For Quick Alerts
ALLOW NOTIFICATIONS  
For Daily Alerts

ಈ ಆಹಾರಗಳು ಫ್ರೈಗಿಂತ ಬೇಯಿಸಿದರೆ ಹೆಚ್ಚು ಆರೋಗ್ಯಕರ

|

ನಾವು ಅನೇಕ ಬಗೆಯ ಆಹಾರಗಳನ್ನು ತಿನ್ನುತ್ತೇವೆ. ಅವುಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು.

1. ಹಸಿಯಾಗಿ ತಿನ್ನಬಹುದಾದ ಆಹಾರಗಳು. ಕ್ಯಾರೆಟ್, ಎಲೆ ಕೋಸು, ಸೌತೆಕಾಯಿ ಈ ರೀತಿ ಆಹಾರಗಳನ್ನು ಹಸಿ ತಿಂದರೆ ಹೆಚ್ಚು ಆರೋಗ್ಯಕರ.

2. ಬೇಯಿಸಿ ತಿನ್ನುವ ಆಹಾರಗಳು ಅಕ್ಕಿ, ಗೊಧಿ, ಆಲೂಗೆಡ್ಡೆ, ಸೊಪ್ಪು ಈ ರೀತಿಯ ಆಹಾರಗಳನ್ನು ಬೇಯಿಸಿ ತಿಂದರೆ ಮಾತ್ರ ಆರೋಗ್ಯಕರ. ಹಸಿ ತಿಂದರೆ ಹೊಟ್ಟೆ ನೋವು, ವಾಂತಿ ಮುಂತಾದ ಸಮಸ್ಯೆಗಳು ಕಂಡು ಬರಬಹುದು.

ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಫ್ರೈ ವಸ್ತುಗಳನ್ನು ಸೇರಿಸಲು ಸಾಧ್ಯವಿಲ್ಲ. ಫ್ರೈ ಮಾಡಿದ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುವುದಲ್ಲದೆ ಬೇರೆ ಯಾವುದೇ ಪ್ರಯೋಜನವಿಲ್ಲ. ಬಾಯಿ ರುಚಿಗಾಗಿ ನಾವು ಫ್ರೈ ಮಾಡಿದ ಆಹಾರಗಳನ್ನು ತಿನ್ನುತ್ತೇವೆ.

ಅಪರೂಪಕ್ಕೆ ಫ್ರೈ ಮಾಡಿದ ಆಹಾರ ತಿಂದರೆ ದೇಹದ ತೂಕ ಹೆಚ್ಚಾಗುವುದಿಲ್ಲ. ವಾರದಲ್ಲಿ 3 ಬಾರಿ ಎಣ್ಣೆ ಪದಾರ್ಥಗಳನ್ನು ತಿಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದು. ಇಲ್ಲಿ ನಾವು ಕೆಲ ಆಹಾರಗಳ ಪಟ್ಟಿ ನೀಡಿದ್ದೇವೆ. ಆ ಆಹಾರಗಳನ್ನು ಫ್ರೈ ಮಾಡಿದರೆ ಬಾಯಿಗೆ ರುಚಿ, ಬೇಯಿಸಿ ತಿಂದರೆ ಆರೋಗ್ಯ ವೃದ್ಧಿ. ಈ ಎರಡರಲ್ಲಿ ಯಾವುದು ಬೇಕೆಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ:

ಆಲೂಗಡ್ಡೆ

ಆಲೂಗಡ್ಡೆ

ಆಲೂಗೆಡ್ಡೆಯನ್ನು ಫ್ರೈ ಮಾಡಿ ತಿನ್ನುವ ಬದಲು ಬೇಯಿಸಿ ತಿಂದರೆ ಆರೋಗ್ಯಕರ.

ಮೊಟ್ಟೆ

ಮೊಟ್ಟೆ

ಮೊಟ್ಟೆಯನ್ನು ಬುರ್ಜಿ ಅಥವಾ ಆಮ್ಲೇಟ್ ಮಾಡಿ ತಿನ್ನುವ ಬದಲು ಬೇಯಿಸಿ ಅಥವಾ ಅರ್ಧ ಬೇಯಿಸಿ ತಿನ್ನುವುದು ಒಳ್ಳೆಯದು.

 ನೂಡಲ್ಸ್

ನೂಡಲ್ಸ್

ನೂಡಲ್ಸ್, ಪಾಸ್ತಾವನ್ನು ಚೆನ್ನಾಗಿ ಬೇಯಿಸಿದರೆ ಮಾತ್ರ ಆರೋಗ್ಯಕರ. ರೆಡಿ ಟು ಕುಕ್ ನೂಡಲ್ಸ್ , ಪಾಸ್ತಾ ಆರೋಗ್ಯಕರವಲ್ಲ.

 ಬೀನ್ಸ್

ಬೀನ್ಸ್

ಬೀನ್ಸ್, ಬಟಾಣಿಗಳನ್ನು ಫ್ರೈ ಮಾಡುವ ಬದಲು ಬೇಯಿಸಿ ಸಾರು ಮಾಡಿದರೆ ಹೆಚ್ಚು ಆರೋಗ್ಯಕರ.

ಅಕ್ಕಿ

ಅಕ್ಕಿ

ಅಕ್ಕಿಯಿಂದ ತಯಾರಿಸಿದ ಕರಿದ ತಿಂಡಿಗಳಿಗಿಂತ ಬೇಯಿಸಿ ಮಾಡಿದ ಅನ್ನ ಹೆಚ್ಚು ಆರೋಗ್ಯಕರ.

ಸೀಗಡಿ

ಸೀಗಡಿ

ಸಿಗಡಿ ಮೀನನ್ನು ಫ್ರೈ ಬಾಯಿ ರುಚಿ ಹೆಚ್ಚುವುದು, ಸಾರು ಮಾಡಿ ತಿಂದರೆ ಆರೋಗ್ಯ ಹೆಚ್ಚುವುದು.

ಜೋಳ

ಜೋಳ

ಜೋಳವನ್ನು ಪಾಪ್ ಕಾರ್ನ್ ಮಾಡಿ ತಿನ್ನುವುದಕ್ಕಿಂತ ಬೇಯಿಸಿ ಅಥವಾ ಸುಟ್ಟ ಜೋಳ ಹೆಚ್ಚು ಆರೋಗ್ಯಕರ.

ಪಾಲಾಕ್

ಪಾಲಾಕ್

ಪಾಲಾಕ್ ಸೊಪ್ಪನ್ನು ಫ್ರೈ ಮಾಡಿ ತಿನ್ನುವ ಬದಲು ಸಾರು ಮಾಡಿ ತಿಂದರೆ ಹೆಚ್ಚು ಆರೋಗ್ಯಕರ.

English summary

These Foods That Are Best When Boiled | Tips For Health | ಈ ಆಹಾರಗಳನ್ನು ಬೇಯಿಸಿದರೆ ಹೆಚ್ಚು ಆರೋಗ್ಯಕರ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

If you want to eat healthy, then boiled foods are the best option for you. Boiling is a method of cooking that helps you preserve the maximum amount of nutritional value in an ingredient. Frying can destroy the nutrients present inside the food. But, a mild blanching or boiling keeps your food nutritious.
X
Desktop Bottom Promotion