರಾಟದ ತೊಂದರೆಯನ್ನು ತರುತ್ತದೆ. ಅಲರ್ಜಿ ತರುವ ಆಹಾರವನ್ನು ತಿನ್ನಬೇಡಿ. ಈ ರಿತಿ ಮಾಡುವುದರಿಂದ ಅಸ್ತಮಾ ಬರುವುದನ್ನು ತಡಯಬಹುದು.

English summary

Things That Trigger An Asthma Attack

There are many things that triggers an asthma attack. For example, dust and pollution are common triggers of asthma attack. Even strong fragrance like perfume or cologne can trigger an asthma attack. Check out some common triggers of asthma attack to beware of.
X
Desktop Bottom Promotion