For Quick Alerts
ALLOW NOTIFICATIONS  
For Daily Alerts

ಈಗೆಲ್ಲಾ ಚಿಕ್ಕ ಪ್ರಾಯದಲ್ಲಿಯೇ ದೃಷ್ಟಿ ದೋಷ, ಏಕೆ?

|

ನಮಗೆಲ್ಲಾ ವಯಸ್ಸು 40 ದಾಡಿದ ಬಳಿಕವೂ ನಮಗೆ ಕಣ್ಣು ಸರಿಯಾಗಿ ಕಾಣುತ್ತದೆ ಎಂಬ ಆತ್ಮ ವಿಶ್ವಾಸವಿರುವುದಿಲ್ಲ, ಆದರೆ ನಮ್ಮ ಪೂರ್ವಿಕರನ್ನು ನೋಡಿದರೆ ಆಶ್ಚರ್ಯವಾಗುತ್ತದೆ, ಹೆಚ್ಚಿನವರಿಗೆ ವಯಸ್ಸು 80 ದಾಟಿದರೂ ಕಣ್ಣು, ಕಿವಿ ಚೆನ್ನಾಗಿಯೇ ಕೆಲಸ ಮಾಡುತ್ತಿರುತ್ತದೆ, ಕೆಲವರಿಗಷ್ಟೇ ಕಣ್ಣಿನಲ್ಲಿ ಪೊರೆ ಬಂದು ಕಣ್ಣು ಸರಿಯಾಗಿ ಕಾಣಿಸುತ್ತಿರುವುದಿಲ್ಲ. ಆದರೆ ದೈಹಿಕ ಸಮಸ್ಯೆಗಳು ಅತೀ ಚಿಕ್ಕ ಪ್ರಾಯದಲ್ಲಿ ಅವರನ್ನು ಅಷ್ಟಾಗಿ ಬಾಧಿಸಿರುವುದಿಲ್ಲ.

ಆದರೆ ನಾವೆಲ್ಲಾ ಪ್ರತೀನಿತ್ಯ ಒಂದಲ್ಲಾ ಒಂದು ನೋವು ಅನುಭವಿಸುತ್ತಾ ಇರುತ್ತೇವೆ. ಒಂದು ದಿನ ತಲೆ ನೋವಾದರೆ, ಮತ್ತೊಂದು ದಿನ ಸೊಂಟ ನೋವು, ಹೀಗೆ ಏನೋ ಒಂದು ಸಮಸ್ಯೆ ಹೆಚ್ಚಿನವರಲ್ಲಿ ಇದ್ದೇ ಇರುತ್ತದೆ. ಇನ್ನು ಕಣ್ಣಿನ ಸಮಸ್ಯೆ ಅಂತೂ ನಮಗೆ ಬಂದೇ ಬರುತ್ತದೆ ಅನ್ನುವುದು ಕಟ್ಟಿಟ್ಟ ಬುತ್ತಿ, ಸ್ವಲ್ಪ ಮುನ್ನೆಚ್ಚರಿಕೆವಹಿಸಿದರೆ ಚಿಕ್ಕ ಪ್ರಾಯದಲ್ಲಿಯೇ ಕಣ್ಣಿನ ದೋಷ ಉಂಟಾಗುವುದನ್ನು ತಡೆಯಬಹುದು.

ಕಣ್ಣಿನ ದೃಷ್ಟಿ ಸಾಮರ್ಥ್ಯ ಕಡಿಮೆ ಮಾಡುವ ಪ್ರಮುಖ ಕಾರಣಗಳಾವುವು ಎಂದು ನೋಡೋಣ ಬನ್ನಿ:

ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಮಾನಸಿಕ ಒತ್ತಡ ಬಿಪಿ ಹೆಚ್ಚು ಮಾಡುತ್ತದೆ ಅನ್ನುವುದು ನಮಗೆಲ್ಲಾ ಗೊತ್ತಿರುವ ವಿಷಯ, ಆದರೆ ಅತೀಯಾದ ಮಾನಸಿಕ ಒತ್ತಡದಿಂದ ಕಣ್ಣಿನ ನರಗಳ ಮೇಲೆ ಹೊಡೆತ ಬಿದ್ದು, ಕಣ್ಣಿನ ದೃಷ್ಟಿ ಸಾಮರ್ಥ್ಯ ಕಮ್ಮಿಯಾಗುವುದು ಅನ್ನುವ ಅಂಶ ನಿಮಗೆ ಗೊತ್ತಿದೆಯೇ?

ತುಂಬಾ ಹೊತ್ತು ಓದುವುದರಿಂದ

ತುಂಬಾ ಹೊತ್ತು ಓದುವುದರಿಂದ

ಓದುವುದು ಒಳ್ಳೆಯ ಅಭ್ಯಾಸ. ಆದರೆ ಸ್ವಲ್ಪವೂ ವಿಶ್ರಾಂತಿ ತೆಗೆದುಕೊಳ್ಳದೆ ತುಂಬಾ ಹೊತ್ತಿನವರೆಗೆ ಓದುವುದರಿಂದ ಕಣ್ಣು ಬಳಲುವುದು, ಇದರಿಂದ ಕ್ರಮೇಣ ದೃಷ್ಟಿ ದೋಷ ಕಡಿಮೆಯಾಗುವುದು. ಆದ್ದರಿಂದ ಓದುವಾಗ ಪ್ರತೀ ಅರ್ಧ ಗಂಟೆಗೊಮ್ಮೆ 5 ನಿಮಿಷ ಬ್ರೇಕ್ ತೆಗೆದುಕೊಂಡು, ಓದಿದ್ದನ್ನು ಜ್ಞಾಪಿಸಿಕೊಳ್ಳುವುದು ಅಥವಾ ದೂರದ ವಸ್ತುಗಳನ್ನು ದಿಟ್ಟಿಸುವುದು ಮಾಡಿ, ಈ ರೀತಿ ಮಾಡುವುದರಿಂದ ನಿಮ್ಮ ಮಿದುಳಿನ ಮತ್ತು ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸಬಹುದು.

ಟಿವಿ, ವೀಡಿಯೋಗೇಮ್

ಟಿವಿ, ವೀಡಿಯೋಗೇಮ್

ತುಂಬಾ ಹೊತ್ತು ಟಿವಿ ನೋಡುವುದು, ವೀಡಿಯೋಗೇಮ್ ಆಡುವುದು ಒಳ್ಳೆಯದಲ್ಲ. ಮಿತಿ ಮೀರಿ ಟಿವಿ, ವೀಡಿಯೋಗೇಮ್ ನ ಚಟ ಬೆಳೆಸಿಕೊಂಡರೆ ಕಣ್ಣು ಹಾಳಾಗುವುದರ ಜೊತೆಗೆ ಮಾನಸಿಕ ಸ್ಥಿತಿಯೂ ಹಾಳಾಗುವುದು.

ಸೂರ್ಯನ ಕಿರಣಗಳು

ಸೂರ್ಯನ ಕಿರಣಗಳು

ಉರಿ ಬಿಸಿಲಿನಲ್ಲಿ ಓಡಾಡುವಾಗ ಸನ್ ಗ್ಲಾಸ್ ಬಳಸುವುದು ಒಳ್ಳೆಯದು. ಸೂರ್ಯನ ನೇರಳಾತೀತ ಕಿರಣಗಳು ಕಣ್ಣಿನ ಮೇಲೆ ಬಿದ್ದರೆ ದೃಷ್ಟಿ ದೋಷ ಉಂಟಾಗುವುದನ್ನು ತಡೆಯಲು ನೇರವಾಗಿ ಸೂರ್ಯನನ್ನು ದಿಟ್ಟಿಸಬೇಡಿ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ರಕ್ತದೊತ್ತಡ ಸಮಸ್ಯೆ ಇರುವವರಿಗೆ ಕಣ್ಣಿನ ಸಮಸ್ಯೆ ಕಾಣಿಸುವುದು ಸಹಜ. ಆದ್ದರಿಂದ ಆಹಾರ, ವ್ಯಾಯಾಮದ ಮುಖಾಂತರ ರಕ್ತದೊತ್ತಡವನ್ನು ಸಮಸ್ಥಿತಿಯಲ್ಲಿ ಇಡಿ.

ಮಧುಮೇಹ

ಮಧುಮೇಹ

ಮಧುಮೇಹಿಗಳು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಡದಿದ್ದರೆ ದೃಷ್ಟಿದೋಷ ಉಂಟಾಗುವುದು.

ಆಹಾರಕ್ರಮ

ಆಹಾರಕ್ರಮ

ಅನಾರೋಗ್ಯಕರ ಆಹಾರಕ್ರಮದಿಂದ ದೂರವಿರಿ, ಆರೋಗ್ಯಕರವಾದ ಆಹಾರವನ್ನು ತಿನ್ನಿ. ಅದರಲ್ಲಿ ವಿಟಮಿನ್ ಎ ಇರುವ ಆಹಾರಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

 ಕಂಪ್ಯೂಟರ್ ಬಳಕೆ

ಕಂಪ್ಯೂಟರ್ ಬಳಕೆ

ಕಂಪ್ಯೂಟರ್ ಬಳಕೆಯಿಂದ ಬೇಗನೆ ಕಣ್ಣು ಹಾಳಾಗುವುದು, ಆದರೆ ನಮ್ಮೆಲ್ಲಾ ಕೆಲಸ, ಕಾರ್ಯಗಳು ಹೆಚ್ಚಾಗಿ ಕಂಪ್ಯೂರ್ ನ ಮುಖಾಂತರವೇ ಮಾಡುವುದರಿಂದ ಕಂಪ್ಯೂಟರ್ ಬಳಸದೆ ವಿಧಿಯಿಲ್ಲ, ಆದರೆ ಕೆಲವೊಂದು ವಿಧಾನಗಳಿಂದ ಕಂಪ್ಯೂಟರ್ ನಿಮ್ಮ ಕಣ್ಣನ್ನು ಹಾಳು ಮಾಡುವುದನ್ನು ತಡೆಯಬಹುದು. ಅವುಗಳೆಂದರೆ

* ತುಂಬಾ ಹೊತ್ತು ಕಣ್ಣು ಮಿಟುಕಿಸದೆ ಕಂಪ್ಯೂಟರ್ ಪರದೆ ನೋಡುವ ಅಭ್ಯಾಸವನ್ನು ಇಂದೇ ಬಿಡಿ.

* ಅರ್ಧ ಗಂಟೆಗೊಮ್ಮೆ ಕಣ್ಣನ್ನು 2 ನಿಮಿಷ ಮುಚ್ಚಿ, ಕಣ್ಣಿಗೆ ವಿಶ್ರಾಂತಿ ಕೊಡಿ, ಕೂತಲ್ಲಿಯಿಂದಲೇ ದೂರಕ್ಕೆ ದೃಷ್ಟಿ ಹರಿಸಿ.

* ಪ್ರತೀದಿನ ಕಣ್ಣಿನ ವ್ಯಾಯಾಮ ಮಾಡಿ. ಈ ರೀತಿ ಮಾಡುವುದರಿಂದ ದರಷ್ಟಿ ದೋಷ ಬರುವುದನ್ನು ತಡೆಯಬಹುದು.

 ಮದ್ಯಪಾನ, ಧೂಮಪಾನ

ಮದ್ಯಪಾನ, ಧೂಮಪಾನ

ಮದ್ಯಪಾನ, ಧೂಮಪಾನ ಕೂಡ ನಿಮ್ಮ ಕಣ್ಣಿನ ಆರೋಗ್ಯವನ್ನು ಕುಂಠಿತಗೊಳಿಸುತ್ತದೆ.

English summary

Things That Damage Eye Sight

You are living a lavish life with all the facilities available round the clock.Lifestyle of the today's generation, the more it gives you the more it takes away from you. Eye sight damage is one of the things that you lose at an early age nowadays
X
Desktop Bottom Promotion