For Quick Alerts
ALLOW NOTIFICATIONS  
For Daily Alerts

ಬೆಣ್ಣೆಯಲ್ಲಿ ಅಂತದ್ದೇನಿದೆ ವಿಶೇಷತೆ?

|

ಬೆಣ್ಣೆ ಹಾಕಿ ಮಾಡುವ ಆಹಾರದ ಸವಿರುಚಿಯೇ ಭಿನ್ನ. ನಾವೆಲ್ಲಾ ಸ್ಲಿಮ್ ಆಗಿ, ಬ್ಯೂಟಿ ಫುಲ್ ಆಗಿರಬೇಕೆಂದು ಬಯಸುವುದರಿಂದ ಬೆಣ್ಣೆಯನ್ನು ಒಂದು ಮೈಲಿ ದೂರ ಇಡುತ್ತೇವೆ. ಇದರಲ್ಲಿ ಅಧಿಕ ಕೊಬ್ಬಿನಂಶವಿದೆ ಅನ್ನುವುದಷ್ಟೇ ನಮಗೆ ಗೊತ್ತು.

ಈ ಬೆಣ್ಣೆಯಲ್ಲಿ 10ಕ್ಕಿಂತ ಹೆಚ್ಚಿನ ಆರೋಗ್ಯಕರ ಗುಣಗಳಿವೆ. ಇಲ್ಲಿ ನಾವು ಬೆಣ್ಣೆಯಲ್ಲಿರುವ ಕೆಲವು ಪ್ರಮುಖ ಅರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

 ಒಳ್ಳೆಯ ಮೂಡ್ ಗೆ

ಒಳ್ಳೆಯ ಮೂಡ್ ಗೆ

ಚಾಕಲೇಟ್ ನಂತೆ ಬೆಣ್ಣೆ ತಿಂದರೆ ಮೂಡ್ ಚೆನ್ನಾಗಿರುತ್ತದೆ. ಬೆಳಗ್ಗೆ ಬೆಣ್ಣೆ ತಿಂದರೆ ಆಲಸ್ಯ ದೂರವಾಗಿ ದಿನಾಪೂರ್ತಿ ಚೈತನ್ಯದಿಂದ ಇರುವಿರಿ.

ಥೈರಾಯ್ಡ್ ಇರುವವರಿಗೆ ಒಳ್ಳೆಯದು

ಥೈರಾಯ್ಡ್ ಇರುವವರಿಗೆ ಒಳ್ಳೆಯದು

ಇದರಲ್ಲಿ ವಿಟಮಿನ್ ಎ ಇದ್ದು ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಬೆಣ್ಣೆ ತಿಂದರೆ ದಪ್ಪಗಾಗುತ್ತೇವೆ ಎಂದು ಇದನ್ನು ದೂರವಿಟ್ಟರೆ ಥೈರಾಯ್ಡ್ ಉತ್ಪತ್ತಿ ಕಡಿಮೆಯಾದರೆ ಹೈಪೋಥೈರಾಯ್ಡ್ ಆಗಿ ದೇಹದ ತೂಕ ತುಂಬಾ ಹೆಚ್ಚಾಗುವುದು.

ಮಕ್ಕಳ ಮೆದುಳಿನ ಬೆಳವಣಿಗೆಗೆ

ಮಕ್ಕಳ ಮೆದುಳಿನ ಬೆಳವಣಿಗೆಗೆ

ಮಕ್ಕಳ ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಕೊಬ್ಬಿನಂಶ ಬೆಣ್ಣೆಯಲ್ಲಿದೆ, ಅಲ್ಲದೆ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.

 ಶಕ್ತಿಯನ್ನು ತುಂಬುತ್ತದೆ

ಶಕ್ತಿಯನ್ನು ತುಂಬುತ್ತದೆ

ಇದು ದೇಹಕ್ಕೆ ಬೇಗನೆ ಶಕ್ತಿಯನ್ನು ತುಂಬುತ್ತದೆ. ಇದರಲ್ಲಿರುವ ಕೊಬ್ಬು, ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಹಾಗೂ ಇದರಲ್ಲಿ ಯಾವುದೇ ಟ್ರಾನ್ಸ್ ಫ್ಯಾಟ್ ಇಲ್ಲ.

ಪ್ರತ್ಯಾಮ್ಲವಿದೆ

ಪ್ರತ್ಯಾಮ್ಲವಿದೆ

ಬೆಣ್ಣೆಯಲ್ಲಿ antioxidants ಅಧಿಕವಿದ್ದು ಇದು ಮೆದುಳಿನಲ್ಲಿ ಗಡ್ಡೆ ಉಂಟಾಗದಂತೆ ತಡೆಯುತ್ತದೆ. ಇದು ದೇಹದಲ್ಲಿ ಬೇಗನೆ ಸುಕ್ಕು ಬೀಳುವುದನ್ನು ತಡೆಯುತ್ತದೆ.

ತ್ವಚೆಗೆ ಒಳ್ಳೆಯದು

ತ್ವಚೆಗೆ ಒಳ್ಳೆಯದು

ಇದು ಉತ್ತಮವಾದ ನೈಸರ್ಗಿಕ ಮಾಯಿಶ್ಚರೈಸರ್. ಇದನ್ನು ಮೈಗೆ ಹಚ್ಚಿದರೆ ತ್ವಚೆಯ ಹೊಳಪು ಹೆಚ್ಚುವುದು, ಅಕಾಲಿಕ ನೆರಿಗೆಯೂ ಬೀಳುವುದಿಲ್ಲ.

ನಿದ್ದೆ

ನಿದ್ದೆ

ಇದರಲ್ಲಿ ಸೆಲೆನಿಯಮ್ (selenium) ಇರುವುದರಿಂದ ನಿಮಗೆ ಸುಖವಾದ ನಿದ್ದೆಗೆ ಸಹಾಯ ಮಾಡುತ್ತದೆ.

ವಿಟಮಿನ್ ಕೆ

ವಿಟಮಿನ್ ಕೆ

ಇದರಲ್ಲಿ ವಿಟಮಿನ್ ಕೆ ಇದ್ದು ಗಾಯವಾದರೆ ರಕ್ತ ಬೇಗನೆ ಹೆಪ್ಪುಗಟ್ಟಿ ಅಧಿಕ ರಕ್ತ ಹರಿಯುವುದನ್ನು ತಡೆಗಟ್ಟುತ್ತದೆ.

ಸಂತಾನೋತ್ಪತ್ತಿಗೆ ಒಳ್ಳೆಯದು

ಸಂತಾನೋತ್ಪತ್ತಿಗೆ ಒಳ್ಳೆಯದು

ಇದು ಪುರುಷ ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.

ಗಾಯವನ್ನು ಒಣಗಿಸುತ್ತದೆ

ಗಾಯವನ್ನು ಒಣಗಿಸುತ್ತದೆ

ಗಾಯವನ್ನು ಬೇಗನೆ ಗುಣ ಪಡಿಸುವಲ್ಲಿ ಸಹಕಾರಿಯಾಗಿದೆ. ಆದ್ದರಿಂದಲೇ ಶಸ್ತ್ರ ಚಿಕಿತ್ಸೆಯ ನಂತರ, ಹೆರಿಗೆಯ ನಂತರ ಬೆಣ್ಣೆ ತಿನ್ನುವುದು ಒಳ್ಳೆಯದೆಂದು ಹೇಳುತ್ತಾರೆ.

English summary

The Utter Health Benefits Of Butter | Tips For Health | ಬೆಣ್ಣೆಯನ್ನು ಎಂದೂ ದೂರ ತಳ್ಳಬೇಡಿ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Your nutrition is incomplete if butter is absent from your diet. Always remember, that the body needs fats too. Moreover, the health benefits of butter are mandatory for growing kids. The only condition is that you must get pure real butter that does not have too many preservatives.
X
Desktop Bottom Promotion